ETV Bharat / entertainment

ರಶ್ಮಿಕಾರನ್ನು ಮದುವೆಯಾಗಲು ಒಮ್ಮೆ 'ಭಯಪಟ್ಟಿದ್ದ' ವಿಜಯ್ ಈಗ 'ನನ್ನ ಹೆಂಡತಿ' ಎಂದು ಪರಿಚಯಿಸಿದ್ರು!

"ಭಯ" ಎದುರಿಸಿದ ವರ್ಷಗಳ ನಂತರ, ವಿಜಯ್ ದೇವರಕೊಂಡ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಜೊತೆಗೆ, ಅವರನ್ನು ತಮ್ಮ "ಆತ್ಮೀಯ ಸ್ನೇಹಿತೆ" ಮತ್ತು "ಹೆಂಡತಿ" ಎಂದು ಪರಿಚಯಿಸಿದ್ದಾರೆ.

Vijay Deverakonda -  Rashmika Mandanna
'ವಿರೋಶ್​​​' ಮದುವೆ (Photo: IANS)
author img

By ETV Bharat Entertainment Team

Published : February 27, 2026 at 9:13 AM IST

3 Min Read
Choose ETV Bharat

ಪ್ರೇಮಪಕ್ಷಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬಹುವರ್ಷಗಳ ಡೇಟಿಂಗ್​ ಬಳಿಕ, ರಾಜಸ್ಥಾನದ ಉದಯಪುರದಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ನಿಜ ಜೀವನದ ಮದುವೆಗೂ ಕೆಲ ವರ್ಷಗಳ ಮೊದಲು, ರಶ್ಮಿಕಾ ಅವರನ್ನು ತೆರೆ ಮೇಲೆ ಮದುವೆಯಾಗಲು "ಭಯ" ಆಗಿತ್ತು ಎಂದು ವಿಜಯ್ ಒಪ್ಪಿಕೊಂಡಿದ್ದರು.

ಫೆಬ್ರವರಿ 26ರಂದು ಉದಯಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ತಮ್ಮ ದೀರ್ಘಕಾಲದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್, ಈಶಾ ರೆಬ್ಬಾ, ಕಲ್ಯಾಣಿ ಪ್ರಿಯದರ್ಶನ್, ಆಶಿಕಾ ರಂಗನಾಥ್ ಮತ್ತು ಶ್ರಾವ್ಯ ವರ್ಮಾ ಸೇರಿದಂತೆ ಚಿತ್ರರಂಗದ ಕೆಲವರಷ್ಟೇ ಈ ಖಾಸಗಿ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ವಿಜಯ್ ಅವರು 2018ರ ಸೂಪರ್ ಹಿಟ್ ಚಿತ್ರ 'ಗೀತಾ ಗೋವಿಂದಮ್'​​ನಲ್ಲಿ ರಶ್ಮಿಕಾ ಅವರ ಜೊತೆಗಿನ ವಿವಾಹ ದೃಶ್ಯದ ಬಗ್ಗೆ ಸುಮಾರು 7 ವರ್ಷಗಳ ಹಿಂದೆ ಮಾತನಾಡಿದ್ದರು. ಸಿನಿಮಾ ಪ್ರಮೋಶನ್​ ವೇಳೆ, ವಂಚಿಂದಮ್ಮ ಸಾಂಗ್​ನ ಒಂದು ನಿರ್ದಿಷ್ಟ ಸನ್ನಿವೇಶವನ್ನು ಚಿತ್ರೀಕರಿಸುವಾಗ ತಾವು ನಿಜವಾಗಿಯೂ ನರ್ವಸ್ ಆಗಿದ್ದೆ ಎಂಬುದನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಆ ದೃಶ್ಯದಲ್ಲಿ, ಮದುವೆಯನ್ನು ಬಹಳ ನ್ಯಾಚುರಲ್​ ಆಗಿ ಕಾಣುವಂತೆ ಮಾಡಲು ವಿಜಯ್ ರಶ್ಮಿಕಾ ಕುತ್ತಿಗೆಗೆ ಮೂರು ಗಂಟುಗಳನ್ನು ಕಟ್ಟಬೇಕಾಯಿತು. ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, "ಪೆಲ್ಲಿ ಮಂಟಪದಲ್ಲಿ (ಮದುವೆ ಮಂಟಪ) ಕುಳಿತಿದ್ದೆ, ಎಲ್ಲವೂ ಚೆನ್ನಾಗಿತ್ತು, ಆದ್ರೆ ಮೂರು ಗಂಟುಗಳನ್ನು (ಮಂಗಳಸೂತ್ರ) ಕಟ್ಟಿದ ಕ್ಷಣ ನನಗೆ ತುಂಬಾ ಭಯವನ್ನುಂಟುಮಾಡಿತ್ತು" ಎಂದು ಹೇಳಿದ್ದರು.

ಆ ಕ್ಷಣ ಏಕೆ ಅಷ್ಟೊಂದು ಕಷ್ಟಕರವಾಗಿತ್ತು ಎಂಬುದನ್ನೂ ನಟ ಸಂದರ್ಶನದಲ್ಲಿ ವಿವರಿಸಿದ್ದರು. "ಇದು ಕೇವಲ ಚಿತ್ರೀಕರಣ ಎಂಬುದು ನನಗೆ ತಿಳಿದಿದ್ದರೂ, ಹುಡುಗಿ (ರಶ್ಮಿಕಾ) ಅಲ್ಲಿ ಪಟ್ಟು ಸೀರೆ (ರೇಷ್ಮೆ ಸೀರೆ) ಧರಿಸಿ ಕುಳಿತಿದ್ದಾಳೆ. ನಾನಲ್ಲಿ ಪಟ್ಟು ಪಂಚೆ (ಸಾಂಪ್ರದಾಯಿಕ ಧೋತಿ) ಧರಿಸಿದ್ದೇನೆ. ಸುತ್ತಲೂ ಹೂಗಳಿಂದ ಶೃಂಗಾರ. ಇದೆಲ್ಲವೂ ನಿಜವಾದ ಮದುವೆಯಂತೆಯೇ ಕಾಣುತ್ತದೆ. ಶಾಟ್‌ನಲ್ಲಿ ಡೈರೆಕ್ಷರ್​​ ನನಗೆ ಮೂರು ಗಂಟುಗಳನ್ನು ಕಟ್ಟಲು ಹೇಳಿದರು. ಆಗ ನನಗೆ ಇಲ್ಲಿ ಏನಾಗುತ್ತಿದೆ ಎಂದನಿಸಿತ್ತು. ನಾನಾಗ ರಶ್ಮಿಕಾಗೆ ಇದು ನಿಜವಾಗಿಯೂ ವಿಚಿತ್ರವಾಗಿದೆ ಎಂದು ಹೇಳಿದ್ದೆ. ಆದರೆ ರಶ್ಮಿಕಾ ಆನ್​ಸ್ಕ್ರೀನ್​ನಲ್ಲಿ ಮೂರನೇ ಬಾರಿ ಮದುವೆಯಾಗುತ್ತಿದ್ದರು. ಹಾಗಾಗಿ, ಅವರು ಚಿಂತಿಸಲಿಲ್ಲ" ಎಂದು ವಿಜಯ್​ ಪ್ರಮೋಶನ್​ ಸಂದರ್ಭ ವಿವರಿಸಿದ್ದರು.

ಒಂದು ಕಾಲದಲ್ಲಿ ಆನ್​ಸ್ಕ್ರೀನ್​ ಮೇಲಿನ ಮದುವೆ ಬಗ್ಗೆ "ವಿಚಿತ್ರ" ಎಂದು ಹೇಳಿ ನಗುತ್ತಿದ್ದ ಅದೇ ಜೋಡಿಯೀಗ ನಿಜ ಜೀವನದಲ್ಲಿ ಪತಿ ಪತ್ನಿಯರಾಗಿದ್ದಾರೆ. 2025ರ ಅಕ್ಟೋಬರ್ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.

ವಿವಾಹ ಸಮಾರಂಭದ ನಂತರ, ರಶ್ಮಿಕಾ ಇನ್​ಸ್ಟಾಗ್ರಾಮ್​ನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡರು. ಜೊತೆಗೆ ''ನಿಮಗೀಗ 'ನನ್ನ ಗಂಡ'ನನ್ನು ಪರಿಚಯಿಸುತ್ತಿದ್ದೇನೆ! ಮಿಸ್ಟರ್ ವಿಜಯ್ ದೇವರಕೊಂಡ!! ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ, ಶಾಂತಿಯಿಂದ ಇರುವುದು ಹೇಗಿರುತ್ತದೆ ಎಂದು ನನಗೆ ತೋರಿಸಿದ ವ್ಯಕ್ತಿ!" ಎಂದು ಗುಣಗಾನ ಮಾಡಿ ದೊಡ್ಡ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Photos: 'ನಾನು ಈ ವ್ಯಕ್ತಿ ಬಗ್ಗೆ ಪುಸ್ತಕ ಬರೆಯಬಲ್ಲೆ!' ವಿಜಯ್​ರನ್ನು 'ನನ್ನ ಗಂಡ' ಎಂದು ಪರಿಚಯಿಸಿದ ರಶ್ಮಿಕಾ

ವಿಜಯ್ ಕೂಡಾ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿ, "ಒಂದು ದಿನ, ನಾನು ರಶ್ಮಿಕಾರನ್ನು ಮಿಸ್ ಮಾಡಿಕೊಂಡೆ. ಅವರು ನನ್ನ ಪಕ್ಕದಲ್ಲಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಬರುವಷ್ಟರ ಮಟ್ಟಿಗೆ ಮಿಸ್ ಮಾಡಿಕೊಂಡೆ. ಅವರು ನನ್ನ ಎದುರು ಕುಳಿತಿದ್ದರೆ ನನ್ನ ಊಟ ಹೆಚ್ಚು ಚೆನ್ನಾಗಿರುತ್ತಿದ್ದು. ಅವರು ನನ್ನೊಂದಿಗೆ ಮಾಡುತ್ತಿದ್ದರೆ ನನ್ನ ವ್ಯಾಯಾಮ ಫನ್​ ಆಗಿರುತ್ತಿತ್ತು ಎಂದೆಲ್ಲಾ ಅನಿಸಿತು. ನನಗವರು ಬೇಕಾಗಿದ್ದಂತೆ - ನಾನು ಎಲ್ಲೇ ಇದ್ದರೂ ಮನೆಯ ವಾತಾವರಣ ಮತ್ತು ಶಾಂತತೆಯನ್ನು ಅನುಭವಿಸಲು. ಹಾಗಾಗಿ, ನಾನು ಅವರನ್ನು ನನ್ನ ಆತ್ಮೀಯ ಸ್ನೇಹಿತೆ ಮಾಡಿಕೊಂಡೆ, ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ. 26.02.2026" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶೂಟಿಂಗ್​ ವೇಳೆ ಭೇಟಿ, ಸ್ನೇಹ, ಪ್ರೀತಿ, ವಿವಾಹ: ವಿಜಯ್​ ರಶ್ಮಿಕಾಗೂ ಮೊದಲು ಸೆಟ್​​​ನಲ್ಲಿ ಪ್ರೀತಿಸಿ ಮದುವೆಯಾದ ಸೆಲೆಬ್ರಿಟಿಗಳಿವರು

ಒಮ್ಮೆ "ನಿಜವಾಗಿಯೂ ವಿಚಿತ್ರ" ಎಂದು ಕರೆದ ಕ್ಷಣದಿಂದ ಹಿಡಿದು, ರಶ್ಮಿಕಾ ಅವರನ್ನು "ನನ್ನ ಹೆಂಡತಿ" ಎಂದು ಹೆಮ್ಮೆಯಿಂದ ಪರಿಚಯಿಸುವವರೆಗೆ, ವಿಜಯ್ ಅವರ ಪ್ರಯಾಣ ಬಹಳ ಅರ್ಥಪೂರ್ಣವಾಗಿ ಸಾಗಿದೆ. ನವದಂಪತಿಗೆ ಅಭಿಮಾನಿಗಳು ಆನ್​ಲೈನ್​​ನಲ್ಲಿ ಅಭಿನಂದನೆಗಳ ಮಳೆ ಹರಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮದುವೆ ಪ್ರಶ್ನೆಗೆ ರಿಷಬ್​ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು!