ETV Bharat / entertainment

ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಮೆಲ್ಬೋರ್ನ್: ಅತ್ಯುತ್ತಮ ನಟ ರೇಸ್​ನಲ್ಲಿ ಅಮೀರ್​​ ಖಾನ್, ರಿಷಬ್​​ ಶೆಟ್ಟಿ, ರಣ್​ವೀರ್​ ಸಿಂಗ್

ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಮೆಲ್ಬೋರ್ನ್ ತನ್ನ 17ನೇ ಆವೃತ್ತಿಯ ನಾಮನಿರ್ದೇಶನಗಳನ್ನು ಪ್ರಕಟಿಸಿದೆ.

Aamir Khan, Rishabh Shetty, Ranveer Singh
ಅಮೀರ್​​ ಖಾನ್, ರಿಷಬ್​​ ಶೆಟ್ಟಿ, ರಣ್​ವೀರ್​ ಸಿಂಗ್ (IANS, ANI)
author img

By ETV Bharat Entertainment Team

Published : July 8, 2026 at 4:08 PM IST

2 Min Read
Choose ETV Bharat

ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಮೆಲ್ಬೋರ್ನ್ (ಐಎಫ್​​ಎಫ್​ಎಂ) ತನ್ನ 17ನೇ ಆವೃತ್ತಿಯ ನಾಮನಿರ್ದೇಶನಗಳನ್ನು ಪ್ರಕಟಿಸಿದೆ. 'ಸಿತಾರೆ ಜಮೀನ್ ಪರ್', 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1', 'ಸೈಯ್ಯಾರಾ', 'ಮೆಂಬರ್ಸ್ ಅಫ್​ ದಿ ಪ್ರಾಬ್ಲಮ್ಯಾಟಿಕ್​​​ ಫ್ಯಾಮಿಲಿ' ಮತ್ತು 'ನಾಟ್ ಎ ಹೀರೋ' ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಅಗ್ರ ಸ್ಪರ್ಧಿಗಳಾಗಿವೆ.

ಇದೇ ಸಾಲಿನ ಆಗಸ್ಟ್ 13ರಿಂದ ಆಗಸ್ಟ್ 23ರವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್​​​ನಲ್ಲಿ ನಡೆಯಲಿರುವ ಈ ಸಿನಿಮೋತ್ಸವ ಭಾರತೀಯ ಚಲನಚಿತ್ರಗಳನ್ನು ಗೌರವಿಸಲಿದೆ. ವಿವಿಧ ಭಾಷೆಗಳ ಮತ್ತು ಪ್ರದೇಶಗಳ ಎಂಟರ್​​ಟೈನ್ಮೆಂಟ್​ ಕಂಟೆಂಟ್​ ಸ್ಪರ್ಧೆಗಿಳಿಯಲಿವೆ. ವಿಕ್ಟೋರಿಯನ್ ಸರ್ಕಾರದಿಂದ ಬೆಂಬಲಿತವಾದ ಐಎಫ್​​ಎಫ್​ಎಂ ಭಾರತೀಯ ಚಿತ್ರರಂಗಕ್ಕೆ ಮೀಸಲಾಗಿರುವ ಅತಿದೊಡ್ಡ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಒಂದಾಗಿದೆ.

ಈ ವರ್ಷದ ನಾಮನಿರ್ದೇಶನಗಳಲ್ಲಿ, ಚಿತ್ರಮಂದಿರಗಳಲ್ಲಿ ಹಾಗೂ ವಿವಿಧ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಮತ್ತು ಸೀರಿಸ್​ಗಳು ಸೇರಿವೆ. ಚಲನಚಿತ್ರೋತ್ಸವವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ನಟನಾ ಪ್ರಶಸ್ತಿಗಳು, ಅತ್ಯುತ್ತಮ ಸರಣಿ, ಅತ್ಯುತ್ತಮ ಸಾಕ್ಷ್ಯಚಿತ್ರ ಮತ್ತು ಸಬ್​ ಕಾಂಟಿನೆಂಟ್​ನ ಅತ್ಯುತ್ತಮ ಚಲನಚಿತ್ರ ಸೇರಿದಂತೆ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಘೋಷಿಸಿದೆ.

ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಹಕ್, ಜಾರನ್, ಕಾಂತಾರ: ಎ ಲೆಜೆಂಡ್ - ಅಧ್ಯಾಯ 1, ಲೋಕಾ ಅಧ್ಯಾಯ 1: ಚಂದ್ರ, ಸೈಯ್ಯಾರಾ, ಸಿತಾರೆ ಜಮೀನ್ ಪರ್, ಶರ್ತೋಪೋರ್ ಮತ್ತು ದಿ ಗ್ರೇಟ್ ಶಂಶುದ್ದೀನ್ ಫ್ಯಾಮಿಲಿ ಸಿನಿಮಾಗಳು ಸ್ಪರ್ಧೆಗಿಳಿದಿವೆ.

ಅತ್ಯುತ್ತಮ ಇಂಡಿ ಚಲನಚಿತ್ರ (Best Indie Film) ವಿಭಾಗದಲ್ಲಿ ಅಮ್ಮಂಗ್ ಹೇಳ್ಬೇಡ (ಡೋಂಟ್ ಟೆಲ್ ಮದರ್‌), ಫುಲ್ ಪ್ಲೇಟ್, ಕಿಕ್ರಾನ್ ಡಿ ಫುಲ್ (ಫ್ಲವರ್ಸ್ ಆಫ್ ಅಕೇಶಿಯಾ), ಲಾಲಾ ಆ್ಯಂಡ್ ಪಾಪಿ, ಮಯಿಲಾ - ಸೆಮ್ಮಲರ್ ಅನ್ನಮ್, ಮೆಂಬರ್ಸ್ ಆಫ್ ದಿ ಪ್ರಾಬ್ಲೆಮ್ಯಾಟಿಕ್ ಫ್ಯಾಮಿಲಿ, ನಾಟ್ ಎ ಹೀರೋ ಮತ್ತು ಪಂಖುಡಿಯಾನ್ (ಪೆಟಲ್ಸ್ ಇನ್ ದಿ ವಿಂಡ್) ಸೇರಿವೆ.

ಅತ್ಯುತ್ತಮ ನಿರ್ದೇಶಕರ ರೇಸ್‌ನಲ್ಲಿ ಅಶ್ವಿನಿ ಅಯ್ಯರ್ ತಿವಾರಿ (ಸಿಸ್ಟಮ್), ಚಂದ್ರಶಿಶ್ ರೇ (ಪೋರ್ಶಿ), ಮೋಹಿತ್ ಸೂರಿ (ಸೈಯ್ಯಾರಾ), ರಾಮಲಿಂಗಂ ಗೌತಮ್ (ಮೆಂಬರ್ಸ್ ಆಫ್ ದಿ ಪ್ರಾಬ್ಲೆಮ್ಯಾಟಿಕ್ ಫ್ಯಾಮಿಲಿ), ರಿಮಾ ದಾಸ್ (ನಾಟ್​ ಎ ಹೀರೋ), ರಿಷಬ್ ಶೆಟ್ಟಿ (ಕಾಂತಾರ: ಎ ಲೆಜೆಂಡ್ - ಅಧ್ಯಾಯ 1), ಆರ್​ ಎಸ್ ಪ್ರಸನ್ನ (ತಾರೆ ಜಮೀನ್ ಪರ್) ಮತ್ತು ಶಾಜಿಯಾ ಇಕ್ಬಾಲ್ (ಧಡಕ್ 2) ಇದ್ದಾರೆ.

