ETV Bharat / health

ಪ್ರತಿದಿನ ಮಕ್ಕಳು ಗೊರಕೆ ಹೊಡೆಯುತ್ತಿದ್ದಾರಾ? ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳೇನು? ವೈದ್ಯರ ಸಲಹೆ ಹೀಗಿದೆ

ಪ್ರತಿನಿತ್ಯ ಮಕ್ಕಳು ನಿದ್ರೆಗೆ ಜಾರಿದಾಗ ಗೊರಕೆ ಹೊಡೆಯುವುದು ಸಾಮಾನ್ಯವಲ್ಲ. ಗೊರಕೆಯು ನಿದ್ರೆ, ಸಂಪೂರ್ಣ ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಗೊರಕೆ ಸಮಸ್ಯೆ ಕಾಣಿಸಿಕೊಳ್ಳಲು ಕಾರಣಗಳೇನು ಹಾಗೂ ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿಯೋಣ.

child snoring treatment  snoring in children  ಚಿಕ್ಕಮಕ್ಕಳಲ್ಲಿ ಗೊರಕೆ ಸಮಸ್ಯೆ  Snoring problem in children
ಚಿಕ್ಕಮಕ್ಕಳಲ್ಲಿ ಗೊರಕೆ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : February 25, 2026 at 4:03 PM IST

3 Min Read
Choose ETV Bharat

ಪೋಷಕರು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸುವಂತಹ ಗೊರಕೆಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಪ್ರತಿದಿನ ಮಕ್ಕಳು ನಿದ್ರೆ ಮಾಡುವ ವೇಳೆ ಗೊರಕೆ ಹೊಡೆಯುತ್ತಿದ್ದರೆ ಇದು ಆರೋಗ್ಯ ಸಮಸ್ಯೆಯಾಗಿದೆ ಎಂದು ಆರೋಗ್ಯ ತಜ್ಞರು ಪರಿಗಣಿಸುತ್ತಾರೆ. ಮಕ್ಕಳ ತಜ್ಞೆ ಡಾ.ಮಾಧವಿ ಭಾರದ್ವಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, 'ಪೋಷಕರು ಇದನ್ನು ಆನುವಂಶಿಕ ಸಮಸ್ಯೆ ಎಂದು ಭಾವಿಸುತ್ತಾರೆ. ಆ ಮಗುವಿನ ತಂದೆಯು ಗೊರಕೆ ಹೊಡೆಯುತ್ತಾರೆ. ಇದರಿಂದ ಅವರ ಮಗು ಕೂಡ ಗೊರಕೆ ಹೊಡೆಯುತ್ತದೆ ಎಂದು ಭಾವಿಸುತ್ತಾರೆ.

35 ಕೆಜಿ ಅಧಿಕ ತೂಕ ಹೊಂದಿದ್ದ ಮಗುವನ್ನು ಆರೋಗ್ಯವಂತ ಎಂದು ಪೋಷಕರು ಪರಿಗಣಿಸುತ್ತಾರೆ. ಅವನ ಅಥವಾ ಅವಳ ಗೊರಕೆಯನ್ನು ಸಾಮಾನ್ಯವೆಂದು ಭಾವಿಸುತ್ತಾರೆ. ಯಾವುದೇ ಪಾಲಕರು ತಮ್ಮ ಮಕ್ಕಳು ನಿರಂತರವಾಗಿ ಈ ರೀತಿ ಅಂದಾಜು ಮಾಡಬಾರದು. ಗೊರಕೆ ಹಾಗೂ ತೂಕ ಹೆಚ್ಚಾಗುವುದು ನಿಕಟ ಸಂಬಂಧವನ್ನು ಹೊಂದಿದೆ. ಪ್ರತಿದಿನ ಮಗು ಗೊರಕೆ ಹೊಡೆಯುತ್ತಿದ್ದರೆ, ಅವರ ವಾಯುಮಾರ್ಗದಲ್ಲಿ ಅಡಚಣೆಯಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸಲಾಗುತ್ತದೆ. ಈ ಸಮಸ್ಯೆಯನ್ನು ಮೊದಲೇ ಗುರುತಿಸಿ ತಡಮಾಡದೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸುತ್ತಾರೆ.

