ETV Bharat / entertainment

60 ಕೋಟಿ ಗಳಿಕೆ: ಕೋವಿಡ್​ ಬಳಿಕ ಮೊದಲ ದಿನ ಅತಿ ಕಡಿಮೆ ಸಂಪಾದಿಸಿದ ಪ್ರಭಾಸ್​ ಸಿನಿಮಾ 'ದಿ ರಾಜಾ ಸಾಬ್'

ಪ್ರಭಾಸ್​​ ಮುಖ್ಯಭೂಮಿಕೆಯ 'ದಿ ರಾಜಾ ಸಾಬ್' ಸಿನಿಮಾ ತನ್ನ ಮೊದಲ ದಿನ ಭಾರತದಲ್ಲಿ 60 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

Prabhas 'The Raja Saab' Look
ಪ್ರಭಾಸ್​ 'ದಿ ರಾಜಾ ಸಾಬ್​' ಲುಕ್ (Photo: Film Poster)
author img

By ETV Bharat Entertainment Team

Published : January 10, 2026 at 1:18 PM IST

2 Min Read
Choose ETV Bharat

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ಜನವರಿ 9ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ, ಹಾರರ್ ಕಾಮಿಡಿ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಪೇಯ್ಡ್ ಪ್ರಿವ್ಯೂವ್​​ ಸೇರಿದಂತೆ ಚಿತ್ರ ತನ್ನ ಮೊದಲ ದಿನ 60 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಆದಾಗ್ಯೂ, ಪ್ರಭಾಸ್ ಅವರ ಇತ್ತೀಚಿನ ಬಿಗ್​ ಬಜೆಟ್ ಸಿನಿಮಾಗಳಿಗೆ ಹೋಲಿಸಿದರೆ, 'ದಿ ರಾಜಾ ಸಾಬ್' ಕೋವಿಡ್​ ನಂತರ ಅತ್ಯಂತ ಕಡಿಮೆ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.

ದಿ ರಾಜಾ ಸಾಬ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ದಿ ರಾಜಾ ಸಾಬ್ ಭಾರತದಾದ್ಯಂತ ಮೊದಲ ದಿನ 54.15 ಕೋಟಿ ರೂಪಾಯಿ ಗಳಿಸಿದೆ. ಇದರ ಜೊತೆಗೆ, ಗುರುವಾರ ಚಿತ್ರವು ಪೇಯ್ಡ್ ಪ್ರಿವ್ಯೂವ್​​ನಿಂದ 9.15 ಕೋಟಿ ರೂ. ಸಂಗ್ರಹಿಸಿದೆ. ಒಟ್ಟಾರೆ ಭಾರತದಲ್ಲಿ 63.3 ಕೋಟಿ ರೂ. ಕಲೆಕ್ಷನ್ ಆಗಿದೆ.

ಪ್ರಭಾಸ್ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ... ಇದು ಭರ್ಜರಿ ಅಂಕಿ ಅಂಶವಾಗಿದ್ದರೂ, ಪ್ರಭಾಸ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಮೊದಲ ದಿನದ ಕಲೆಕ್ಷನ್​ ಕಡಿಮೆಯಾಗಿದೆ. ಅವರ ಹಿಂದಿನ ಚಿತ್ರಗಳಾದ ಸಲಾರ್ ಮತ್ತು ಕಲ್ಕಿ 2898 ಎಡಿ ಚಿತ್ರಗಳ ಮೊದಲ ದಿನದ ಅಂಕಿ-ಅಂಶಗಳು ಗಮನಾರ್ಹವಾಗಿತ್ತು. ಈ ಎರಡೂ ಚಿತ್ರಗಳು ಕ್ರಮವಾಗಿ 90 ಕೋಟಿ ಮತ್ತು 95 ಕೋಟಿ ರೂ. ಗಳಿಸಿದ್ದವು. ನಂತರ ತೀವ್ರ ಟೀಕೆ ಎದುರಿಸಿದ ಆದಿಪುರುಷ ಕೂಡಾ 86 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು. ಸಾಂಕ್ರಾಮಿಕದ ನಂತರ ಚಿತ್ರಮಂದಿರಗಳು ಸಹಜ ಸ್ಥಿತಿಗೆ ಮರಳಿದ ಬಳಿಕ ಪ್ರಭಾಸ್ ಅವರ ಅತ್ಯಂತ ಕಡಿಮೆ ಕಲೆಕ್ಷನ್​ ಮಾಡಿದ (ಕೇವಲ ಮೊದಲ ದಿನ) ಚಿತ್ರ 'ದಿ ರಾಜಾ ಸಾಬ್' ಆಗಿದೆ.

ಇತರೆ ಬಿಗ್ ಸ್ಟಾರ್ಸ್, ಬಿಗ್​​ ಬಜೆಟ್ ಚಿತ್ರಗಳೊಂದಿಗೆ ಹೋಲಿಕೆ... ಕೋವಿಡ್​​ ನಂತರ ಪ್ರಭಾಸ್ ಅವರ ಅತ್ಯಂತ ಕಡಿಮೆ ಕಲೆಕ್ಷನ್​ ಮಾಡಿದ ಚಿತ್ರವಾಗಿದ್ದರೂ, ದಿ ರಾಜಾ ಸಾಬ್ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳ ಮೊದಲ ದಿನದ ಗಳಿಕೆಯನ್ನು ಮೀರಿಸುವಲ್ಲಿ ಅಥವಾ ಅದರ ಸರಿಸಮಾನ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿವೆ. ಸೂಪರ್​ ಸ್ಟಾರ್ ಶಾರುಖ್​ ಖಾನ್​ ಮುಖ್ಯಭೂಮಿಕೆಯ ಜವಾನ್ ತೆರೆಕಂಡ ದಿನ 64 ಕೋಟಿ ರೂಪಾಯಿ, ರಣ್​ಬೀರ್​ ಕಪೂರ್ ಅವರ ಅನಿಮಲ್ 63 ಕೋಟಿ ರೂಪಾಯಿ, ದಳಪತಿ ವಿಜಯ್ ಅವರ ಲಿಯೋ 64.80 ಕೋಟಿ ರೂಪಾಯಿ ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ ಧುರಂಧರ್ 28 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ: ದಳಪತಿ ವಿಜಯ್ ಫ್ಯಾನ್ಸ್​​ಗೆ ಮತ್ತೆ ನಿರಾಸೆ, ಸದ್ಯಕ್ಕಿಲ್ಲ 'ಜನ ನಾಯಗನ್​' ರಿಲೀಸ್​: ಸೆನ್ಸಾರ್​ಗೆ ಹೈಕೋರ್ಟ್ ತಡೆ

ಈ ಚಿತ್ರದಲ್ಲಿ ಪ್ರಭಾಸ್ ಎದುರು ಸಂಜಯ್ ದತ್ ಖಳನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್, ಬೋಮನ್ ಇರಾನಿ ಮತ್ತು ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ತಮನ್ ಎಸ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮುಂಬರುವ ದಿನಗಳ ಕಲೆಕ್ಷನ್​​ ಚಿತ್ರದ ಒಟ್ಟಾರೆ ಬಾಕ್ಸ್ ಆಫೀಸ್ ಭವಿಷ್ಯವನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ: Fact check: 24 ಗಂಟೆಯಲ್ಲಿ 200M+ ವೀಕ್ಷಣೆಯಾದ 'ಟಾಕ್ಸಿಕ್‌' ಟೀಸರ್​ನಲ್ಲಿ ಯಶ್ ಜೊತೆಗಿರುವ ನಟಿ ಯಾರು?