ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು: ಮೆಟ್ರೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ ಪೋಸ್ಟರ್
ಇದೇ ಮೊದಲ ಬಾರಿಗೆ, ಬೆಂಗಳೂರು ಮೆಟ್ರೋ ಬರ್ತ್ಡೇ ಟ್ರಿಬ್ಯೂಟ್ ಆಗಿ ಪರಿವರ್ತನೆಯಾಗಿದೆ.

By ETV Bharat Entertainment Team
Published : January 6, 2026 at 5:34 PM IST
ಮೆಚ್ಚಿನ ತಾರೆಯರ ಜನ್ಮದಿನ ಎಂದಾಗ ಫ್ಯಾನ್ಸ್ ಬೃಹತ್ ಕಟೌಟ್ ಹಾಕಿ, ಅದಕ್ಕೆ ಹಾಲಿನ ಅಭಿಷೇಕ ಮಾಡೋದು ಸಹಜ. ಇದೀಗ ಯಶ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲೇ ಇತಿಹಾಸ ಬರೆದಿದ್ದಾರೆ.
ಹೌದು, ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟಿದ ದಿನ. ಹೀಗಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸುತ್ತಿದೆ. ಯಶ್ ಅವರನ್ನು ಹತ್ತಿರದಿಂದ ನೋಡಿರುವ ಅಭಿಮಾನಿ ಸಂಘಟನೆ ಮೆಟ್ರೋಗೆ ಜಾಹೀರಾತು ನೀಡಿ, ಯಶ್ ಬರ್ತ್ಡೇಗೆ ವಿಶೇಷವಾಗಿ ಶುಭ ಕೋರಿದ್ದಾರೆ.
For the first time ever, Bengaluru Metro becomes a birthday tribute! 🔥
— KVN Productions (@KvnProductions) January 6, 2026
Fans take over the metro ahead of #RockingStarYash Birthday. ❤️🔥 pic.twitter.com/SulmMBm9WR
ಸದ್ಯ ಕಾಡುಗೋಡಿ ಟು ಚಲಘಟ್ಟ ಮೆಟ್ರೊ ಟ್ರೈನ್ನಲ್ಲಿ ಯಶ್ ಭಾವಚಿತ್ರ ಒಳಗೊಂಡಿರುವ ಪೋಸ್ಟರ್ ಹಾಕಲಾಗಿದೆ. ಇಂದಿನಿಂದ ಯಶ್ ಬರ್ತ್ ಡೇ ದಿನವರೆಗೂ ಈ ಪೋಸ್ಟರ್ಸ್ ಕಾಣಿಸಿಕೊಳ್ಳಲಿದೆ. ಈ ಮೆಟ್ರೋ ರೈಲಿನಲ್ಲಿ ಒಂದು ದಿನಕ್ಕೆ ಸರಿಸುಮಾರು 6 ಲಕ್ಷ ಜನ ಓಡಾಡುತ್ತಾರೆ.
Introducing Rukmini Vasanth as MELLISA in - A Toxic Fairy Tale For Grown-Ups@rukminitweets#TOXIC #TOXIConMarch19th #TOXICTheMovie @TheNameIsYash#Nayanthara@humasqureshi @advani_kiara #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere… pic.twitter.com/AaxInLYtHa
— KVN Productions (@KvnProductions) January 6, 2026
ಯಶ್ ಆಪ್ತರೊಬ್ಬರು ಹೇಳುವ ಹಾಗೇ, ಮೂರು ದಿನದ ಜಾಹೀರಾತಿಗೆ 10 ಲಕ್ಷ ರೂಪಾಯಿಂದ 15 ಲಕ್ಷ ರೂಪಾಯಿ ಕೊಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನೊಬ್ಬನ ಫೋಟೋ ಮೆಟ್ರೋದಲ್ಲಿ ರಾರಾಜಿಸುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ರು.
ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಬಹು ನಿರೀಕ್ಷೆಯ ಟಾಕ್ಸಿಕ್ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದೇ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ಈಗಾಗಲೇ ಈ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಪಾತ್ರಗಳ ಪೋಸ್ಟರ್ ಅನಾವರಣಗೊಂಡಿದೆ. 4 ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಟಾಕ್ಸಿಕ್ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ.
