ETV Bharat / entertainment

ಟಾಕ್ಸಿಕ್​ನಲ್ಲಿ 'ರಾಯ​'ನಾದ ಯಶ್​: ಟೀಸರ್ ಅಬ್ಬರ ಜೋರು, ಅಭಿಮಾನಿಗಳಿಗೆ ಹಬ್ಬದೂಟ

ರಾಕಿಂಗ್​ ಸ್ಟಾರ್​ ಯಶ್​ ಅವರ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಚಿತ್ರತಂಡ ಟೀಸರ್​ ಗ್ಲಿಂಪ್ಸ್​ ಮೂಲಕ ಸಿನಿಮಾದಲ್ಲಿ ಅವರ ಪಾತ್ರವನ್ನು ರಿವೀಲ್​ ಮಾಡಿದೆ.

Toxic movie
ಟೀಸರ್​ ಸ್ಕ್ರೀನ್​ಶಾಟ್​ (Teaser Screen Shot)
author img

By ETV Bharat Karnataka Team

Published : January 8, 2026 at 11:11 AM IST

2 Min Read
Choose ETV Bharat

ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೈ ವೋಲ್ಟೇಜ್ ಚಿತ್ರ. ಇದು ಪಾನ್ ಇಂಡಿಯಾ ಅಲ್ಲದೆ ಪ್ಯಾನ್ ವರ್ಲ್ಡ್‌ ಸಿನಿಮಾ. ಯಶ್ ಬರ್ತ್ ಡೇಗೆ ಚಿತ್ರತಂಡ ಇಂದು ಟೀಸರ್ ರಿಲೀಸ್​ ಮಾಡಿದೆ. ಹಾಲಿವುಡ್​ ಲೆವೆಲ್​ ಅಲ್ಲಿರುವ ಟೀಸರ್ ಗ್ಲಿಂಪ್ಸ್ ನಿಜಕ್ಕೂ ಅಭಿಮಾನಿಗಳಿಗೆ ಹಬ್ಬದೂಟ. ಈ ಮೂಲಕ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಯಶ್​ ಅವರ ಅಭಿಮಾನಿಗಳಿಗೆ ಸೂಪರ್​ ಗಿಫ್ಟ್​ ಸಿಕ್ಕಂತಾಗಿದೆ.

ಯಶ್ ಅವರ ಬರ್ತ್​ಡೇ ದಿನವೇ ಟಾಕ್ಸಿಕ್​ ಚಿತ್ರದಲ್ಲಿ ಯಶ್​ ಅವರ ಪಾತ್ರವನ್ನು ಚಿತ್ರತಂಡ ಅನಾವರಣಗೊಳಿಸಿದೆ. ಈ ಸಿನಿಮಾದಲ್ಲಿ ಯಶ್​ ಅವರು ರಾಯ ಆಗಿ ಮಿಂಚಿದ್ದಾರೆ. ಟೀಸರ್​ ಹಾಲಿವುಡ್​ ಲೆವೆಲ್​ನಲ್ಲಿದ್ದು, ಟೀಸರ್​ನಲ್ಲಿ ಯಶ್​ ಅವರ ಟಾಕ್ಸಿಕ್​ ಕ್ಯಾರೆಕ್ಟರ್​ ಅನಾವರಣಗೊಂಡಿದೆ. ಚಿತ್ರದ ಮೇಕಿಂಗ್​ ಹಾಗೂ ಯಶ್​ ಅವರ ಲುಕ್​ಗೆ ಫ್ಯಾನ್ಸ್​ ಉಧೋ ಎಂದಿದ್ದಾರೆ. ಸಿನಿಮಾ ಹಾಲಿವುಡ್ ಗ್ಯಾಂಗ್ ಸ್ಟಾರ್ ಕಥೆಯನ್ನು ಒಳಗೊಂಡಿದೆ ಎನ್ನುವುದು ಈ ಗ್ಲಿಂಪ್ಸ್​ನಲ್ಲಿ ಗೊತ್ತಾಗುತ್ತಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಹಳೇ ಕಾಲದ ಒಬ್ಬ ಕುಡುಕ ಕಾರು ಓಡಿಸಿಕೊಂಡು ಬರುವ, ಇಂಗ್ಲಿಷ್ ಸಿನಿಮಾಗಳ ಶೈಲಿಯ ರೊಮ್ಯಾನ್ಸ್ ಮಾಡುವ ಜೊತೆಗೆ ಎದುರಾಳಿ ಗ್ಯಾಂಗ್​ಗಳನ್ನು ಮಿಷನ್ ಗನ್​ನಿಂದ ಸುಡುವ ದೃಶ್ಯದೊಂದಿಗೆ ಯಶ್ ಎಂಟ್ರಿ ನಿಜಕ್ಕೂ ಅವರ ಅಭಿಮಾನಿಗಳು ಅಲ್ಲದೆ ಇಡೀ ಭಾರತೀಯ ಚಿತ್ರರಂಗ ಮಾತನಾಡುವಂತಿದೆ‌. ಸಾಮಾನ್ಯವಾಗಿ ಯಶ್ ಸಿನಿಮಾಗಳಲ್ಲಿ ಡೈಲಾಗ್​ಗಳು ತುಂಬಾನೇ ಪಂಚಿಂಗ್ ಆಗಿ ಇರುತ್ತೆ. ಅದೇ ಇಲ್ಲೂ ಕೂಡ ಹಾಲಿವುಡ್ ಶೈಲಿಯ ಮಿಷನ್ ಗನ್ ಹಿಡಿದು ಎದುರಾಳಿ ಗ್ಯಾಂಗ್ ಸ್ಟಾರ್​ಗಳು ಶೂಟ್ ಮಾಡಿದ ಮೇಲೆ ಯಶ್ ಅವರ ಡ್ಯಾಡಿಸ್ ಹೋಮ್ ಎಂಬ ಡೈಲಾಗ್ ಸಖತ್ ಕಿಕ್ ಕೊಡುತ್ತೆ.

