ಸಂತೋಷ, ದುಃಖ, ಕೋಪ, ಭಯ..: ಭಾವನೆಗಳ ನಿಯಂತ್ರಣ ಹೇಗೆ?
ಕೋಪ, ಭಯ, ಸಂತೋಷ, ದುಃಖದ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂದು ಮನಃಶಾಸ್ತ್ರಜ್ಞರು ತಿಳಿಸಿದ್ದಾರೆ.


Published : January 9, 2026 at 5:41 PM IST
ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದೆ ತೀವ್ರ ಸಂಕಟ ಅನುಭವಿಸುತ್ತಾರೆ. ಮತ್ತೆ ಕೆಲವರು ಸಣ್ಣ ವಿಷಯಗಳಿಗೂ ಕೋಪಗೊಂಡು ಹೈಬಿಪಿ ಸಮಸ್ಯೆಗೆ ಒಳಗಾಗುತ್ತಾರೆ. ಇನ್ನು ಕೆಲವರು ತಾವು ಇಷ್ಟಪಡುವ ಜನರಿಂದ ಏನನ್ನಾದರೂ ನಿರೀಕ್ಷಿಸುತ್ತಾರೆ, ಅದು ಸಂಭವಿಸದಿದ್ದಾಗ ಅತೃಪ್ತರಾಗುತ್ತಾರೆ.
ಹೀಗೆ ಪ್ರತಿಯೊಬ್ಬರಿಗೂ ಸಂತೋಷ, ದುಃಖ, ಕೋಪ, ಭಯ ಹಾಗೂ ಆತಂಕದಂತಹ ಅನೇಕ ಭಾವನೆಗಳಿರುತ್ತವೆ. ಇವುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ವ್ಯಕ್ತಪಡಿಸಿದರೆ, ಯಾವುದೇ ಸಮಸ್ಯೆ ಇಲ್ಲ. ಆದರೆ ಅವು ನಿಯಂತ್ರಣವಿಲ್ಲದೆ ಹೊರಬಂದರೆ, ಒಬ್ಬ ವ್ಯಕ್ತಿಯು ತನ್ನ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ.
ಮನಃಶಾಸ್ತ್ರಜ್ಞರ ಪ್ರಕಾರ, ಪ್ರತಿಯೊಂದು ಆಲೋಚನೆಗಳು, ಕಾರ್ಯಗಳು ಹಾಗೂ ಮಾನವ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಭಾವನೆಗಳ ಮೇಲೆ ನಿಯಂತ್ರಿಸುವುದು ಅಗತ್ಯ. ಭಾವನೆಗಳನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಯಾರಾದರೂ ಏನಾದರೂ ಅಂದ್ರೆ ಹಲವು ಜನರು ತಕ್ಷಣ ಕೋಪಗೊಳ್ಳುತ್ತಾರೆ. ಯಾರಾದರೂ ಕೋಪಗೊಳಿಸಿದರೆ, ಅವರು ಅದರ ಬಗ್ಗೆ ಯೋಚಿಸುತ್ತಾರೆ ಹಾಗೂ ಅಳುತ್ತಾರೆ. ಅವರಿಗೆ ಇಷ್ಟವಿಲ್ಲದ ಏನಾದರೂ ಸಂಭವಿಸಿದಾಗ ಅವರು ನೋಯುತ್ತಾರೆ. ಈ ರೀತಿಯ ಭಾವನೆಗಳನ್ನು ತೋರಿಸುವುದು ಸಾಮಾನ್ಯ. ಆದರೆ, ಈಗಿನ ಯುವ ಪೀಳಿಗೆಗೆ ತಾಳ್ಮೆ ಇಲ್ಲ. ಯುವಕ ಮತ್ತು ಯುವತಿಯರು ಅಗತ್ಯಕ್ಕಿಂತ ಹೆಚ್ಚು ಭಾವನೆಗಳನ್ನು ತೋರಿಸುತ್ತಿದ್ದಾರೆ. ಇದರ ಪರಿಣಾಮಗಳು ನಕಾರಾತ್ಮಕವಾಗುತ್ತಿವೆ. ಇದಕ್ಕಾಗಿಯೇ ಭಾವನಾತ್ಮಕ ನಿಯಂತ್ರಣ ಮಾಡುವುದು ಅಗತ್ಯ. ಭಾವನಾತ್ಮಕ ನಿಯಂತ್ರಣ ಎಂದರೆ ಜೀವನದ ಯಾವುದೇ ಪರಿಸ್ಥಿತಿಗೆ ಅತಿಯಾಗಿ ಪ್ರತಿಕ್ರಿಯಿಸಬಾರದು, ಇದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.

