ETV Bharat / health

ನಿಮಗೆ ಅಧಿಕ ತೂಕದ ಸಮಸ್ಯೆ ಇದೆಯೇ?; 15 ದಿನಗಳವರೆಗೆ ಲವಂಗದ ನೀರು ಕುಡಿದರೆ ತೂಕ ಇಳಿಕೆ ಜತೆಗೆ ಹಲವು ಲಾಭಗಳು!

ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಅಡುಗೆ ಮನೆಯಲ್ಲಿ ಹಲವು ಗಿಡಮೂಲಿಕೆಗಳು ಲಭಿಸುತ್ತವೆ. ಇವುಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಲವಂಗ ನೆನೆಸಿಟ್ಟ ನೀರು ಕುಡಿದರೆ ತೂಕ ಇಳಿಕೆಯಾಗುವುದರೊಂದಿಗೆ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗದ ನೀರು (Getty Images)
author img

By ETV Bharat Health Team

Published : November 1, 2025 at 2:51 PM IST

3 Min Read
Choose ETV Bharat

ಮಸಾಲೆ ಪದಾರ್ಥ ಲವಂಗವನ್ನು ವಿವಿಧ ಭಕ್ಷ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗದಲ್ಲಿ ಆ್ಯಂಟಿಮೈಕ್ರೊಬಿಯಲ್ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಜೊತೆಗೆ ಯುಜೆನಾಲ್ ಸಂಯುಕ್ತದಿಂದಾಗಿ ನೋವು, ಉರಿಯೂತ ಕಡಿಮೆಯಾಗುತ್ತದೆ.

ಲವಂಗವನ್ನು ನಿತ್ಯ ಸೇವಿಸುವುದರಿಂದ ಕಿಣ್ವಗಳು ಉತ್ತೇಜಿಸಲ್ಪಡುತ್ತವೆ. ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ. ಇದರ ಗುಣಲಕ್ಷಣಗಳು ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುತ್ತವೆ. ಈ ಲವಂಗ ಮೂಳೆ, ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ. ಚರ್ಮ ಹಾಗೂ ಕೂದಲನ್ನು ಸಹ ಆರೋಗ್ಯಕರವಾಗಿಸುತ್ತವೆ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಹಾಗೂ ಖನಿಜಗಳು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತವೆ ಹಾಗೂ ಚರ್ಮ ಯೌವನದಿಂದ ಇರುವಂತೆ ಮಾಡುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗ (Getty Images)

ದೇಹದ ತೂಕ ಇಳಿಕೆ: ಲವಂಗದ ನೀರು ದೇಹದ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಲವಂಗದ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಕರಗಿಸುತ್ತದೆ. ಲವಂಗ ನೀರು ಬೊಜ್ಜು, ಹೊಟ್ಟೆಯ ಕೊಬ್ಬಿನಂತಹ ಸಮಸ್ಯೆಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜನಗೊಳ್ಳುತ್ತವೆ. ಉಬ್ಬುವುದು, ಅನಿಲ ಹಾಗೂ ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಬಾಯಿಯ ಆರೋಗ್ಯ ಉತ್ತಮ: ಕೆಲವು ಜನರಿಗೆ ಬಾಯಿಯ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಹಲ್ಲುನೋವು ಮತ್ತು ಒಸಡು ಸಮಸ್ಯೆಗಳು ಬರುತ್ತವೆ. ಪೇಸ್ಟ್ ಮತ್ತು ಮೌತ್‌ವಾಶ್‌ಗಳನ್ನು ಬಳಸುವ ಬದಲು ಲವಂಗದ ನೀರನ್ನು ಕುಡಿಯುವುದು, ಆ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸುವುದು ಹಾಗೂ ಬಾಯಿ ಮುಕ್ಕಳಿಸುವುದರಿಂದ ದಂತ ಸಮಸ್ಯೆಗಳು ಹಾಗೂ ಒಸಡು ಸಮಸ್ಯೆಗಳು ಕಡಿಮೆಯಾಗುತ್ತವೆ. ದುರ್ವಾಸನೆ ಕಡಿಮೆಯಾಗುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ, ಜೊತೆಗೆ ಬಾಯಿಯ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗ (Getty Images)

