'ಕಿಂಗ್' ನಂತರ 'ಜವಾನ್ 2' ಶೂಟಿಂಗ್ನಲ್ಲಿ ಶಾರುಖ್ ಖಾನ್? ವಿಲನ್ ರೋಲ್ಗೆ ಸೌತ್ ಸೂಪರ್ ಸ್ಟಾರ್?
'ಕಿಂಗ್' ನಂತರ ಶಾರುಖ್ ಖಾನ್ ಮತ್ತು ಅಟ್ಲೀ ಕುಮಾರ್ 'ಜವಾನ್ 2'ಗೆ ಮತ್ತೆ ಕೈಜೋಡಿಸಬಹುದೆಂದು ವರದಿಗಳು ಸೂಚಿಸಿದ್ದು, ಸೀಕ್ವೆಲ್ನಲ್ಲಿ ಸೌತ್ ಸೂಪರ್ ಸ್ಟಾರ್ ಪ್ರಮುಖ ಖಳನಾಯಕನಾಗಿ ನಟಿಸುವ ಸಾಧ್ಯತೆಯಿದೆ.

By ETV Bharat Entertainment Team
Published : April 22, 2026 at 6:42 PM IST
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಜವಾನ್ 2 ಬಗ್ಗೆ ವರದಿಗಳು ಹರಿದಾಡುತ್ತಿವೆ. ಇತ್ತೀಚಿನ ಅಪ್ಡೇಟ್ಸ್ ಪ್ರಕಾರ, ಜನಪ್ರಿಯ ನಟ ಮತ್ತೊಮ್ಮೆ ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಅವರೊಂದಿಗೆ ತಮ್ಮ ಬ್ಲಾಕ್‌ಬಸ್ಟರ್ ಚಿತ್ರ 'ಜವಾನ್'ನ ಮುಂದುವರಿದ ಭಾಗಕ್ಕಾಗಿ ಕೈಜೋಡಿಸಬಹುದು ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಆದಾಗ್ಯೂ, ಚಿತ್ರ ನಿರ್ಮಾಪಕರಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಸುದ್ದಿವಾಹಿನಿಯೊಂದಕ್ಕೆ ಮೂಲಗಳು ಮಾಹಿತಿ ನೀಡಿದ್ದು, ಆ ಪ್ರಕಾರ, ಜವಾನ್ 2 ಚಿತ್ರದ ಬಗ್ಗೆ ಕೆಲ ಸಮಯದಿಂದ ಚರ್ಚೆ ನಡೆಯುತ್ತಿದೆ. "ಜವಾನ್ 2 ಚಿತ್ರಕಥೆ ಮತ್ತು ಐಡಿಯಾಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೆಲ ವಾರಗಳ ಹಿಂದೆ, ಚಿತ್ರಕಥೆಯನ್ನು ಅಂತಿಮಗೊಳಿಸಲಾಗಿತ್ತು. ಕಿಂಗ್ ಚಿತ್ರ ಮುಗಿದ ನಂತರ ಶಾರುಖ್ ಚಿತ್ರದ ಕೆಲಸ ಪ್ರಾರಂಭಿಸುತ್ತಾರೆ" ಎಂದು ಮೂಲಗಳು ತಿಳಿಸಿವೆ.
ಇದು ಸಿನಿಪ್ರಿಯರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಸಾಗರೋತ್ತರ ಪ್ರದೇಶಗಳಲ್ಲಿಯೂ ಜನಪ್ರಿಯತೆ ಸಂಪಾದಿಸಿರುವ ಕಿಂಗ್ ಖಾನ್ ಮತ್ತೊಮ್ಮೆ ಆ್ಯಕ್ಷನ್-ಪ್ಯಾಕ್ಡ್ ಪಾತ್ರಕ್ಕೆ ಮರಳುವುದನ್ನು ನೋಡಲು ಉತ್ಸುಕರಾಗಿದ್ದಾರೆ. ಇನ್ನೂ, ಮುಂದಿನ ಭಾಗದಲ್ಲಿನ ಖಳನಾಯಕನ ಪಾತ್ರದ ಬಗ್ಗೆಯೂ ವರದಿ ಆಸಕ್ತಿದಾಯಕ ಅಪ್ಡೇಟ್ ಹಂಚಿಕೊಂಡಿದೆ. "ತಂಡ ದಕ್ಷಿಣ ಚಿತ್ರರಂಗದ ಎ-ಲಿಸ್ಟರ್ನನ್ನು ಖಳನಾಯಕನಾಗಿ ಆಯ್ಕೆ ಮಾಡಲು ನೋಡುತ್ತಿದೆ" ಎಂದು ಮೂಲಗಳು ತಿಳಿಸಿವೆ. ಮೊದಲ ಚಿತ್ರದಲ್ಲಿ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.
