ETV Bharat / entertainment

ಅಬ್ಬಬ್ಬಾ! ನಿನ್ನೆ 5 ಕೋಟಿ ದಾಟಿತು ಪ್ರೇಮದ ಊರಲಿ: 50 ಕೋಟಿಯತ್ತ 2 ಕೋಟಿ ಬಜೆಟ್​ನ ಕನ್ನಡ ಸಿನಿಮಾ

ಗುರುವಾರ 4.56 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದ ಪ್ರೇಮದ ಊರಲಿ ಸಿನಿಮಾ ಶುಕ್ರವಾರ ಬರೊಬ್ಬರಿ 5.30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸದ್ಯ ಬಹುತೇಕರ ಗಮನ ಇಂದು ಮತ್ತು ನಾಳೆಯ ಗಳಿಕೆ ಮೇಲಿದೆ.

'Premada Oorali' Film team
ಪ್ರೇಮದ ಊರಲಿ ಚಿತ್ರತಂಡ (ETV Bharat)
author img

By ETV Bharat Entertainment Team

Published : October 10, 2026 at 11:06 AM IST

3 Min Read
Choose ETV Bharat

ಸಿನಿಮಾವೊಂದರ ಯಶಸ್ಸಿಯಲ್ಲಿ ಒಂದೊಳ್ಳೆ ಕಥೆ ಮತ್ತು ಪ್ರೇಕ್ಷಕರ ಬಾಯ್ಮಾತಿನ ಪ್ರಚಾರ ಪ್ರಮುಖ ಪಾತ್ರ ವಹಿಸುತ್ತವೆ ಅನ್ನೋದನ್ನು ಕನ್ನಡ ಸಿನಿಮಾ 'ಪ್ರೇಮದ ಊರಲಿ' ಮತ್ತೊಮ್ಮೆ ಸಾಬೀತುಪಡಿಸಿದೆ. ಕೇವಲ 10 ಲಕ್ಷ ರೂಪಾಯಿಯೊಂದಿಗೆ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿದ ಕೌಟುಂಬಿಕ, ಪ್ರೇಮಕಥೆ ತನ್ನ 15 ದಿನಗಳಲ್ಲಿ ಒಟ್ಟು 39.05 ಕೋಟಿ ರೂಪಾಯಿ ಸಂಪಾದಿಸಿದೆ. ಈ ಸಿನಿಮಾ ಕೇವಲ 2 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ.

ಪ್ರೇಮದ ಊರಲಿ 15ನೇ ದಿನದ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್​ ಮಾಹಿತಿ ಪ್ರಕಾರ, ಅಕ್ಷಿ ಮೂಲಕ ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮನೋಜ್​ ಕುಮಾರ್​ ನಿರ್ದೇಶನದ ಸಿನಿಮಾ 'ಪ್ರೇಮದ ಊರಲಿ' ಶುಕ್ರವಾರದಂದು ಬರೋಬ್ಬರಿ 5.30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸಹಜವಾಗಿ ವಾರಾಂತ್ಯದಲ್ಲಿ ಸಿನಿಮಾಗಳು ಸದ್ದು ಮಾಡುತ್ತವೆ. ಅಂತಹದರಲ್ಲಿ ಕನ್ನಡ ಸಿನಿಮಾವೊಂದು ವಾರದ ದಿನಗಳಲ್ಲಿಯೇ 4-5 ಕೋಟಿ ರೂಪಾಯಿ ಗಳಿಕೆ ಮಾಡುತ್ತಿರುವುದು ಚಂದನವನದಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಸಿನಿಮಾ ಗುರುವಾರದಂದು 4.56 ಕೋಟಿ ರೂಪಾಯಿ ಗಳಿಸಿತ್ತು. ಪ್ರತಿದಿನ ಏರಿಕೆ ಕಂಡುಬರುತ್ತಲೇ ಇದ್ದು ಇಂದು ಮತ್ತು ನಾಳೆ (ಶನಿವಾರ, ಭಾನುವಾರ) ಮತ್ತಷ್ಟು ಗಳಿಸುವ ನಿರೀಕ್ಷೆಯಿದೆ.