ಯಕೃತ್ತಿನ ಆರೋಗ್ಯ: ಲವಂಗದಲ್ಲಿರುವ ಮ್ಯಾಂಗನೀಸ್ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಯಕೃತ್ತಿನ ಕಾರ್ಯ ಹೆಚ್ಚಿಸುತ್ತದೆ. ಲವಂಗದ ನೀರು ಯಕೃತ್ತಿನಲ್ಲಿ ಸಂಗ್ರಹವಾಗಿರುವ ವಿಷ ಹೊರಹಾಕುತ್ತದೆ. ಲವಂಗದ ನಿರ್ವಿಷಗೊಳಿಸುವ ಗುಣಲಕ್ಷಣಗಳು ಯಕೃತ್ತನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜಂಕ್ ಫುಡ್ ತಿನ್ನುವುದು, ಮದ್ಯಪಾನ ಹಾಗೂ ಮಾಲಿನ್ಯದಿಂದಾಗಿ ನಮ್ಮ ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕುವಲ್ಲಿ ಲವಂಗ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಯಕೃತ್ತು ನೈಸರ್ಗಿಕವಾಗಿ ನಿರ್ವಿಷಗೊಳ್ಳುತ್ತದೆ. ನೈಸರ್ಗಿಕವಾಗಿ ಕಫವನ್ನು ಕಡಿಮೆ ಮಾಡುತ್ತದೆ, ಕೆಮ್ಮು ಹಾಗೂ ಶೀತ ಸಮಸ್ಯೆಗಳನ್ನು ನಿವಾರಿಸುತ್ತದೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗ (Getty Images)

ಚರ್ಮಕ್ಕೆ ಹೊಳಪು: ಲವಂಗದಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ವಯಸ್ಸಾದಂತೆ ಕಾಣಿಸಿಕೊಳ್ಳುವ ಸುಕ್ಕುಗಳು ಹಾಗೂ ಸೂಕ್ಷ್ಮ ರೇಖೆಗಳನ್ನು ನಿವಾರಿಸುತ್ತದೆ. ಲವಂಗದ ನೀರು ಈ ರೀತಿಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಚರ್ಮವನ್ನು ಒಳಗಿನಿಂದ ಯೌವನದಿಂದ ಕಾಣುವಂತೆ ಮಾಡುತ್ತದೆ. ಯಾವುದೇ ಕ್ರೀಮ್, ಲೋಷನ್‌ಗಳನ್ನು ಹಚ್ಚದೆ ಚರ್ಮವು ಸುಂದರವಾಗಿ ಕಾಣುತ್ತದೆ. ನೈಸರ್ಗಿಕವಾಗಿ ಸುಂದರವಾಗಿ ಕಾಣಲು ಬಯಸುವವರು ಲವಂಗದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.

ರೋಗನಿರೋಧಕ ಶಕ್ತಿ ವೃದ್ಧಿ, ನಿದ್ರಾಹೀನತೆ ದೂರ: ಲವಂಗದ ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾ, ಸೋಂಕುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಲವಂಗದ ಉರಿಯೂತದ ಹಾಗೂ ಆತಂಕ ವಿರೋಧಿ ಗುಣಗಳು ನರಮಂಡಲವನ್ನು ಶಾಂತಗೊಳಿಸುತ್ತವೆ. ಒತ್ತಡವನ್ನು ಕಡಿಮೆ ಮಾಡುತ್ತವೆ. ಆಳವಾದ ನಿದ್ರೆಯನ್ನು ಉತ್ತೇಜಿಸುತ್ತವೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗ (Getty Images)

ನಿದ್ರಾಹೀನತೆಯಿಂದ ಬಳಲುತ್ತಿರುವವರು ಲವಂಗ ನೀರನ್ನು ಕುಡಿದರೆ ವಿವಿಧ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಉತ್ತಮ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಲವಂಗದಲ್ಲಿರುವ ಸಮೃದ್ಧವಾದ ಉತ್ಕರ್ಷಣ ನಿರೋಧಕಗಳು ಹಾಗೂ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕುಗಳನ್ನು ಕಡಿಮೆ ಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

CLOVES BENEFITS  CLOVE WATER BENEFITS  HEALTH BENEFITS OF CLOVE WATER  ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು
ಲವಂಗದ ನೀರು (Getty Images)

ಲವಂಗದ ನೀರು ತಯಾರಿಸುವುದು ಹೇಗೆ ಗೊತ್ತೇ?:

  • ಮನೆಯಲ್ಲಿಯೇ ಲವಂಗದ ನೀರನ್ನು ತಯಾರಿಸಬಹುದು, ಇದು ಹಲವು ಪ್ರಯೋಜನಗಳನ್ನು ಹೊಂದಿದೆ. ಇದನ್ನು ಎರಡು ವಿಧಾನಗಳ ಮೂಲಕ ತಯಾರಿಸಬಹುದು.
  • ನಾಲ್ಕರಿಂದ ಐದು ಲವಂಗವನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಹಾಗೂ ಬೆಳಗ್ಗೆ ನೀರನ್ನು ಸೋಸಿ ಕುಡಿಯಿರಿ.
  • 5 ರಿಂದ 6 ಲವಂಗವನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಮತ್ತು ಬೆಳಗ್ಗೆ ಒಂದು ಲೋಟ ಗಾತ್ರಕ್ಕೆ ಬರುವವರೆಗೆ ಕುದಿಸಿ. ಚಹಾದಂತೆ ಕುಡಿಯಿರಿ. ಹೀಗೆ ಮಾಡುಲು ಬಯಸಿದರೆ, ಅದಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಸೇರಿಸಬಹುದು.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: