ETV Bharat / entertainment

ಕಿರಣ್​ ರಾಜ್​ 'ರಾನಿ' To ಬಾಲಯ್ಯರ 'ಅಖಂಡ 2': ಈ ವಾರ ಒಟಿಟಿ ಪ್ರವೇಶಿಸಿದ ಸಿನಿಮಾಗಳಿವು

ಈ ವಾರ ಒಟಿಟಿ ಪ್ರವೇಶಿಸಿದ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

OTT Releases This Weekend
ಒಟಿಟಿ: ಕಿರಣ್​ ರಾಜ್​ ರಾನಿ To ಬಾಲಯ್ಯರ ಅಖಂಡ 2 (Photo: Film Posters)
author img

By ETV Bharat Entertainment Team

Published : January 9, 2026 at 5:26 PM IST

2 Min Read
Choose ETV Bharat

ವಾರಾಂತ್ಯ ಬಂದಿದೆ. ಅದರೊಂದಿಗೆ ಪ್ರಮುಖ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಹೊಸ ಸರಣಿಗಳು ಮತ್ತು ಸಿನಿಮಾಗಳು ಪ್ರಸಾರ ಪ್ರಾರಂಭಿಸಿವೆ. ಇತ್ತೀಚಿನ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಮಿಸ್​ ಮಾಡಿಕೊಂಡವರು ತಾವಿದ್ದ ಸ್ಥಳದಲ್ಲೇ ಕುಳಿತು ಮೊಬೈಲ್​​ನಲ್ಲಿ ನೋಡಬಹುದು. ರೊಮ್ಯಾಂಟಿಕ್​, ಕಾಮಿಡಿ, ಕ್ರೈಮ್​​ ಥ್ರಿಲ್ಲರ್​​​ನಿಂದ ಹಿಡಿದು ಹಲವು ಜಾನರ್​​ಗಳ ಹಲವು ಸಿನಿಮಾಗಳೀಗ ಒಟಿಟಿಯಲ್ಲಿ ಲಭ್ಯವಿದೆ. ಯಾವುವು ಎಂಬುದನ್ನು ನೋಡೋಣ ಬನ್ನಿ.

ರಾನಿ (ಕನ್ನಡ ಝೀ5): ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಅಭಿನಯದಿಂದ ಕನ್ನಡಿಗರ ಮನ ಗೆದ್ದಿರುವ ನಟ‌ ಕಿರಣ್ ರಾಜ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ರಾನಿ' ಇಂದು, ಜನವರಿ 9ರಂದು ಕನ್ನಡ ಝೀ5 ಪ್ರವೇಶಿಸಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಗ್ಯಾಂಗ್​​​ಸ್ಟರ್ ಕಥೆಯಲ್ಲಿ ಸಮೀಕ್ಷ, ಅಪೂರ್ವ, ರಾಧ್ಯಾ ನಾಯಕಿಯರ ಜೊತೆಗೆ ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್, ಮಂಡ್ಯ ರಮೇಶ್ ಹೀಗೆ ಹಲವರು ಕಾಣಿಸಿಕೊಂಡಿದ್ದಾರೆ. 2024ರ ಕೊನೆಗೆ ಈ ಸಿನಿಮಾ ತೆರೆಕಂಡಿತ್ತು.

ಅಖಂಡ 2: ತಾಂಡವಂ (ನೆಟ್‌ಫ್ಲಿಕ್ಸ್): ನಂದಮೂರಿ ಬಾಲಕೃಷ್ಣ, ಸಂಯುಕ್ತಾ ಮೆನನ್, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ ಅಭಿನಯದ ಅಖಂಡ 2 ಇಂದು, ಜನವರಿ 9ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಪ್ರಾರಂಭಿಸಿದೆ. ತೆಲುಗಿನ ಫ್ಯಾಂಟಸಿ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಬೋಯಪಾಟಿ ಶ್ರೀನು ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಇದು 2021ರ ಅಖಂಡ ಸಿನಿಮಾದ ಸೀಕ್ವೆಲ್​ ಆಗಿದೆ.

ದೇ ದೇ ಪ್ಯಾರ್ ದೇ 2

ಸ್ಟ್ರೀಮಿಂಗ್: ನೆಟ್‌ಫ್ಲಿಕ್ಸ್

ಬಿಡುಗಡೆ ದಿನಾಂಕ: ಜನವರಿ 9

ಪಾತ್ರವರ್ಗ: ಅಜಯ್ ದೇವಗನ್, ಆರ್ ಮಾಧವನ್, ರಾಕುಲ್ ಪ್ರೀತ್ ಸಿಂಗ್, ಗೌತಮಿ ಕಪೂರ್.

ಹನಿಮೂನ್ ಸೇ ಹತ್ಯಾ

ಸ್ಟ್ರೀಮಿಂಗ್: ಝೀ5

ಬಿಡುಗಡೆ ದಿನಾಂಕ: ಜನವರಿ 9

ಪಾತ್ರವರ್ಗ: ಅನುರೇಖಾ ಭಗತ್, ಸುಶ್ಮಿತಾ.

ಮಾಸ್ಕ್

ಸ್ಟ್ರೀಮಿಂಗ್: ಝೀ5

ಬಿಡುಗಡೆ ದಿನಾಂಕ: ಜನವರಿ 9

ಪಾತ್ರವರ್ಗ: ಕವಿನ್, ಆಂಡ್ರಿಯಾ ಜೆರೆಮಿಯಾ, ಅರ್ಚನಾ ಚಾಂಧೋಕೆ, ಚಾರ್ಲೆ, ನೆಲ್ಸನ್ ದಿಲೀಪ್‌ಕುಮಾರ್.

ದಿ ಪಿಟ್ ಸೀಸನ್ 2

ಸ್ಟ್ರೀಮಿಂಗ್: ಹೆಚ್​ಬಿಒ ಮ್ಯಾಕ್ಸ್

ಸ್ಟ್ರೀಮಿಂಗ್: ಜನವರಿ 9

ಪಾತ್ರವರ್ಗ: ನೋಹ್ ವೈಲ್, ಕ್ಯಾಥರೀನ್ ಲಾನಾಸಾ, ಶಾನ್ ಹ್ಯಾಟೋಸಿ, ಪ್ಯಾಟ್ರಿಕ್ ಬಾಲ್, ಸೆಪಿಡೆಹ್ ಮೋಫಿ, ಲಾಟಿಟಿಯಾ ಹೊಲ್ಲಾರ್ಡ್

ದಿ ನೈಟ್ ಮ್ಯಾನೇಜರ್ ಸೀಸನ್ 2

ಸ್ಟ್ರೀಮಿಂಗ್: ಅಮೆಜಾನ್ ಪ್ರೈಮ್ ವಿಡಿಯೋ

ಬಿಡುಗಡೆ ದಿನಾಂಕ: ಜನವರಿ 11

ಪಾತ್ರವರ್ಗ: ಟಾಮ್ ಹಿಡಲ್‌ಸ್ಟನ್, ಒಲಿವಿಯಾ ಕೋಲ್ಮನ್, ಅಲಿಸ್ಟೇರ್ ಪೆಟ್ರಿ, ಮೈಕೆಲ್ ನಾರ್ಡೋನ್

ಇವುಗಳನ್ನೂ ಓದಿ: