ETV Bharat / health

ನೀವು ಪ್ರತಿನಿತ್ಯ ಸಿಹಿ ಪದಾರ್ಥಗಳನ್ನು ಸೇವಿಸುತ್ತೀರಾ? ಹೈಬಿಪಿ, ಹೃದಯ ಕಾಯಿಲೆ ಅಪಾಯ: ತಜ್ಞರು ತಿಳಿಸುವುದೇನು?

ಪ್ರತಿದಿನ ಸಿಹಿ ತಿಂಡಿಗಳನ್ನು ಸೇವನೆ ಮಾಡುವುದರಿಂದ ಉರಿಯೂತ, ಟ್ರೈಗ್ಲಿಸರೈಡ್ ಮಟ್ಟ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಿಂದ ಹೃದಯದ ಅಪಧಮನಿಯ ಕಾರ್ಯ ದುರ್ಬಲವಾಗುತ್ತದೆ. ಹೃದಯದ ಆರೋಗ್ಯಕ್ಕೆ ಅಪಾಯ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

Sweet snacks increase inflammation  sugar consumption increases High BP  ಸಕ್ಕರೆ ಸೇವಿಸುವುದರ ಅಡ್ಡಪರಿಣಾಮಗಳು  heart disease risk
ಸಕ್ಕರೆ - ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : July 6, 2026 at 4:31 PM IST

|

Updated : July 6, 2026 at 4:42 PM IST

3 Min Read
Choose ETV Bharat

ಹೃದಯ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದ ಕುರಿತು ಮುಖ್ಯವಾಗಿ ಗಮನಿಸಿಸುವುದಾದರೆ, ಅತಿಯಾದ ಉಪ್ಪು ಸೇವನೆ ಹೆಚ್ಚಾಗಿ ಪ್ರಾಥಮಿಕ ಅಪರಾಧಿ ಎಂದು ಹೇಳಲಾಗುತ್ತದೆ. ಜೊತೆಗೆ ಉಪ್ಪು ನಿಮ್ಮ ಹೃದಯದ ಶತ್ರುವಾಗಿದೆ. ಹಲವಾರು ಅಧ್ಯಯನಗಳು ತಿಳಿಸುವ ಪ್ರಕಾರ, ಉಪ್ಪಿನಂತೆಯೇ ಅತಿಯಾದ ಸಕ್ಕರೆ ಸೇವನೆಯು ಹೃದಯದ ಆರೋಗ್ಯಕ್ಕೂ ಅಪಾಯ ತುಂಬಾ ಉಂಟುಮಾಡುತ್ತದೆ. ಚಹಾ, ಬಿಸ್ಕತ್ತುಗಳು, ತಂಪು ಪಾನೀಯಗಳು ಇಲ್ಲವೇ ಐಸ್ ಕ್ರೀಮ್‌ನಲ್ಲಿರುವ ಸಕ್ಕರೆಯೇ ಆಗಿರಲಿ, ಈ ವಸ್ತುಗಳು ಕ್ರಮೇಣ ನಿಮ್ಮ ಹೃದಯಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನಿಮಗೆ ಅರಿವಿಲ್ಲದೆಯೇ ಈ ಸೆಮಸ್ಯೆಗೆ ದಾರಿ ಮಾಡಿಕೊಡುತ್ತದೆ.

ಜನರು ಸಾಮಾನ್ಯವಾಗಿ ಎಣ್ಣೆ, ತುಪ್ಪ ಇಲ್ಲವೇ ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರದಿಂದ ಮಾತ್ರ ಹೃದಯ ಕಾಯಿಲೆ ಉಂಟಾಗುತ್ತದೆ ಎಂದು ಭಾವಿಸುತ್ತಾರೆ. ಅತಿಯಾದ ಸಕ್ಕರೆ ಸೇವನೆಯು ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ ಎಂದು ಸಂಶೋಧನೆ ಸ್ಪಷ್ಟವಾಗಿ ತೋರಿಸುತ್ತದೆ. ಸಕ್ಕರೆ ಸಹಿತ ಆಹಾರಗಳನ್ನು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು, ಇನ್ಸುಲಿನ್ ಪ್ರತಿರೋಧ, ಕೊಬ್ಬಿನ ಪಿತ್ತಜನಕಾಂಗ ಹಾಗೂ ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್​​ನಂತಹ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಇವೆಲ್ಲವೂ ಹೃದಯಕ್ಕೆ ಅಪಾಯ ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

Sweet snacks increase inflammation  sugar consumption increases High BP  ಸಕ್ಕರೆ ಸೇವಿಸುವುದರ ಅಡ್ಡಪರಿಣಾಮಗಳು  heart disease risk
ಸಕ್ಕರೆ - ಸಾಂದರ್ಭಿಕ ಚಿತ್ರ (Getty Images)

