ETV Bharat / health

ಬೆಳಗ್ಗೆ ಎದ್ದ ತಕ್ಷಣ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸುತ್ತದೆಯೇ?: ವೈದ್ಯರು ಸೂಚಿಸುವ ಪರಿಹಾರ ಕ್ರಮಗಳೇನು?

ನಿದ್ರೆಯಿಂದ ಎದ್ದ ನಂತರ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸಿಕೊಳ್ಳುವುದು, ಸ್ವಲ್ಪ ಸಮಯದ ನಡಿಗೆಯ ನಂತರ ನೋವು ಕಡಿಮೆಯಾಗುವುದು, ಇದು ಪ್ಲಾಂಟರ್ ಫ್ಯಾಸಿಟಿಸ್​​ನ ಲಕ್ಷಣವಾಗಿರಬಹುದು. ಈ ಕುರಿತು ವೈದ್ಯರು ತಿಳಿಸುವುದೇನು ಎಂಬುದನ್ನು ಇಲ್ಲಿ ಅರಿತುಕೊಳ್ಳೋಣ.

PLANTAR FASCIITIS  why heel pain after waking up  plantar fasciitis treatment  ಹಿಮ್ಮಡಿ ನೋವು
ಹಿಮ್ಮಡಿ ನೋವು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 5, 2026 at 4:58 PM IST

4 Min Read
Choose ETV Bharat

ನಿದ್ರೆಯಿಂದ ಎದ್ದು ನೆಲದ ಮೇಲೆ ಹೆಜ್ಜೆ ಇಟ್ಟ ತಕ್ಷಣವೇ ಹಿಮ್ಮಡಿಯಲ್ಲಿ ಮೊಳೆ ಇಲ್ಲವೇ ಚೂಪಾದ ಸೂಜಿ ಚುಚ್ಚಿದಂತಹ ನೋವು ಅನುಭವಿಸುವುದು ತುಂಬಾ ತೊಂದರೆದಾಯಕವಾಗಿರುತ್ತದೆ. ಕೆಲವು ನಿಮಿಷಗಳ ನಡಿಗೆಯ ಬಳಿಕ ನೋವು ಸ್ವಲ್ಪ ಕಡಿಮೆಯಾಗುತ್ತದೆ. ಇಡೀ ದಿನ ಹೆಚ್ಚು ಹೊತ್ತು ನಡೆದರೆ ಹಾಗೂ ಕೆಲಸದ ಸ್ಥಳದಲ್ಲಿ ನಿರಂತರವಾಗಿ ನಿಂತಾಗ ಹಾಗೂ ಸೋಫಾದಿಂದ ಇದ್ದಕ್ಕಿದ್ದಂತೆ ಎದ್ದಾಗ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರೆ, ಪ್ಲಾಂಟರ್ ಫ್ಯಾಸಿಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸೂಚನೆಯಾಗಿದೆ.

ಹಿಮ್ಮಡಿ ಹಾಗೂ ಪಾದದ ಅಡಿಭಾಗದ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಮಾನ್ಯವಾಗಿರುವ ಆರೋಗ್ಯದ ಸ್ಥಿತಿಯಾಗಿದೆ. ಮುಖ್ಯವಾಗಿ ದೀರ್ಘಕಾಲದವರೆಗೆ ನಿಲ್ಲುವ ವ್ಯಕ್ತಿಗಳಲ್ಲಿ, ಇದ್ದಕ್ಕಿದ್ದಂತೆ ಓಟ ಅಥವಾ ತೀವ್ರ ವ್ಯಾಯಾಮ ಆರಂಭಿಸುವವರಲ್ಲಿ ಹಾಗೂ ಅಧಿಕ ದೇಹದ ತೂಕವಿರುವವರಲ್ಲಿ ಕಂಡು ಬರುತ್ತದೆ. ಸೂಕ್ತ ಆರೈಕೆಯೊಂದಿಗೆ ಶಸ್ತ್ರಚಿಕಿತ್ಸೆಯಿಲ್ಲದೇ ಈ ಸ್ಥಿತಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ವೈದ್ಯರು ತಿಳಿಸುತ್ತಾರೆ.

