ETV Bharat / entertainment

ಶಿವಣ್ಣನ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ​​ಆರ್.ಚಂದ್ರು: ಚಿತ್ರದ ಹೆಸರೇನು ಗೊತ್ತಾ?

ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್​ ಆಗಿದೆ. ಕನ್ನಡದಲ್ಲಿ ಶಿವರಾಜ್​ಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ನಿರ್ಮಾಪಕ ಆರ್.ಚಂದ್ರು ಈ ಚಿತ್ರವನ್ನು ಘೋಷಿಸಿದ್ದಾರೆ.

director-r-chandru-announced-pan-india-movie-with-shivrajkumar
ತೆಲುಗು ನಟ ಸುನೀಲ್, ನಿರ್ದೇಶಕ ಆರ್​.ಚಂದ್ರು ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (ETV Bharat)
author img

By ETV Bharat Entertainment Team

Published : August 29, 2026 at 9:45 AM IST

2 Min Read
Choose ETV Bharat

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಗಳಲ್ಲಿಯೂ ಸಿನಿಮಾಗಳನ್ನು ಮಾಡುತ್ತ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ 'ಬೇಲ್' ಚಿತ್ರದ ಟೀಸರ್ ನಿನ್ನೆಯಷ್ಟೇ ರಿವೀಲ್ ಆಗಿದೆ. ಇದರ ಬೆನ್ನಲ್ಲೇ ಶಿವರಾಜ್​ಕುಮಾರ್ ಜೊತೆಗೆ ಬೇರೆ ರಾಜ್ಯಗಳ ಸೂಪರ್ ಸ್ಟಾರ್​ಗಳು ಅಭಿನಯಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್​ ಆಗಿದೆ.

ವಿನೂತನ ಪ್ರಯತ್ನಗಳಿಂದ ಹೆಸರಾಗಿರುವ ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್.ಚಂದ್ರು ಈಗ ಬಾಲಿವುಡ್​​ಗೆ ನಿರ್ಮಾಪಕರಾಗಿ ಅಡಿಯಿಟ್ಟಿದ್ದಾರೆ. ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆನಂದ್ ಪಂಡಿತ್ ಅವರೊಡಗೂಡಿ ಹಿಂದಿ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿಯೂ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ‌ 'ಒರಿಜಿನಲ್ ಮಾನ್​​ಸ್ಟರ್'(OM) ಎಂದು ನಾಮಕರಣ ಮಾಡಲಾಗಿದೆ. ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲೂ‌ ಸುಪ್ರಸಿದ್ದ ಸ್ಟಾರ್ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ತಿಳಿಯಲಿದೆ.

director-r-chandru-announced-pan-india-movie-with-shivrajkumar
ತೆಲುಗು ನಟ ಸುನೀಲ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (ETV Bharat)

ಎರಡೂವರೆ ವರ್ಷಗಳ ಹಿಂದೆ ಆರ್.ಚಂದ್ರು ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಅವರೊಂದಿಗೆ 'ಕಬ್ಜ' ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರ ಚಂದ್ರು ಅವರಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತ್ತು. ಅದಲ್ಲದೆ ಪ್ರಪಂಚದಾದ್ಯಂತ ಈ ಚಿತ್ರ ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಆರ್ ಚಂದ್ರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಕಬ್ಜ ನಂತರ ಈ ಅದ್ದೂರಿ ಚಿತ್ರದ ನಿರ್ಮಾಣಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದರು. ಇದೀಗ ಆರ್.ಚಂದ್ರು ಅವರು ಶಿವರಾಜಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ನೂತನ ಪ್ಯಾನ್ ಇಂಡಿಯಾ ಚಿತ್ರದ ಆರಂಭೋತ್ಸವವನ್ನು ಬಾಲಿವುಡ್​​ನ ಕೇಂದ್ರಸ್ಥಳವಾದ ಮುಂಬೈನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ.

director-r-chandru-announced-pan-india-movie-with-shivrajkumar
ಒರಿಜಿನಲ್ ಮಾನ್​​ಸ್ಟರ್ ಪೋಸ್ಟರ್​ (ETV Bharat)

ಚಿತ್ರಕ್ಕೆ ಒರಿಜಿನಲ್ ಮಾನ್​ಸ್ಟರ್ ಎಂಬ ಯುನಿವರ್ಸಲ್ ಟೈಟಲ್ ಇಡಲಾಗಿದ್ದು, ಎಲ್ಲಾ ಭಾಷೆಗೂ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ 'OM' ಎಂದು ಸಹ ಕರೆಯಬಹುದು.‌ OM ಎಂದರೆ ಶಿವಣ್ಣ ಅಭಿನಯದ 'ಓಂ' ಕೂಡ ನೆನಪಾಗುತ್ತದೆ. ಕನ್ನಡದಲ್ಲಿ ಶಿವರಾಜಕುಮಾರ್ ಹಾಗೂ ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾ ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

director-r-chandru-announced-pan-india-movie-with-shivrajkumar
ತೆಲುಗು ನಟ ಸುನೀಲ್, ನಿರ್ದೇಶಕ ಆರ್​.ಚಂದ್ರು ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಇತರರು (ETV Bharat)

ಯಶ್, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಆರ್.ಚಂದ್ರು ಅವರಂತಹ ಕನ್ನಡಿಗರು ಪ್ರಸ್ತುತ ಕನ್ನಡದ ಸಿನಿಮಾಗಳನ್ನು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆಪಡುವ ವಿಷಯ.

director-r-chandru-announced-pan-india-movie-with-shivrajkumar
ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಸಂದರ್ಭ (ETV Bharat)

ಸದ್ಯ ಆರ್.ಚಂದ್ರು ನಿರ್ಮಾಣ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ನಟನೆಯ 'ಫಾದರ್' ಚಿತ್ರ ಸಹ ಬಿಡುಗಡೆ ಹಂತದಲ್ಲಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಸಿನಿಮಾದ ಟೀಸರ್​ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಗುತ್ತಿದೆ.

ಇದನ್ನೂ ಓದಿ: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