2023ರಲ್ಲಿ ಬಿಡುಗಡೆಯಾದ ಜವಾನ್ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರ ಅಟ್ಲೀ ವೃತ್ತಿಜೀವನದಲ್ಲಿ ನಿರ್ದೇಶಕರಾಗಿ ಮೊದಲ ಹಿಂದಿ ಚಿತ್ರವಾಗಿದೆ. ಶಾರುಖ್ ಖಾನ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಸೇರಿದಂತೆ ಇತರರು ಕಾಣಿಸಿಕೊಂಡಿದ್ದರು. ಎಸ್ಆರ್ಕೆ ದ್ವಿಪಾತ್ರದಲ್ಲಿ ನಟಿಸಿದ್ದರೆ, ದೀಪಿಕಾ ಪಡುಕೋಣೆ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ಆರೋಗ್ಯ, ಕೃಷಿ ಮತ್ತು ರಕ್ಷಣೆಯಂತಹ ವಿಭಿನ್ನ ವ್ಯವಸ್ಥೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುವ ವ್ಯಕ್ತಿಯ ಕಥೆಯನ್ನು ಜವಾನ್ ಹೇಳುತ್ತದೆ. ಈ ಚಿತ್ರ ವಿಶ್ವಾದ್ಯಂತ 1,100 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಒಂದಾಯಿತು.
ಇದನ್ನೂ ಓದಿ: ಬಾಲ ಕಲಾವಿದೆ, ನಟಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ To ಟಾಕ್ಸಿಕ್: ಗೀತು ಮೋಹನ್ದಾಸ್ ಸಿನಿ ಪ್ರಯಾಣ
ಈ ಯಶಸ್ವಿ ಚಿತ್ರ ರಾಷ್ಟ್ರೀಯ ಪ್ರಶಸ್ತಿಗಳಲ್ಲಿಯೂ ವ್ಯಾಪಕ ಮನ್ನಣೆ ಪಡೆಯಿತು. ಶಾರುಖ್ ಖಾನ್ ತಮ್ಮ ಮೊದಲ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು. ಇದು ಅವರ ಸುದೀರ್ಘ ವೃತ್ತಿಜೀವನದ ಪ್ರಮುಖ ಕ್ಷಣವಾಗಿತ್ತು. ಗಾಯಕಿ ಶಿಲ್ಪಾ ರಾವ್ ಕೂಡಾ ಚಲೇಯಾ ಹಾಡಿಗೆ ಪ್ರಶಸ್ತಿ ಗೆದ್ದುಕೊಂಡರು.
ಇದನ್ನೂ ಓದಿ: ಪ್ರೆಗ್ನೆನ್ಸಿ ಅನೌನ್ಸ್ಮೆಂಟ್ ಬೆನ್ನಲ್ಲೇ ಶೂಟಿಂಗ್ಗೆ ಹಾಜರಾದ ದೀಪಿಕಾ ಪಡುಕೋಣೆ: ವೃತ್ತಿಬದ್ಧತೆಗೆ ಫ್ಯಾನ್ಸ್ ಮೆಚ್ಚುಗೆ
ಶಾರುಖ್ ಖಾನ್ ಪ್ರಸ್ತುತ ಸಿದ್ಧಾರ್ಥ್ ಆನಂದ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ 'ಕಿಂಗ್'ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ಸುಹಾನಾ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಡಿಸೆಂಬರ್ 24, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