15 ದಿನಗಳ ಒಟ್ಟು ಗಳಿಕೆ: ಅದ್ಧೂರಿ ಸಿನಿಮಾಗಳ ನಡುವೆ ಮೂಡಿಬಂದ ಭಾವನಾತ್ಮಕ ಸಿನಿಮಾ ಸೆಪ್ಟಂಬರ್​ 25ರಂದು ಸಖತ್ ಸಿಂಪಲ್​ ಆಗಿ ಥಿಯೇಟರ್​ಗೆ ಎಂಟ್ರಿ ಕೊಟ್ಟಿತು. ಮೊದಲ ದಿನ ಈ ಸಿನಿಮಾ ಕೇವಲ 60 ಶೋಗಳಲ್ಲಿ 10 ಲಕ್ಷ ರೂಪಾಯಿ ಗಳಿಸಿತ್ತು ಅನ್ನೋದನ್ನು ನೀವು ನಂಬಲೇಬೇಕು! 2ನೇ ದಿನ 27 ಲಕ್ಷ ರೂಪಾಯಿ, 3ನೇ ದಿನ 65 ಲಕ್ಷ ರೂಪಾಯಿ, 4ನೇ ದಿನ 75 ಲಕ್ಷ ರೂಪಾಯಿ ಗಳಿಸಿದ ಚಿತ್ರ ತನ್ನ 5ನೇ ದಿನ ಕೋಟಿಗೆ ತಲುಪಿ ಬರೋಬ್ಬರಿ 1.09 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿತು. ನಂತರದ್ದು ಇತಿಹಾಸ! ಈ ವಾರ ಪ್ರತಿದಿನವೂ ಸರಿ-ಸುಮಾರು 4 ಕೋಟಿ ರೂಪಾಯಿ ಗಳಿಸುತ್ತಾ ಬಂದಿದೆ. ಈ ಮೂಲಕ ಚಿತ್ರ ಕೇವಲ 15 ದಿನಗಳಲ್ಲಿ 39.05 ಕೋಟಿ ರೂಪಾಯಿ ಗ್ರಾಸ್​ ಕಲೆಕ್ಷನ್ ಮಾಡಿದೆ. ಈ ಪೈಕಿ 33.47 ಕೋಟಿ ರೂಪಾಯಿ ನೆಟ್​ ಕಲೆಕ್ಷನ್​ ಆಗಿದೆ.

  • ಗ್ರಾಸ್​ ಕಲೆಕ್ಷನ್​: 39.05 ಕೋಟಿ ರೂಪಾಯಿ
  • ನೆಟ್​ ಕಲೆಕ್ಷನ್​: 33.47 ಕೋಟಿ ರೂಪಾಯಿ
ದಿನಗ್ರಾಸ್​ ಕಲೆಕ್ಷನ್​ನೆಟ್​ ಕಲೆಕ್ಷನ್​ಶೋಗಳ ಸಂಖ್ಯೆಪ್ರೇಕ್ಷಕರ ಆಕ್ಯುಪೆನ್ಸಿ ರೇಟ್
ಮೊದಲ ದಿನ0.10 ಕೋಟಿ ರೂ.0.09 ಕೋಟಿ ರೂ.60ಶೇ.28.0
ಎರಡನೇ ದಿನ0.27 ಕೋಟಿ ರೂ.0.23 ಕೋಟಿ ರೂ.81ಶೇ.46.0
ಮುರನೇ ದಿನ0.65 ಕೋಟಿ ರೂ.0.55 ಕೋಟಿ ರೂ.157ಶೇ.55.0
ನಾಲ್ಕನೇ ದಿನ0.75 ಕೋಟಿ ರೂ.0.65 ಕೋಟಿ ರೂ.233ಶೇ.47.0
ಐದನೇ ದಿನ1.09 ಕೋಟಿ ರೂ.0.95 ಕೋಟಿ ರೂ.312ಶೇ.58.0
ಆರನೇ ದಿನ1.33 ಕೋಟಿ ರೂ.1.15 ಕೋಟಿ ರೂ.374ಶೇ.55.0
ಏಳನೇ ದಿನ1.97 ಕೋಟಿ ರೂ.1.70 ಕೋಟಿ ರೂ.486ಶೇ.58.0
ಎಂಟನೇ ದಿನ3.02 ಕೋಟಿ ರೂ.2.60 ಕೋಟಿ ರೂ.487ಶೇ.82.0
ಒಂಭತ್ತನೇ ದಿನ3.28 ಕೋಟಿ ರೂ.2.80 ಕೋಟಿ ರೂ.590ಶೇ.75.0
ಹತ್ತನೇ ದಿನ4.50 ಕೋಟಿ ರೂ.3.85 ಕೋಟಿ ರೂ.663ಶೇ.84.0
ಹನ್ನೊಂದನೇ ದಿನ3.48 ಕೋಟಿ ರೂ.3.00 ಕೋಟಿ ರೂ.673ಶೇ.69.0
ಹನ್ನೆರಡನೇ ದಿನ4.25 ಕೋಟಿ ರೂ.3.65 ಕೋಟಿ ರೂ.834ಶೇ.67.0
ಹದಿಮೂರನೇ ದಿನ4.50 ಕೋಟಿ ರೂ.3.85 ಕೋಟಿ ರೂ.911ಶೇ.65.0
ಹದಿನಾಲ್ಕನೇ ದಿನ4.56 ಕೋಟಿ ರೂ.3.90 ಕೋಟಿ ರೂ.968ಶೇ.62.0
ಹದಿನೈದನೇ ದಿನ5.30 ಕೋಟಿ ರೂ.4.50 ಕೋಟಿ ರೂ.1,178ಶೇ.57.0
ಒಟ್ಟು39.05 ಕೋಟಿ ರೂ.33.47 ಕೋಟಿ ರೂ.8,007 --

