'666 ಆಪರೇಷನ್ ಡ್ರೀಮ್ ಥಿಯೇಟರ್'ಗೆ ಪ್ರಭಾಸ್, ರಿಷಬ್, ನಾನಿ ಮೆಚ್ಚುಗೆ: ಸ್ಪಿರಿಟ್ಗೆ ಎದುರು ನೋಡುತ್ತಿದ್ದೇನೆಂದ ಶಿವಣ್ಣ
ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಮುಖ್ಯಭೂಮಿಕೆಯ '666 ಆಪರೇಷನ್ ಡ್ರೀಮ್ ಥಿಯೇಟರ್' ಟೀಸರ್‌ಗೆ ಸಿನಿಗಣ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿವೆ.

By ETV Bharat Entertainment Team
Published : July 4, 2026 at 4:34 PM IST
|Updated : July 4, 2026 at 4:56 PM IST
'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ' ಅಂತಹ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಹೇಮಂತ್ ಎಂ ರಾವ್, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸಿಕೊಂಡಿದ್ದಾರೆ. ಇದೀಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ '666 ಆಪರೇಷನ್ ಡ್ರೀಮ್ ಥಿಯೇಟರ್' ಸಾಕಷ್ಟು ಗಮನ ಸೆಳೆದಿದ್ದು, ಚಿತ್ರತಂಡ ಶುಕ್ರವಾರ ಸಂಜೆ ಅದ್ಧೂರಿ ಕಾರ್ಯಕ್ರಮದಲ್ಲಿ ತನ್ನ ಟೀಸರ್ ಅನಾವರಣಗೊಳಿಸಿತು.
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್ ತೆರೆಹಂಚಿಕೊಂಡಿರುವ ಸಿನಿಮಾದ ಟೀಸರ್ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ನ್ಯಾಚುರಲ್ ಸ್ಟಾರ್ ನಾನಿ ಅವರಂತಹ ಸ್ಟಾರ್ ನಟರೂ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರು? ಏನಂದ್ರು? ನೋಡೋಣ ಬನ್ನಿ.
#666OperationDreamTheatre teaser looks amazing.https://t.co/zVIPUna0E1@NimmaShivanna anna looks powerful as always, @Dhananjayaka and @priyankaamohan adds a beautiful charm to the teaser.
— Rishab Shetty (@shetty_rishab) July 4, 2026
Heartfelt best wishes to @hemanthrao11 , #CharanRaj, @Vaishak_J_Films , and the entire… pic.twitter.com/hA8mm6TLj2
ರಿಷಬ್ ಶೆಟ್ಟಿ: ಕಾಂತಾರ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ''666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಅದ್ಭುತವಾಗಿ ಕಾಣುತ್ತಿದೆ. ಶಿವಣ್ಣ ಎಂದಿನಂತೆ ಪವರ್ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಮತ್ತು ಪ್ರಿಯಾಂಕಾ ಮೋಹನ್ ಟೀಸರ್‌ಗೆ ಸುಂದರ ಚಾರ್ಮ್ ಸೇರಿಸಿದ್ದಾರೆ. ಹೇಮಂತ್ ರಾವ್, ಚರಣ್ ರಾಜ್, ವೈಶಾಕ್ ಸೇರಿ ಇಡೀ ಚಿತ್ರತಂಡಕ್ಕೆ ಹೃದಯಪೂರ್ವಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ಪ್ರಭಾಸ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಟೀಸರ್ ಹಂಚಿಕೊಂಡು, ''666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ಅದ್ಭುತವಾಗಿದೆ. ಪರದೆ ಮೇಲೆ ಎಲ್ಲರೂ ಅದ್ಭುತವಾಗಿ ಕಾಣುತ್ತಿದ್ದಾರೆ. ಶಿವಣ್ಣ, ನಿರ್ದೇಶಕ ಹೇಮಂತ್ ಎಂ.ರಾವ್ ಮತ್ತು ನಿರ್ಮಾಪಕ ಡಾ.ವೈಶಾಕ್ ಜೆ.ಗೌಡ ಅವರಿಗೆ ನನ್ನ ಪ್ರೀತಿ ಇದೆ. ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿರುವ ಶಿವಣ್ಣ, 'ಧನ್ಯವಾದಗಳು ಪ್ರಭಾಸ್. ಸ್ಪಿರಿಟ್ ಸಿನಿಮಾಗೆ ಎದುರು ನೋಡುತ್ತಿದ್ದೇನೆ. ಶುಭ ಹಾರೈಕೆಗಳು' ಎಂದು ಎಂದು ಬರೆದುಕೊಂಡಿದ್ದಾರೆ.
ಚಲನಚಿತ್ರ ನಿರ್ಮಾಣ ಸಂಸ್ಥೆ ವೈಶಾಕ್ ಜೆ.ಫಿಲ್ಮ್ಸ್ ಪ್ರತಿಕ್ರಿಯಿಸಿ, ಇಡೀ ತಂಡ ಈಗ ಎಷ್ಟು ಸಂತೋಷವಾಗಿದೆ ಎಂಬುದನ್ನು ಪದಗಳಲ್ಲಿ ಹೇಳಿದರೆ ಸಾಲದು. ಧನ್ಯವಾದಗಳು ಪ್ರಭಾಸ್ ಸರ್. ನಿಜಕ್ಕೂ ಗೌರವದ ಕ್ಷಣ ಎಂದು ಬರೆದುಕೊಂಡಿದೆ.
