ETV Bharat / entertainment

Oscars 2026: ಶಾರ್ಟ್​​​ಲಿಸ್ಟ್​​ನಲ್ಲಿ ಭಾರತದ 'ಹೋಮ್​​ಬೌಂಡ್'​​; ಫೈನಲ್​​ ನಾಮಿನೇಷನ್ಸ್​ ಈ ದಿನಾಂಕಕ್ಕೆ ಪ್ರಕಟ

ವಿಶ್ವ ಪ್ರತಿಷ್ಠಿತ ಆಸ್ಕರ್​​​​ ರೇಸ್​ನಲ್ಲಿ ಭಾರತದ 'ಹೋಮ್​​ಬೌಂಡ್'​​ ಮುಂಚೂಣಿಯಲ್ಲಿದೆ. ಫೈನಲ್​​ ನಾಮಿನೇಷನ್ಸ್​ ಜನವರಿ 22, ಗುರುವಾರ ಪ್ರಕಟಗೊಳ್ಳಲಿದೆ.

India's 'Homebound' at Oscars 2026
ಆಸ್ಕರ್​ ರೇಸ್​ನಲ್ಲಿ 'ಹೋಮ್​​ಬೌಂಡ್'​​ (Photo: Film Poster)
author img

By ETV Bharat Entertainment Team

Published : January 6, 2026 at 11:13 AM IST

2 Min Read
Choose ETV Bharat

ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ 'ಹೋಮ್‌ಬೌಂಡ್' ಮುಂದಿನ ಸುತ್ತಿನ ಮತದಾನಕ್ಕೆ ಮುನ್ನಡೆಯುವುದರೊಂದಿಗೆ ಭಾರತದ ಕೀರ್ತಿ ಹೆಚ್ಚಿಸಿದೆ. ಹೌದು, ಆಸ್ಕರ್​​ ಸ್ಪರ್ಧೆಯ ಶಾರ್ಟ್​​ಲಿಸ್ಟ್​​ನಲ್ಲಿ ಭಾರತದ 'ಹೋಮ್​​ಬೌಂಡ್'​​ ಇದ್ದು, ಫೈನಲ್​ ನಾಮಿನೇಷನ್ಸ್​ ಲಿಸ್ಟ್​​ ಶೀಘ್ರದಲ್ಲೇ ಘೋಷಣೆಯಾಗಲಿದೆ.

ಇಂಟರ್​ನ್ಯಾಷನಲ್​​ ಫೀಚರ್​ ಫಿಲ್ಮ್​​ ಕ್ಯಾಟಗರಿಯಲ್ಲಿ, ಪ್ರಪಂಚದಾದ್ಯಂತದ 15 ಸಿನಿಮಾಗಳು ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ ಎಂದು ಅಕಾಡೆಮಿ ಮಾಹಿತಿ ನೀಡಿದೆ. ಈ ಲಿಸ್ಟ್​ನಲ್ಲಿ, ಭಾರತದ 'ಹೋಮ್‌ಬೌಂಡ್' ಚಿತ್ರವು ಅರ್ಜೆಂಟೀನಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಜೋರ್ಡಾನ್, ನಾರ್ವೆ, ಪ್ಯಾಲೆಸ್ಟೈನ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವಿಟ್ಜರ್ಲೆಂಡ್, ತೈವಾನ್ ಮತ್ತು ಟುನೀಶಿಯಾದ ಚಿತ್ರಗಳ ಜೊತೆಗೆ ಕಾಣಿಸಿಕೊಂಡಿದೆ.

