ಹಸೆಮಣೆಯೇರಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ: ಸಂಜೆ ಕೊಡವ ಸಂಪ್ರದಾಯದಂತೆ ಮತ್ತೆ ವಿವಾಹ
ಜನಪ್ರಿಯ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

By ETV Bharat Entertainment Team
Published : February 26, 2026 at 12:54 PM IST
ಮೂಲತಃ ಕೊಡಗಿನವರಾದ ಭಾರತೀಯ ಚಿತ್ರರಂಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಂದು ಉದಯಪುರದಲ್ಲಿ ಅದ್ಧೂರಿಯಾಗಿ ಹಸೆಮಣೆಯೇರಿದ್ದಾರೆ. ಬೆಳಗ್ಗೆ 10.10ಕ್ಕೆ ವಿರೋಶ್ ಮದುವೆ ಜರುಗಿದ್ದು, ಅಭಿಮಾನಿಗಳು ಅಭಿನಂದನೆಗಳ ಮಳೆ ಹರಿಸಿದ್ದಾರೆ.
ಈ ಅದ್ಧೂರಿ ವಿವಾಹ ಸಮಾರಂಭವು ಎರಡು ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿದೆ. ಬೆಳಗ್ಗೆ, ವರನ ಕಡೆಯಿಂದ ಹಿಂದೂ ಸಂಪ್ರದಾಯದ (ತೆಲುಗು ಆಚರಣೆ) ಪ್ರಕಾರ ವಿವಾಹ ಜರುಗಿತು. ಸಂಜೆ 4:30ಕ್ಕೆ ವಧುವಿನ ಕುಟುಂಬ ತಮ್ಮ ಕೊಡವ ಸಂಪ್ರದಾಯಗಳ ಪ್ರಕಾರ ಮತ್ತೆ ವಿವಾಹ ಆಚರಣೆಗಳನ್ನು ನಡೆಸಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಈ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದಾರೆ.
My #GeethaGovindham ❤️❤️
— Bunny Vas (@TheBunnyVas) February 26, 2026
Watching you both choose each other forever is beyond special. @TheDeverakonda, your fire and loyalty… @iamRashmika, your warmth and pure heart… together you are magic in its truest form.
May this marriage be filled with unstoppable love, strength,… pic.twitter.com/6A8QQTMUm8
ವಿರೋಶ್ ಜೋಡಿ ಬುಧವಾರ ಹಲ್ದಿ ಮತ್ತು ಸಂಗೀತ ಸಮಾರಂಭವನ್ನು ಆಯೋಜಿಸಿದ್ದರು. 24ರಂದು ಮೆಹೆಂದಿ ಕಾರ್ಯಕ್ರಮ ನೆರವೇರಿದೆ. ಇನ್ನೂ, ವಿವಾಹ ಆರತಕ್ಷತೆ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಉದಯಪುರದಲ್ಲಿ ಮದುವೆ ನಡೆದ ಸ್ಥಳದ ಹೊರಗೆ ಪಾಪರಾಜಿಗಳಿಗೆ (ಮಾಧ್ಯಮ, ಛಾಯಾಗ್ರಾಹಕರು) ವಧು ವರರ ತಂಡ ಸಿಹಿಹಂಚಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
From Vijay 🤍 Rashmika to the forever #Virosh 🫶
— ahavideoin (@ahavideoIN) February 26, 2026
Congratulations on your beautiful beginnings @TheDeverakonda and @iamRashmika 🥰#aha #VijayDevarakonda #RashmikaMandanna pic.twitter.com/EAo3FGvqVp
ರಶ್ಮಿಕಾ ವಿಜಯ್ ಮೊದಲ ಬಾರಿಗೆ ತೆರೆಹಂಚಿಕೊಂಡ ಬ್ಲಾಕ್ಬಸ್ಟರ್ ಗೀತಾ ಗೋವಿಂದಂ ಸಿನಿಮಾ ನಿರ್ಮಾಪಕ ಬನ್ನಿ ವಾಸು ಟ್ವೀಟ್ ಮಾಡಿ, ''ಮೈ ಗೀತಾ ಗೋವಿಂದಮ್, ನೀವಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಶಾಶ್ವತವಾಗಿ ಆಯ್ಕೆ ಮಾಡಿಕೊಳ್ಳುವುದನ್ನು ನೋಡುವುದು ವಿಶೇಷವಾಗಿದೆ. ವಿಜಯ್ ದೇವರಕೊಂಡ ನಿಮ್ಮ ಉತ್ಸಾಹ ಮತ್ತು ನಿಷ್ಠೆ... ರಶ್ಮಿಕಾ ಮಂದಣ್ಣ, ನಿಮ್ಮ ಆತ್ಮೀಯತೆ ಮತ್ತು ಪ್ಯೂರ್ ಹಾರ್ಟ್... ನೀವು ಒಟ್ಟಿಗೆ ನಿಜವಾದ ಮ್ಯಾಜಿಕ್ ತರುತ್ತೀರಿ. ಈ ದಾಂಪತ್ಯವು ಪ್ರೀತಿ, ಶಕ್ತಿ, ನಗು ಮತ್ತು ಕನಸುಗಳಿಂದ ತುಂಬಿರಲಿ. ತುಂಬಾ ಸಂತೋಷವಾಗಿದೆ. ಹೃತ್ಪೂರ್ವಕ ಅಭಿನಂದನೆಗಳು'' ಎಂದು ಶುಭ ಹಾರೈಸಿದ್ದಾರೆ.
2016-17ರಲ್ಲಿ ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾದರು. ಕಿರಿಕ್ ಪಾರ್ಟಿ, ಅಂಜನೀಪುತ್ರ, ಚಮಕ್ ಚಿತ್ರಗಳಲ್ಲಿ ಕಾಣಿಸಿಕೊಂಡ ಕೊಡಗಿನ ಚೆಲುವೆ 2018ರಲ್ಲಿ ಚಲೋ ಚಿತ್ರದ ಮೂಲ ತೆಲುಗು ಚಿತ್ರರಂಗ ಪ್ರವೇಶಿಸಿದರು. ಆ ನಂತರ ಭಾರತದ ಬಹುಭಾಷೆಗಳಲ್ಲಿ, ಸೂಪರ್ ಸ್ಟಾರ್ಗಳೊಂದಿಗೆ ತೆರೆಹಂಚಿಕೊಂಡು ದೊಡ್ಡ ಮಟ್ಟದ ಹೆಸರು ಸಂಪಾದಿಸಿದ್ದಾರೆ. 2018ರಲ್ಲಿ ಗೀತಾ ಗೋವಿಂದಮ್ ಸಿನಿಮಾ ನಟಿಗೆ ತೆಲುಗು ನಾಡಿನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಇದೇ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಮೊದಲ ಬಾರಿ ಭೇಟಿಯಾದ ರಶ್ಮಿಕಾ ವಿಜಯ್ ನಡುವೆ ಪ್ರೀತಿ ಮೂಡಿದೆ ಎಂಬ ವಂದಂತಿ 2018ರಿಂದಲೇ ಆರಂಭವಾಯ್ತು. ಆದ್ರೆ 2026ರ ಫೆಬ್ರವರಿ 22ರವರೆಗೂ ಮೌನ ವಹಿಸಿದ್ದ ಜೋಡಿ, ಭಾನುವಾರ ಸಂಜೆ ತಾವು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ಫೈನಲಿ ಬಹವರ್ಷಗಳ ಪ್ರೀತಿಗಿಂದು ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: 'ಟಾಕ್ಸಿಕ್'ಗೂ ಮುನ್ನ ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿದ ಸಿನಿಮಾ ಯಾವುದು? ಕೆಜಿಎಫ್ 2 ಹಿನ್ನೆಲೆ ಸ್ಥಗಿತ!
ಈ ಪ್ರೇಮಪಕ್ಷಿಗಳು ತಮ್ಮ ಮದುವೆಯನ್ನು "ದಿ ವೆಡ್ಡಿಂಗ್ ಆಫ್ ವಿರೋಶ್" ಹೆಸರಿನಲ್ಲಿ ನಡೆಸಿದ್ದಾರೆ. ಇದು ಅವರ ಅಭಿಮಾನಿ ಬಳಗ ಬಹಳ ಪ್ರೀತಿಯಿಂದ ಕರೆಯುವ ಹೆಸರು. ಆಚರಣೆಗಳ ಫೋಟೋ ವಿಡಿಯೋಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: 'ಪ್ರೀತಿ, ವಾತ್ಸಲ್ಯದಿಂದ ತುಂಬಿರುವ ಈ ನಿಜ ಜೀವನದ ದೈವಿಕ ಕಥೆಯು ಸಿನಿಮಾವನ್ನು ಮೀರಿಸಲಿದೆ': ವಿರೋಶ್ಗೆ ಪಿಎಂ ಆಶೀರ್ವಾದ

