ಹಸುವಿನ ಹಾಲು Vs ಎಮ್ಮೆ ಹಾಲು: ಇವೆರಡರಲ್ಲಿ ಮಗುವಿಗೆ ಯಾವುದು ತುಂಬಾ ಉಪಯುಕ್ತ ಗೊತ್ತೇ?
ಹಸುವಿನ ಹಾಲು ಹಾಗೂ ಎಮ್ಮೆ ಹಾಲು, ಇವೆರಡರಲ್ಲಿ ಯಾವುದು ಮಗುವಿನ ಆರೋಗ್ಯಕ್ಕೆ ಬೆಸ್ಟ್. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.


Published : March 2, 2026 at 2:49 PM IST
ಮಗುವಿನ ಆರೋಗ್ಯದ ವಿಶೇಷವಾದ ಕಾಳಜಿವಹಿಸುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ. ಇದರಿಂದ ಮಗುವಿನ ಆಹಾರದಿಂದ ಪಾನೀಯದವರೆಗೆ ಪ್ರತಿಯೊಂದರ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಪೋಷಕರ ಮನಸ್ಸಿನಲ್ಲಿ ನಿರಂತರವಾಗಿ ಪ್ರಶ್ನೆಯೊಂದು ಕಾಡುತ್ತಿರುತ್ತದೆ. ತಮ್ಮ ಮಗುವಿಗೆ ಯಾವ ಹಾಲು ನೀಡಬೇಕು. ಕೆಲವು ಜನರು ಹಸುವಿನ ಹಾಲು ಕುಡಿಯುವುದು ಒಳ್ಳೆಯದು ಭಾವಿಸುತ್ತಾರೆ. ಮತ್ತೆ ಕೆಲವು ಜನರು ಎಮ್ಮೆ ಹಾಲು ಕೂಡ ಮಗುವಿಗೆ ವಿವಿಧ ಫೋಷಕಾಂಶಗಳನ್ನು ಒಗಿಸುತ್ತದೆ ಎಂದು ತಿಳಿದುಕೊಂಡಿರುತ್ತಾರೆ.
ಈ ಕುರಿತು ಬಹುತೇಕ ಪ್ರತಿಯೊಬ್ಬ ಪೋಷಕರು ಎದುರಿಸುವ ಸಾಮಾನ್ಯವಾದ ಕುತೂಹಲವಾಗಿದೆ. ದೇಶೀಯ ಹಸುವಿನ ಹಾಲು ಮಕ್ಕಳ ಬುದ್ಧಿವಂತಿಕೆ, ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಿಜವೋ ಅಲ್ಲವೋ? ಹಸುವಿನ ಹಾಲು ಹಾಗೂ ಎಮ್ಮೆಯ ಹಾಲು, ಇವೆರಡರಲ್ಲಿ ಯಾವುದು ಮಗುವಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ತಜ್ಞರು ತಿಳಿಸುವುದೇನು?: ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಹಸು ಹಾಗೂ ಎಮ್ಮೆ ಹಾಲಿನ ನಡುವೆ ಪೌಷ್ಟಿಕಾಂಶದ ವ್ಯತ್ಯಾಸಗಳು ಖಂಡಿತವಾಗಿ ಇರುತ್ತವೆ. ಒಂದು ಇನ್ನೊಂದಕ್ಕಿಂತ ಉತ್ತಮ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚಿನ ಕೊಬ್ಬನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ ಎಮ್ಮೆ ಹಾಲು ಸ್ವಲ್ಪ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೆಲವು ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಹೆಚ್ಚು ಕಷ್ಟವಾಗಬಹುದು ಎನ್ನುವುದು ತಜ್ಞರು ಅಭಿಪ್ರಾಯ.

ಹಸುವಿನ ಹಾಲಿನ ಲಾಭಗಳು:
- ಹಸುವಿನ ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಆಸ್ಟಿಯೊಪೊರೋಸಿಸ್ ತಡೆಯಲು ಸಹಾಯ ಮಾಡುತ್ತದೆ, ಮಕ್ಕಳಲ್ಲಿ ಸರಿಯಾದ ಮೂಳೆ ಬೆಳವಣಿಗೆ ಬೆಂಬಲಿಸುತ್ತದೆ.