PLANTAR FASCIITIS  why heel pain after waking up  plantar fasciitis treatment  ಹಿಮ್ಮಡಿ ನೋವು
ಹಿಮ್ಮಡಿ ನೋವು- ಸಾಂದರ್ಭಿಕ ಚಿತ್ರ (Getty Images)

ಏನಿದು ಪ್ಲಾಂಟರ್ ಫ್ಯಾಸಿಟಿಸ್?: ಹಿಮ್ಮಡಿಯ ಮೂಳೆಯಿಂದ ಪಾದದ ಬೆರಳುಗಳವರೆಗೆ ಪಾದದ ಅಡಿಭಾಗದಲ್ಲಿ ಹರಡಿರುವ ಬಲವಾದ ಅಂಗಾಂಶದ ಅಂತಿನವರೆಗೆ ಹರಡಿರುತ್ತದೆ. ಇದನ್ನು ಪ್ಲಾಂಟರ್ ಫ್ಯಾಸಿಯಾ ಎಂದು ಕರೆಯಲಾಗುತ್ತದೆ. ಈ ಪಟ್ಟಿಯು ಪಾದದ ಕಮಾನು ಭಾಗಕ್ಕೆ ಆಧಾರ ನೀಡುತ್ತದೆ, ನಡೆಯುವಾಗ ಉಂಟಾಗುವ ಒತ್ತಡ ಹೀರಿಕೊಳ್ಳುತ್ತದೆ. ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿಲ್ಲದೇ ಪದೇ ಪದೆ ಅತಿಯಾದ ಒತ್ತಡಕ್ಕೆ ಒಳಗಾದಾಗ ಹಿಮ್ಮಡಿಯ ಮೂಳೆಯ ಬಳಿ ಸೂಕ್ಷ್ಮವಾದ ಬಿರುಕುಗಳು, ಉರಿಯೂತ ಉಂಟಾಗುತ್ತದೆ. ಈ ಸ್ಥಿತಿಯನ್ನು ಪ್ಲಾಂಟರ್ ಫ್ಯಾಸಿಟಿಸ್ ಎಂದು ಹೇಳಲಾಗುತ್ತದೆ. ದೀರ್ಘಕಾಲದ ಸಮಸ್ಯೆಗಳ ಸಂದರ್ಭದಲ್ಲಿ ಪ್ಲಾಂಟರ್ ಫ್ಯಾಸಿಯೋಪತಿ ಎಂದು ಕರೆಯಲಾಗುತ್ತದೆ. ನಿದ್ದೆಯ ಸಮಯದಲ್ಲಿ ಪಾದವು ವಿಶ್ರಾಂತಿಯಲ್ಲಿರುತ್ತದೆ, ಇದರಿಂದಾಗಿ ಪ್ಲಾಂಟರ್ ತಂತುಕೋಶವು ಸ್ವಲ್ಪ ಸಂಕುಚಿತಗೊಳ್ಳುತ್ತದೆ.

ಎಚ್ಚರವಾದ ಬಳಿಕ ದೇಹದ ಸಂಪೂರ್ಣ ತೂಕವು ಇದ್ದಕ್ಕಿದ್ದಂತೆ ಪಾದದ ಮೇಲೆ ಬೀಳುತ್ತಿದ್ದಂತೆ ಸಂಕುಚಿತ ಅಂಚಿನ ಭಾಗದ ನೋವು ವೇಗವಾಗಿ ವಿಸ್ತರಿಸುತ್ತದೆ. ಮೊದಲ ಹೆಜ್ಜೆಯಿಂದಲೇ ತೀವ್ರವಾದ, ಇರಿತದ ನೋವು ಕಾಣಿಸುತ್ತದೆ. ಇದನ್ನು ಸಾಮಾನ್ಯವಾಗಿ ಮೊಳೆಯನ್ನು ತಳ್ಳಿದಂತೆ ಭಾಸವಾಗುತ್ತದೆ. ಸ್ವಲ್ಪ ಸಮಯದವರೆಗೆ ನಡೆದ ಬಳಿಕ, ಬ್ಯಾಂಡ್ ಹೆಚ್ಚು ಹೊಂದಿಕೊಳ್ಳುತ್ತದೆ ಹಾಗೂ ನೋವು ಸ್ವಲ್ಪ ಕಡಿಮೆಯಾಗುತ್ತದೆ.