ಅತ್ಯುತ್ತಮ ಅಭಿನಯಕ್ಕಾಗಿ ನಾಮನಿರ್ದೇಶನಗೊಂಡವರಲ್ಲಿ ಅಮೀರ್ ಖಾನ್, ರಿಷಬ್ ಶೆಟ್ಟಿ, ಅಹಾನ್ ಪಾಂಡೆ, ಭೂಮನ್ ಭಾರ್ಗವ್ ದಾಸ್, ದುಲ್ಕರ್ ಸಲ್ಮಾನ್, ಮಮ್ಮುಟ್ಟಿ, ರಣ್​ವೀರ್ ಸಿಂಗ್ ಮತ್ತು ಸಂಜಯ್ ಮಿಶ್ರಾ ಇದ್ದಾರೆ. ಅತ್ಯುತ್ತಮ ಪ್ರದರ್ಶನ (ಮಹಿಳೆ) ವಿಭಾಗದಲ್ಲಿ ಅನೀತ್ ಪಡ್ಡಾ, ಕಲ್ಯಾಣಿ ಪ್ರಿಯದರ್ಶನ್, ಕೀರ್ತಿ ಕುಲ್ಹಾರಿ, ನೀನಾ ಗುಪ್ತಾ, ರಾಜಶ್ರೀ ದೇಶಪಾಂಡೆ, ರಾಣಿ ಮುಖರ್ಜಿ, ರಿತುಪರ್ಣಾ ಸೇನ್​​ಗುಪ್ತಾ ಮತ್ತು ಯಾಮಿ ಗೌತಮ್ ಇದ್ದಾರೆ.

ಇದನ್ನೂ ಓದಿ: ನಿನ್ನಂಥ ಸ್ವಾರ್ಥಿನೂ ಪ್ರೀತಿಯಲ್ಲಿ ಬೀಳ್ಬೋದಾ? 'ಕಷ್ಟ ಅನ್ಸುತ್ತೆ' - ಬೋಲ್ಡ್​​ ರೊಮ್ಯಾಂಟಿಕ್​​ ಸೀನ್​​ನಲ್ಲಿ ಯಶ್ ಕಿಯಾ​ರಾ

ನಾಮನಿರ್ದೇಶನಗಳು ಸ್ಟ್ರೀಮಿಂಗ್ ಕಂಟೆಂಟ್​ಗಳನ್ನೂ ಒಳಗೊಂಡಿವೆ. ಕೊಹ್ರಾ: ಸೀಸನ್ 2, ಮಟ್ಕಾ ಕಿಂಗ್, ಸಪ್ನೆ ವರ್ಸಸ್ ಎವ್ರಿಒನ್, ಫ್ರೀಡಂ ಅಟ್ ಮಿಡ್‌ನೈಟ್: ಸೀಸನ್ 2 ಮತ್ತು ದಿ ಬಾ***ಡ್ಸ್ ಆಫ್ ಬಾಲಿವುಡ್‌ನಂತಹ ಸರಣಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಪಿ.ಲಂಕೇಶ್ ಮೊಮ್ಮಗಳು ಇಶಾ ಎಂಟ್ರಿಗೆ ವೇದಿಕೆ ಸಜ್ಜು: ಡೈರೆಕ್ಟರ್ ಯಾರು?

ಆಸ್ಟ್ರೇಲಿಯಾದ ಚಲನಚಿತ್ರೋದ್ಯಮ ಮತ್ತು ಸಾಂಸ್ಕೃತಿಕ ವಲಯದ ಸದಸ್ಯರನ್ನು ಒಳಗೊಂಡ ತೀರ್ಪುಗಾರರ ತಂಡವು ವಿಜೇತರನ್ನು ಆಯ್ಕೆ ಮಾಡುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ, ಈ ವರ್ಷದ ಉತ್ಸವವು ಸಿನಿಮಾಗಳ ಪ್ರಥಮ ಪ್ರದರ್ಶನಗಳು, ವಿಶೇಷ ಪ್ರದರ್ಶನಗಳು, ಪ್ಯಾನಲ್​ ಡಿಸ್ಕಶನ್ಸ್​, ಮಾಸ್ಟರ್‌ಕ್ಲಾಸ್‌ಗಳು ಮತ್ತು ಇಂಡಸ್ಟ್ರಿ ಈವೆಂಟ್ಸ್​​ಗಳನ್ನು ಸಹ ಒಳಗೊಂಡಿರಲಿದೆ.