ETV Bharat / health

ನಿಮ್ಮ ವಯಸ್ಸು & ಕೆಲಸದ ಆಧಾರದ ಮೇಲೆ ಪ್ರತಿದಿನ ಎಷ್ಟು ಗ್ರಾಂ ಪ್ರೋಟೀನ್ ಸೇವಿಸುವುದು ಉತ್ತಮ ಎನ್ನುವುದು ನಿಮಗೆ ತಿಳಿದಿದೆಯೇ?

ದೇಶಾದ್ಯಂತ ಜನಸಂಖ್ಯೆಯ ಶೇ.70ರಿಂದ 80ರಷ್ಟು ಪ್ರೋಟೀನ್​ ಕೊರತೆಯಿಂದ ಬಳಲುತ್ತಿದ್ದಾರೆ. ಸಸ್ಯಾಹಾರಿಗಳಲ್ಲಿ ಪ್ರೋಟೀನ್​ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ, ಇದನ್ನು 'ಮೌನ ಪೌಷ್ಟಿಕಾಂಶದ ಬಿಕ್ಕಟ್ಟು' ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : August 31, 2026 at 8:38 PM IST

3 Min Read
Choose ETV Bharat

ದೇಹದ ರಚನೆಯಲ್ಲಿ ಪ್ರೋಟೀನ್ ನಿರ್ಣಾಯಕ ಪಾತ್ರ ವಹಿಸುತ್ತದೆ, ಪ್ರತಿ ಜೀವಕೋಶಕ್ಕೂ ಇದು ಅವಶ್ಯಕವಾಗಿದೆ. ಸಂಕ್ಷಿಪ್ತವಾಗಿ ತಿಳಿಸುವುದಾದರೆ, ಪ್ರೋಟೀನ್ ದೇಹಕ್ಕೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಪ್ರೋಟೀನ್ ಕೊರತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಲವು ಸಂಶೋಧನಾ ವರದಿಗಳು ಎಚ್ಚರಿಕೆ ನೀಡಿವೆ. ಅನೇಕ ಜನರು ತಮ್ಮ ದೈನಂದಿನ ಆಹಾರದಲ್ಲಿ ಎಷ್ಟು ಪ್ರೋಟೀನ್ ಸೇರಿಸಬೇಕು ಅಥವಾ ಯಾವ ಆಹಾರಗಳಲ್ಲಿ ಅಧಿಕ ಪ್ರೋಟೀನ್​ ಒದಗಿಸುತ್ತವೆ ಎಂಬುದರ ಕುರಿತು ತಿಳಿದಿಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ.

ದೇಶಾದ್ಯಂತ ಜನಸಂಖ್ಯೆಯ ಶೇ.70ರಿಂದ 80ರಷ್ಟು ಪ್ರೋಟೀನ್​ ಕೊರತೆಯಿಂದ ಬಳಲುತ್ತಿದ್ದರೂ, ಸಸ್ಯಾಹಾರಿಗಳಲ್ಲಿ ಇದು ಇನ್ನೂ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು 'ಮೌನ ಪೌಷ್ಟಿಕಾಂಶದ ಬಿಕ್ಕಟ್ಟು' ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ. ಸಮಸ್ಯೆಗೆ ಪ್ರಾಥಮಿಕವಾಗಿ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಮೇಲಿನ ಅತಿಯಾದ ಅವಲಂಬನೆ, ಆಧುನಿಕ ಜೀವನಶೈಲಿ, ಜಂಕ್ ಫುಡ್ ಸೇವನೆ ಹಾಗೂ ಸಂಸ್ಕರಿಸಿದ ಹಿಟ್ಟಿನಿಂದ (ಮೈದಾ) ತಯಾರಿಸಿದ ಆಹಾರಗಳ ಸೇವನೆ ಕಾರಣ ಎಂದು ಅವರು ತಿಳಿಸುತ್ತಾರೆ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಸಂಶೋಧನಾ ವರದಿಗಳು ತಿಳಿಸುವುದೇನು?: ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಹಾಗೂ ಭಾರತೀಯ ಮಾರುಕಟ್ಟೆ ಸಂಶೋಧನಾ ಬ್ಯೂರೋ (IMRB) ನಂತಹ ಸಂಸ್ಥೆಗಳು ದೇಶದಲ್ಲಿ ಪ್ರೋಟೀನ್ ಕೊರತೆಯ ಬಗ್ಗೆ ಆಸಕ್ತಿದಾಯಕ ಸಂಶೋಧನೆಗಳನ್ನು ಬಹಿರಂಗಪಡಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸುವ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ ನಿತ್ಯ ಒಂದು ಗ್ರಾಂ ಪ್ರೋಟೀನ್ ಸೇವಿಸಬೇಕು. ಭಾರತೀಯನು ಸರಾಸರಿ 0.8 ಗ್ರಾಂ ಮಾತ್ರ ಸೇವಿಸುತ್ತಾನೆ. ಜಾಗತಿಕ ಸರಾಸರಿ ಪ್ರೋಟೀನ್ ಸೇವನೆಯು ದಿನಕ್ಕೆ ಪ್ರತಿ ವ್ಯಕ್ತಿಗೆ 68 ಗ್ರಾಂ ಆಗಿದ್ದರೆ, ಭಾರತದಲ್ಲಿ ಅದು ಕೇವಲ 47 ಗ್ರಾಂ ಆಗಿದೆ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಭಾರತೀಯ ಆಹಾರ ಪದ್ಧತಿ ಸಂಸ್ಥೆ ತಿಳಿಸುವ ಪ್ರಕಾರ, ಶೇ.84ರಷ್ಟು ಸಸ್ಯಾಹಾರಿಗಳು ಹಾಗೂ ಶೇ.65ರಷ್ಟು ಮಾಂಸಾಹಾರಿಗಳು ಪ್ರೋಟೀನ್ ಕೊರತೆಯಿಂದ ಬಳಲುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಶೇ.70ರಿಂದ 80ರಷ್ಟು ಜನರು ತಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವಿಸುವುದಿಲ್ಲ.

ಪ್ರತಿ ಹತ್ತು ಭಾರತೀಯರಲ್ಲಿ ಏಳು ಜನರು ಪ್ರೋಟೀನ್ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.73ರಷ್ಟು ಯುವಕರು ಅಗತ್ಯಕ್ಕಿಂತ ಕಡಿಮೆ ಪ್ರೋಟೀನ್ ಸೇವಿಸುತ್ತಾರೆ. ಈ ಸಮಸ್ಯೆ ವಿಶೇಷವಾಗಿ ಮಹಿಳೆಯರಲ್ಲಿ ವಿಶೇಷವಾಗಿ ಗೃಹಿಣಿಯರಲ್ಲಿ ಪ್ರಚಲಿತವಾಗಿದೆ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಯಾರಿಗೆ ಎಷ್ಟು ಪ್ರೋಟೀನ್​ ಬೇಕಾಗುತ್ತದೆ ಗೊತ್ತೇ?: ದೈನಂದಿನ ಪ್ರೋಟೀನ್ ಅವಶ್ಯಕತೆಗಳು ವಯಸ್ಸು, ಲಿಂಗ, ದೇಹದ ತೂಕ ಮತ್ತು ಚಟುವಟಿಕೆಯ ಮಟ್ಟಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, 1ರಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ 1.05ರಿಂದ 1.2 ಗ್ರಾಂ ಪ್ರೋಟೀನ್ ಅಗತ್ಯವಿದೆ. 14 ಕೆಜಿ ತೂಕವಿರುವ 3 ವರ್ಷದ ಮಗುವಿಗೆ, ದೈನಂದಿನ ಅವಶ್ಯಕತೆ 14.7ರಿಂದ 16.8 ಗ್ರಾಂ ಬೇಕಾಗುತ್ತದೆ. 4 ರಿಂದ 8 ವರ್ಷದವರಿಗೆ 19 ಗ್ರಾಂ, 9ರಿಂದ 13 ವಯಸ್ಸಿನವರಿಗೆ (34 ಗ್ರಾಂ), 14ರಿಂದ 18 ವರ್ಷದ ಹುಡುಗರು- 52 ಗ್ರಾಂ, ಹುಡುಗಿಯರು- 46 ಗ್ರಾಂ, 19ರಿಂದ 50 ವರ್ಷದ ಪುರುಷರು- 56 ಗ್ರಾಂ, ಮಹಿಳೆಯರು- 46ರಿಂದ 50 ಗ್ರಾಂ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 68ರಿಂದ 82 ಗ್ರಾಂ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಕಡಿಮೆ ದೈಹಿಕ ಚಟುವಟಿಕೆಯ ಮಟ್ಟವನ್ನು ಹೊಂದಿರುವ ವ್ಯಕ್ತಿಗಳಿಗೆ ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ 0.8ರಿಂದ 1ಗ್ರಾಂ ಪ್ರೋಟೀನ್ ಅಗತ್ಯವಿದೆ. 7ರಿಂದ 8 ಗಂಟೆಗಳ ಕಾಲ ಕುಳಿತುಕೊಳ್ಳುವ (ಸುಮಾರು 60 ಕೆಜಿ ತೂಕ) ಜಡ ಕೆಲಸಗಳನ್ನು ಹೊಂದಿರುವ ವ್ಯಕ್ತಿಗಳಿಗೆ ದೈನಂದಿನ ಅವಶ್ಯಕತೆ 48 ರಿಂದ 60 ಗ್ರಾಂ. ನಡಿಗೆ, ನಿಂತು ಕೆಲಸ ಮಾಡುವುದು ಅಥವಾ ಭಾರ ಎತ್ತುವಂತಹ ದೈನಂದಿನ ವ್ಯಾಯಾಮದಲ್ಲಿ ಕನಿಷ್ಠ ಒಂದು ಗಂಟೆ ತೊಡಗಿಸಿಕೊಳ್ಳುವವರಿಗೆ 60ರಿಂದ 72 ಗ್ರಾಂ ಅಗತ್ಯವಿದೆ. ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ದಿನಕ್ಕೆ ಹೆಚ್ಚುವರಿಯಾಗಿ 10ರಿಂದ 15 ಗ್ರಾಂ ಅಗತ್ಯವಿದೆ.