PLANTAR FASCIITIS  why heel pain after waking up  plantar fasciitis treatment  ಹಿಮ್ಮಡಿ ನೋವು
ಹಿಮ್ಮಡಿ ನೋವು- ಸಾಂದರ್ಭಿಕ ಚಿತ್ರ (Getty Images)

ಹಿಮ್ಮಡಿ ನೋವಿಗೆ ಪ್ರಮುಖ ಕಾರಣಗಳೇನು?: ನಮ್ಮ ಪಾದಗಳು ಪ್ರತಿದಿನ ಅಪಾರ ಒತ್ತಡ ಸಹಿಸಿಕೊಳ್ಳುತ್ತವೆ. ಪ್ಲಾಂಟರ್ ಫ್ಯಾಸಿಟಿಸ್ ಅಪಾಯ ಈ ಅಂಶಗಳಿಂದ ಹೆಚ್ಚಾಗುತ್ತದೆ. ದೀರ್ಘಾವಧಿಯ ನಿಷ್ಕ್ರಿಯತೆಯ ಬಳಿಕ ಇದ್ದಕ್ಕಿದ್ದಂತೆ ನಡೆಯಲು ಇಲ್ಲವೇ ನಿತ್ಯ ಹಲವಾರು ಕಿಲೋಮೀಟರ್ ಓಡಲು ಆರಂಭಿಸುವುದು. ಕೆಲಸದಲ್ಲಿ ಗಟ್ಟಿಯಾದ ಮೇಲ್ಮೈಗಳಲ್ಲಿ ದೀರ್ಘಕಾಲ ನಿಲ್ಲುವುದು. ಸರಿಯಾದ ಕಮಾನು ಬೆಂಬಲ, ಮೆತ್ತನೆಯ ಕೊರತೆಯಿರುವ ಪಾದರಕ್ಷೆಗಳನ್ನು ಧರಿಸುವುದು. ಕೆಲವು ನಗರಗಳಲ್ಲಿ ಕಂಡುಬರುವ ಗಟ್ಟಿಯಾದ ರಸ್ತೆಗಳು, ಪಾದಚಾರಿ ಮಾರ್ಗಗಳಲ್ಲಿ ನಡೆಯುವಾಗ ಉಲ್ಬಣಗೊಳ್ಳುವ ಸಮಸ್ಯೆ ಕಾಣಿಸುತ್ತದೆ. ಅಧಿಕ ತೂಕ ಹಾಗೂ ಪಾದದ ಸ್ನಾಯುಗಳ ಸಮಸ್ಯೆಗಳು ಕಾಣಿಸುತ್ತದೆ.

PLANTAR FASCIITIS  why heel pain after waking up  plantar fasciitis treatment  ಹಿಮ್ಮಡಿ ನೋವು
ಹಿಮ್ಮಡಿ ನೋವು- ಸಾಂದರ್ಭಿಕ ಚಿತ್ರ (Getty Images)

ನೋವಿಗೆ ಹೀಲ್ ಸ್ಪರ್ ಕಾರಣವೇ?: ಎಕ್ಸ್ - ರೇದಿಂದ ಸಾಮಾನ್ಯವಾಗಿ ಹಿಮ್ಮಡಿಯ ಮೂಳೆಯ ಬಳಿ ಸಣ್ಣ ಮೂಳೆ ಬೆಳವಣಿಗೆಯನ್ನು ಬಹಿರಂಗವಾಗುತ್ತದೆ. ಇದನ್ನು ಹೀಲ್ ಸ್ಪರ್ ಎಂದು ಕರೆಯಲಾಗುತ್ತದೆ. ರೋಗಿಗಳು ಸಾಮಾನ್ಯವಾಗಿ ಈ ಸ್ಪರ್ ಅಂಗಾಂಶವನ್ನು ಚುಚ್ಚುತ್ತಿದೆ, ಹಿಮ್ಮಡಿ ನೋವನ್ನು ಉಂಟುಮಾಡುತ್ತದೆ ಎಂದು ತಿಳಿಯುತ್ತಾರೆ. ಹೀಲ್ ಸ್ಪರ್ ಸ್ವತಃ ನೋವಿನ ಮೂಲವಲ್ಲ. ಹಲವರಿಗೆ ಹೀಲ್ ಸ್ಪರ್ ಇರುತ್ತದೆ, ಯಾವುದೇ ನೋವು ಅನುಭವಿಸುವುದಿಲ್ಲ. ಪ್ಲಾಂಟರ್ ಫ್ಯಾಸಿಟಿಸ್ ಪ್ರಕರಣಗಳಲ್ಲಿ ನಿಜವಾದ ಸಮಸ್ಯೆ ಅಂಗಾಂಶದ ಅಂಚಿನಲ್ಲಿ ಇರುತ್ತದೆ. ಎಕ್ಸ್ ಕಿರಣದಲ್ಲಿ ಹೀಲ್ ಸ್ಪರ್ ಅನ್ನು ನೋಡುವುದು ಎಂದರೆ ಅದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬೇಕು ಎಂದಲ್ಲ ಎಂದು ವೈದ್ಯರು ವಿವರಿಸುತ್ತಾರೆ.

ಈ ಸಮಸ್ಯೆಗೆ ಪರಿಹಾರ ಕ್ರಮಗಳೇನು?: ಪಾದದ ಮೇಲಿನ ಒತ್ತಡ ಕಡಿಮೆ ಮಾಡುವುದು ಚಿಕಿತ್ಸೆಯಲ್ಲಿ ಅತ್ಯಂತ ನಿರ್ಣಾಯಕ ಹಂತವಾಗಿದೆ. ಗೋಡೆಗೆ ಒರಗಿಕೊಂಡು ಕರು ಸ್ನಾಯುಗಳನ್ನು (Calf Muscle) ಹಿಗ್ಗಿಸುವುದು ಸಹಾಯಕವಾಗಿದೆ. ಹೆಚ್ಚುವರಿಯಾಗಿ ಟೆನಿಸ್ ಬಾಲ್ ಇಲ್ಲವೇ ತಣ್ಣೀರಿನ ಬಾಟಲಿಯ ಮೇಲೆ ಪಾದದ ಅಡಿಭಾಗವನ್ನು ಹಿಂದಕ್ಕೆ, ಮುಂದಕ್ಕೆ ಉರುಳಿಸುವುದು ನಮ್ಯತೆ ಸುಧಾರಿಸುತ್ತದೆ, ಪರಿಹಾರ ನೀಡುತ್ತದೆ.

ಮೃದುವಾದ ಸರಿಯಾದ ಬೆಂಬಲ ನೀಡುವ ಪಾದರಕ್ಷೆಗಳನ್ನು ಧರಿಸಿ. ಮನೆಯಲ್ಲಿ ಗಟ್ಟಿಯಾದ ಮಹಡಿಗಳಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಬೇಕಾಗುತ್ತದೆ. ಕ್ರಮೇಣ ತೂಕ ಕಳೆದುಕೊಳ್ಳುವುದರಿಂದ ಪಾದಗಳ ಮೇಲಿನ ಯಾಂತ್ರಿಕ ಒತ್ತಡ ಕಡಿಮೆಯಾಗುತ್ತದೆ. ಭೌತಚಿಕಿತ್ಸೆ, ಹೀಲ್ ಕಪ್‌ಗಳು, ನೈಟ್ ಸ್ಪ್ಲಿಂಟ್‌ಗಳು, ತೀವ್ರತರವಾದ ಸಂದರ್ಭಗಳಲ್ಲಿ ಆಘಾತ ತರಂಗ ಚಿಕಿತ್ಸೆ, ಚುಚ್ಚುಮದ್ದುಗಳನ್ನು ಬಳಸಬಹುದು. ನೋವು ನಿವಾರಕಗಳು, ತಾತ್ಕಾಲಿಕ ಪರಿಹಾರ ಮಾತ್ರ ನೀಡುತ್ತವೆ, ಪ್ರಾಥಮಿಕ ಚಿಕಿತ್ಸೆಯಾಗಿರುವುದಿಲ್ಲ.

