ETV Bharat / health

ಸಮತೋಲಿತ, ಪೌಷ್ಟಿಕ ಆಹಾರ ಕ್ರಮದಿಂದ ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಅತ್ಯುತ್ತಮ

ದೀರ್ಘಕಾಲದವರೆಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಕ್ರಮ ಪಾಲಿಸುವುದರಿಂದ ಮೆದುಳಿನ ರಕ್ತನಾಳಗಳ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ವೈದ್ಯರು ತಿಳಿಸುವುದೇನು?

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : September 3, 2026 at 1:35 PM IST

4 Min Read
Choose ETV Bharat

ವೃದ್ಧಾಪ್ಯದಲ್ಲಿ ಬುದ್ಧಿಮಾಂದ್ಯತೆ ಸಮಸ್ಯೆಯನ್ನು ತಡೆಗಟ್ಟುವುದನ್ನು ಖಾತರಿಪಡಿಸುವ, ಸ್ಮರಣಶಕ್ತಿ ಹೆಚ್ಚಿಸುವ ಭರವಸೆ ಆಹಾರ ಕ್ರಮದಲ್ಲಿ ಅಡಗಿದೆ. ಹಲವು ವರ್ಷಗಳಲ್ಲಿ ದೈನಂದಿನ ಆಹಾರದಲ್ಲಿ ಸೇವಿಸುವ ವಿಷಯಗಳು ನಮ್ಮ ಮೆದುಳು, ರಕ್ತನಾಳಗಳ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತವೆ.

ಕೇವಲ ಒಂದು ನಿರ್ದಿಷ್ಟ ಆಹಾರ ಕ್ರಮಗಳನ್ನು ಅವಲಂಬಿಸುವ ಬದಲು, ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ಮಾರ್ಗಗಳಾದ ತರಕಾರಿಗಳು, ಹಣ್ಣುಗಳು, ಆರೋಗ್ಯಕರ ಕೊಬ್ಬುಗಳು, ಧಾನ್ಯಗಳು ಹಾಗೂ ಗುಣಮಟ್ಟದ ಪ್ರೋಟೀನ್‌ ಸಮೃದ್ಧವಾಗಿರುವ ಆಹಾರ ಸೇವಿಸುವುದು. ಮೆದುಳಿನ ಕಾರ್ಯ ಕಾಪಾಡಿಕೊಳ್ಳಲು, ವಯಸ್ಸಿಗೆ ಸಂಬಂಧಿಸಿದ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ತಡೆಗಟ್ಟಲು ಸರಿಯಾದ ಆಹಾರ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಮೆದುಳಿಗೆ ನಿರಂತರವಾಗಿ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪೂರೈಸುವ ರಕ್ತನಾಳಗಳನ್ನು ಆರೋಗ್ಯಕರ ಸ್ಥಿತಿಯಲ್ಲಿ ಇರಿಸುವುದು ಮೆದುಳನ್ನು ರಕ್ಷಿಸುವ ಮೊದಲ ಹೆಜ್ಜೆಯಾಗಿದೆ. ಹೈಬಿಪಿ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್‌ನಂತಹ ಪರಿಸ್ಥಿತಿಗಳು ಮೆದುಳಿನ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಮರಣಶಕ್ತಿಯ ಮೇಲೆ ಕೂಡ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

ಮೆದುಳಿನ ಆರೋಗ್ಯ ಕಾಯ್ದುಕೊಳ್ಳಲು ಈ ಆಹಾರಗಳು ಉತ್ತಮ: ವೈದ್ಯರು ತಿಳಿಸುವ ಪ್ರಕಾರ, ದೈನಂದಿನ ಆಹಾರ ಕ್ರಮದಲ್ಲಿ ಐದು ಪ್ರಕಾರದ ಆಹಾರಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಮೆದುಳಿನ ರಕ್ತನಾಳಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಆಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಮೀನು ಉತ್ತಮ: ಎಣ್ಣೆಯುಕ್ತ ಮೀನುಗಳಾದ ಸಾಲ್ಮನ್, ಸಾರ್ಡೀನ್, ಮ್ಯಾಕೆರೆಲ್​ನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಈ ಕೊಬ್ಬುಗಳು ಮೆದುಳಿನ ಜೀವಕೋಶ ಪೊರೆಗಳ ನಿರ್ಣಾಯಕ ಅಂಶಗಳಾಗಿವೆ, ಮೆದುಳು ಹಾಗೂ ಹೃದಯದ ಆರೋಗ್ಯ ಎರಡಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿವೆ.

