ETV Bharat / entertainment

1 ಚಿತ್ರ, 4 ವರ್ಷ, 5 ಚೆಲುವೆಯರು, ಇದು ಕೆಜಿಎಫ್​ ಸ್ಟಾರ್ ಕ್ರೇಜ್​​: 'ಟಾಕ್ಸಿಕ್' ನಟಿಯರ ಬಗ್ಗೆ ನಿರ್ದೇಶಕಿ ಗುಣಗಾನ

ಖ್ಯಾತ ನಿರ್ದೇಶಕಿ ಗೀತು ಮೋಹನ್​ದಾಸ್ ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್'​​ ಚಿತ್ರದ ನಟಿಯರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.​​​

'Toxic' Heroines
'ಟಾಕ್ಸಿಕ್​​' ನಟಿಯರು (Photo: 'Toxic' Film Posters)
author img

By ETV Bharat Entertainment Team

Published : January 7, 2026 at 3:54 PM IST

4 Min Read
Choose ETV Bharat

ಕನ್ನಡ ಚಿತ್ರರಂಗದ ಕೀರ್ತಿ ಯಶ್ ಅವರ 40ನೇ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ಸಂಭ್ರಮಾಚರಣೆ ಆರಂಭಗೊಂಡಿದೆ. ಬೆಂಗಳೂರು ನಗರದಾದ್ಯಂತ ಅಭಿಮಾನಿಗಳು ಬೃಹತ್ ಬ್ಯಾನರ್ಸ್, ಪೋಸ್ಟರ್ಸ್ ಮತ್ತು ಕಟೌಟ್‌ಗಳನ್ನು ಹಾಕಿದ್ದಾರೆ. ಜನನಿಬಿಡ ರಸ್ತೆಗಳಿಂದ ಹಿಡಿದು ಮೆಟ್ರೋ ನಿಲ್ದಾಣಗಳವರೆಗೆ, ರಾಕಿಂಗ್ ಸ್ಟಾರ್‌ನದ್ದೇ ಸದ್ದು. ಇತ್ತೀಚಿನ ವರ್ಷಗಳಲ್ಲಿ ಅವರ ಹುಟ್ಟುಹಬ್ಬವು ಹಬ್ಬದಂತೆ ಭಾಸವಾಗುತ್ತದೆ. ಆದರೆ ಈ ಬಾರಿ ಸಂಭ್ರಮ ದುಪ್ಪಟ್ಟಾಗಿದೆ. ಬಹುನಿರೀಕ್ಷಿತ ಚಿತ್ರದ ಪ್ರಮೋಷನಲ್​ ಕಂಟೆಂಟ್​ ನಾಳೆ ಬೆಳಗ್ಗೆ ಅಭಿಮಾನಿಗಳಿಗೆ ಸಿಗಲಿದ್ದು, ಇಂದು ನಿರ್ದೇಶಕಿ ಗೀತು ಮೋಹನ್​ದಾಸ್ ತಮ್ಮ ಚಿತ್ರದ ನಟಿಯರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.​​​

ಟಾಕ್ಸಿಕ್​​ ಚಿತ್ರದಲ್ಲಿರುವ ಖ್ಯಾತ ನಟಿಯರು

  • ಮೆಲಿಸಾ ಪಾತ್ರದಲ್ಲಿ ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್.
  • ಗಂಗಾ ಪಾತ್ರದಲ್ಲಿ ಸೌತ್ ಲೇಡಿ ಸೂಪರ್​ ಸ್ಟಾರ್ ನಯನತಾರಾ.
  • ನಾದಿಯಾ ಪಾತ್ರದಲ್ಲಿ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ.
  • ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ ಜನಪ್ರಿಯ ನಟಿ ಹುಮಾ ಖುರೇಷಿ.
  • ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ.

ಈ ನಟಿಯರ ಬಗ್ಗೆ ಗೀತು ಮೋಹನ್​ದಾಸ್ ಪೋಸ್ಟ್​ ಶೇರ್ ಮಾಡಿದ್ದಾರೆ. ಫೈಯರ್​ ಸಿಂಬಲ್​​​ನೊಂದಿಗೆ ಮೈ ಗರ್ಲ್ಸ್ ಎಂಬ ಕ್ಯಾಪ್ಟನ್​ ಕೊಟ್ಟಿದ್ದಾರೆ.

ನಯನತಾರಾ: ''ನನ್ನ ನಯನತಾರಾ, ನಯನ್ ಅವರು ಕಮಾಂಡಿಂಗ್​ ಸ್ಕ್ರೀನ್​​​ ಪ್ರೆಸೆನ್ಸ್​​ನೊಂದಿಗೆ, ಎರಡು ದಶಕಗಳ ಕಾಲದ ಗಮನಾರ್ಹ ವೃತ್ತಿಜೀವನದೊಂದಿಗೆ ಸೆಲೆಬ್ರೇಟೆಡ್​ ಸ್ಟಾರ್ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಟಾಕ್ಸಿಕ್‌ನಲ್ಲಿ, ಪ್ರೇಕ್ಷಕರು ಸದ್ದಿಲ್ಲದೇ ಸ್ಫೋಟಗೊಳ್ಳಲು ಕಾಯುತ್ತಿದ್ದ ಪ್ರತಿಭೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ನಯನರನ್ನು ಹಿಂದೆಂದೂ ಪ್ರದರ್ಶಿಸದ ರೀತಿಯಲ್ಲಿ ಚಿತ್ರಿಸಲು ನಾನು ಬಯಸಿದ್ದೆ. ಆದರೆ ಚಿತ್ರೀಕರಣ ಮುಂದುವರೆದಂತೆ, ಅವರ ಸ್ವಂತ ವ್ಯಕ್ತಿತ್ವವು ಪಾತ್ರವನ್ನು ಎಷ್ಟು ನಿಕಟವಾಗಿ ಪ್ರತಿಧ್ವನಿಸಿತು ಎಂಬುದನ್ನು ನಾನು ನೋಡಲಾರಂಭಿಸಿದೆ. ಅದು ಅನುಕರಣೆ ಅಲ್ಲ, ಅದು ಹೊಂದಾಣಿಕೆ. ಅವರು ಪಾತ್ರಕ್ಕೆ ಕೇವಲ ನಟನೆ ಮೂಲಕ ಜೀವ ತುಂಬಲಿಲ್ಲ, ಅವು ಅವರು ಈಗಾಗಲೇ ಹೊಂದಿದ್ದ ಗುಣಗಳಾಗಿದ್ದವು. ನಾನು ನನ್ನ ಗಂಗಾಳನ್ನು ಕಂಡುಕೊಂಡೆ, ಅವರು ತುಂಬಾ ಅದ್ಭುತವಾಗಿ ನಿರ್ವಹಿಸಿದರು, ಅನಿರೀಕ್ಷಿತಕ್ಕೂ ಹೆಚ್ಚು.. ನನಗೋರ್ವ ಆತ್ಮೀಯ ಸ್ನೇಹಿತೆ ಸಿಕ್ಕಿದ್ದಾಳೆ. ಐ ಲವ್​ ಯು ನಯನ್​​'' ಎಂದು ಬರೆದುಕೊಂಡಿದ್ದಾರೆ.