ಆಸ್ಕರ್ ಶಾರ್ಟ್​​ಲಿಸ್ಟ್

  • ಹೋಮ್​​ಬೌಂಡ್' (ಭಾರತ)
  • ಬೆಲೆನ್ (ಅರ್ಜೆಂಟೀನಾ)
  • ದಿ ಸೀಕ್ರೆಟ್ ಏಜೆಂಟ್ (ಬ್ರೆಜಿಲ್)
  • ಇಟ್ ವಾಸ್ ಜಸ್ಟ್ ಆ್ಯನ್ ಆ್ಯಕ್ಸಿಡೆಂಟ್ (ಫ್ರಾನ್ಸ್)
  • ಸೌಂಡ್ ಆಫ್ ಫಾಲಿಂಗ್ (ಜರ್ಮನಿ)
  • ದಿ ಪ್ರೆಸಿಡೆಂಟ್ಸ್ ಕೇಕ್ (ಇರಾಕ್)
  • ಕೊಕುಹೊ (ಜಪಾನ್)
  • ಆಲ್ ದಟ್ಸ್ ಲೆಫ್ಟ್ ಆಫ್ ಯು (ಜೋರ್ಡಾನ್)
  • ಸೆಂಟಿಮೆಂಟಲ್ ವ್ಯಾಲ್ಯೂ (ನಾರ್ವೆ)
  • ಪ್ಯಾಲೆಸ್ಟೈನ್ 36 (ಪ್ಯಾಲೆಸ್ಟೈನ್)
  • ನೋ ಅದರ್ ಚಾಯ್ಸ್ (ದಕ್ಷಿಣ ಕೊರಿಯಾ)
  • ಸಿರಾಟ್ (ಸ್ಪೇನ್)
  • ಲೇಟ್ ಶಿಫ್ಟ್ (ಸ್ವಿಟ್ಜರ್ಲೆಂಡ್)
  • ಲೆಫ್ಟ್-ಹ್ಯಾಂಡೆಡ್ ಗರ್ಲ್ (ತೈವಾನ್)
  • ದಿ ವಾಯ್ಸ್ ಆಫ್ ಹಿಂದ್ ರಜಬ್ (ಟುನೀಶಿಯಾ).

ಅಕಾಡೆಮಿಯ ಅಧಿಕೃತ ಸೋಷಿಯಲ್​ ಮೀಟಿಯಾದಲ್ಲಿ, "ಇಂಟರ್​ನ್ಯಾಷನಲ್​ ಫೀಚರ್​ ಫಿಲ್ಮ್​ ಕ್ಯಾಟಗರಿಯಲ್ಲಿ 15 ಚಿತ್ರಗಳು ಮುಂದಿನ ಸುತ್ತಿನ ಮತದಾನಕ್ಕೆ ಮುನ್ನಡೆದಿವೆ" ಎಂದು ತಿಳಿಸಲಾಗಿದೆ. ಅಕಾಡೆಮಿ ಪ್ರಶಸ್ತಿಗಳ ಅಂತಿಮ ನಾಮನಿರ್ದೇಶಗಳು ಜನವರಿ 22, ಗುರುವಾರ ಪ್ರಕಟಗೊಳ್ಳಲಿದೆ.

'ಹೋಮ್‌ಬೌಂಡ್' ಚಿತ್ರವು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಮೆಚ್ಚುಗೆ ಗಳಿಸಿದೆ. ಈ ಹಿಂದೆ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ, ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಥಮ ಪ್ರದರ್ಶನಗಳನ್ನು ಕಂಡಿದೆ.

98 ವರ್ಷಗಳ ಅಕಾಡೆಮಿ ಪ್ರಶಸ್ತಿಗಳ ಇತಿಹಾಸದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾದ ಭಾರತದ 4ನೇ ಸಿನಿಮಾ 'ಹೋಮ್‌ಬೌಂಡ್' ಆಗಿದೆ.

