ತಲೆನೋವಿನಿಂದ ತೀವ್ರ ತೊಂದರೆಯಾಗುತ್ತಿದೆಯೇ? ನಿತ್ಯ ಈ ಯೋಗಾಸನಗಳ ಅಭ್ಯಾಸದಿಂದ ಕೆಲವೇ ದಿನಗಳಲ್ಲಿ ಪರಿಹಾರ ಸಾಧ್ಯ
ಇಂದು ತಲೆನೋವು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಹಲವು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿತ್ಯ ಕೆಲವು ಯೋಗಾಸನಗಳು ಅಭ್ಯಾಸ ಮಾಡುವುದರಿಂದ ತಲೆನೋವು ನಿವಾರಣೆ ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.


Published : March 3, 2026 at 4:08 PM IST
ಒತ್ತಡದ ಜೀವನಶೈಲಿಯಲ್ಲಿ ಕಂಪ್ಯೂಟರ್ ಸ್ಕ್ರೀನ್ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು. ಅನಿಯಮಿತ ಆಹಾರ ಪದ್ಧತಿಗಳು ತಲೆನೋವು ಹಾಗೂ ಮೈಗ್ರೇನ್‌ಗೆ ಕಾರಣವಾಗಿವೆ. ಜನರು ಹೆಚ್ಚಾಗಿ ನೋವು ನಿವಾರಿಸಲು ನೋವು ನಿವಾರಕಗಳನ್ನು ಬಳಸುತ್ತಾರೆ. ದೀರ್ಘಕಾಲೀನ ಬಳಕೆಯು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಯೋಗಾಸನಗಳು ತಲೆನೋವಿಗೆ ಪರಿಹಾರವನ್ನು ನೀಡುತ್ತದೆ. ಯೋಗವು ಸ್ನಾಯುಗಳ ಒತ್ತಡ ಕಡಿಮೆ ಮಾಡುವುದಲ್ಲದೆ, ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
ನಾವು ನಿರ್ದಿಷ್ಟ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿದಾಗ ನರಮಂಡಲವು ಶಾಂತವಾಗುತ್ತದೆ ಹಾಗೂ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ. ದೀರ್ಘಕಾಲದ ತಲೆನೋವನ್ನು ಕೂಡ ಕ್ರಮೇಣವಾಗಿ ನಿವಾರಣೆ ಮಾಡುತ್ತದೆ. ಮಾನಸಿಕ ಶಾಂತಿಯನ್ನು ಸಾಧಿಸಲು, ದೈಹಿಕ ನೋವನ್ನು ಪರಿಹರಿಸಲು ಯೋಗವು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ನೀವು ಆಗಾಗ್ಗೆ ತಲೆನೋವಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಕೇವಲ 15ರಿಂದ 20 ನಿಮಿಷಗಳ ಕಾಲ ಕೆಲವು ಯೋಗಾಸನಗಳನ್ನು ಅಭ್ಯಾಸ ಮಾಡಬಹುದು. ತಲೆನೋವು ಕಡಿಮೆ ಮಾಡಲು ಪೂರಕವಾದ ಯೋಗಾಸನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಬಾಲಾಸನ ಅತ್ಯುತ್ತಮ: ನರಮಂಡಲವನ್ನು ಶಾಂತಗೊಳಿಸಲು, ಕುತ್ತಿಗೆ ಮತ್ತು ಭುಜದ ಒತ್ತಡವನ್ನು ನಿವಾರಿಸಲು ಬಾಲಾಸನವು ಸರಳ ಮತ್ತು ಪರಿಣಾಮಕಾರಿ ಆಸನವಾಗಿದೆ. ಈ ಆಸನವನ್ನು ಮಾಡಲು ಮೊದಲು ವಜ್ರಾಸನ ಸ್ಥಿತಿಯಲ್ಲಿ ಮೊಣಕಾಲುಗಳ ಮೇಲೆ ಕುಳಿತು ಉಸಿರನ್ನು ಬಿಡುತ್ತ ನಿಮ್ಮ ಹಣೆಯನ್ನು ನೆಲಕ್ಕೆ ಬಾಗಿಸಿ. ಈ ಭಂಗಿಯು ಮೆದುಳಿಗೆ ರಕ್ತದ ಹರಿವನ್ನು ಸಮತೋಲನಗೊಳಿಸುತ್ತದೆ, ಮಾನಸಿಕ ಆಯಾಸ ಕಡಿಮೆ ಮಾಡುತ್ತದೆ. ಆಳವಾಗಿ ಉಸಿರಾಡುತ್ತಾ 2ರಿಂದ 3 ನಿಮಿಷಗಳ ಕಾಲ ಈ ಸ್ಥಾನದಲ್ಲಿ ಇರಬೇಕಾಗುತ್ತದೆ ಹಾಗೂ ತಲೆಯಲ್ಲಿನ ಭಾರವು ತಕ್ಷಣವೇ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಅಧೋಮುಖ ಸ್ವಾನಾಸನ: ಅಧೋಮುಖ ಸ್ವಾನಾಸನವು ಇಡೀ ದೇಹವನ್ನು ಹಿಗ್ಗಿಸುತ್ತದೆ, ತಲೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಭಂಗಿಯಲ್ಲಿ ಅಂಗೈಗಳು ಹಾಗೂ ಅಡಿಭಾಗಗಳನ್ನು ನೆಲದ ಮೇಲೆ ಇರಿಸಲಾಗುತ್ತದೆ. ದೇಹವು 'V' ಆಕಾರದಲ್ಲಿ ಮೇಲಕ್ಕೆತ್ತಲ್ಪಡುತ್ತದೆ. ಇದು ಕುತ್ತಿಗೆಯ ಸ್ನಾಯುಗಳಲ್ಲಿನ ಒತ್ತಡ ನಿವಾರಿಸುತ್ತದೆ, ಹೆಚ್ಚಾಗಿ ತಲೆನೋವಿಗೆ ಪ್ರಮುಖ ಕಾರಣವಾಗಿದೆ. ನಿಯಮಿತ ಅಭ್ಯಾಸವು ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ ಎಂದು ಯೋಗ ತಜ್ಞರು ತಿಳಿಸುತ್ತಾರೆ.
