ETV Bharat / entertainment

'ಟಾಕ್ಸಿಕ್'ಗೂ ಮುನ್ನ ಯಶ್​ ಗಡ್ಡಕ್ಕೆ ಕತ್ತರಿ ಹಾಕಿಸಿದ ಸಿನಿಮಾ ಯಾವುದು? ಕೆಜಿಎಫ್‌ 2 ಹಿನ್ನೆಲೆ ಸ್ಥಗಿತ!

'ಟಾಕ್ಸಿಕ್'ನ 'Ticket' ಪಾತ್ರಕ್ಕಾಗಿ ನಾಯಕ ಯಶ್​ ಕ್ಲೀನ್​ ಶೇವ್​ ಮಾಡಿದ್ದು, ಸ್ಟೈಲ್​ ಮೇಕಿಂಗ್​ ವಿಡಿಯೋ ಸಾಕಷ್ಟು ಸದ್ದು ಮಾಡಿದೆ. 2018ರ ನಂತರ ರಾಕಿಂಗ್​ ಸ್ಟಾರ್​​​ ಇದೇ ಮೊದಲ ಬಾರಿಗೆ ಕ್ಲೀನ್​ ಶೇವ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

Yash Toxic ticket Look
ಯಶ್ 'ಟಾಕ್ಸಿಕ್' ಟಿಕೆಟ್ ಲುಕ್ (Photo: Film Poster, Film Team)
author img

By ETV Bharat Entertainment Team

Published : February 25, 2026 at 5:40 PM IST

3 Min Read
Choose ETV Bharat

ಸೂಪರ್​ ಸ್ಟಾರ್​ ಆಗಿ ಸದಾ ಕಾಲಕ್ಕೂ ಪ್ರೇಕ್ಷಕರ ಮನಗೆಲ್ಲೋದು ಸುಲಭದ ಮಾತಲ್ಲ. ಅಮೋಘ ಅಭಿನಯದ ಜೊತೆಗೆ ತೆರೆಮೇಲೆ ಆಕರ್ಷಕವಾಗಿ ಕಾಣಿಸಿಕೊಳ್ಳುವಲ್ಲಿ ಕಲಾವಿದರ ತೆರೆಮರೆಯ ಪರಿಶ್ರಮ ದೃಷ್ಟಿಗೆ ನಿಲುಕದ್ದು! ಪಾತ್ರಕ್ಕಾಗಿ ದೇಹದಂಡಿಸುವುದು, ತೂಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು, ಫಿಟ್ನೆಸ್​​ ಕಾಪಾಡಿಕೊಳ್ಳುವುದು, ಸ್ಟೈಲ್​ ಮೈಂಟೈನ್​ ಮಾಡೋದು ತಾರೆಯರ ವೃತ್ತಿಜೀವನದ ಬಹುಮುಖ್ಯ ವಿಚಾರ. ಇದರ ಜೊತೆಗೆ, ತಮ್ಮ ಬಿಯರ್ಡ್, ಹೇರ್ ಸ್ಟೈಲ್​​ನಿಂದಲೂ ಟ್ರೆಂಡ್ ಕ್ರಿಯೇಟ್ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಇದೀಗ ರಾಕಿಂಗ್ ಸ್ಟಾರ್ ಯಶ್ ಸಾರಥ್ಯದ 'ಟಾಕ್ಸಿಕ್' ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಮೋಶನಲ್​ ಕಂಟೆಂಟ್​ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಕೆಜಿಎಫ್​ ಸ್ಟಾರ್ 2 ಶೇಡ್​​​ನಲ್ಲಿ ಕಾಣಿಸಿಕೊಳ್ಳುವುದು ಗೊತ್ತಿರುವ ವಿಚಾರವೇ. ಈ ಚಿತ್ರಕ್ಕಾಗಿ ಯಶ್​​ ಹಲವು ವರ್ಷಗಳಿಂದ ಬಿಟ್ಟಿದ್ದ ಗಡ್ಡಕ್ಕೆ ಕತ್ತರಿ ಹಾಕಿದ್ದು, ಇತ್ತೀಚೆಗೆ ಸ್ಟೈಲ್​ ಮೇಕಿಂಗ್​​ ವಿಡಿಯೋವನ್ನು ಸ್ವತಃ ಟಾಕ್ಸಿಕ್ ಚಿತ್ರತಂಡ ರಿವೀಲ್ ಮಾಡಿತ್ತು. ಆದ್ರೆ ಯಶ್ ಟಾಕ್ಸಿಕ್ ಸಿ‌ನಿಮಾಗೂ ಮುನ್ನ, ಕೆಜಿಎಫ್​ ಬಳಿಕ ತಮ್ಮ ಹೆವಿ ಬಿಯರ್ಡ್​​ಗೆ ಕತ್ತರಿ ಹಾಕಿಸಿದ್ರು. ಅದು ಯಾವ ಸಿನಿಮಾ? ಸೆಟ್ಟೇರಿತಾ? ರಿಲೀಸ್​ ಆಯ್ತಾ? ಇಲ್ಲಿದೆ ಸ್ಟೋರಿ.