ತಾರಾ ಸುತಾರಿಯಾ: ''ನನ್ನ ತಾರಾ, ತಾರಾಳನ್ನು ರಕ್ಷಿಸುವ ಸಹಜ ಪ್ರೀತಿ ನನ್ನಲ್ಲಿ ಸದಾ ಇದ್ದೇ ಇರುತ್ತದೆ. ಬಹುಶಃ ಅವರು ಸಂರಕ್ಷಿತ ಆತ್ಮವಾಗಿರಬಹುದು. ಬಹುಶಃ ಅದನ್ನು ವ್ಯಾಖ್ಯಾನಿಸುವ ಅಗತ್ಯವಿಲ್ಲ. ಅವರನ್ನು ತಲುಪಲು ಉತ್ತಮ ಮಾರ್ಗ ಎಂದರೆ ಒತ್ತಾಯಿಸುವುದಲ್ಲ, ಡಿಮ್ಯಾಂಡ್​ ಮಾಡೋದಲ್ಲ, ಬದಲಾಗಿ ಅವರಿಗೆ ಸರಳವಾಗಿರಲು ಅಥವಾ ಅವರಿದ್ದಂತೆ ಬಿಡಲು ಅವಕಾಶ ನೀಡುವುದು ಎಂಬುದನ್ನು ನಾನು ಮೊದಲೇ ಅರಿತುಕೊಂಡೆ. ಆ ಆಯ್ಕೆಯು ನಮ್ಮ ಈಕ್ವೇಶನ್​​​ನನ್ನು ರೂಪಿಸಿತು. ವೃತ್ತಿಪರ ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡಿದ್ದರು. ಅವರು ಮಾತನಾಡುವುದಕ್ಕಿಂತ ಹೆಚ್ಚಾಗಿ ಗಮನ ಹರಿಸುತ್ತಿದ್ದರು. ಅವರು ಮಾತನಾಡುವುದಕ್ಕಿಂತ ಹೆಚ್ಚಾಗಿ ಕೇಳುತ್ತಿದ್ದರು. ಅವರಿಗೆ ಹೆಚ್ಚು ಹತ್ತಿರದಿಂದ ಮಾರ್ಗದರ್ಶನ ನೀಡಬೇಕೇ ಎಂದು ನಾನು ಆಗಾಗ್ಗೆ ಯೋಚಿಸುತ್ತಿದ್ದೆ. ಆದರೆ ಅವರ ಆ ಮೌನದಲ್ಲಿ, ಏನೋ ಶಕ್ತಿ ಹುದುಗುತ್ತಿತ್ತು. ಕೊನೆಗೂ ತಮ್ಮ ಪಾತ್ರ, ಅಭಿನಯಕ್ಕೆ ಕಾಲಿಟ್ಟಾಗ, ಅವರೊಳಗಿನ ತಿಳುವಳಿಕೆಯಿಂದ ಹುಟ್ಟಿಕೊಂಡ ಅದ್ಭುತವಾದ ಅಭಿನಯ ಬ್ರೀಥ್​ಟೇಕಿಂಗ್​ ಆಗಿತ್ತು. ಅವರು ನನ್ನನ್ನು ಅತ್ಯಂತ ಸುಂದರ ರೀತಿಯಲ್ಲಿ ಅಚ್ಚರಿಗೊಳಿಸಿದರು. ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಐ ಲವ್​ ಯೂ ತಾರಾ'' ಎಂದು ಬರೆದುಕೊಂಡಿದ್ದಾರೆ.