ಸೇತು ಬಂಧಾಸನ: ಸೇತು ಬಂಧಾಸನವು ಬೆನ್ನಿಗೆ ಮಾತ್ರವಲ್ಲ. ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ತೆರೆಯುವ ಮೂಲಕ ಒತ್ತಡ ಬಿಡುಗಡೆ ಮಾಡುತ್ತದೆ. ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಮೊಣಕಾಲುಗಳನ್ನು ಸಮಾನಾಂತರ ಸ್ಥಿತಿಯಲ್ಲಿ ಮಡಿಚಿ ಹಾಗೂ ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ. ಈ ಆಸನವು ಆತಂಕ, ಆಯಾಸವನ್ನು ನಿವಾರಿಸುವ ಮೂಲಕ ಮನಸನ್ನು ಶಾಂತಗೊಳಿಸುತ್ತದೆ. ಕುತ್ತಿಗೆ ಹಾಗೂ ಭುಜಗಳಲ್ಲಿನ ನರಗಳು ಸಡಿಲಗೊಂಡಾಗ ತಲೆನೋವನ್ನು ಮಾಂತ್ರಿಕವಾಗಿ ನಿವಾರಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.
ಉತ್ತಾನಾಸನ: ಉತ್ತಾನಾಸನವು ನಿಂತ ಭಂಗಿಯಿಂದ ತಲೆ ಕೆಳಗಾಗಿಸಿ ಉಸಿರನ್ನು ಬಿಡುತ್ತಾ ಪಾದದ ಕಡೆಗೆ ಬಾಗುವುದು. ಇದು ಆಯಾಸ ಮತ್ತು ಖಿನ್ನತೆಯನ್ನು ನಿವಾರಿಸಲು ಪರಿಹಾರವಾಗಿದೆ. ನಿಮ್ಮ ತಲೆಯ ಮಟ್ಟವನ್ನು ಹೃದಯಕ್ಕಿಂತ ಕೆಳಕ್ಕೆ ಇಳಿಸುತ್ತದೆ, ಮೆದುಳಿಗೆ ಹೇರಳವಾದ ಆಮ್ಲಜನಕ ಹಾಗೂ ರಕ್ತವನ್ನು ಒದಗಿಸುತ್ತದೆ. ಇದು ನಿಮ್ಮ ನರಗಳನ್ನು ಪುನರುಜ್ಜೀವನಗೊಳಿಸುತ್ತದೆ. ನಿಮಗೆ ಸೈನಸ್ ತಲೆನೋವು ಇದ್ದರೆ, ಈ ಭಂಗಿಯು ನಿರ್ಬಂಧಿಸಲಾದ ರಕ್ತನಾಳಗಳನ್ನು ತೆರವುಗೊಳಿಸಲು ಬಹಳ ಸಹಾಯಕವಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ರಾತ್ರಿ ಮಲಗುವ ಮುನ್ನ ಐಸ್ ಕ್ರೀಂ ಸೇವನೆ ಉತ್ತಮವೇ? ಆರೋಗ್ಯದ ಮೇಲಾಗುವ ಪರಿಣಾಮವೇನು?
- ಹಸುವಿನ ಹಾಲು Vs ಎಮ್ಮೆ ಹಾಲು: ಇವೆರಡರಲ್ಲಿ ಮಗುವಿಗೆ ಯಾವುದು ತುಂಬಾ ಉಪಯುಕ್ತ ಗೊತ್ತೇ?
- ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
- ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
- ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?