ಚಿಕ್ಕಮಕ್ಕಳಿಗೆ ಗೊರಕೆ ಸಮಸ್ಯೆ ಕಾಡುವುದು ಏಕೆ? ಮೂಗಿನಿಂದ ಶ್ವಾಸಕೋಶಕ್ಕೆ ವಾಯುಮಾರ್ಗದಲ್ಲಿ ಅಡಚಣೆ ಉಂಟಾದಾಗಲೆಲ್ಲಾ, ಗಾಳಿಯು ಅದರೊಂದಿಗೆ ಡಿಕ್ಕಿ ಹೊಡೆದು ಗೊರಕೆ ಉಂಟಾಗಲು ಕಾರಣವಾಗುತ್ತದೆ. ಶೀತದ ಸಮಯದಲ್ಲಿ ಲೋಳೆ ಸಂಗ್ರಹವಾಗುವುದರಿಂದ ಮೂಗಿನಲ್ಲಿ ಸ್ರವಿಸುವಿಕೆ 2ರಿಂದ 3 ವಾರಗಳವರೆಗೆ ಇರುತ್ತದೆ. ಆದರೆ ಕೆಲವು ಚಿಕ್ಕ ಮಕ್ಕಳಿಗೆ ಇದನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಮಗು ಆರೋಗ್ಯವಾಗಿದ್ದರೂ ಪ್ರತಿದಿನ ಗೊರಕೆ ಹೊಡೆಯುತ್ತಿದ್ದರೆ, ಅದು ಟಾನ್ಸಿಲ್‌ಗಳ ಹಿಗ್ಗುವಿಕೆ ಅಥವಾ ಉಸಿರಾಟದ ವ್ಯವಸ್ಥೆಯಲ್ಲಿ ಮೃದು ಅಂಗಾಂಶದ ದ್ರವ್ಯರಾಶಿಯ ಸಂಕೇತವಾಗಿರಬಹುದು ಎಂದು ವೈದ್ಯರು ವಿವರಿಸುತ್ತಾರೆ.

ಮಕ್ಕಳು ಗೊರಕೆ ಹೊಡೆಯುವುದರಿಂದ ಆಗುವ ಪರಿಣಾಮಗಳೇನು? ಮಕ್ಕಳು ಗೊರಕೆ ಹೊಡೆದಾಗ, ಅವರು ಉಸಿರಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದರ್ಥ. ಇದು ಅವರಿಗೆ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಬರದಂತೆ ತಡೆಯುತ್ತದೆ. ಅವರ ದೈನಂದಿನ ದಿನಚರಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಹ ಮಕ್ಕಳು ದಿನವಿಡೀ ಕಿರಿಕಿರಿಗೆ ಒಳಗಾಗಿರುತ್ತಾರೆ. ಶಾಲೆಯ ಸಮಯದಲ್ಲಿ ಗಮನಹರಿಸುವಲ್ಲಿ ತೊಂದರೆ ಹೊಂದಿರುತ್ತಾರೆ, ಕ್ರೀಡೆಗಳ ಸಮಯದಲ್ಲಿ ಬೇಗನೆ ಆಯಾಸಗೊಳ್ಳುತ್ತಾರೆ. ನಿದ್ರೆಯ ಕೊರತೆಯು ಅವರ ಮಾನಸಿಕ, ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

child snoring treatment  snoring in children  ಚಿಕ್ಕಮಕ್ಕಳಲ್ಲಿ ಗೊರಕೆ ಸಮಸ್ಯೆ  Snoring problem in children
ಚಿಕ್ಕಮಕ್ಕಳಲ್ಲಿ ಗೊರಕೆ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)