ರುಕ್ಮಿಣಿ ವಸಂತ್: ''ನನ್ನ ರುಕ್ಮಿಣಿ, ರುಕ್ಮಿಣಿ ಬಗ್ಗೆ ನನಗೆ ಬಹಳ ಇಷ್ಟವಾಗುವ ವಿಷಯವೆಂದರೆ ನಟಿಯಾಗಿ ಅವರ ಇಂಟಲಿಜೆನ್ಸ್. ಅವರು ಕೇವಲ ಅಭಿನಯಿಸೋದಿಲ್ಲ, ಅವರದನ್ನು ಪ್ರೊಸೆಸ್​ ಮಾಡುತ್ತಾರೆ. ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಅನುಮಾನದಿಂದಲ್ಲ, ಬದಲಾಗಿ ಕುತೂಹಲದಿಂದ. ಇದು ನನ್ನನ್ನು ಮತ್ತಷ್ಟು ಆಳವಾಗಿ ಯೋಚಿಸುವಂತೆ ಮಾಡುತ್ತದೆ ಮತ್ತು ಕೆಲವೊಮ್ಮೆ ನಿರ್ದೇಶಕಿಯಾಗಿ ನನ್ನ ಸ್ವಂತ ಆಯ್ಕೆಗಳನ್ನು ಸಹ ಯೋಚಿಸುವಂತೆ ಮಾಡುತ್ತದೆ. ಅವರ ಕೆಲಸವನ್ನು ನೋಡುವಾಗ, ಪರದೆ ಮೇಲೆ ಮತ್ತಷ್ಟು ವ್ಯಕ್ತವಾಗಬೇಕಾದದ್ದು ಇದೆ ಎಂದು ನನಗನಿಸುತ್ತದೆ. ಶೂಟಿಂಗ್ ನಡುವೆ, ಅವರು ಸದ್ದಿಲ್ಲದೇ ಬರೆಯುವುದನ್ನು, ಆಲೋಚನೆಗಳನ್ನು ಸೆರೆಹಿಡಿಯೋದನ್ನು, ಹೀಗೆ ಸಕ್ರಿಯರಾಗಿರೋದನ್ನು ನಾನು ಆಗಾಗ್ಗೆ ನೋಡಿದ್ದೇನೆ. ಆ ಕ್ಷಣಗಳು ಅವರ ಪ್ರೊಸೆಸ್ ಬಗ್ಗೆ ಬಹಳಷ್ಟು ಹೇಳುತ್ತವೆ. ಅವರು ನಿರಂತರವಾಗಿ ತಮ್ಮದೇ ಆದ ಆಂತರಿಕ ಪ್ರಪಂಚವನ್ನು ನಿರ್ಮಿಸುತ್ತಿದ್ದಾರೆ. ಅವರ ಅಪ್ರೋಚ್​ ನಂಬಲಾಗದಷ್ಟು ಚಿಂತನಾಶೀಲವಾಗಿದೆ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಅಂಥ ಅದ್ಭುತ ಪ್ರದರ್ಶನದ (ನಟನೆ) ಹಿಂದಿನ ಮನಸ್ಸನ್ನು ಅರ್ಥಮಾಡಿಕೊಳ್ಳಲು ನಾನು ಆ ಪುಟಗಳನ್ನು ಕದ್ದು ಅವುಗಳನ್ನು ಓದಬಹುದೆಂದು ಬಯಸುತ್ತೇನೆ. ಐ ಲವ್ ಯು ರುಕ್ಮಿಣಿ'' ಎಂದು ಬರೆದುಕೊಂಡಿದ್ದಾರೆ.

