ಮದುವೆ ಬಳಿಕ ಗುಡ್ನ್ಯೂಸ್ ಕೊಟ್ಟ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ
ಫೆ. 26ರಂದು ವಿರೋಶ್ ಜೋಡಿ ರಾಜಸ್ಥಾನದ ಉದಯ್ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

Published : February 28, 2026 at 8:25 PM IST
ಹೊಸ ಬಾಳಿಗೆ ಕಾಲಿಟ್ಟಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಈ ಜೋಡಿಯ ಹೊಸ ಚಿತ್ರ ರಣಬಾಲಿಯ ಮೊದಲ ಹಾಡು ಬಿಡುಗಡೆಯಾಗಿದೆ.
ಏನಯ್ಯ ಸ್ವಾಮಿ ಗೀತೆಯಲ್ಲಿ ವಿಜಯ್ - ರಶ್ಮಿಕಾ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ. ಬರೋಬ್ಬರಿ 7 ವರ್ಷಗಳ ಬಳಿಕ ಈ ಜೋಡಿ ಆನ್ ಸ್ಕ್ರೀನ್ನಲ್ಲಿ ಜತೆಯಾಗಿ ನಟಿಸುತ್ತಿದ್ದು, ವಿರೋಶ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ರಣಬಾಲಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ರಶ್ಮಿಕಾ ಜಯಮ್ಮ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ ಮತ್ತು ಟಿ-ಸಿರೀಸ್ ಪ್ರಸ್ತುತಪಡಿಸಿದೆ. ಚಿತ್ರವು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಕಥೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ.
ರಾಹುಲ್ ಸಾಂಕೃತ್ಯಾಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶ್ವೇತಾ ಮೋಹನ್ ಮತ್ತು ಕಾರ್ತಿಕ್ ಈ ಗೀತೆಯನ್ನ ಹಾಡಿದ್ದಾರೆ. ಕನ್ನಡದಲ್ಲಿಯೂ ಹಾಡು ಬಿಡುಗಡೆ ಮಾಡಲಾಗಿದೆ.

ದಾಖಲೆ ಬರೆದ ವಿರೋಶ್ ಅದ್ಧೂರಿ ಮದುವೆ: ಟೀಕೆಗಳನ್ನೂ ಮೀರಿ ಅದ್ಧೂರಿಯಾಗಿ ಮದುವೆಯಾದ ವಿರೋಶ್ ಕೆಲವೇ ಗಂಟೆಗಳಲ್ಲಿ ತಮ್ಮ ವಿವಾಹದ ಜೋಡಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ 24 ಗಂಟೆಗಳಲ್ಲಿ 40ಕ್ಕೂ ಅಧಿಕ ಮಿಲಿಯನ್ ಲೈಕ್ಸ್ ಪಡೆದು, ಈ ಹಿಂದಿನ ಎಲ್ಲಾ ತಾರಾ ಜೋಡಿಗಳ ದಾಖಲೆಗಳನ್ನು ಮುರಿದಿವೆ. ಅದರಲ್ಲೂ ಇನ್ಸ್ಸ್ಟಾಗ್ರಾಮ್ ಸ್ಕ್ರೋಲ್ ಮಾಡಿದರೇ ಸಾಕು ಪ್ರತಿ ಪೋಸ್ಟ್, ರೀಲ್ಸ್ನಲ್ಲೂ ಈ ಜೋಡಿಯ ಮದುವೆ ಫೋಟೋಗಳದ್ದೇ ಕಾರುಬಾರು. ಕೆಲ ಅಭಿಮಾನಿಗಳಂತು ಕೆಲ ಫೋಟೋಗಳನ್ನು ಶಿವ-ಪಾರ್ವತಿ, ರಾಮ-ಸೀತೆಗೆ ಹೋಲಿಸಿದ್ದಾರೆ. ಒಟ್ಟಾರೆ ಹಲವು ವರ್ಷಗಳಿಂದ ರೂಮರ್ಸ್ಗೆ ತಲೆ ಕೊಡದೇ, ಅಭಿಮಾನಿಗಳನ್ನು ಇಷ್ಟು ವರ್ಷ ಕಾಯಿಸಿ ಒಂದೇ ಬಾರಿ ಹಬ್ಬದೂಟ ನೀಡಿದ್ದಾರೆ.
ಶ್ರೀಮತಿ ರಶ್ಮಿಕಾ ಕೈಯಲ್ಲಿವೆ 12 ಪ್ರಾಜೆಕ್ಟ್: ಸೌತ್, ಬಾಲಿವುಡ್ ಎರಡೂ ಕಡೆ ಬ್ಯಾಕ್ ಟು ಬ್ಯಾಕ್ ಹಿಟ್ ಮೂವಿಗಳನ್ನೇ ನೀಡುತ್ತಾ ಬಂದಿರುವ ರಶ್ಮಿಕಾ ಮಂದಣ್ಣಾರ ಬಳಿ 12 ಸಿನಿಮಾಗಳಿವೆ. ಮದುವೆಯಾದರೂ ಸಿನಿಮಾದಲ್ಲೇ ಮುಂದುವರೆಯುತ್ತಿರುವ ಶ್ರೀವಲ್ಲಿ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಕಾಕ್‌ಟೇಲ್ 2, ರಣಬಾಲಿ, ಪುಷ್ಪ 3, 'AA22xA6', ಅನಿಮಲ್ ಪಾರ್ಕ್, ಮೈಸಾ, ಆರ್‌ಸಿ 17, ಏಕ್ ಸಾಥ್ ದೋ ದೋ, ರೈನ್‌ಬೋ ಸೇರಿದಂತೆ ಹಲವು ಸಿನಿಮಾದಲ್ಲಿ ಮಂದಣ್ಣ ನಟಿಸುವ ಮಾಹಿತಿ ಇದೆ. ಆದರೆ ಕೆಲವೊಂದು ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಇದನ್ನೂ ಓದಿ: ಅನ್ಸ್ಟಾಪಬಲ್ ರಶ್ಮಿಕಾ: ನವವಧು ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ; ವೃತ್ತಿಗೆ ಮದುವೆ ಅಡ್ಡಿಯಾಗೋಲ್ಲವೆಂದ್ರು ಕೊಡಗಿನ ಬೆಡಗಿ
ಇದನ್ನೂ ಓದಿ:ರಶ್ಮಿಕಾರನ್ನು ಮದುವೆಯಾಗಲು ಒಮ್ಮೆ 'ಭಯಪಟ್ಟಿದ್ದ' ವಿಜಯ್ ಈಗ 'ನನ್ನ ಹೆಂಡತಿ' ಎಂದು ಪರಿಚಯಿಸಿದ್ರು!
ಇದನ್ನೂ ಓದಿ: Photos: 'ನಾನು ಈ ವ್ಯಕ್ತಿ ಬಗ್ಗೆ ಪುಸ್ತಕ ಬರೆಯಬಲ್ಲೆ!' ವಿಜಯ್ರನ್ನು 'ನನ್ನ ಗಂಡ' ಎಂದು ಪರಿಚಯಿಸಿದ ರಶ್ಮಿಕಾ