ಅಧಿಕ ಸಕ್ಕರೆ ಸೇವಿಸಿದರೆ ಏನಾಗುತ್ತದೆ? ಹೆಚ್ಚಿನ ಜನರು ಅಗತ್ಯಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಪ್ಯಾಕ್ ಮಾಡಲಾದ ಆಹಾರಗಳು, ಸಾಸ್‌ಗಳು, ಬ್ರೆಡ್ ಹಾಗೂ ತಿಂಡಿಗಳಲ್ಲಿ ಸಕ್ಕರೆ ಹೆಚ್ಚಾಗಿ ಇರುತ್ತದೆ. ಸಿಹಿಯಾಗಿ ರುಚಿಯನ್ನು ಮಾತ್ರ ಹೊಂದಿರುವುದಿಲ್ಲ. ಇದರ ಪರಿಣಾಮವಾಗಿ ವ್ಯಕ್ತಿಗಳು ಸಾಮಾನ್ಯವಾಗಿ ತಿಳಿಯದೆಯೇ ತಮ್ಮ ದೈನಂದಿನ ಶಿಫಾರಸು ಮಾಡಿದ ಸಕ್ಕರೆ ಮಿತಿಗಳನ್ನು ಮೀರುತ್ತಾರೆ.

ಜೀರ್ಣಕ್ರಿಯೆಯ ಸಮಯದಲ್ಲಿ ಸಕ್ಕರೆಯನ್ನು ಗ್ಲೂಕೋಸ್ ಆಗಿ ಪರಿವರ್ತಿಸಲಾಗುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ನೀವು ಅಗತ್ಯಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ ಹೆಚ್ಚುವರಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅನ್ನು ಕೊಬ್ಬಾಗಿ ಪರಿವರ್ತಿಸಲಾಗುತ್ತದೆ. ದೇಹದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ಇನ್ಸುಲಿನ್‌ ದೇಹದ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಸಮಯ ಕಳೆದಂತೆ ಈ ಬದಲಾವಣೆಗಳು ಹೃದಯ ಹಾಗೂ ರಕ್ತನಾಳಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ.

Sweet snacks increase inflammation  sugar consumption increases High BP  ಸಕ್ಕರೆ ಸೇವಿಸುವುದರ ಅಡ್ಡಪರಿಣಾಮಗಳು  heart disease risk
ಸಕ್ಕರೆ - ಸಾಂದರ್ಭಿಕ ಚಿತ್ರ (Getty Images)

ಹಲವು ಆಹಾರಗಳಲ್ಲಿ ಗುಪ್ತ ಸಕ್ಕರೆ: ಸಕ್ಕರೆ ನೀವು ನಿಮ್ಮ ಚಹಾಕ್ಕೆ ಸೇರಿಸುವ ವಸ್ತುವಲ್ಲ. ಅನೇಕ ಆಹಾರಗಳು ನಮಗೆ ಅರಿವಿಲ್ಲದೆಯೇ ಹೆಚ್ಚಿನ ಮಟ್ಟದ ಸಕ್ಕರೆಯನ್ನು ಹೊಂದಿರುತ್ತವೆ. ತಂಪು ಪಾನೀಯಗಳು, ಪ್ಯಾಕ್ ಮಾಡಿದ ಹಣ್ಣಿನ ರಸಗಳು, ಕೇಕ್‌ಗಳು, ಪೇಸ್ಟ್ರಿಗಳು, ಡೋನಟ್ಸ್ ಭಾರತೀಯ ಸಿಹಿತಿಂಡಿಗಳು ಅತಿಯಾದ ಪ್ರಮಾಣದಲ್ಲಿ ಸಕ್ಕರೆಯನ್ನು ಹೊಂದಿರುತ್ತವೆ. ಆರೋಗ್ಯಕರವೆಂದು ತೋರುವ ಅನೇಕ ಪ್ಯಾಕ್ ಮಾಡಿದ ಆಹಾರಗಳು ಗುಪ್ತ ಸಕ್ಕರೆ ಹೊಂದಿರುತ್ತವೆ.

ಸಿಹಿ ಹಣ್ಣುಗಳನ್ನು ಸೇವಿಸುವುದು ಹಾನಿಕಾರಕವೇ? ಸಾಮಾನ್ಯವಾಗಿ ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕ ಸಕ್ಕರೆಯನ್ನು ಹಾನಿಕಾರಕವೆಂದು ಪರಿಗಣಿಸಲಾಗುವುದಿಲ್ಲ. ಹಣ್ಣುಗಳಲ್ಲಿ ಫೈಬರ್, ವಿಟಮಿನ್‌ಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳು ಹೊಂದಿರುತ್ತವೆ. ಇದರಿಂದ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಸಮಸ್ಯೆಯು ಪ್ರಾಥಮಿಕವಾಗಿ ಸೇರಿಸಿದ ಸಕ್ಕರೆಗಳಿಂದ ಉಂಟಾಗುತ್ತದೆ. ಮಧುಮೇಹ ರೋಗಿಗಳು ಮಿತವಾಗಿ ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಮುಖ್ಯವಾಗುತ್ತದೆ.