ಅಣ್ತಮ್ಮಾ, ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಾಕಲ್ಲ. ಇಲ್ಲಿ ನಾವೇ ಹೀರೋಗಳಾಗಬೇಕು ಎಂಬ ಡೈಲಾಗ್​​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಯಶ್, ಕೆಜಿಎಫ್ ಚಾಪ್ಟರ್ 1 ಸಿ‌ನಿಮಾ ಮೂಲಕ ಭರ್ಜರಿ ಯಶಸ್ಸು ಕಂಡರು. ನಿರೀಕ್ಷೆಗೂ ಮೀರಿದ ಸಕ್ಸಸ್ ರಾಕಿಂಗ್​​​ ಸ್ಟಾರ್​ನನ್ನು ನ್ಯಾಷನಲ್​​ ಲೆವೆಲ್​ನಲ್ಲಿ ಕೆಜಿಎಫ್ ಸ್ಟಾರ್​​ನನ್ನಾಗಿ ಮಾಡಿತು​​. ಸಿನಿಪ್ರಿಯರು ಮಾತ್ರವಲ್ಲದೇ ಚಿತ್ರರಂಗದ ಗಣ್ಯರೂ ಹಾಡಿ ಕೊಂಡಾಡಿದರು. ಈ ಸಕ್ಸಸ್ ಮಧ್ಯೆಯೇ ಯಶ್ ಡ್ರೀಮ್​​ ಪ್ರಾಜೆಕ್ಟ್​​ 'ಕಿರಾತಕ 2' ಶುರುವಾಗಿತ್ತು.

ಈ ಚಿತ್ರಕ್ಕೆ 'ಮೈ ನೇಮ್ ಈಸ್ ಕಿರಾತಕ' ಎಂಬ ಟೈಟಲ್ ಕೂಡಾ ಫಿಕ್ಸ್ ಮಾಡಲಾಗಿತ್ತು. ಮುಹೂರ್ತ ಆಗಿರಲಿಲ್ಲ ಅನ್ನೋದು ಬಿಟ್ಟರೆ, ಎಲ್ಲವೂ ಸಿದ್ಧವಾಗಿತ್ತು. ಅನಿಲ್‌ ಕುಮಾರ್ ನಿರ್ದೇಶಕರಾಗಿ, ಜಯಣ್ಣ ನಿರ್ಮಾಪಕರಾಗಿ ಸಿದ್ಧತೆಗಳು ನಡೆದಿತ್ತು. ಯಶ್‌ ಇಷ್ಟಪಟ್ಟು ಬರೆಸಿದ್ದ ಕಥೆ ಅದು.

Yash and team
ಯಶ್​ ಮತ್ತು ತಂಡ (Photo: ETV Bharat)

ಆದ್ರೆ ಯಾವಾಗ ಕೆಜಿಎಫ್‌ ಬ್ಲಾಕ್​​ಬಸ್ಟರ್ ಆಯ್ತೋ.. ಕೆಜಿಎಫ್‌ 2 ಕೆಲಸಗಳು ಆ ತಕ್ಷಣವೇ ಶುರುವಾಯ್ತು. ಹೀಗಾಗಿ, ಕಿರಾತಕ 2 ಮುಂದೆ ಹೋಯ್ತು. ಯಶ್ ಕೆಜಿಎಫ್ ಚಾಪ್ಟರ್ 2 ಮತ್ತಷ್ಟು ದೊಡ್ಡ ಮಟ್ಟದ ಹೆಸರು ತಂದು ಕೊಟ್ಟ ಹಿನ್ನೆಲೆ ಈ ಕಿರಾತಕ 2 ಸಿನಿಮಾ ಕ್ಯಾನ್ಸಲ್​ ಆಯ್ತು. ನಿರ್ಮಾಪಕ ಜಯಣ್ಣ ಅವರಿಗೆ, ಚಿತ್ರಕ್ಕೆ ಖರ್ಚು ಮಾಡಿದ್ದ ಹಣವನ್ನು ಯಶ್ ವಾಪಸ್‌ ಮಾಡಿದ್ದರು ಅನ್ನೋದು ಯಶ್ ಆಪ್ತ ಬಳಗದ ಮಾತು. ಆ ಕಿರಾತಕ 2 ಚಿತ್ರಕ್ಕೆ ಯಶ್ ಗಡ್ಡ ತೆಗೆಸಿ, ಮೊದಲಿನ ಸ್ಟೈಲ್‌ಗೆ ವಾಪಸ್‌ ಆಗಿದ್ದ ಹೊತ್ತಲ್ಲಿ ಕೆಜಿಎಫ್ ಚಾಪ್ಟರ್ 2 ಶುರುವಾಯ್ತು. ಕೆಜಿಎಫ್​ 1ರಂತೆ ಮತ್ತದೇ ಗಡ್ಡವನ್ನು ಸ್ಟೈಲಿಷ್​​ ಆಗಿ ಬೆಳಸಿಕೊಂಡರು. ಟ್ರೆಂಡ್ ಸೃಷ್ಟಿಸಿ, ಜಾಹೀರಾತನ್ನೂ ಕೊಟ್ರು.

