ETV Bharat / entertainment

100 ದಿನಗಳ ಸಂಭ್ರಮದಲ್ಲಿ 'ಕಾಂತಾರ ಚಾಪ್ಟರ್ 1': ಪ್ರೇಕ್ಷಕರಿಗೆ ಧನ್ಯವಾದ ಅರ್ಪಣೆ; ಕಲೆಕ್ಷನ್​ ಎಷ್ಟು ಗೊತ್ತಾ?

ಕಾಂತಾರ ಚಾಪ್ಟರ್​ 1 ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿದೆ.

'Kantara Chapter 1' poster
'ಕಾಂತಾರ ಚಾಪ್ಟರ್ 1' ಪೋಸ್ಟರ್ (Photo: Film Poster)
author img

By ETV Bharat Entertainment Team

Published : January 10, 2026 at 5:49 PM IST

2 Min Read
Choose ETV Bharat

ಕಾಂತಾರ... ವಿಶೇಷ ಪರಿಚಯ ಬೇಕೆನಿಸದು. ಇಡೀ ಭಾರತೀಯ ಚಿತ್ರರಂಗ ಕನ್ನಡತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ನಿರೀಕ್ಷೆಗೂ ಮೀರಿ ಅಭೂತಪೂರ್ವ ಕಂಡ ಚಿತ್ರದ ಪ್ರೀಕ್ವೆಲ್​ ಸಿನಿಪ್ರಿಯರ ಅಪಾರ ಬೇಡಿಕೆಯೊಂದಿಗೆ 2025ರ ಅಕ್ಟೋಬರ್​ 2ರಂದು ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಕನ್ನಡದ ಯಶಸ್ವಿ ಚಿತ್ರವೀಗ 100 ದಿನಗಳ ಸಂಭ್ರಮದಲ್ಲಿದ್ದು, ಚಿತ್ರತಂಡ ಖುಷಿ ಹಂಚಿಕೊಂಡಿದೆ.

ಕೆಜಿಎಫ್​​​, ಸಲಾರ್​ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​ ಈ ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಿತ್ರವನ್ನು ನಿರ್ಮಾಣ ಮಾಡಿದೆ. ನಿರೀಕ್ಷೆಗೂ ಮೀರಿ ಯಶಸ್ಸು ಸಂಪಾದಿಸಿದ ದಕ್ಷಿಣ ಚಿತ್ರರಂಗದ ಸಕ್ಸಸ್​ಫುಲ್ ಪ್ರೊಡಕ್ಷನ್​ ಹೌಸ್ ಇಂದು ಪೋಸ್ಟ್​ ಶೇರ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದೆ.

ಯಶಸ್ವಿ ಚಿತ್ರದ ಸಾರಥಿ ರಿಷಬ್ ಶೆಟ್ಟಿ ಸೇರಿ ಚಿತ್ರದ ಪ್ರಮುಖ ಪಾತ್ರಧಾರಿಗಳನ್ನೊಳಗೊಂಡ ಪೋಸ್ಟರ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್​, ಕಾಂತಾರ ಅಧ್ಯಾಯ 1ರ 100 ವೈಭವದ ದಿನಗಳು. ನಮ್ಮ ಪವಿತ್ರ ಸಂಪ್ರದಾಯಗಳು ಮತ್ತು ಕಾಲಾತೀತ ಸಂಸ್ಕೃತಿಯ ದೈವಿಕ ಸಿನಿಮೀಯ ಪ್ರಯಾಣ. ಅಂತ್ಯವಿಲ್ಲದ ಪ್ರೀತಿ ಮತ್ತು ಬೆಂಬಲಕ್ಕಾಗಿ ವಿಶ್ವಾದ್ಯಂತದ ಪ್ರೇಕ್ಷಕರಿಗೆ ಧನ್ಯವಾದಗಳು. ನಿಮ್ಮಿಂದಾಗಿ ಈ ಪ್ರಯಾಣ ವಿಶೇಷವಾಗಿದೆ ಎಂದು ಬರೆದುಕೊಂಡಿದೆ. ಚಿತ್ರತಂಡ ಈ ಪೋಸ್ಟ್​ಗೆ ಅಭಿಮಾನಿಗಳು ಪ್ರೀತಿ, ಮೆಚ್ಚುಗೆಯ ಧಾರೆಯೆರೆದಿದ್ದಾರೆ.

