ETV Bharat / health

ಮಧುಮೇಹ ನಿಯಂತ್ರಿಸಲು ಇದುವೇ ಅತ್ಯುತ್ತಮ ಮನೆಮದ್ದು, ಮೊದಲ ದಿನದಿಂದ್ಲೇ ಬೆಸ್ಟ್ ರಿಸಲ್ಟ್: ತಜ್ಞರ ಸಲಹೆ

ಸರಿಯಾದ ಆಹಾರ, ಮನೆಮದ್ದು, ಆಯುರ್ವೇದ ಔಷಧಿಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ, ಮಧುಮೇಹ ಕಾಯಿಲೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

DIABETES CONTROL Tips  Diabetes  How to control diabetes naturally  ಮಧುಮೇಹ
ಮಧುಮೇಹ ನಿಯಂತ್ರಿಸಲು ಅತ್ಯುತ್ತಮ ಮನೆಮದ್ದು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 15, 2025 at 7:20 PM IST

3 Min Read
Choose ETV Bharat

How to Control Diabetes Naturally: ಮಧುಮೇಹ ಕಾಯಿಲೆಯು ಚಯಾಪಚಯ ರೋಗದ ಒಂದು ಗುಂಪು. ಇದಕ್ಕೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸದಿದ್ದರೆ ಅದು ಹೃದಯದ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಕುರುಡುತನ, ನರ ಹಾನಿ ಹಾಗೂ ಪಾದದ ಸೋಂಕುಗಳೂ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸರಿಯಾದ ಆಹಾರ, ಮನೆಮದ್ದುಗಳು, ಆಯುರ್ವೇದ ಔಷಧ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.

ಮಧುಮೇಹವು ಅಸಮತೋಲಿತ ಜೀವನಶೈಲಿ, ಕಳಪೆ ಆಹಾರ, ವ್ಯಾಯಾಮದ ಕೊರತೆ, ಕಡಿಮೆ ದೈಹಿಕ ಚಟುವಟಿಕೆ ಹಾಗೂ ಅತಿಯಾದ ಒತ್ತಡದಿಂದ ಉಂಟಾಗುತ್ತದೆ. ಈ ಎಲ್ಲಾ ಅಂಶಗಳು ವ್ಯಕ್ತಿಯಲ್ಲಿ ವಾತ, ಪಿತ್ತ ಮತ್ತು ಕಫದ ಅಸಮತೋಲನವನ್ನು ಹೆಚ್ಚಿಸುತ್ತವೆ. ಇದು ಮಧುಮೇಹದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಆಯುರ್ವೇದ ಗ್ರಂಥಗಳು ತಿಳಿಸುತ್ತವೆ.

ಮಧುಮೇಹವು ಮೂರು ದೋಷಗಳ ಅಸಮತೋಲನದಿಂದ ಉಂಟಾಗುತ್ತದೆಯಾದರೂ, ಅದರ ಪ್ರಾಥಮಿಕ ಕಾರಣವನ್ನು ಕಫದ ಪ್ರಾಬಲ್ಯವೆಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ ಮಧುಮೇಹ ಆನುವಂಶಿಕ ಅಸ್ವಸ್ಥತೆ ಎಂದೂ ಪರಿಗಣಿಸಲಾಗುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ (ಔಷಧಿಗಳಿಲ್ಲದೆ) ಹೇಗೆ ಸಾಮಾನ್ಯಗೊಳಿಸುವುದು? ಅದಕ್ಕೂ ಮೊದಲು, ಜನರು ಮಧುಮೇಹವನ್ನು ಏಕೆ ಬೆಳೆಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಹಿರಿಯ ಆಯುರ್ವೇದ ವೈದ್ಯ ಡಾ.ಪಿ.ವಿ.ರಂಗನಾಯಕುಲು ಅವರು ವಿವರಿಸಿದ್ದಾರೆ.