ಭಾವನೆಗಳನ್ನು ನಿಯಂತ್ರಿಸದಿದ್ದರೆ ಏನಾಗುತ್ತದೆ?: ಭಾವನೆಗಳಿಂದ ಯಾವುದೇ ಸಮಸ್ಯೆಗಳಿಲ್ಲ, ಇವುಗಳನ್ನು ಪ್ರದರ್ಶಿಸುವ ರೀತಿಯಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಒಂದು ಕ್ಷಣದಲ್ಲಿ ದುರ್ಘಟನೆಗಳು ಸಂಭವಿಸಬಹುದು. ಕೆಲವೊಮ್ಮೆ ಆತ್ಮಹತ್ಯೆಗಳು ಹಾಗೂ ಕೊಲೆಗಳು ಸಂಭವಿಸುತ್ತವೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಯಾರಾದರೂ ಏನನ್ನಾದರೂ ಹೇಳುತ್ತಾರೆ, ಅದರ ಬಗ್ಗೆ ಯೋಚಿಸುತ್ತಾರೆ ಹಾಗೂ ಅವರ ಮನಸ್ಸನ್ನು ಹಾಳು ಮಾಡುತ್ತಾರೆ. ಅವರು ಕೋಪಗೊಂಡಾಗ ಮತ್ತು ಯೋಚಿಸದೆ ಶಪಿಸುತ್ತಾರೆ, ನಂತರ ವಿಷಾದಿಸುತ್ತಾರೆ. ಯಾರಾದರೂ ತಾವು ಹೇಳಿದ್ದನ್ನು ಮಾಡದಿದ್ದಾಗ ಅವರು ಮಾತನಾಡುವುದನ್ನು ನಿಲ್ಲಿಸುತ್ತಾರೆ. ನೀವು ಕೋಪಗೊಂಡಾಗ, ನೀವು ದೀರ್ಘಕಾಲ ಮಲಗಬಹುದು, ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗಟ್ಟಲೆ ಸಮಯವನ್ನು ಕಳೆಯಬಹುದು, ಅತಿಯಾಗಿ ಸೇವಿಸಬಹುದು, ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳಬಹುದು ಹಾಗೂ ವಾದಿಸಬಹುದು. ಇವುಗಳಿಂದ ನಿದ್ರಾಹೀನತೆ, ಜೀರ್ಣಕಾರಿ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಹೃದಯಾಘಾತಕ್ಕೆ ಕಾರಣವಾಗಬಹುದು.
ಭಾವನೆಗಳನ್ನು ಹೀಗೆ ನಿಯಂತ್ರಿಸಿ: ನೀವು ಭಾವನಾತ್ಮಕವಾಗಿದ್ದಾಗ, ಅದನ್ನು ಪುಸ್ತಕದಲ್ಲಿ ಬರೆಯಿರಿ. ನೀವು ಏಕೆ ಕೋಪಗೊಂಡಿದ್ದೀರಿ, ಕಷ್ಟಪಡುತ್ತೀರಿ, ನೋವಿಗೆ ಒಳಗಾಗಿದ್ದೀರಿ, ಭಯಪಡುತ್ತೀರಿ, ಅಸಹ್ಯಪಡುತ್ತೀರಿ ಹೀಗೆ ವಿವಿಧ ಭಾವನೆಗಳಿಗೆ ಏನಾದರೂ ಹೆಸರು ನೀಡುವುದರಿಂದ ಅವುಗಳ ತೀವ್ರತೆಯನ್ನು ಬಹಳವಾಗಿ ಕಡಿಮೆ ಮಾಡಬಹುದು. ಯಾರಾದರೂ ನೇರವಾಗಿ ಅಥವಾ ಸಂದೇಶದ ರೂಪದಲ್ಲಿ ಹೇಳುವ ಯಾವುದಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ನೀವು 10 ನಿಮಿಷಗಳು, ಒಂದು ಗಂಟೆ ಅಥವಾ ಒಂದು ದಿನವನ್ನು ನಿಲ್ಲಿಸಿ ಶಾಂತವಾಗಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಯೋಚಿಸಲು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಏಕೆಂದರೆ, ಅವರು ಹೇಳಿದ್ದಕ್ಕೆ ತಕ್ಷಣ ಪ್ರತಿಕ್ರಿಯಿಸುವುದು ಹಾನಿಗೆ ಕಾರಣವಾಗಬಹುದು. ಬಳಿಕ ನೀವು ವಿಷಾದಿಸಬೇಕಾಗುತ್ತದೆ.

ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ (Harvard Health Publishing) ಅಧ್ಯಯನವು, ಭಾವನೆಗಳು ತೀವ್ರವಾಗಿದ್ದಾಗ, ತಕ್ಷಣ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು, ಸ್ವಲ್ಪ ಹೊತ್ತು ನಡೆಯಬೇಕು, ನೀರು ಕುಡಿಯಬೇಕು ಹಾಗೂ ತಣ್ಣೀರಿನಿಂದ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಿತಿಗಳನ್ನು ನಿಗದಿಪಡಿಸಿ. ವಾದಗಳಿಂದ ಸಮಯ ವ್ಯರ್ಥ ಮಾಡಬೇಡಿ. ಇತರರು ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತಾರೆ ಎಂದು ಭಾವಿಸಬೇಡಿ. ನಿಮ್ಮ ಪೋಷಕರು, ಸ್ನೇಹಿತರು ಹಾಗೂ ಸಂಗಾತಿ ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ
ಭಾವನೆಗಳನ್ನು ನಿಯಂತ್ರಿಸುವುದರ ಪ್ರಯೋಜನಗಳಿವು: ಭಾವನಾತ್ಮಕ ನಿಯಂತ್ರಣ ಎಂದರೆ ಮಾನಸಿಕ ಆತಂಕವಿಲ್ಲ. ನೀವು ಯಾವುದೇ ಪರಿಸ್ಥಿತಿಯನ್ನು ಬಹಳ ತಾಳ್ಮೆಯಿಂದ ಎದುರಿಸಬಹುದು. ನೀವು ನಿರಂತರ ಶಾಂತತೆಯನ್ನು ಅನುಭವಿಸುವಿರಿ. ನಿಮ್ಮ ಆಲೋಚನೆಗಳು ಸ್ಪಷ್ಟವಾಗಿರುತ್ತವೆ. ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ನೋವುಂಟುಮಾಡುವ ವಿಷಯಗಳು ನಿಮ್ಮ ಮೇಲೆ ಅಥವಾ ನಿಮ್ಮ ಸಮಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ಸಂತೋಷವಾಗಿರಿಸುತ್ತದೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಯಾವುದೇ ಆಹಾರ ಸೇವಿಸಿದರೂ ನಿಮಗೆ ಎದೆಯುರಿ ಉಂಟಾಗುತ್ತದೆಯೇ?: ಈ ಸಮಸ್ಯೆ ಪರಿಹರಿಸಲು ವೈದ್ಯರು ಸೂಚಿಸುವ ಪಾನೀಯಗಳು ಯಾವುವು?
- ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕೇ? ಈ ಹಣ್ಣು, ತರಕಾರಿಗಳ ಸೇವನೆಯಿಂದ ಬೆಸ್ಟ್ ರಿಸಲ್ಟ್
- ನಿಮ್ಮ ಹೃದಯ ಬಲಿಷ್ಠವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತೇ?; ಹೀಗಿವೆ ವೈದ್ಯರ ಸರಳ ಟಿಪ್ಸ್
- ದೇಶದಲ್ಲಿ ಶೇ.52.2ರಷ್ಟು ಗರ್ಭಿಣಿಯರಲ್ಲಿ ರಕ್ತಹೀನತೆ: ಕಾರಣಗಳೇನು? ತಡೆಯುವುದು ಹೇಗೆ?
- ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾದರೆ ಏನಾಗುತ್ತದೆ ಗೊತ್ತೇ?: ತಜ್ಞರು ತಿಳಿಸುವುದೇನು?