ಹುಮಾ ಖುರೇಶಿ: ''ನನ್ನ ಹುಮಾ, ಈ ಪಾತ್ರಕ್ಕೆ ನಟಿಯ ಆಯ್ಕೆ ಅತ್ಯಂತ ಕಷ್ಟಕರವಾಗಿತ್ತು. ಈ ರೋಲ್​ಗೆ ಹೈ-ಆಕ್ಟೇನ್ ಕ್ಯಾಲಿಬರ್ ಮತ್ತು ನಿರಾಕರಿಸಲಾಗದ ಸ್ಕ್ರೀನ್​​ ಪ್ರೆಸೆನ್ಸ್ ಹೊಂದಿರುವ ಕಲಾವಿದರ ಅಗತ್ಯವಿತ್ತು. ಹುಮಾ ನನ್ನ ಫ್ರೇಮ್​​​​ನೊಳಗೆ ಪ್ರವೇಶಿಸಿದ ಕ್ಷಣದಿಂದಲೇ, ಅವರಲ್ಲಿ ಅಪರೂಪದ ಏನೋ ಒಂದು ಆಕರ್ಷಣೆ ಇರುವುದನ್ನು ನಾನು ಗಮನಿಸಿದೆ. ಅವರು ಸಲೀಸಾಗಿ ನಿರ್ವಹಿಸುತ್ತಿದ್ದ ಎಲಿಜಬೆತ್ ಪಾತ್ರ ತಕ್ಷಣವೇ ಜೀವಂತಗೊಂಡಿತು. ಹುಮಾ, ಪಾತ್ರದ ಕಲಾತ್ಮಕ ವ್ಯಾಖ್ಯಾನವನ್ನು ಪ್ರಶ್ನಿಸುತ್ತಾರೆ, ಪರಿಶೀಲಿಸುತ್ತಾರೆ ಮತ್ತು ಸವಾಲು ಹಾಕುತ್ತಾರೆ. ಮತ್ತು ಆ ಡೈಲಾಗ್​ ನಮ್ಮ ಸೃಜನಶೀಲ ಪ್ರಯಾಣದ ಅತ್ಯಗತ್ಯ ಭಾಗವಾಯಿತು. ಅವರು ಸದಾ ಟ್ಯಾಲೆಂಟ್​ನ ಪವರ್​ ಹೌಸ್​ ಎಂದು ಹೆಸರುವಾಸಿಯಾಗಿದ್ದಾರೆ. ಆದರೆ ಈ ಪ್ರದರ್ಶನವು ಒಂದು ಟರ್ನಿಂಗ್​ ಪಾಯಿಂಟ್. ಐ ಲವ್​ ಯು ಹುಮಾ'' ಎಂದು ಬರೆದುಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ: ಆ್ಯಂಡ್​ ಫೈನಲಿ, ಮೈ ಕಿಯಾರಾ, ಕೆಲ ಪ್ರದರ್ಶನಗಳು ಕೇವಲ ಒಂದು ಚಲನಚಿತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಅವು ಕಲಾವಿದರನ್ನು ಮರು ವ್ಯಾಖ್ಯಾನಿಸುತ್ತವೆ. ಕಿಯಾರಾ ಪರದೆ ಮೇಲೆ ಸೃಷ್ಟಿಸಿದ್ದು ಬೇರೆನಲ್ಲ ಒಂದು ಪರಿವರ್ತಕ. ನಮ್ಮ ಮೊದಲ ಮಾತುಕತೆಯಿಂದಲೇ, ಅವರು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಕಲಾತ್ಮಕವಾಗಿ ಎಲ್ಲವನ್ನೂ ಬೇಡುವ ಪಾತ್ರದ ಮೇಲೆ ಅಚಲ ನಂಬಿಕೆ ಇಟ್ಟರು. ಅವರು ಕೇವಲ ಪಾತ್ರವನ್ನು ನಿರ್ವಹಿಸಲಿಲ್ಲ, ಅದರಲ್ಲಿ ಜೀವಿಸಿದರು. ಓರ್ವ ನಿರ್ದೇಶಕಿಯಾಗಿ, ನಾನು ಅವರ ಬಗ್ಗೆ ಮತ್ತು ಅವರು ನೀಡಿರುವ ಅದ್ಭುತ ಅಭಿನಯಕ್ಕಾಗಿ ಹಾಗೂ ನಮ್ಮ ಪ್ರಯಾಣದಲ್ಲಿ ಅವರು ತಂದ ನಂಬಿಕೆಗಾಗಿ ತುಂಬಾ ಹೆಮ್ಮೆಪಡುತ್ತೇನೆ. ಐ ಲವ್​ ಯು ಕಿಯಾರಾ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ

ಬಹುನಿರೀಕ್ಷಿತ ಟಾಕ್ಸಿಕ್ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ವೆಂಕಟ್ ಕೆ.ನಾರಾಯಣ್​ ಮತ್ತು ಯಶ್ ನಿರ್ಮಿಸುತ್ತಿರುವ ಈ ಚಿತ್ರ, ಮಾರ್ಚ್​ 19ಕ್ಕೆ ಸಿನಿಮಾ ಪ್ಯಾನ್​ ವರ್ಲ್ಡ್​​ ಲೆವೆಲ್​ನಲ್ಲಿ ಬಿಡುಗಡೆ ಆಗಲಿದೆ. ಯಶ್​ ಅವರ ಕೊನೆಯ ಬ್ಲಾಕ್​ಬಸ್ಟರ್ ಕೆಜಿಎಫ್​ 2 ತೆರೆಕಂಡು 4 ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವ ಸಿನಿಮಾ ಆದ ಹಿನ್ನೆಲೆ, ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು: ಮೆಟ್ರೋದಲ್ಲಿ ರಾಕಿಂಗ್​ ಸ್ಟಾರ್ ಯಶ್ ಬರ್ತ್​ಡೇ ಪೋಸ್ಟರ್