ಈ ಹಿಂದಿ ಚಿತ್ರವು 2020ರ ಬಷರತ್ ಪೀರ್ (Basharat Peer) ಅವರ ನ್ಯೂಯಾರ್ಕ್ ಟೈಮ್ಸ್ ಆರ್ಟಿಕಲ್​ನ ರೂಪಾಂತರ. ಮೊಹಮ್ಮದ್ ಶೋಯೆಬ್ (ಬಾಲಿವುಡ್​ ನಟ ಇಶಾನ್ ಖತ್ತರ್​) ಮತ್ತು ಚಂದನ್ ಕುಮಾರ್ (ನಟ ವಿಶಾಲ್ ಜೆತ್ವಾ) ಅವರ ಸುತ್ತ ಕಥೆ ಸಾಗುತ್ತದೆ. ತಮ್ಮ ಸಾಮಾಜಿಕ ಗುರುತುಗಳನ್ನು ಉಲ್ಲೇಖಿಸಿದ ಸಂದರ್ಭಗಳಿಂದ ಮೇಲೇರಲು, ಉನ್ನತ ಮಟ್ಟಕ್ಕೇರಲು, ಸವಾಲುಗಳನ್ನು ಎದುರಿಸುವ ಇಬ್ಬರು ಯುವಕರ ಕಥೆ ಇದಾಗಿದೆ. ಜಾಹ್ನವಿ ಕಪೂರ್​ ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 2​ ದಾಖಲೆ ಪುಡಿಗಟ್ಟಿದ ಧುರಂಧರ್: ಯಶ್​ ಟಾಕ್ಸಿಕ್​​ಗೆ ಟಕ್ಕರ್ ಕೊಡಲು ಸಜ್ಜಾದ ಧುರಂಧರ್ 2

ನೀರಜ್ ಘಯ್ವಾನ್ ನಿರ್ದೇಶಿಸಿದ ಈ ಚಿತ್ರವನ್ನು ಕರಣ್ ಜೋಹರ್, ಅದಾರ್ ಪೂನಾವಲ್ಲ ಮತ್ತು ಅಪೂರ್ವ ಮೆಹ್ತಾ ನಿರ್ಮಿಸಿದ್ದಾರೆ. ಮರಿಜ್ಕೆ ಡಿಸೋಜಾ ಮತ್ತು ಮೆಲಿಟಾ ಟೋಸ್ಕನ್ ಡು ಪ್ಲಾಂಟಿಯರ್ ಸಹ-ನಿರ್ಮಾಣ ಮಾಡಿದ್ದಾರೆ. ಮಾರ್ಟಿನ್ ಸ್ಕೋರ್ಸೆಸೆ ಮತ್ತು ಪ್ರವೀನ್ ಖೈರ್ನಾರ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಭಾರತೀಯ ಚಿತ್ರರಂಗದಲ್ಲೇ ಈ ಅಪರೂಪದ ಸಾಧನೆಗೈದ ಏಕೈಕ ನಟ

ಭಾರತ 7 ದಶಕಗಳಿಂದ ಆಸ್ಕರ್‌ಗೆ ತನ್ನ ಸಿನಿಮಾಗಳನ್ನು ಕಳುಹಿಸುತ್ತಿದೆ. ಆದ್ರೆ, ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಎಂದಿಗೂ ಪ್ರಶಸ್ತಿ ಗೆದ್ದುಕೊಂಡಿಲ್ಲ. ಕೇವಲ 3 ಭಾರತೀಯ ಸಿನಿಮಾಗಳು ನಾಮಿನೇಷನ್​ ಹಂತಕ್ಕೆ ಬಂದಿವೆ: ಮದರ್ ಇಂಡಿಯಾ (1957), ಸಲಾಮ್ ಬಾಂಬೆ (1988), ಲಗಾನ್ (2001). ಈ ಬಾರಿ 'ಹೋಮ್‌ಬೌಂಡ್' ಫೈನಲ್​ ನಾಮಿನೇಷನ್​ ತಲುಪಿ, ಭಾರತಕ್ಕೆ ಗೆಲುವು ತಂದುಕೊಡಲಿ ಅನ್ನೋದು ಬಹುತೇಕರ ಹಾರೈಕೆ. 98ನೇ ಆಸ್ಕರ್ ಪ್ರಶಸ್ತಿಗಳು ಭಾನುವಾರ, ಮಾರ್ಚ್ 15, 2026ರಂದು ನಡೆಯಲಿದೆ.