- ಹಸುವಿನ ಹಾಲು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ, ಸ್ನಾಯುಗಳ ದುರಸ್ತಿ, ಬೆಳವಣಿಗೆ, ದೈಹಿಕ ಕಾರ್ಯಗಳಿಗೆ ಅಗತ್ಯವಾದ ಎಲ್ಲ ಅಮೈನೋ ಆಮ್ಲಗಳನ್ನು ಪೂರೈಸುತ್ತದೆ.
- ವಿಟಮಿನ್ ಬಿ12, ಬಿ2, ಡಿ ಹಾಗೂ ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್‌ನಂತಹ ಖನಿಜಗಳು ಹೇರಳವಾಗಿವೆ.
- ಹಸುವಿನ ಹಾಲಿನಲ್ಲಿನ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್-ಡಿ ಸಂಯೋಜನೆಯು ಬಲವಾದ ಮೂಳೆಗಳು, ಹಲ್ಲುಗಳನ್ನು ಕಾಪಾಡಿಕೊಳ್ಳಲು, ಮೂಳೆ ಸಂಬಂಧಿತ ಅಸ್ವಸ್ಥತೆಗಳನ್ನು ತಡೆಗಟ್ಟಲು, ಸರಿಯಾದ ಮೂಳೆ ಸಾಂದ್ರತೆಯನ್ನು ಖಚಿತಪಡಿಸಿಕೊಳ್ಳಲು ಪೂರಕವಾಗಿದೆ.
- ಹಸುವಿನ ಹಾಲಿನಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶವು ಸ್ನಾಯುಗಳ ದುರಸ್ತಿ, ಬೆಳವಣಿಗೆಗೆ ಉತ್ತಮವಾಗಿದೆ.
- ವಿಟಮಿನ್ ಎ, ಸತು ಮತ್ತು ಸೆಲೆನಿಯಂನಂತಹ ಪೋಷಕಾಂಶಗಳು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಅತ್ಯುತ್ತಮವಾಗಿದೆ. ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಎಮ್ಮೆಯ ಹಾಲಿನ ಪ್ರಯೋಜನಗಳು:

- ಎಮ್ಮೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಪ್ರೋಟೀನ್ ಹೊಂದಿದೆ. ಈ ಹಾಲು ಸ್ನಾಯುಗಳ ದುರಸ್ತಿ, ಬೆಳವಣಿಗೆ, ದೈಹಿಕ ಕಾರ್ಯಗಳಿಗೆ ಒಳ್ಳೆಯದು.
- ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದೆ. ಇದು ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಕೊಬ್ಬು ಕರಗುವ ಜೀವಸತ್ವಗಳನ್ನು (A, D, E, ಹಾಗೂ K) ಹೀರಿಕೊಳ್ಳುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.
- ಎಮ್ಮೆಯ ಹಾಲಿನಲ್ಲಿನ ಹೆಚ್ಚಿನ ಇಮ್ಯುನೊಗ್ಲಾಬ್ಯುಲಿನ್ ಅಂಶವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಸೋಂಕುಗಳ ವಿರುದ್ಧ ದೇಹದ ರಕ್ಷಣೆ ಮಾಡುತ್ತದೆ.
- ಎಮ್ಮೆಯ ಹಾಲು ಪೊಟ್ಯಾಸಿಯಮ್‌ನ ಮೂಲವಾಗಿದೆ. ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ರಕ್ತದೊತ್ತಡ ನಿಯಂತ್ರಿಸಲು ಉತ್ತಮವಾಗಿದೆ.
- ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆಯ ಹಾಲು ಕಡಿಮೆ ಕೊಲೆಸ್ಟ್ರಾಲ್ ಮಟ್ಟ ಹೊಂದಿದೆ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
- ಎಮ್ಮೆಯ ಹಾಲಿನಲ್ಲಿ ಹೆಚ್ಚಿನ ಕೊಬ್ಬಿನಂಶ, ವಿಟಮಿನ್ ಎ, ಇ ಆರೋಗ್ಯಕರ, ಹೈಡ್ರೀಕರಿಸಿದ ಚರ್ಮ ಕಾಪಾಡಿಕೊಳ್ಳಲು ಹಾಗೂ ಯೌವನಯುತಗೊಳಿಸಲು ಉತ್ತೇಜಿಸುತ್ತದೆ. ಹೆಚ್ಚಿನ ಲ್ಯಾಕ್ಟೋಸ್ ಅಂಶವು ಅದನ್ನು ಜೀರ್ಣಿಸಿಕೊಳ್ಳಬಲ್ಲ ಜನರಿಗೆ ಪ್ರಯೋಜನಕಾರಿ.