ಹಸಿರು ಸೊಪ್ಪು: ಪಾಲಕ್, ಮೆಂತ್ಯ, ಇತರೆ ಹಸಿರು ಎಲೆಗಳ ತರಕಾರಿಗಳು ಫೋಲೇಟ್, ವಿಟಮಿನ್ ಕೆ ಹಾಗೂ ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತವೆ. ಈ ತರಕಾರಿಗಳು ಮೆದುಳಿನ ಆರೋಗ್ಯವನ್ನು ಬೆಂಬಲಿಸುವುದಲ್ಲದೆ ರಕ್ತನಾಳಗಳ ಆರೋಗ್ಯ ಕಾಪಾಡಿಕೊಳ್ಳುತ್ತವೆ. ಅಧಿಕ ರಕ್ತದೊತ್ತಡ, ಮಧುಮೇಹದಂತಹ ಪರಿಸ್ಥಿತಿಗಳನ್ನು ತಡೆಯಲು ತುಂಬಾ ಸಹಾಯ ಮಾಡುತ್ತದೆ.

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಸಮತೋಲಿತ, ಪೌಷ್ಟಿಕ ಆಹಾರ ಕ್ರಮ- ಸಾಂದರ್ಭಿಕ ಚಿತ್ರ (Getty Images)

ಬೆರ್ರಿಗಳು ಹಣ್ಣು: ಬೆರ್ರಿಗಳು ಫೈಬರ್ ಜೊತೆಗೆ ಪಾಲಿಫಿನಾಲ್‌ಗಳು, ಆಂಥೋಸಯಾನಿನ್‌ಗಳು ಎಂದು ಕರೆಯಲ್ಪಡುವ ಸಸ್ಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇವು ಉತ್ಕರ್ಷಣ ನಿರೋಧಕ, ಉರಿಯೂತದ ಗುಣಗಳನ್ನು ಹೊಂದಿವೆ. ಈ ಪೋಷಕಾಂಶಗಳನ್ನು ವಿವಿಧ ವರ್ಣರಂಜಿತ ಹಣ್ಣುಗಳಿಂದ ಪಡೆಯಬಹುದು, ದುಬಾರಿ ಆಮದು ಮಾಡಿದ ಬೆರ್ರಿಗಳನ್ನು ಮಾತ್ರ ಅವಲಂಬಿಸುವ ಅಗತ್ಯವಿಲ್ಲ.

ವಾಲ್ನಟ್ಸ್ ಸೇರಿದಂತೆ ಡ್ರೈಫ್ರೂಟ್ಸ್: ವಾಲ್ನಟ್ಸ್ ಅಪರ್ಯಾಪ್ತ ಕೊಬ್ಬುಗಳು, ಸಸ್ಯ ಆಧಾರಿತ ಪ್ರೋಟೀನ್​ಗಳು, ಫೈಬರ್ ಹೊಂದಿರುತ್ತವೆ. ಇವುಗಳು ಮೆದುಳಿನ ರಕ್ತನಾಳದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ವಾಲ್ನಟ್ಸ್​ ಮೆದುಳಿನ ಆಕಾರವನ್ನು ಹೋಲುತ್ತವೆ. ಅದರಂತೆ ಮೆದುಳಿನ ಕಾರ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಕ್ಯಾಲೋರಿ ದಟ್ಟವಾಗಿರುವುದರಿಂದ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಮಾತ್ರ ಸೇವಿಸಬೇಕಾಗುತ್ತದೆ.