ಯಾವಾಗ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ?: ಶೇಕಡಾ 90ರಷ್ಟು ರೋಗಿಗಳು ಸೂಕ್ತವಾದ ವ್ಯಾಯಾಮಗಳು, ಸರಿಯಾದ ಪಾದರಕ್ಷೆಗಳು ಹಾಗೂ ಶಸ್ತ್ರಚಿಕಿತ್ಸೆಯೇತರ ಚಿಕಿತ್ಸೆಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಈ ಅಂಗಾಂಶಗಳು ಗುಣಮುಖವಾಗಲು ಕೆಲವು ವಾರಗಳು ಇಲ್ಲವೇ ತಿಂಗಳುಗಳನ್ನು ತೆಗೆದುಕೊಳ್ಳಬಹುದು, ರೋಗಿಗಳಿಗೆ ತಾಳ್ಮೆ ಅತ್ಯಗತ್ಯವಾಗಿದೆ. ಶಸ್ತ್ರಚಿಕಿತ್ಸೆ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪರಿಗಣಿಸಲಾಗುತ್ತದೆ. ಹಿಮ್ಮಡಿ ನೋವು ಹಲವಾರು ವಾರಗಳವರೆಗೆ ಮುಂದುವರಿದರೆ, ಹದಗೆಟ್ಟರೆ, ದೈನಂದಿನ ಚಟುವಟಿಕೆಗಳಲ್ಲಿ ತುಂಬಾ ತೊಂದರೆ ಕಾಣಿಸಿದರೆ ತಕ್ಷಣವೇ ಮೂಳೆಚಿಕಿತ್ಸಕರನ್ನು ಸಂಪರ್ಕಿಸಬೇಕಾಗುತ್ತದೆ. ಹಿಮ್ಮಡಿ ಗಾಯ, ಊತ, ಮರಗಟ್ಟುವಿಕೆ, ಕೆಂಪು, ಬಿಗಿತ, ತೀವ್ರವಾದ ನೋವು ವಿಶ್ರಾಂತಿ ಪಡೆಯುವಾಗಲೂ ಒತ್ತಡದ ನರಸಂಬಂಧಿತ ಸಮಸ್ಯೆ ಕಾಣಿಸಿದರೆ ವೈದ್ಯರು ಸಲಹೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಹೊರಗೆ ಕಾಣುವ ದೊಡ್ಡ ಹೊಟ್ಟೆಗಿಂತ ಒಳಾಂಗಗಳಲ್ಲಿರುವ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ: ವೈದ್ಯರ ಎಚ್ಚರಿಕೆ
  2. ಪುರುಷರಿಗಿಂತ ಮಹಿಳೆಯರಲ್ಲಿ ಮೆದುಳಿನ ಅನ್ಯೂರಿಜಮ್ ಉಂಟಾಗುವ ಸಾಧ್ಯತೆ ಹೆಚ್ಚು: ಏನಿದು ಆರೋಗ್ಯದ ಸಮಸ್ಯೆ?
  3. ಡಯಟ್ ಮಾಡುವಾಗ ಬೇಡದ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆಯಾಗುವುದೇಕೆ? ನಿಯಂತ್ರಿಸುವುದು ಹೇಗೆ ಗೊತ್ತೇ?
  4. ನಿಮ್ಮ ಮೂತ್ರದ ಬಣ್ಣದಲ್ಲಿ ಈ ಬದಲಾವಣೆಯಾದರೆ ಎಚ್ಚರಿಕೆ ವಹಿಸಿ: ದುರ್ವಾಸನೆ, ನೊರೆ ಮೂತ್ರವು ಕಿಡ್ನಿ ಸಮಸ್ಯೆಯೇ?
  5. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆಯೇ? ತಜ್ಞರು ತಿಳಿಸುವುದೇನು?