ಪ್ರೋಟೀನ್​ನಲ್ಲಿ ಎರಡು ವಿಧಗಳು: ಪ್ರಾಣಿ ಆಧಾರಿತ ಹಾಗೂ ಸಸ್ಯ ಆಧಾರಿತ. ಮಾಂಸಾಹಾರಿಗಳು ಪ್ರಾಣಿ ಆಧಾರಿತ ಮತ್ತು ಸಸ್ಯ ಆಧಾರಿತ ಪ್ರೋಟೀನ್ ಮೂಲಗಳ ನಡುವೆ ಪರ್ಯಾಯವಾಗಿ ವಾರಕ್ಕೆ ಮೂರು ದಿನಗಳವರೆಗೆ ಸೇವಿಸಬೇಕು. ಮೊಟ್ಟೆ, ಹಾಲು, ಮೊಸರು, ಮೀನು, ಚೀಸ್ ಮತ್ತು ಮಾಂಸವು ಉತ್ತಮ ಗುಣಮಟ್ಟದ ಪ್ರೋಟೀನ್‌ನ ಮೂಲಗಳಾಗಿವೆ.

ದ್ವಿದಳ ಧಾನ್ಯಗಳು, ಬಾದಾಮಿ, ಕಡಲೆಕಾಯಿ, ಕ್ವಿನೋವಾ, ಧಾನ್ಯಗಳು, ಸೋಯಾ, ಗೋಡಂಬಿ, ವಾಲ್ನಟ್ಸ್, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಎಳ್ಳು, ಅಗಸೆಬೀಜಗಳು ಹಾಗೂ ಡೈರಿ ಉತ್ಪನ್ನಗಳು. ಕೆಲವು ತರಕಾರಿಗಳು ಮತ್ತು ಹಣ್ಣುಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ. ಜೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳು ತಮ್ಮ ಸ್ಥಿತಿ ಸುಧಾರಿಸುವವರೆಗೆ ದ್ವಿದಳ ಧಾನ್ಯಗಳು ಹಾಗೂ ಧಾನ್ಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ಅನ್ನು ವೀಕ್ಷಿಸಬಹುದು (ಸಂಶೋಧನಾ ವರದಿ):

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

INDIA PROTEIN INTAKE  INDIA PROTEIN DEFICIENCY  WHY INDIANS PROTEIN DEFICIENT  ಯಾರಿಗೆ ಎಷ್ಟು ಪ್ರೋಟೀನ್​ ಬೇಕು
ಪ್ರೋಟೀನ್ - ಸಾಂದರ್ಭಿಕ ಚಿತ್ರ (Getty Images)

ಇವುಗಳನ್ನೂ ಓದಿ:

  1. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸುತ್ತೀರಾ? ತಕ್ಷಣ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿ!
  2. ಆರಂಭಿಕ ಹಂತದಲ್ಲೇ ನರವೈಜ್ಞಾನಿಕ ಕಾಯಿಲೆಗಳನ್ನು ಪತ್ತೆ ಮಾಡಲು ಆರ್​ಜಿಸಿಬಿ ನ್ಯಾನೊಪೋರ್ ತಂತ್ರಜ್ಞಾನ ಅಭಿವೃದ್ಧಿ
  3. ನೀವು ಮಾಡುವ ಈ ತಪ್ಪುಗಳೇ ಫ್ರಿಡ್ಜ್ ಸ್ಫೋಟಗೊಳ್ಳಲು ಕಾರಣ!: ಮೆಕ್ಯಾನಿಕ್ ನೀಡಿದ ಸೇಫ್ಟಿ TIPS
  4. ಪತಿ - ಪತ್ನಿಯ ನಡುವಿನ ಬಾಂಧವ್ಯ ಬಲಪಡಿಸುವುದು ಹೇಗೆ?: ಈ ಅಭ್ಯಾಸಗಳು ಬೆಸ್ಟ್​!
  5. ಮಾರಣಾಂತಿಕ ಶ್ವಾಸಕೋಶದ ಕಾಯಿಲೆಗೆ ಸುಧಾರಿತ ಔಷಧ ಅಭಿವೃದ್ಧಿಪಡಿಸಿದ ಎಚ್‌ಸಿಯುನ ಕೋಲಜಿ ಬಯೋಸೈನ್ಸಸ್