- ಎಮ್ಮೆಯ ಹಾಲಿನಲ್ಲಿ ಟೋಕೋಫೆರಾಲ್, ರೆಟಿನಾಲ್ನಂತಹ ಉತ್ಕರ್ಷಣ ನಿರೋಧಕಗಳಿವೆ. ಆಕ್ಸಿಡೇಟಿವ್ ಒತ್ತಡ ಎದುರಿಸಲು, ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಮಗುವಿನ ಬೆಳೆವಣಿಗೆ ಯಾವ ಹಾಲು ಬೆಸ್ಟ್ ಗೊತ್ತೇ?: ಪೌಷ್ಠಿಕಾಂಶದ ಮೌಲ್ಯದ ವಿಷಯದಲ್ಲಿ ಎಮ್ಮೆ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ಹೆಚ್ಚಾಗಿರುತ್ತದೆ. ಈ ಪೋಷಕಾಂಶಗಳು ನರಮಂಡಲ, ಮೆದುಳಿನ ಕಾರ್ಯ, ಕೆಂಪು ರಕ್ತ ಕಣಗಳ ರಚನೆ, ಡಿಎನ್ಎ ಸಂಶ್ಲೇಷಣೆ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹವಿಸುವಿನ ಹಾಲು ಮಕ್ಕಳಿಗೆ ಹಗುರವಾದ ಭಾವನೆ ನೀಡುತ್ತದೆ. ಮಗುವಿನ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ, ಮಗುವಿನ ಬುದ್ಧಿವಂತಿಕೆಯ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ಇದರಿಂದ ಹಸುವಿನ ಹಾಲನ್ನು ಚಿಕ್ಕ ಮಕ್ಕಳಿಗೆ ಆರೋಗ್ಯ ತಜ್ಞರು ಸೂಚಿಸುತ್ತಾರೆ. ಹಸುವಿನ ಹಾಲು ಮಗುವನ್ನು ವೇಗವಾಗಿ ಬೆಳೆಯುವಂತೆ ಮಾಡುತ್ತದೆ ಎನ್ನುವುದಕ್ಕೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎನ್ನುತ್ತಾರೆ ವೈದ್ಯರು.

ಶಿಶುವಿಗೆ ಯಾವ ಹಾಲು ನೀಡಬೇಕು?: ನವಜಾತ ಶಿಶುವಿಗೆ ಯಾವ ಹಾಲು ನೀಡಬೇಕು? ಈ ಕುರಿತಂತೆ ಕೂಡ ತಪ್ಪು ಕಲ್ಪನೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ಮಾರ್ಗಸೂಚಿಗಳ ಪ್ರಕಾರ, ಶಿಶುಗಳಿಗೆ ಜನನದ ಮೊದಲ ಗಂಟೆಯಿಂದ ಕನಿಷ್ಠ ಆರು ತಿಂಗಳ ವಯಸ್ಸಿನವರೆಗೆ ತಾಯಿಯ ಎದೆಹಾಲು ನೀಡುವುದು ತುಂಬಾ ಅವಶ್ಯವಾಗಿದೆ. ಶಿಶುಗಳ ಮೊದಲ ಆರು ತಿಂಗಳಲ್ಲಿ ಅಗತ್ಯವಿರುವ ಸಂಪೂರ್ಣ ಪೋಷಣೆಯನ್ನು ತಾಯಿಯ ಎದೆ ಹಾಲು ಒದಗಿಸುತ್ತದೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
- ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
- ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?
- ಯಾವುದೇ ಚಿಹ್ನೆಗಳು ಕಾಣಿಸದೆ ಇದ್ದರೂ ಕೊಲೆಸ್ಟ್ರಾಲ್ ಮಟ್ಟಗಳು ಏರಿಕೆ: ಕೊಲೆಸ್ಟ್ರಾಲ್ ಲೆವಲ್ ಗುರುತಿಸುವುದು ಹೇಗೆ?
- ನಿಮ್ಮ ತ್ವಚೆ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಟ್ಟುತ್ತಿದೆಯೇ? ಇಲ್ಲಿವೆ ನೈಸರ್ಗಿಕ ಪರಿಹಾರಗಳು