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಸಮತೋಲಿತ, ಪೌಷ್ಟಿಕ ಆಹಾರ ಕ್ರಮ- ಸಾಂದರ್ಭಿಕ ಚಿತ್ರ (Getty Images)

ಟೊಮೆಟೊ ಒಳ್ಳೆಯದು: ಟೊಮೆಟೊಗಳು ಲೈಕೋಪೀನ್ (ಶಕ್ತಿಯುತ ಉತ್ಕರ್ಷಣ ನಿರೋಧಕ), ಕ್ಯಾರೊಟಿನಾಯ್ಡ್​​ಗಳು, ವಿಟಮಿನ್-ಸಿ ಅನ್ನು ಹೊಂದಿರುತ್ತವೆ. ಇದು ಮೆದುಳಿನ ಕೋಶಗಳನ್ನು ಸ್ವತಂತ್ರ ರಾಡಿಕಲ್​ಗಳಿಂದ ರಕ್ಷಿಸುತ್ತದೆ.

ಚಹಾ, ಕಾಫಿಯಿಂದ ಮೆದುಳಿನ ಮೇಲೆ ಪರಿಣಾಮ: ಚಹಾ ಮತ್ತು ಕಾಫಿಯನ್ನು ಮಿತವಾಗಿ ಸೇವಿಸಿದರೆ, ಅದರಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು, ಕೆಫೀನ್ ಚಿಂತನೆ ಹಾಗೂ ಏಕಾಗ್ರತೆಯಂತಹ ಅರಿವಿನ ಕಾರ್ಯಗಳನ್ನು ಹೆಚ್ಚಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಚಹಾ, ಕಾಫಿ ಸೇವನೆ ಮಾಡುವುದರಿಂದ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್  BALANCED NUTRITIOUS DIET  EFFECTS OF TEA COFFEE ON THE BRAIN  REGULAR EXERCISE ENOUGH SLEEP
ಮೆದುಳಿನ ರಕ್ತನಾಳಗಳ ಆರೋಗ್ಯಕ್ಕೆ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಹೃದಯ ಬಡಿತ, ಆತಂಕ ಇಲ್ಲವೇ ನಿದ್ರಾಹೀನತೆ ಅನುಭವಿಸುವ ವ್ಯಕ್ತಿಗಳು, ಕೆಫೀನ್ ಅಲರ್ಜಿ ಹೊಂದಿರುವ ವ್ಯಕ್ತಿಗಳು ತಮ್ಮ ಸೇವನೆಯನ್ನು ಮಿತಿಗೊಳಿಸಬೇಕು. ಹೆಚ್ಚುವರಿಯಾಗಿ ಚಹಾ ಇಲ್ಲವೇ ಕಾಫಿಗೆ ಅತಿಯಾದ ಸಕ್ಕರೆ ಸೇರಿಸುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ.

ಈ ಮೇಲೆ ತಿಳಿಸಿರುವ ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಮಾತ್ರ ಮೆದುಳಿನ ಆರೋಗ್ಯ ಬಲಪಡಿಸಲು ಸಾಧ್ಯವಿಲ್ಲ. ಇದರೊಂದಿಗೆ ಮೆದುಳಿನ ಆರೋಗ್ಯಕ್ಕೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ: ದೈನಂದಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. 7ರಿಂದ 8 ಗಂಟೆಗಳ ವಿಶ್ರಾಂತಿ ನಿದ್ರೆ ಪಡೆಯುವುದು.

ವೈದ್ಯಕೀಯ ನಿರ್ವಹಣೆ ಅವಶ್ಯ: ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿ ಇಡುವುದು.

ಮಾನಸಿಕ, ಸಾಮಾಜಿಕ ತೊಡಗಿಸಿಕೊಳ್ಳುವಿಕೆ: ಧೂಮಪಾನ ಸಂಪೂರ್ಣವಾಗಿ ತಪ್ಪಿಸುವುದು, ಇತರರೊಂದಿಗೆ ಬೆರೆಯುವುದು, ಮೆದುಳನ್ನು ಉತ್ತೇಜಿಸುವ ಆಟಗಳನ್ನು ಆಡುವುದು ಇಲ್ಲವೇ ಒಗಟುಗಳನ್ನು ಪರಿಹರಿಸುವುದು.

ತೀವ್ರವಾದ 'ಮೆದುಳಿನ ಆಹಾರ'ಗಳನ್ನು ಉತ್ತೇಜಿಸುವ ಜಾಹೀರಾತುಗಳು ಅಥವಾ ರಾತ್ರಿಯಿಡೀ ಸ್ಮರಣೆಯನ್ನು ಹೆಚ್ಚಿಸುವುದಾಗಿ ಹೇಳಿಕೊಳ್ಳುವ ಪೂರಕಗಳಿಗೆ ಬಲಿಯಾಗಬೇಡಿ. ಮೆದುಳಿಗೆ ಒಂದೇ ಸೂಪರ್‌ಫುಡ್ ಬೇಕಾಗಿಲ್ಲ. ವ್ಯಾಪಕ ಶ್ರೇಣಿಯ ಪೋಷಕಾಂಶಗಳು ತುಂಬಾ ಅವಶ್ಯವಾಗಿ ಬೇಕಾಗುತ್ತವೆ. ನಿಮ್ಮ ಆಹಾರದಲ್ಲಿ ವಿವಿಧ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಗುಣಮಟ್ಟದ ಪ್ರೋಟೀನ್ ಮೂಲಗಳನ್ನು ಸೇರಿಸಿ. ಆರೋಗ್ಯಕರ ದೇಹವು ಮಾತ್ರ ಆರೋಗ್ಯಕರ ಮೆದುಳನ್ನು ಬೆಂಬಲಿಸುತ್ತದೆ.

ನಿಯಂತ್ರಿತ ಕೆಫೀನ್ ಸೇವನೆ ಏಕಾಗ್ರತೆ ಹೆಚ್ಚಿಸುತ್ತದೆ: ಅತಿಯಾದ ಸಕ್ಕರೆ ಸೇವನೆ ನಿದ್ರೆ, ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರು ಆಹಾರ ಕ್ರಮವನ್ನು ಮಾತ್ರ ಅವಲಂಬಿಸದೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ, ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗುತ್ತದೆ. ಒತ್ತಡ ನಿರ್ವಹಿಸುವುದು, ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮೆದುಳು ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಮಧುಮೇಹಿಗಳು ಕರುಳಿನ ಚಲನೆ ನಿಯಂತ್ರಿಸಲು ಏಕೆ ಸಾಧ್ಯವಾಗುವುದಿಲ್ಲ?: ಏನಿದು ಡಯಾಬಿಟಿಸ್ ಸ್ವನಿಯಂತ್ರಿತ ನರರೋಗ?
  2. ಶ್ರಮವಹಿಸಿ ದೇಹದ ತೂಕ ಕಡಿಮೆ ಮಾಡಿಕೊಂಡರೂ ಮತ್ತೆ ಇದ್ದಕ್ಕಿದ್ದಂತೆ ವೇಟ್ ಹೆಚ್ಚಾಗುತ್ತಿದೆಯೇ?: ಹೀಗಾಗುವುದಕ್ಕೆ ಕಾರಣವೇನು?
  3. ನೀವು ಆರೋಗ್ಯ ವಿಮಾ ಪಾಲಿಸಿ ಖರೀದಿಸಲು ಪ್ಲಾನ್​ ಮಾಡುತ್ತೀರಾ? ಕಡಿಮೆ ಪ್ರೀಮಿಯಂಗಳಿಗಿಂತ ಈ ವಿಷಯಗಳ ಬಗ್ಗೆ ಹೆಚ್ಚು ತಿಳಿಯಿರಿ
  4. ನೀವು ಯಾರೊಂದಿಗೂ ಬೆರೆಯದೇ ಒಂಟಿಯಾಗಿ ಊಟ ಮಾಡುತ್ತೀರಾ? ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳೇನು?
  5. ದೇಹದಿಂದ ವಿಷ ಹೊರಹಾಕಲು, ಕಿಡ್ನಿಗಳ ಆರೋಗ್ಯ ಅತಿಮುಖ್ಯ.. ಪ್ರತಿಯೊಬ್ಬರೂ ನಿತ್ಯ ಎಷ್ಟು ನೀರು ಕುಡಿಯಬೇಕು ಗೊತ್ತಾ?
  6. ಋತುಚಕ್ರದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬರೋದೇಕೆ?: ಈ ಸಮಯದಲ್ಲಿ ಮಹಿಳೆಯರು ಏನು ಮಾಡಬೇಕು? ವೈದ್ಯರು ತಿಳಿಸುವುದೇನು?