ಇದನ್ನೂ ಓದಿ: ಆಗ ಕೆಜಿಎಫ್​, ಈಗ ಟಾಕ್ಸಿಕ್​​: ಯಶ್ ಸಿನಿಮಾ ಎಡಿಟರ್​​ಗೆ ಜಸ್ಟ್​ 24 ವರ್ಷ; KGF2ಗೆ ಅವಕಾಶ ಕೊಟ್ಟಿದ್ದು ಪ್ರಶಾಂತ್​ ನೀಲ್

ಮೂಲ ಕಾಂತಾರ ಚಿತ್ರದ ಮೂಲಕ ಭಾರತದಾದ್ಯಂತ ಡಿವೈನ್​ ಸ್ಟಾರ್ ಎಂದೇ ಜನಪ್ರಿಯರಾದ​ ರಿಷಬ್​ ಶೆಟ್ಟಿ ಬರೆದು. ನಟಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 2025ರ ದೀಪಾವಳಿಗೆ, ಅಕ್ಟೋಬರ್ 2 ಅದ್ಧೂರಿಯಾಗಿ 30ಕ್ಕೂ ದೇಶಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಪ್ರಮುಖ ಪಾತ್ರ ವಹಿಸಿರುವ ಈ ಸಿನಿಮಾ 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮತ್ತು ಸದ್ದು ಮಾಡಿದ 2ನೇ ಚಿತ್ರವಾಗಿದೆ. ಮೊದಲ ಸ್ಥಾನದಲ್ಲಿ ಬಾಲಿವುಡ್​ ಸೂಪರ್ ಸ್ಟಾರ್ ರಣ್​ವೀರ್​ ಸಿಂಗ್ ಅವರ ಧುರಂಧರ್ ಚಿತ್ರವಿದೆ. ವರದಿಗಳ ಪ್ರಕಾರ 130 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಕಾಂತಾರ: ಅಧ್ಯಾಯ 1 ವಿಶ್ವಾದ್ಯಂತ 800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ಚಿತ್ರ ಇದಾಗಿದೆ.

ಕಾಂತಾರ ಚಾಪ್ಟರ್ 1 ಕಲೆಕ್ಷನ್​

ಗ್ಲೋಬಲ್​ ಕಲೆಕ್ಷನ್​: 852.36 ಕೋಟಿ ರೂಪಾಯಿ.

ಇಂಡಿಯಾ ನೆಟ್​ ಕಲೆಕ್ಷನ್: 622.48 ಕೋಟಿ ರೂಪಾಯಿ.

ಇಂಡಿಯಾ ಗ್ರಾಸ್​ ಕಲೆಕ್ಷನ್​: 741.36 ಕೋಟಿ ರೂಪಾಯಿ.

2025ರ ಕನ್ನಡದ ಟಾಪ್​ 10 ಸಿನಿಮಾಗಳು

ಸ್ಥಾನಸಿನಿಮಾವಿಶ್ವಾದ್ಯಂತ ಗಳಿಕೆ
1.ಕಾಂತಾರ ಚಾಪ್ಟರ್ 1852.36 ಕೋಟಿ ರೂಪಾಯಿ
2.ಸು ಫ್ರಮ್​ ಸೋ122.83 ಕೋಟಿ ರೂಪಾಯಿ
3.ದಿ ಡೆವಿಲ್​26.85+ ಕೋಟಿ ರೂಪಾಯಿ (ಪ್ರದರ್ಶನ ಮುಂದುವರಿದಿದೆ).
4.ಮಹಾವತಾರ್ ನರಸಿಂಹ326.82 ಕೋಟಿ ರೂಪಾಯಿ
5.ಎಕ್ಕ11.39 ಕೋಟಿ ರೂಪಾಯಿ
6.ಮಾದೇವ7.4 ಕೋಟಿ ರೂಪಾಯಿ
7.ಛೂ ಮಂತರ್6.45 ಕೋಟಿ ರೂಪಾಯಿ
8.ಬ್ರ್ಯಾಟ್5.61 ಕೋಟಿ ರೂಪಾಯಿ
9.ಯುದ್ಧಕಾಂಡ ಚಾಪ್ಟರ್ 25.54 ಕೋಟಿ ರೂಪಾಯಿ
10.ಏಳುಮಲೆ5.25 ಕೋಟಿ ರೂಪಾಯಿ

(ಕಲೆಕ್ಷನ್ ಡಾಟಾ ಮೂಲ: 2024ರ ಡಿಸೆಂಬರ್​ 2ನೇ ವಾರದಲ್ಲಿ ಸಿನಿಮಾ ಇಂಡಸ್ಟ್ರಿ ಟ್ಯಾಕರ್​ ಸ್ಯಾಕ್ನಿಲ್ಕ್ ಒದಗಿಸಿದ ಮಾಹಿತಿ ಇದು​​). ಚಿತ್ರಮಂದಿರಗಳಲ್ಲಿ ದಿ ಡೆವಿಲ್​, ಮಾರ್ಕ್, 45 ಚಿತ್ರಗಳು ಪ್ರದರ್ಶನ ಮುಂದುವರಿಸಿದ್ದು, ಫೈನಲ್​ ಅಂಕಿಅಂಶಗಳು ಹೊರಬೀಳಬೇಕಿದೆ.

ಇದನ್ನೂ ಓದಿ: Fact check: 24 ಗಂಟೆಯಲ್ಲಿ 200M+ ವೀಕ್ಷಣೆಯಾದ 'ಟಾಕ್ಸಿಕ್‌' ಟೀಸರ್​ನಲ್ಲಿ ಯಶ್ ಜೊತೆಗಿರುವ ನಟಿ ಯಾರು?