BOSS birthday wishes light up a Metro train 🔥🔥 #ToxicTheMovie @TheNameIsYash#Yash #ToxicOnMARCH19th pic.twitter.com/HYHX0RzG2A
— Yash Trends ™ (@YashTrends) January 6, 2026
ಯಶ್ ಜನವರಿ 8ರಂದು 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದೇ ದಿನ ಟಾಕ್ಸಿಕ್ ಸಿನಿಮಾ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಸಿಗಲಿದೆ. ಈ ಹಿಂದೆ ಒಂದು ಟೀಸರ್ ರಿಲೀಸ್ ಆಗಿತ್ತು. ಈ ಬಾರಿ ಅದಕ್ಕಿಂತಲೂ ಭಿನ್ನವಾದದ್ದನ್ನು ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಟ್ರೇಲರ್ ಅಥವಾ ಮತ್ತೊಂದು ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡುವ ಸಾಧ್ಯತೆ ಇದೆ.
2025ರ ಡಿಸೆಂಬರ್ 21ರಂದು ಬಾಲಿವುಡ್ ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಟಾಕ್ಸಿಕ್ ಪ್ರಚಾರ ಪ್ರಾರಂಭಿಸಿದೆ. ಇಂದು ನಟಿ ರುಕ್ಮಿಣಿ ವಸಂತ್ ಪಾತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಮೆಲಿಸಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್, ಗಂಗಾ ಪಾತ್ರದಲ್ಲಿ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್ ಜನಪ್ರಿಯ ನಟಿ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್ನ ನಟಿ - ಗಾಯಕಿ ತಾರಾ ಸುತಾರಿಯಾ ನಟಿಸಿದ್ದಾರೆ.
#KiaraAdvani as NADIA #Nayanthara as GANGA #HumaQureshi as ELIZABETH #TaraSutaria as REBECCA #RukminiVasanth as MELLISA#ToxicTheMovie @TheNameIsYash #ToxicOnMARCH19th #Yash pic.twitter.com/kh2ypXP9yv
— Yash Trends ™ (@YashTrends) January 6, 2026
ಆರಂಭದಲ್ಲಿ ಈ ಚಿತ್ರವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿ, ಮಿಕ್ಕ ಮಾಹಿತಿಗಳನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕುರಿತ ಹೆಚ್ಚಿನ ಮಾಹಿತಿಗಳು ಗೊತ್ತಾಗಿವೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣವನ್ನು ಮಾಡಿದರೆ, ಕೆಜಿಎಫ್‌ನಲ್ಲಿ ಯಶ್ ಅವರೊಂದಿಗೆ ಕೆಲಸ ಮಾಡಿದ್ದ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಲಾರ್, ಕೆಜಿಎಫ್ ಖ್ಯಾತಿಯ ಉಜ್ವಲ್ ಕುಲಕರ್ಣಿ ಸಂಕಲನ ನಿರ್ವಹಿಸುತ್ತಿದ್ದಾರೆ. ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಟಿಪಿ ಅಬಿದ್ ವಹಿಸಿಕೊಂಡಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್‌ನ ಮಹತ್ವದ ಸಾಹಸ ಸನ್ನಿವೇಶಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್ ಸ್ಟಾರ್ ರಿಯಲ್ ಸ್ಟೋರಿ
ಹರ್ಷ, ಇಮ್ರಾನ್ ಸರ್ದಾರಿಯಾ, ಗಣೇಶ್ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡಿದ್ದು, ಮೋಹನ್ ಬಿ ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಕಾಂತಾರ ಬಳಿಕ ಯಶ್ ಟಾಕ್ಸಿಕ್ ಅಡ್ಡಕ್ಕೆ ರುಕ್ಮಿಣಿ ವಸಂತ್: ಮೆಲಿಸಾ ಸ್ಟನ್ನಿಂಗ್ ಲುಕ್ಗೆ ಫ್ಯಾನ್ಸ್ ಫಿದಾ
ಟಾಕ್ಸಿಕ್ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಡಬ್ ಮಾಡಲಾಗುತ್ತಿದೆ. ಮಾರ್ಚ್ 19ಕ್ಕೆ ಸಿನಿಮಾ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆ.