ಮಕ್ಕಳಲ್ಲಿ ಗೊರಕೆಗೆ ಮುಖ್ಯ ಕಾರಣಗಳೇನು? ಚಿಕ್ಕ ಮಕ್ಕಳಲ್ಲಿ ಕಾಣಿಸುವಂತಹ ಗೊರಕೆಗೆ ಕೆಲವು ಸಾಮಾನ್ಯ ವೈದ್ಯಕೀಯ ಕಾರಣಗಳಿವೆ. ಅವುಗಳಲ್ಲಿ ಅಲರ್ಜಿಕ್ ರಿನಿಟಿಸ್, ಅಡೆನಾಯ್ಡ್‌ಗಳು, ಟಾನ್ಸಿಲ್ ಹೈಪರ್ಟ್ರೋಫಿ ಸೇರಿವೆ. ಇದರೊಂದಿಗೆ ಬೊಜ್ಜು ಕೂಡ ಸಣ್ಣ ಶೇಕಡಾವಾರು ಮಕ್ಕಳಲ್ಲಿ ಗೊರಕೆಗೆ ಪ್ರಮುಖ ಕಾರಣವಾಗಿದೆ. ಹೆಚ್ಚುವರಿ ದೇಹದ ಕೊಬ್ಬು ವಾಯುಮಾರ್ಗಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಮಗುವಿನ ತೂಕವನ್ನು ನಿಯಂತ್ರಿಸುವುದು ಗೊರಕೆ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ ಎಂದು ಡಾ. ಮಾಧವಿ ಭಾರದ್ವಾಜ್ ತಿಳಿಸುತ್ತಾರೆ.

ಗೊರಕೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಕಾಲಿಕ ಚಿಕಿತ್ಸೆ: ಚಿಕ್ಕಮಕ್ಕಳಲ್ಲಿ ಕಂಡುಬರುವ ಗೊರಕೆ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಈ ಸಮಸ್ಯೆಯ ಕುರಿತು ಪೋಷಕರು ನಿರ್ಲಕ್ಷ್ಯವಹಿಸದೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ರಾತ್ರಿಯ ಉಸಿರಾಟದ ಮಾದರಿಗಳು, ಹಗಲಿನ ಆಲಸ್ಯ ಮತ್ತು ತೂಕದಂತಹ ತಮ್ಮ ಮಗುವಿನ ಎಲ್ಲಾ ಲಕ್ಷಣಗಳನ್ನು ಮುಕ್ತವಾಗಿ ಚರ್ಚಿಸಬೇಕು. ಸಕಾಲಿಕ ರೋಗನಿರ್ಣಯವು ಮಗು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ.ಮಾಧವಿ ಭಾರದ್ವಾಜ್ ಸಲಹೆ ನೀಡಿದ್ದಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಯಕೃತ್ತು ಹಾನಿಯಾಗುವುದನ್ನು ತಡೆಯುವ ಆಹಾರಗಳು ಯಾವುವು ಗೊತ್ತೇ ನಿಮಗೆ?
  2. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿಸುವ ಪುರುಷರ ಅಭ್ಯಾಸಗಳು: ಕಾಯಿಲೆಯ ಚಿಹ್ನೆಗಳನ್ನು ಹೀಗೆ ಗುರುತಿಸಿ
  3. ಪ್ರತಿನಿತ್ಯ ಹೀಲ್ಸ್ ಧರಿಸುವುದರಿಂದ ದೇಹದ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ ಗೊತ್ತೇ?
  4. ಲಿವರ್ ಕ್ಯಾನ್ಸರ್ ತಡೆಯುವುದೇ ಕಾಫಿ?: ತಜ್ಞರು ಹೇಳುವುದೇನು?
  5. ಗರ್ಭಕಂಠ ಕ್ಯಾನ್ಸರ್​ ತಡೆಗೆ ದೇಶಾದ್ಯಂತ ಕೇಂದ್ರ ಸರ್ಕಾರದಿಂದ HPV ಉಚಿತ ಲಸಿಕೆ ಅಭಿಯಾನ