ನಿತ್ಯ ಎಷ್ಟು ಸಕ್ಕರೆ ಸೇವಿಸುವುದು ಉತ್ತಮ? ಪ್ರತಿನಿತ್ಯ ಸಕ್ಕರೆಯ ಸೇವನೆಯನ್ನು ಮಿತಿಗೊಳಿಸಬೇಕಾಗುತ್ತದೆ. ಮಹಿಳೆಯರಿಗೆ ಸುಮಾರು 25 ಗ್ರಾಂ (ಸುಮಾರು 6 ಟೀಸ್ಪೂನ್) ಹಾಗೂ ಪುರುಷರಿಗೆ 36 ಗ್ರಾಂ (ಸುಮಾರು 9 ಟೀಸ್ಪೂನ್) ದೈನಂದಿನ ಸೇವನೆ ಸುರಕ್ಷಿತವಾಗಿದೆ. ಒಂದೇ ಪ್ಯಾಕ್ ಮಾಡಿದ ವಸ್ತು ಅಥವಾ ತಂಪು ಪಾನೀಯವು ಇಷ್ಟು ಸಕ್ಕರೆಯನ್ನು ಹೊಂದಿರಬಹುದು. ನೀವು ಸೇವಿಸುವ ಪಾನೀಯಗಳು ಹಾಗೂ ಆಹಾರ ಪದಾರ್ಥಗಳನ್ನು ಎಚ್ಚರಿಕೆವಹಿಸಿ ಲೇಬಲ್​ ಅನ್ನು ಪರಿಶೀಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

Sweet snacks increase inflammation  sugar consumption increases High BP  ಸಕ್ಕರೆ ಸೇವಿಸುವುದರ ಅಡ್ಡಪರಿಣಾಮಗಳು  heart disease risk
ಸಕ್ಕರೆ - ಸಾಂದರ್ಭಿಕ ಚಿತ್ರ (Getty Images)

ಹೃದಯದ ಆರೋಗ್ಯಕ್ಕೆ ವೈದ್ಯರ ಸಲಹೆಗಳೇನು? ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿ ಸಮತೋಲಿತ ಆಹಾರ ಸೇವನೆ ಮಾಡಬೇಕಾಗುತ್ತದೆ. ಉಪ್ಪು ಹಾಗೂ ಸಕ್ಕರೆ ಎರಡನ್ನು ನಿಯಮಿತವಾಗಿ ಸೇವನೆ ಮಾಡಬೇಕಾಗುತ್ತದೆ. ನಿಯಮಿತ ವ್ಯಾಯಾಮ, ಧೂಮಪಾನ ಮಾಡದಿರುವುದು, ಸಾಕಷ್ಟು ನಿದ್ರೆ ಮಾಡುವುದು ಹಾಗೂ ಒತ್ತಡವನ್ನು ನಿರ್ವಹಿಸುವುದು ಅತ್ಯಗತ್ಯವಾಗಿದೆ. ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯತಕಾಲಿಕವಾಗಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಫಿಟ್ನೆಸ್ ನೆಪದಲ್ಲಿ ಮಲ್ಟಿವಿಟಮಿನ್‌ ಮಾತ್ರೆ ಸೇವಿಸುತ್ತೀರಾ? ಈ ತಪ್ಪುಗಳಿಂದ ಯಕೃತ್ತು ಜೊತೆಗೆ ಕಿಡ್ನಿ ಹಾನಿ: ವೈದ್ಯರ ಎಚ್ಚರಿಕೆ
  2. ನಿಮ್ಮ ದೇಹದಲ್ಲಿ ಪದೇ ಪದೇ ಕಾಣಿಸುವ ನೋವುಗಳು ಕ್ಯಾನ್ಸರ್‌ನ ಚಿಹ್ನೆಗಳೇ? ನಿರ್ಲಕ್ಷಿಸಿದರೆ ಅಪಾಯ- ವೈದ್ಯರ ಎಚ್ಚರಿಕೆ
  3. ಮಾನ್ಸೂನ್​ನಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ? ಈ ಸಮಸ್ಯೆಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವೈದ್ಯರ ಸಲಹೆ
  4. ಬೊಜ್ಜು ಹೊಂದಿರುವವರಿಗೆ ಹೃದಯಾಘಾತದ ಅಪಾಯ ಕಡಿಮೆ ಇರುತ್ತದೆಯೇ? ಸಂಶೋಧನೆ ಹೇಳುವುದೇನು?
  5. 1,400ಕ್ಕೂ ಅಧಿಕ ಜನರಿಗೆ ಎಬೋಲಾ ಸೋಂಕು, 400ಕ್ಕೂ ಹೆಚ್ಚು ಮಂದಿ ಸಾವು: ವೈರಸ್​​ ಪತ್ತೆಗಾಗಿ ನಿರ್ದಿಷ್ಟ ಪರೀಕ್ಷೆಗೆ ಅನುಮೋದಿಸಿದ WHO
Last Updated : July 6, 2026 at 4:42 PM IST