DIABETES CONTROL Tips  Diabetes  How to control diabetes naturally  ಮಧುಮೇಹ
ಮಧುಮೇಹ ನಿಯಂತ್ರಿಸಲು ಅತ್ಯುತ್ತಮ ಮನೆಮದ್ದು- ಸಾಂದರ್ಭಿಕ ಚಿತ್ರ (Getty Images)

ಮಧುಮೇಹಕ್ಕೆ ಕಾರಣಗಳೇನು?: ಮೇದೋಜ್ಜೀರಕ ಗ್ರಂಥಿಯು ವಿವಿಧ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ ಮತ್ತು ಸ್ರವಿಸುತ್ತದೆ. ಇದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಇನ್ಸುಲಿನ್ ಹಾಗೂ ಗ್ಲುಕಗನ್ ಸೇರಿವೆ. ಇನ್ಸುಲಿನ್ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಮುಖ ಹಾರ್ಮೋನ್ ಆಗಿದೆ.

ಇದು ರಕ್ತದಲ್ಲಿನ ಸಕ್ಕರೆಯನ್ನು ಉತ್ಪಾದಿಸುತ್ತದೆ ಹಾಗೂ ನಿಯಂತ್ರಿಸುತ್ತದೆ. ಕೆಲವು ಕಾರಣಗಳಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾದರೆ, ಅದು ಜೀವಕೋಶದ ಶಕ್ತಿಯ ನಷ್ಟ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದೌರ್ಬಲ್ಯ ಹಾಗೂ ಹೃದಯಾಘಾತ ಅನುಭವಿಸುತ್ತಾನೆ.

ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಹೆಚ್ಚಾಗುತ್ತವೆ. ಬಳಿಕ ಅವು ಮೂತ್ರದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ. ಮಧುಮೇಹಿಗಳು ಆಗಾಗ್ಗೆ ಮೂತ್ರ ವಿಸರ್ಜನೆಯನ್ನು ಅನುಭವಿಸುತ್ತಾರೆ. ಮಧುಮೇಹಕ್ಕೆ ಹಲವು ಅಂಶಗಳು ಕಾರಣವಾಗಿವೆ.

ಆನುವಂಶಿಕತೆ: ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳೂ ಸಹ ಅಪಾಯದಲ್ಲಿರಬಹುದು.

ಬೊಜ್ಜು: ಬೊಜ್ಜು ಕೂಡ ಮಧುಮೇಹಕ್ಕೆ ಕಾರಣವಾಗುವ ಅಂಶ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು. ಅತಿಯಾದ ಜಂಕ್ ಫುಡ್ ಸೇವನೆ ಇಲ್ಲವೇ ಸಮತೋಲಿತ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಕೆಲವೊಮ್ಮೆ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಮಧುಮೇಹಕ್ಕೆ ಕಾರಣವಾಗಬಹುದು. ಮಕ್ಕಳಲ್ಲಿ ಮಧುಮೇಹದ ಪ್ರಮಾಣ ಹೆಚ್ಚುತ್ತಿದೆ ಎಂದು ಡಾ.ಪಿ.ವಿ.ರಂಗನಾಯಕುಲು ತಿಳಿಸುತ್ತಾರೆ. ಪ್ರಾಥಮಿಕವಾಗಿ ಅವರ ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಟಿವಿ ಮುಂದೆ ಗಂಟೆಗಟ್ಟಲೆ ಕಳೆಯುವ, ವಿಡಿಯೋ ಗೇಮ್‌ಗಳನ್ನು ಆಡುವ ಅಭ್ಯಾಸಗಳು ಕಾರಣವಾಗಿವೆ.

DIABETES CONTROL Tips  Diabetes  How to control diabetes naturally  ಮಧುಮೇಹ
ಮಧುಮೇಹ ನಿಯಂತ್ರಿಸಲು ಅತ್ಯುತ್ತಮ ಮನೆಮದ್ದು- ಸಾಂದರ್ಭಿಕ ಚಿತ್ರ (Getty Images)

ಆಯುರ್ವೇದದ ಮನೆಮದ್ದು: ಡಾ.ಪಿ.ವಿ.ರಂಗನಾಯಕುಲು ವಿವರಿಸುವ ಪ್ರಕಾರ, ಮಧುಮೇಹಿಗಳು ವಯಸ್ಸಿನ ಹೊರತಾಗಿಯೂ, ನಿಯಮಿತವಾಗಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು. ರೋಗಿಗಳು ಇನ್ಸುಲಿನ್ ಅವಲಂಬಿತರಲ್ಲದಿದ್ದರೆ, ನಿಯಮಿತ ಚಿಕಿತ್ಸೆಯ ಜೊತೆಗೆ ಅವರು ಈ ಕೆಳಗಿನ ಕೆಲವು ಮನೆಮದ್ದುಗಳನ್ನೂ ಸಹ ಬಳಸಬಹುದು.

  • ದಿನಕ್ಕೆ ಒಮ್ಮೆ ಜೇನುತುಪ್ಪದೊಂದಿಗೆ 1 ಗ್ರಾಂ ಬೇವಿನ ಎಲೆ ಪುಡಿಯನ್ನು ತೆಗೆದುಕೊಳ್ಳಿ.
  • ದಿನಕ್ಕೆ ಒಮ್ಮೆ 20 ಮಿಗ್ರಾಂ ಬೇವಿನ ಎಲೆಯ ರಸವನ್ನು ಕುಡಿಯಿರಿ.
  • ಒಂದು ಸಣ್ಣ ತುಂಡು ಅಮೃತಬಳ್ಳಿಯನ್ನು ಪುಡಿಮಾಡಿ ಅದರ ರಸವನ್ನು ಹೊರತೆಗೆಯಿರಿ, ದಿನಕ್ಕೆ ಒಮ್ಮೆ 2 ಟೀಸ್ಪೂನ್ ತೆಗೆದುಕೊಳ್ಳಿ.
  • ಆಮ್ಲಾ ಪುಡಿಯನ್ನು ಅರಿಶಿನದೊಂದಿಗೆ ಬೆರೆಸಿ ಹಾಗೂ ದಿನಕ್ಕೆ ಒಮ್ಮೆ ನೀರಿನೊಂದಿಗೆ ತೆಗೆದುಕೊಳ್ಳಿ.
  • ಝಬುವಾ ಬೀಜಗಳನ್ನು ಒಣಗಿಸಿ ಪುಡಿಮಾಡಿ. ದಿನಕ್ಕೆ ಎರಡು ಬಾರಿ 500 ಮಿಗ್ರಾಂ ನೀರಿನೊಂದಿಗೆ ತೆಗೆದುಕೊಳ್ಳಿ.
  • 20 ಮಿಲಿ ಇಂಡಿಯನ್ ಕಿನೋ ಮರದ (ಬಿಜ್ಕಾ) ಸಾರವನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ.

ಈ ಮನೆಮದ್ದುಗಳಿಂದ ಮಧುಮೇಹಕ್ಕೆ ಸಂಪೂರ್ಣ ಚಿಕಿತ್ಸೆಯಾಗದಿದ್ದರೂ ಇವು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತವೆ ಎಂದು ಆರೋಗ್ಯ ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: ಆ್ಯಸಿಡಿಟಿ & ಎದೆಯುರಿಯಿಂದ ಶಾಶ್ವತ ಪರಿಹಾರ ಪಡೆಯಲು ಇಲ್ಲಿದೆ ಪರಿಹಾರ!

ಖಾಲಿ ಹೊಟ್ಟೆಯಲ್ಲಿ ಉಪಾಹಾರಕ್ಕೆ ಈ ಹಣ್ಣುಗಳು ಅತ್ಯುತ್ತಮ: ತಜ್ಞರು ನೀಡಿರುವ ಸಲಹೆಗಳು ಹೀಗಿವೆ!