ಚಿತ್ರ ಸರಿಸುಮಾರು 40 ಕೋಟಿ ರೂಪಾಯಿ ಗಳಿಸಿದ್ದು, ಈ ವಾರಾಂತ್ಯ 50 ಕೋಟಿ ರೂಪಾಯಿಯ ಗಡಿದಾಟೋದು ಬಹುತೇಕ ಪಕ್ಕಾ ಆಗಿದೆ. ಪ್ರೇಕ್ಷಕರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ ಅನ್ನೋದಕ್ಕೆ ಶೋಗಳ ಸಂಖ್ಯೆಯೇ ಸಾಕ್ಷಿ. 60 ಶೋಗಳಿಂದ ಆರಂಭವಾದ ಪಯಣ, ನಿನ್ನೆ ಬರೋಬ್ಬರಿ 1,178 ಶೋಗಳಲ್ಲಿ ಪ್ರದರ್ಶನ ಕಾಣೋ ಮೂಲಕ ಸ್ಮಾಲ್​​ ಬಜೆಟ್​ ಚಿತ್ರ ದಾಖಲೆ ಬರೆದಿದೆ.

ಇದನ್ನೂ ಓದಿ: 2 ಕೋಟಿ ಬಜೆಟ್​, 427 ಕೋಟಿ ಕಲೆಕ್ಷನ್: 'ಹನುಮಾನ್ ಅಂಶ್​'ನಂತೆ ದಾಖಲೆ ಬರೆಯುತ್ತಿದೆ ಕನ್ನಡದ 'ಪ್ರೇಮದ ಊರಲಿ'!

ಮನೋಜ್​ ಕುಮಾರ್​ ನಿರ್ದೇಶನದ ಸಿನಿಮಾವನ್ನು ವೆನಿಲ್ಲಾ ಎಂಟರ್​ಟೈನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್​ಗಳು ನಿರ್ಮಿಸಿವೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಹಾಗೂ ಹಿರಿಯ, ಜನಪ್ರಿಯ ತಾರೆ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಸುನಾದ್ ಗೌತಮ್ ಸಂಗೀತ, ರಾಜ್‌ಕಾಂತ್ ಎಸ್.ಕೆ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಈ ಸಿನಿಮಾಗಿದೆ.

ಇದನ್ನೂ ಓದಿ: ವಾರಾಂತ್ಯದಲ್ಲಿ KBC ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ರು ಪಾಟೇಕರ್: ಆದ್ರೆ ವಿಧಿಯಾಟವೇ ಬೇರೆ ಇತ್ತು!