Toxic movie poster
ಟಾಕ್ಸಿಕ್​ ಚಿತ್ರದ ಪೋಸ್ಟರ್​ (Toxic movie)

ಇನ್ನು ಯಶ್‌ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಬಹು ನಿರೀಕ್ಷೆಯ ಟಾಕ್ಸಿಕ್ ಚಿತ್ರ ಇದೇ ಮಾರ್ಚ್‌ ಬಿಡುಗಡೆ ಆಗಲಿದ್ದು, ಈಗಾಗಲೇ ಈ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳ ಪೋಸ್ಟರ್ ಅನ್ನ ಚಿತ್ರತಂಡ ರಿವೀಲ್ ಮಾಡುತ್ತಾ ಯಶ್ ಹುಟ್ಟು ಹಬ್ಬಕ್ಕೆ ಕಂಪ್ಲೀಟ್ ಥ್ರಿಲ್ಲರ್ ನಿಂದ ಕೂಡಿರುವ ಟೀಸರ್ ನ್ನ ಅನಾವರಣ ಮಾಡಲಾಗಿದೆ.

ಈ ಚಿತ್ರವನ್ನು ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡುತ್ತಿದ್ದು ಈ ಚಿತ್ರದ ಕಥೆಯನ್ನ ಯಶ್ ಕೂಡ ಭಾಗಿಯಾಗಿದ್ಧಾರೆ‌. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣವನ್ನು ಮಾಡಿದರೆ, ಕೆಜಿಎಫ್‌ನಲ್ಲಿ ಯಶ್ ಅವರೊಂದಿಗೆ ಕೆಲಸ ಮಾಡಿದ್ದ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಲಾರ್‌, ಕೆಜಿಎಫ್‌ ಖ್ಯಾತಿಯ ಉಜ್ವಲ್ ಕುಲಕರ್ಣಿ ಸಂಕಲನವನ್ನು ಮಾಡುತ್ತಿದ್ದಾರೆ. ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಟಿಪಿ ಅಬಿದ್ ವಹಿಸಿಕೊಂಡಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್‌ನ ಮಹತ್ವದ ಸಾಹಸ ಸನ್ನಿವೇಶಗಳನ್ನು ನಿರ್ದೇಶನ ಮಾಡಿದ್ದಾರೆ.

ಹರ್ಷ, ಇಮ್ರಾನ್‌ ಸರ್ದಾರಿಯಾ, ಗಣೇಶ್‌ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದು, ಮೋಹನ್‌ ಬಿ ಕೆರೆ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸುತ್ತಿದ್ದಾರೆ.

ಟಾಕ್ಸಿಕ್ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಡಬ್ ಮಾಡಲಾಗುತ್ತಿದೆ. ಸದ್ಯ ಯಶ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಗಿರುವ ಟಾಕ್ಸಿಕ್ ಟೀಸರ್ ಗ್ಲಿಂಪ್ಸ್ ಅವರ ಅಭಿಮಾನಿಗಳಿಗೆ ಹುಚ್ಚೇದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ: ಯಶ್​ ಬರ್ತ್​ಡೇ: ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೊಟ್ಟ ಸಂದೇಶ ಏನು?