ಇದನ್ನೂ ಓದಿ: 'ಪ್ರೀತಿ, ವಾತ್ಸಲ್ಯದಿಂದ ತುಂಬಿರುವ ಈ ನಿಜ ಜೀವನದ ದೈವಿಕ ಕಥೆಯು ಸಿನಿಮಾವನ್ನು ಮೀರಿಸಲಿದೆ': ವಿರೋಶ್​ಗೆ ಪಿಎಂ ಆಶೀರ್ವಾದ

ಇದೀಗ ಬಿಡುಗಡೆಗೆ ಸಜ್ಜಾಗಿರುವ ಟಾಕ್ಸಿಕ್‌ನಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ ಮಗನ ಪಾತ್ರ. ಯಶ್ ಅವರ ಹೆವಿ ಬಿಯರ್ಡ್​ ಸ್ಟೈಲ್‌ ಜೊತೆಗೆ ಕ್ಲೀನ್​ ಶೇವ್​​ ಮಾಡಿಕೊಂಡಿರುವ ಸಖತ್ ಯಂಗ್ ಲುಕ್​​ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ಈ ಯಂಗ್​ ಲುಕ್​​ ರೋಲ್​​ನ ಹೆಸರು ಟಿಕೆಟ್. ಹೈದರಾಬಾದ್‌ನಲ್ಲಿರುವ ಜನಪ್ರಿಯ ಹೇರ್‌ಸ್ಟೈಲಿಸ್ಟ್ ವಿಜಯಕಾಂತ್‌ ಅವರು ಯಶ್‌ ಅವರ ಗಡ್ಡಕ್ಕೆ ಕತ್ತರಿ ಹಾಕಿ ಸಖತ್​ ಯಂಗ್​ ಆ್ಯಂಡ್​ ಎನರ್ಜಿಟಿಕ್​​ ಲುಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಐಟಿ ಕೆಲಸಕ್ಕೆ ಗುಡ್ ಬೈ, ಸಿನಿಮಾದಲ್ಲಿ ಸಕ್ಸಸ್; ಶಿವಣ್ಣ, ಧನ್ವೀರ್, ರವಿಚಂದ್ರನ್​ ಪುತ್ರನೊಂದಿಗೆ ನಟನೆ: 'ಹಯಗ್ರೀವ' ನಟಿ ಸಂಜನಾ ಆನಂದ್ ಸಂದರ್ಶನ

ಗೀತು ಮೋಹನ್​ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಯಶ್​ ಅವರು ರಾಯ ಮತ್ತು ಟಿಕೆಟ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಮೆಲಿಸಾ ಪಾತ್ರದಲ್ಲಿ ಕಾಂತಾರ ನಟಿ ರುಕ್ಮಿಣಿ ವಸಂತ್, ಗಂಗಾ ಪಾತ್ರದಲ್ಲಿ ಸೌತ್ ಲೇಡಿ ಸೂಪರ್​ ಸ್ಟಾರ್ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ ಜನಪ್ರಿಯ ನಟಿ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ನಟಿಸಿದ್ದಾರೆ. ನಾಯಕ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ನಿರ್ಮಾಣಗೊಂಡ ಈ ಬಹುನಿರೀಕ್ಷಿತ ಚಿತ್ರ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್​ ಸರಣಿ ಸಿನಿಮಾಗಳ ಮೂಲಕ ಭಾರತದಾದ್ಯಂತ ಸದ್ದು ಮಾಡಿರುವ ಯಶ್​ ಅವರ ಈ ಬಹುನಿರೀಕ್ಷಿತ ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.