'ಸತ್ಲುಜ್ ಕೇವಲ ಸಿನಿಮಾವಲ್ಲ, ಎಂದಿಗೂ ವಾಸಿಯಾಗದ ಗಂಭೀರ ಗಾಯ': ರಾಮ್ ಗೋಪಾಲ್ ವರ್ಮಾ
ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನ ಚರಿತ್ರೆ 'ಸತ್ಲುಜ್' ಸಿನಿಮಾ ಭಾರಿ ಸುದ್ದಿಯಲ್ಲಿದ್ದು, ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.

By ETV Bharat Entertainment Team
Published : July 7, 2026 at 1:37 PM IST
ಭಾರತದಲ್ಲಿ ಎರಡೇ ದಿನಕ್ಕೆ ಸ್ಟ್ರೀಮಿಂಗ್ ನಿಲ್ಲಿಸಿರುವ ದಿಲ್ಜಿತ್ ದೋಸಾಂಜ್ ನಟನೆಯ 'ಸತ್ಲುಜ್' ಚಿತ್ರವನ್ನು ವೀಕ್ಷಿಸಿದ ದಕ್ಷಿಣ ಚಿತ್ರರಂಗದ ಖ್ಯಾತ ಫಿಲ್ಮ್ಮೇಕರ್ ರಾಮ್ ಗೋಪಾಲ್ ವರ್ಮಾ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಹನಿ ಟ್ರೆಹಾನ್ ನಿರ್ದೇಶನದ ಈ ಸಿನಿಮಾ, ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಕಥೆಯನ್ನು ಒಳಗೊಂಡಿದ್ದು, ದಿಲ್ಜಿತ್ ದೋಸಾಂಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಕ್ಸ್ ಪೋಸ್ಟ್ನಲ್ಲೇನಿದೆ?
ಈಗಷ್ಟೇ ಸತ್ಲುಜ್ ಸಿನಿಮಾ ವೀಕ್ಷಿಸಿದೆ. ಅದು ಕೇವಲ ಸಿನಿಮಾ ಅಲ್ಲ, ಎಂದಿಗೂ ವಾಸಿಯಾಗದ ಗಾಯ. ನಮ್ಮ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದನ್ನು ತೋರಿಸಿದೆ. ಅಲ್ಲಿ ದಿಲ್ಜಿತ್ ದೋಸಾಂಜ್ ಎದೆ ಬಡಿದುಕೊಳ್ಳುವ ವೀರತ್ವವಿಲ್ಲದೇ ಶಾಂತ ಕೋಪದಲ್ಲಿ ನಟಿಸಿದ್ದಾರೆ. ಅವನ ಆಯುಧಗಳು ಲೆಡ್ಜರ್ ಮತ್ತು ಆತ್ಮಸಾಕ್ಷಿ. ಅರ್ಜುನ್ ರಾಂಪಾಲ್ ನಟನೆ ನೈಜವಾಗಿದೆ.
Just saw SATLUJ and it is not a film , but a deep wound that will never heal. It stirs up the sludge in one of the darkest chapters of our history
— Ram Gopal Varma (@RGVzoomin) July 7, 2026
This is cinema used as confrontation , where @diljitdosanjh acts with a quiet fury with no chest thumping heroism.. His only weapons…
ನಿರ್ದೇಶಕ ಹನಿ ಟೆಹ್ರಾನ್, ಭಯಾನಕತೆಯನ್ನು ಸಂವೇದನಾಶೀಲಗೊಳಿಸುವ ಬದಲು, ಅಧಿಕಾರಶಾಹಿ, ದಹನ ದಾಖಲೆಗಳು ಮತ್ತು ಮೌನ ಸಂಭಾಷಣೆಗಳ ಮೂಲಕ ಕಥೆಯನ್ನು ರವಾನಿಸಿದ್ದಾರೆ. ನಿಧಾನವಾಗಿ ತನಿಖಾ ಥ್ರಿಲ್ಲರ್‌ನಂತೆ ಚಿತ್ರ ತೆರೆದುಕೊಳ್ಳುತ್ತದೆ. ಈ ಸಂಯಮವು ವಿಷಯದ ಕ್ರೌರ್ಯವನ್ನು ಹೆಚ್ಚು ಕಠಿಣವಾಗಿಸುತ್ತದೆ. ಅದು ಶೋಷಣೆಯ ಬಲದಿಂದಲ್ಲ, ಸತ್ಯದ ಬಲದಿಂದ ಸ್ಫೋಟಗೊಳ್ಳುತ್ತದೆ.
ಪ್ರಜಾಪ್ರಭುತ್ವವು ತನ್ನ ನಾಗರಿಕರನ್ನೇ ಹೇಗೆ ನುಂಗುತ್ತದೆ ಮತ್ತು ನಂತರ ಪುರಾವೆಗಳನ್ನು ಅಳಿಸಿಹಾಕಲು ಹೇಗೆ ಪ್ರಯತ್ನಿಸುತ್ತದೆ ಎಂಬುದರ ಕುರಿತು ಚಿತ್ರದ ತಿರುಳನ್ನು ಯಾವುದೇ ಉಪದೇಶವಿಲ್ಲದೇ ಅನ್ವೇಷಿಸಲಾಗಿದೆ ಮತ್ತು ಅದು ಸಾಮಾನ್ಯ ಸಾಧನೆಯಲ್ಲ.
ಪ್ರದರ್ಶನ ಮತ್ತು ಪ್ರಕಟಣೆಯನ್ನು ಸುತ್ತುವರೆದಿರುವ ವಿವಿಧ ಸಮಸ್ಯೆಗಳು, ಶಕ್ತಿಶಾಲಿಗಳನ್ನು ಅನಾನುಕೂಲಗೊಳಿಸುವಲ್ಲಿ ಕಲೆ ತನ್ನ ಕೆಲಸ ಮಾಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಅದು ನಿಜವಾದ ಕಲೆಯ ನಿಜವಾದ ಉದ್ದೇಶವಾಗಿದೆ. ಅದೇ ಸತ್ಲುಜ್. ಇದು ತುಂಬಾ ಧೈರ್ಯಶಾಲಿ ಅತ್ಯಗತ್ಯ ಚಲನಚಿತ್ರ. ಏಕೆಂದರೆ ಅದು ಶಿಕ್ಷಣ ನೀಡುತ್ತದೆ.
ಮುಖ್ಯವಾಹಿನಿಯು ಪ್ರದರ್ಶನ ಮತ್ತು ಪಾಪ್‌ಕಾರ್ನ್ ಸಿನಿಮಾಗಳನ್ನು ಬೆನ್ನಟ್ಟುವ ಈ ಕಾಲದಲ್ಲಿ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಾಗ ಸಿನಿಮೀಯ ಮಾಧ್ಯಮವು ನಿಜವಾಗಿಯೂ ಏನನ್ನು ಸಾಧಿಸಬಹುದು ಎಂಬುದರ ಜ್ಞಾಪನೆಯನ್ನು ಸತ್ಲುಜ್ ಚಿತ್ರೀಕರಿಸುತ್ತದೆ. ಈ ಚಲನಚಿತ್ರವನ್ನು ನೋಡಬೇಕು, ತೋರಿಸಬೇಕು, ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಎಲ್ಲಾ ಶಕ್ತಿಗಳಿಗೆ ನನ್ನ ಮನವಿ ಏನೆಂದರೆ, ದಯವಿಟ್ಟು ಜಸ್ವಂತ್ ಸಿಂಗ್ ಕಲ್ರಾಗೆ ಮಾಡಿದ್ದನ್ನು ಸತ್ಲುಜ್ಗೆ ಮಾಡಬೇಡಿ. ಸತ್ಯವನ್ನು ಮರೆಮಾಡಲು ಪ್ರಯತ್ನಿಸಿದಾಗ ಅದು ಹೆಚ್ಚು ಗಟ್ಟಿಯಾಗುತ್ತದೆ ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Jallianwala Bagh stands as one of history’s greatest massacres. It was carried out by a colonial regime. But the question that haunts me after watching Jaswant Singh Khalra is different:
— Harbhajan Turbanator (@harbhajan_singh) July 5, 2026
What is more painful than oppression by an outsider? When those entrusted to protect their… pic.twitter.com/zb71vPhKss
ಹರ್ಭಜನ್ ಸಿಂಗ್ ಹೇಳಿದ್ದಿಷ್ಟು: "ಜಲಿಯನ್ ವಾಲಾಬಾಗ್ ಇತಿಹಾಸದ ಅತ್ಯಂತ ದೊಡ್ಡ ಹತ್ಯಾಕಾಂಡಗಳಲ್ಲಿ ಒಂದಾಗಿದೆ. ಇದನ್ನು ವಸಾಹತುಶಾಹಿ ಆಡಳಿತ ನಡೆಸಿತ್ತು. ಆದರೆ ಜಸ್ವಂತ್ ಸಿಂಗ್ ಖಲ್ರಾ ಅವರನ್ನು ನೋಡಿದ ನಂತರ ನನ್ನನ್ನು ಕಾಡುವ ಪ್ರಶ್ನೆ ವಿಭಿನ್ನವಾಗಿದೆ: ಹೊರಗಿನವರಿಂದ ದಬ್ಬಾಳಿಕೆಗಿಂತ ಹೆಚ್ಚು ನೋವಿನಿಂದ ಕೂಡಿದ್ದು ಯಾವುದು? ತಮ್ಮದೇ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡವರು ಅವರ ದೊಡ್ಡ ಭಯದ ಮೂಲವಾಗಿದ್ದಾರೆಂದು ಆರೋಪಿಸಿದಾಗ".
"ಒಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯವೆಂದರೆ ಅಮಾಯಕ ಜೀವಗಳನ್ನು ರಕ್ಷಿಸುವುದು - ಅಧಿಕಾರದ ದುರುಪಯೋಗವಲ್ಲ. ಖಲ್ರಾ ಅವರ ಧೈರ್ಯ ಅಕ್ರಮ ಕಣ್ಮರೆಗಳು ಮತ್ತು ರಹಸ್ಯ ದಹನಗಳ ಪುರಾವೆಗಳನ್ನು ಬಹಿರಂಗಪಡಿಸಿತು, ರಾಜ್ಯ ಅಧಿಕಾರದ ದುರುಪಯೋಗವು ತಲೆಮಾರುಗಳವರೆಗೆ ಉಳಿಯುವ ಗಾಯಗಳನ್ನು ಬಿಡಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ. ಪಂಜಾಬ್‌ನ ತಾಯಂದಿರು ಇನ್ನೂ ಉತ್ತರಗಳಿಗಾಗಿ ಕಾಯುತ್ತಿದ್ದಾರೆ. ಅನೇಕ ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿವೆ. ಸತ್ಯವು ಶಾಶ್ವತವಾಗಿ ಸಮಾಧಿಯಾಗಿ ಉಳಿಯಲು ಸಾಧ್ಯವಿಲ್ಲ" ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: 'ಸತ್ಲುಜ್' ಸ್ಟ್ರೀಮಿಂಗ್ ಸ್ಥಗಿತ: ದಿಲ್ಜಿತ್ ದೋಸಾಂಜ್ ಸಿನಿಮಾ ವೀಕ್ಷಿಸಿ 'ಸತ್ಯ ಸಮಾಧಿಯಾಗಲ್ಲ'ವೆಂದ ಹರ್ಭಜನ್ ಸಿಂಗ್
ಭಾರತದಲ್ಲಿ ಚಿತ್ರವನ್ನು ಸದ್ಯಕ್ಕೆ ಒಟಿಟಿ ಪ್ಲ್ಯಾಟ್ಫಾರ್ಮ್ ಝೀ5ನಿಂದ ತೆಗೆದುಹಾಕಲಾಗಿದೆ. ಹೌದು, ಜುಲೈ 3ರಂದು ತನ್ನ ಸ್ಟ್ರೀಮಿಂಗ್ ಪ್ರಾರಂಭಿಸಿದ ಸಿನಿಮಾ, ಭಾರತದಲ್ಲಿ ಎರಡೇ ದಿನಕ್ಕೆ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಿತು. ಹನಿ ಟ್ರೆಹಾನ್ ನಿರ್ದೇಶನದ ಸತ್ಲುಜ್, ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