Words don’t do justice to how happy the entire team is feeling right now. Thank you #Prabhas sir. Truly Honoured.#666OperationDreamTheatre Teaser Out Nowhttps://t.co/BS6qijKSwI@NimmaShivanna @Dhananjayaka @hemanthrao11 @priyankaamohan @Aditi_Balan @AdvaithaAmbara… pic.twitter.com/Ew9shb24eC
— Vaishak J Films (@Vaishak_J_Films) July 4, 2026
ನಾನಿ: ಸೌತ್ ಸಿನಿಮಾ ಇಂಡಸ್ಟ್ರಿಯ ನ್ಯಾಚುರಲ್ ಸ್ಟಾರ್ ಖ್ಯಾತಿಯ ನಾನಿ ಗುಣಗಾನ ಮಾಡಿ, ಆತ್ಮೀಯ ಶಿವಣ್ಣ 666 ಆಪರೇಷನ್ ಡ್ರೀಮ್ ಥಿಯೇಟರ್ ಪ್ರಪಂಚದ ಪಾತ್ರವರ್ಗವನ್ನು ಮುನ್ನಡೆಸುತ್ತಿದ್ದು, ಟೀಸರ್ ತುಂಬಾ ರೋಮಾಂಚನಕಾರಿಯಾಗಿ ಕಾಣುತ್ತದೆ. ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.
With dearest shivanna @nimmashiva leading the cast the world of 666: Operation Dream Theatre looks very exciting.
— Nani (@NameisNani) July 3, 2026
Here’s the Telugu Teaser..#666OperationDreamTheatre
https://t.co/DVn5j504Fx
Wishing @hemanthrao11 and @priyankaamohan @officialaditibalan and team the best.… pic.twitter.com/z9aCv4ZMNJ
''ನಮ್ಮ 666 ಆಪರೇಷನ್ ಡ್ರೀಮ್ ಥಿಯೇಟರ್ ಟೀಸರ್ ನಿಮಗೆ ಇಷ್ಟವಾಯಿತು ಎಂದು ತಿಳಿದು ನಮಗೆ ತುಂಬಾ ಸಂತೋಷವಾಯಿತು ನಾನಿ ಸರ್. ಸಿನಿಮಾದ ಬಗ್ಗೆ ನಿಮ್ಮ ಪ್ರೀತಿ ಸದಾ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು ಸರ್. ನಿಜಕ್ಕೂ ಗೌರವದ ಕ್ಷಣ!'' ಎಂದು ವೈಶಾಕ್ ಜೆ ಫಿಲ್ಮ್ಸ್ ಪ್ರತಿಕ್ರಿಯಿಸಿದೆ.
We’re so glad you liked our #666OperationDreamTheatre teaser @NameisNani sir. Your love towards cinema is always inspiring.
— Vaishak J Films (@Vaishak_J_Films) July 4, 2026
Thank you, sir. Truly Honoured!
666 Operation Dream Theatre Teaser Out Nowhttps://t.co/BS6qijKSwI@NimmaShivanna @Dhananjayaka @hemanthrao11… pic.twitter.com/5NbqxCcSyX
ಇದನ್ನೂ ಓದಿ: 'ಈ ಕಾಲದಲ್ಲಿ ಏನೂ ಯೋಚನೆ ಮಾಡದೇ ಕಥೆ ಕೇಳಿ ಸಿನಿಮಾ ಮಾಡುವ ಸೂಪರ್ ಸ್ಟಾರ್ ಶಿವಣ್ಣ': ಏಜೆಂಟ್ ಪ್ರಕಾಶ್ ಆಗಿ ಹ್ಯಾಟ್ರಿಕ್ ಹೀರೋ
ಜುಲೈ 3ರ ಸಂಜೆ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಚಿತ್ರದ ಗ್ರ್ಯಾಂಡ್ ಟೀಸರ್ ರಿಲೀಸ್ ಈವೆಂಟ್ ಜರುಗಿತು. ಹೇಮಂತ್ ಎಂ ರಾವ್ ನಿರ್ದೇಶನದ ಸಿನಿಮಾದಲ್ಲಿ ಏಜೆಂಟ್ ಪ್ರಕಾಶ್ ಪಾತ್ರದಲ್ಲಿ ಶಿವಣ್ಣ ಮತ್ತು ಏಜೆಂಟ್ ಶಂಕರ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಪ್ರಿಯಾಂಕಾ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಹಲವರು ತಾರಾಬಳಗದಲ್ಲಿದ್ದಾರೆ. ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ.ವೈಶಾಕ್ ಜೆ ಗೌಡ ನಿರ್ಮಿಸಿದ್ದು, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಿನಿಮಾಗಿದೆ. ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

