Fact check: 24 ಗಂಟೆಯಲ್ಲಿ 200M+ ವೀಕ್ಷಣೆಯಾದ 'ಟಾಕ್ಸಿಕ್' ಟೀಸರ್ನಲ್ಲಿ ಯಶ್ ಜೊತೆಗಿರುವ ನಟಿ ಯಾರು?
Fact check: 24 ಗಂಟೆಯಲ್ಲಿ 200 ಮಿಲಿಯನ್ ದಾಖಲೆ ಬರೆದ ಟಾಕ್ಸಿಕ್ ಟೀಸರ್ನಲ್ಲಿ ಯಶ್ ಜೊತೆ ಇರೋ ಸುಂದರಿ ಯಾರು ಗೊತ್ತೆ? ನ್ಯಾಟಲಿ ಬರ್ನ್ ಅಲ್ಲ, ಹಾಗಾದ್ರೆ ಯಾರು?!

By ETV Bharat Entertainment Team
Published : January 10, 2026 at 11:34 AM IST
'ಟಾಕ್ಸಿಕ್' ಟೀಸರ್ ನೋಡಿದ್ರಾ? ಯಶ್ ಸಿನಿಮಾದ ಟೀಸರ್ ಹೇಗಿದೆ? ಇವು ಸದ್ಯ ಬೆಂಗಳೂರಿನ ಗಲ್ಫ್ ರೋಡ್ನಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಿಂದ ಹಿಡಿದು ಬಾಲಿವುಡ್ವರೆಗೂ ಸಾಕಷ್ಟು ಸೆಲೆಬ್ರಿಟಿಗಳ ಬಾಯಲ್ಲಿ ಕೇಳಿ ಬರುತ್ತಿರುವ ಮಾತು. ಇನ್ನೂ, ನೆಟ್ಟಿಗರಂತೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನು ಹರಿಬಿಟ್ಟಿದ್ದಾರೆ.
ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಆದ ಟಾಕ್ಸಿಕ್ ಟೀಸರ್ 24 ಗಂಟೆಗಳಲ್ಲಿ ಬರೋಬ್ಬರಿ 200 ಮಿಲಿಯನ್ಗೂ ಹೆಚ್ಚು ವೀಕ್ಷಣೆಯಾಗುವ ಮೂಲಕ ಸಖತ್ ಟಾಕ್ ಆಗುತ್ತಿದೆ. ಈ ಟೀಸರ್ನಲ್ಲಿ ಯಶ್ ಜೊತೆ ಚೆಲುವೆಯೋರ್ವರು ಕಾಣಿಸಿಕೊಂಡಿದ್ದು, ಆ ಕಾರ್ನಲ್ಲಿದ್ದ ಚೆಲುವೆ ಯಾರು? ಎಂಬುದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಗ್ನಲ್ಲಿದೆ. ಕಾರಣ ಟೀಸರ್‌ನಲ್ಲಿರುವ ಬೋಲ್ಡ್ ದೃಶ್ಯಗಳು.
ಹೌದು, ಯಶ್ ಈವರೆಗೆ ಸ್ಕೀನ್ ಮೇಲೆ ನಟಿಯೊಬ್ಬರಿಗೆ ಇಂಟೆನ್ಸ್ ಕಿಸ್ ಕೂಡಾ ಮಾಡಿಲ್ಲ. ಅಪ್ಪಟ ಫ್ಯಾಮಿಲಿ ಮ್ಯಾನ್. ಆದ್ರೆ ಇಲ್ಲಿ ಗಡಿದಾಟಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಟೀಸರ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಒಂದೆಡೆ ಮೇಕಿಂಗ್ ಬಗ್ಗೆ ಗುಣಗಾನವಾದ್ರೆ, ಮತ್ತೊಂದೆಡೆ ಇಂಥ ದೃಶ್ಯ ಕನ್ನಡದಲ್ಲಿ ಇದೇ ಮೊದಲು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಪಕ್ಕಾ ಹಾಲಿವುಡ್ ಸ್ಟೈಲ್. ಇದು ಹೆಚ್ಚಾಯ್ತು, ಇದು ಕನ್ನಡದ ಟೇಸ್ಟ್ ಅಲ್ಲ, ಕುಟುಂಬ ಸಹಿತ ನೋಡಲು ಸಾಧ್ಯವಿಲ್ಲ, ಕಾರ್ ರೊಮ್ಯಾನ್ಸ್ ಸೀನ್ಸ್ ಸಿನಿಮಾದಲ್ಲಿದ್ರೂ, ಟೀಸರ್ನಲ್ಲಿ ಬೇಕಾಗಿರಲಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ಗಳ ಸುರಿಮಳೆ ಆಗುತ್ತಿದೆ.

ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಬ್ಯೂಟಿಯ ಹೆಸರು ನ್ಯಾಟಲಿ ಬರ್ನ್ (Natalie Burn) ಎಂದು ವ್ಯಾಪಕವಾಗಿ ವರದಿಯಾಗಿದೆ. ಆದ್ರೆ ಟೀಸರ್ನಲ್ಲಿರೋದು ನ್ಯಾಟಲಿ ಬರ್ನ್ ಅಲ್ಲ, ಬದಲಾಗಿ ಬೀಟ್ರಿಜ್ ಟೌಫೆನ್‌ಬಾಚ್. ಈ ಕುರಿತು ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಸ್ಪಷ್ಟನೆ ನೀಡಿದ್ದಾರೆ.
ಗೀತು ಮೋಹನ್‌ದಾಸ್ ನೀಡಿರುವ ಮಾಹಿತಿ ಪ್ರಕಾರ, ಆ ನಟಿ ನ್ಯಾಟಲಿ ಬರ್ನ್ ಅಲ್ಲ. ಅವರ ಹೆಸರು ಬೀಯಾಟ್ರೀಝ್ (Beatriz Taufenbach). ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡು, 'This beauty is my cemetery girl @beatrizbach' ಎಂದು ಬರೆದುಕೊಂಡಿದ್ದಾರೆ.
ಇದೀಗ ಬೀಯಾಟ್ರೀಝ್ ಯಾರು? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಂದ ಹಾಗೆ, ಇವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ 1800+ ಮಂದಿ ಫಾಲೋವರ್ಸ್ ಇದ್ದಾರೆ. ಇವರ ಅಕೌಂಟ್ ಪ್ರೈವೆಟ್ ಆಗಿದೆ.
200 Million+ Views 📈
— KVN Productions (@KvnProductions) January 9, 2026
5.5 Million+ Likes ❤️
24 HOURS OF UNBRIDLED CHAOS🔥🔥🔥
DADDY IS HOME!
Toxic: A Fairy Tale for Grown-Ups in cinemas worldwide on 19-03-2026#DaddyIsHome #ToxicTheMovie@TheNameIsYash#Nayanthara@humasqureshi @advani_kiara @rukminitweets #TaraSutaria… pic.twitter.com/PjJ4BwPZjp
ಬೀಯಾಟ್ರೀಝ್ ಅವರು ಮೂಲತಃ ಬ್ರೆಜಿಲ್ ದೇಶದವರು. ನಟಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿರುವ ಇವರು ಟಾಕ್ಸಿಕ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಹಿಂದೆ ವರದಿಯಾದ ನ್ಯಾಟಲಿ ಬರ್ನ್ (Natalie Burn) ಉಕ್ರೇನ್ ಮೂಲದ ನಟಿ. ಹಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು ಸಿನಿಮಾಗಳಿಗೆ ಕಥೆ ಬರೆಯುತ್ತಾರೆ. ಬರಹಗಾರ್ತಿ ಅಷ್ಟೇ ಅಲ್ಲ, ನಿರ್ಮಾಪಕಿಯೂ ಹೌದು. ಇಂಗ್ಲಿಷ್‌ನಲ್ಲಿ ಕೆಲ ಸಿನಿಮಾ, ಶಾರ್ಟ್ ಫಿಲ್ಮ್ಸ್ ನಿರ್ಮಿಸಿದ್ದಾರೆ. ಹೆವೆನ್ ಹೆಸರಿನ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂದಿರುವ ನ್ಯಾಟಲಿ ಬರ್ನ್, ಬಾರ್ನ್ ಟು ಬರ್ನ್ ಎಂಬ ಸಂಸ್ಥೆಯ ಸಿಇಓ ಕೂಡಾ ಹೌದು. ಆ್ಯಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್ ಅಕಾಡೆಮಿಯ ಸದಸ್ಯೆ.
ನಟಿಯಾಗಿ ದಿ ಎಕ್ಸ್‌ಪೆಂಡೆಬಲ್ಸ್ 3 ಮೆಕ್ಯಾನಿಕ್ ರಿಸರಕ್ಷನ್, ಫಾರ್ಸೆಸ್ಟ್ರೆಸ್, ಕಾಫಿ ಡೇಟ್, ಇನ್ ದಿ ನೇಮ್ ಆಫ್ ಕಿಂಗ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಆಕ್ಸೆಲರೇಷನ್, ಫೋರ್ಟೀಸ್, ದಿ ಪಿಜ್ಜಾ ಟ್ರಿಪ್, ಲವ್ ಹರ್ಟ್, ದಿ ಎನ್‌ಫೋರ್ಸರ್, ಡೆವಿಲ್ಸ್ ಹೋಪ್, ಡೌನ್ ಹಿಲ್ - ಹೀಗೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಆದ್ರೆ ಇವರು ಟಾಕ್ಸಿಕ್ನಲ್ಲಿ ನಟಿಸಿಲ್ಲ
ಈ ಹಿಂದೆ ಯಶ್ ಸಂದರ್ಶನವೊಂದರಲ್ಲಿ ರೊಮ್ಯಾಂಟಿಕ್ ಸೀನ್ ಮಾಡುವಾಗ ಭಯವಾಗುತ್ತದೆ ಎಂದು ಹೇಳುತ್ತಿದ್ದರು. ಈಗ ನೋಡಿದ್ರೆ ಟಾಕ್ಸಿಕ್ ಟೀಸರ್ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಕನ್ನಡದ ಸಿನಿಮಾ ಆದ್ರೂ, ಹಾಲಿವುಡ್ ಶೈಲಿಯ ಮೇಕಿಂಗ್ ಇದ್ರೂ ಕೂಡಾ, ಇಡೀ ಟೀಸರ್ನಲ್ಲಿ ಒಂದೇ ಒಂದು ಕನ್ನಡ ಡೈಲಾಗ್ ಇಲ್ಲ ಅನ್ನೋದು ಕೆಲ ನೆಟ್ಟಿಗರ ಅಸಮಾಧಾನವಾಗಿದೆ.
ಇದನ್ನೂ ಓದಿ: 'ಸು ಫ್ರಮ್ ಸೋ' ಗುರೂಜಿಯ 3 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ಗೆ ರೆಡಿ
ಒಟ್ಟಾರೆ ರಾಯನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ನಾಯಕಿ ಕಿಯಾರಾ ಅಡ್ವಾಣಿ, ನಯನತಾರ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಶಿನಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಬಿಗ್ ಬಜೆಟ್ ಚಿತ್ರ ಮಾರ್ಚ್ 19ಕ್ಕೆ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಅದೇ ದಿನ 2025ರ ಬ್ಲಾಕ್ಬಸ್ಟರ್ ಧುರಂಧರ್ನ ಸೀಕ್ವೆಲ್ ಕೂಡಾ ಬಿಡುಗಡೆ ಆಗುತ್ತಿದ್ದು, ಭರ್ಜರಿ ಬಾಕ್ಸ್ ಆಫೀಸ್ ಫೈಟ್ ಪಕ್ಕಾ ಆಗಿದೆ.
ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳು: ರಾಷ್ಟ್ರಪ್ರಶಸ್ತಿ ಬಳಿಕ ಹೊಂಬಾಳೆ ಫಿಲ್ಮ್ಸ್ನ ಮತ್ತೊಂದು ಮೈಲಿಗಲ್ಲು
ಇನ್ನೂ, 200 ಮಿಲಿಯನ್ಗೆ ಸಂಬಂಧಿಸಿದಂತೆ ಪೋಸ್ಟ್ ಶೇರ್ ಮಾಡಿರುವ ಕೆವಿಎನ್, 24 ಗಂಟೆಯಲ್ಲಿ 200 ಮಿಲಿಯನ್+ ವೀಕ್ಷಣೆ, 5.5 ಮಿಲಿಯನ್+ ಲೈಕ್ಸ್ ಪಡೆದಿದೆ. ಟಾಕ್ಸಿಕ್ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ ಎಂದು ಬರೆದುಕೊಂಡಿದೆ. ಟೀಸರೇ ಇಷ್ಟು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿರುವಾಗ, ಸಿನಿಮಾ ಹೇಗಿರಲಿದೆ? ಎಂಬ ಕುತೂಹಲ ಹುಟ್ಟಿಕೊಂಡಿದೆ.

