ETV Bharat / entertainment

ಕನ್ನಡ ಚಿತ್ರರಂಗಕ್ಕೆ ಪಿ.ಲಂಕೇಶ್ ಮೊಮ್ಮಗಳು ಇಶಾ ಎಂಟ್ರಿಗೆ ವೇದಿಕೆ ಸಜ್ಜು: ಡೈರೆಕ್ಟರ್ ಯಾರು?

ದಿಲ್ ರಂಗೀಲಾ, ಜಾನು, ಬಾನ ದಾರಿಯಲ್ಲಿ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ‌.

Isha Lankesh entering sandalwood
ನವನಟಿ ಇಶಾ ಲಂಕೇಶ್ (ETV Bharat)
author img

By ETV Bharat Entertainment Team

Published : July 8, 2026 at 2:42 PM IST

2 Min Read
Choose ETV Bharat

ಸಿನಿಮಾ ಎಂಬ ಕಲರ್​ಫುಲ್​ ಲೋಕಕ್ಕೆ ಸ್ಟಾರ್​ಗಳ ಮಕ್ಕಳು, ನಿರ್ದೇಶಕರ ಮಕ್ಕಳು ಹಾಗೂ ಪ್ರಸಿದ್ಧ ನಿರ್ಮಾಪಕರ ಮಕ್ಕಳು ಬರೋದು ಹೊಸತೇನಲ್ಲ. ಬಂದ ಹಲವರ ಪೈಕಿ ಕೆಲವರ ಕೈಹಿಡಿಯುತ್ತದೆ ಈ ಗ್ಲ್ಯಾಮರ್​ ಲೋಕ. ಅದರಂತೆ ಇದೀಗ ಖ್ಯಾತ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಮೊಮ್ಮಗಳು ಇಶಾ ಲಂಕೇಶ್ ನಾಯಕಿಯಾಗಿ ತಮ್ಮ ನಟನಾ ಪ್ರಯಾಣ ಆರಂಭಿಸಲು ಸಜ್ಜಾಗಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. ಈ ಹಿಂದೆ ಇಶಾ ಸಿನಿಮಾಗೆ ಬರುತ್ತಾರೆ ಎಂದು ಹೇಳಲಾಗಿತ್ತಾದ್ರೂ ಹೆಚ್ಚಿನ ಮಾಹಿತಿ ಇರಲಿಲ್ಲ. ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

director Preetham Gubbi
ನಿರ್ದೇಶಕ ಪ್ರೀತಂ ಗುಬ್ಬಿ (ETV Bharat)

ದಿಲ್ ರಂಗೀಲಾ, ಜಾನು, ಬಾನ ದಾರಿಯಲ್ಲಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ‌. ನವಿಶಾ ಫಿಲ್ಮ್ಸ್ ಲಾಂಛನದಲ್ಲಿ ಶಿವರಾಜ್ ಕನಗನಪಲ್ಲಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆ ನಿರ್ಮಾಣದ ಎರಡನೇ ಚಿತ್ರವಾಗಿದೆ.

ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಇಶಾ ಲಂಕೇಶ್, ನಟನೆಗೆ ಬೇಕಾಗಿರುವ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೀತಂ ಗುಬ್ಬಿ ನಿರ್ದೇಶನ ಹಾಗೂ ಇಶಾ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರ ಇದಾಗಿರುವ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳಿವೆ.

Isha Lankesh entering sandalwood
ನವನಟಿ ಇಶಾ ಲಂಕೇಶ್ (ETV Bharat)

ಹೆಸರಿಡದ ನೂತನ ಚಿತ್ರದ ನಾಯಕಿಯ ಕುರಿತಾಗಿ ಮಾತ್ರ ತಿಳಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಭಿಮಾನಿಗಳೂ ಕೂಡಾ ಅಷ್ಟೇ ಕುತೂಹಲರಾಗಿದ್ದಾರೆ.

ಇದನ್ನೂ ಓದಿ: ನಿನ್ನಂಥ ಸ್ವಾರ್ಥಿನೂ ಪ್ರೀತಿಯಲ್ಲಿ ಬೀಳ್ಬೋದಾ? 'ಕಷ್ಟ ಅನ್ಸುತ್ತೆ' - ಬೋಲ್ಡ್​​ ರೊಮ್ಯಾಂಟಿಕ್​​ ಸೀನ್​​ನಲ್ಲಿ ಯಶ್ ಕಿಯಾ​ರಾ

ಪಿ.ಲಂಕೇಶ್ ಮೊಮ್ಮಗ - ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಈಗಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ಸು ಕಂಡಿದ್ದಾರೆ. 'ಗೌರಿ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಸಮರ್ಜಿತ್ ಲಂಕೇಶ್‌, ಸೌತ್ ಸೂಪರ್ ಸ್ಟಾರ್ ಮೋಹನ್​ಲಾಲ್ ನಟನೆಯ ಇತ್ತೀಚಿನ 'ವೃಷಭ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ತಮ್ಮ ತಂದೆಯನ್ನು ರಕ್ಷಿಸಲು ವಿಧಿ ಮತ್ತು ಭಯದೊಂದಿಗೆ ಹೋರಾಡುವ ಪಾತ್ರದಲ್ಲಿ ಸಮರ್ಜಿತ್ ನಟಿಸಿದ್ದರು. ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ಗರುಡ ರಾಮ್‌ ಸೇರಿ ಹಲವರು ಕಾಣಿಸಿಕೊಂಡಿದ್ದು, ಸಿನಿಮಾ ಯಶಸ್ವಿಯಾಗಿದೆ. ಇದೀಗ ಇಶಾ ಲಂಕೇಶ್ ಅವರ ಸರದಿ.

Isha Lankesh entering sandalwood
ನವನಟಿ ಇಶಾ ಲಂಕೇಶ್ (ETV Bharat)

ಇದನ್ನೂ ಓದಿ: 'ಯಶ್ ಅವರಿಂದ ಕಲಿಯೋದು ತುಂಬಾನೇ ಇದೆ': ಬಾಲಿವುಡ್‌ ನಟಿ ಹುಮಾ ಖುರೇಷಿ