ETV Bharat / entertainment

ಸಾರಾ ಮಹೇಶ್ ನಿರ್ಮಾಣದಲ್ಲಿ 'ಸೆಲೆಬ್ರಿಟಿ': ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಅಶ್ವಿನ್, ಪ್ರಿಯಾಂಕಾ ಆಚಾರ್ ಹೆಜ್ಜೆ

'ಸೆಲೆಬ್ರಿಟಿ' ಸಿನಿಮಾದ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗೆ ಮೇಲುಕೋಟೆಯಲ್ಲಿ ನಡೆಸಲಾಗಿದೆ.

Celebrity Film cast
'ಸೆಲೆಬ್ರಿಟಿ' ಚಿತ್ರತಂಡ (ETV Bharat)
author img

By ETV Bharat Entertainment Team

Published : July 9, 2026 at 11:16 AM IST

2 Min Read
Choose ETV Bharat

ಗೌರಿ ಆರ್ಟ್ಸ್ ಬ್ಯಾನರ್‌ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರ 'ಸೆಲೆಬ್ರಿಟಿ'. ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಯಚವಾಗುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.‌ ಇತ್ತೀಚೆಗೆ ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

ನಾಯಕ ಹಾಗೂ ನಾಯಕಿಯ ಕಪಲ್ ಸಾಂಗ್ ಇದಾಗಿದ್ದು, ಫೇಮಸ್​ ಕೊರಿಯೋಗ್ರಾಫರ್​ ಜಾನಿ ಮಾಸ್ಟರ್ ಕೊರಿಯೋಗ್ರಾಫಿ ಮಾಡಿದ್ದಾರೆ. ನಾಯಕ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Celebrity Film cast
'ಸೆಲೆಬ್ರಿಟಿ' ಚಿತ್ರತಂಡ (ETV Bharat)

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಖ್ಯಾತಿ ಹೊಂದಿರುವ ಕೊರಿಯೋಗ್ರಾಫರ್​ ಜಾನಿ ಮಾಸ್ಟರ್ ಮಾತನಾಡಿ, ಇದು ಮೆಲೋಡಿ ಸಾಂಗ್. ದೊಡ್ದ ಸ್ಟಾರ್​ಗೆ ಕೊರಿಯೋಗ್ರಾಫಿ ಮಾಡುವಾಗ ಕಷ್ಟವಾಗುತ್ತದೆ. ಅವರಿಗೆ ಅವರದ್ದೇ ಆದ ಇಮೇಜ್ ಇರುತ್ತದೆ. ಆ ಇಮೇಜ್ ಮ್ಯಾಚ್ ಮಾಡುವ ರೀತಿ ಕೊರಿಯೋಗ್ರಾಫಿ ಮಾಡಬೇಕು. ಆದರೆ ಹೊಸಬರು ಎಫರ್ಟ್ ಹಾಕಿ ಮಾಡುತ್ತಾರೆ.‌ ಅವರು ಬೆಸ್ಟ್ ಕೊಡಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಇವರಿಗೆ ಹೇಳಿ ಕೊಡುವುದು ಸುಲಭ. ಹೊಸಬರು ಇದ್ರೆ ನಾವು ಮತ್ತಷ್ಟು ಕ್ರಿಯೇಟಿವಿಟಿಯಾಗಿ ಕೆಲಸ ಮಾಡುತ್ತೇವೆ. ಅಶ್ವಿನ್ ಈ ಹಾಡಿಗೆ ನಾಲ್ಕು ದಿನ ರಿಹರ್ಸಲ್ ಮಾಡಿದ್ದಾರೆ. ಅವನು ತುಂಬಾನೇ ಹಾರ್ಡ್ ವರ್ಕರ್. ನನಗೋಸ್ಕರ ಈ ತಂಡ ಒಂದೂವರೆ ವರ್ಷದಿಂದ ಕಾದಿದೆ. ನಾವು ಮಾಡಿದ್ರೆ ಇವರ ಜೊತೆಯೇ ಕೆಲಸ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಈ ತಂಡದ ಜೊತೆ ಕೈ ಜೋಡಿಸಿದೆ ಎಂದು ತಿಳಿಸಿದರು.

Celebrity Film cast
'ಸೆಲೆಬ್ರಿಟಿ' ಚಿತ್ರತಂಡ (ETV Bharat)

ನಟ ಅಶ್ವಿನ್ ಮಾತನಾಡಿ, ಚಿತ್ರದಲ್ಲಿ ಕಪಲ್ ಸಾಂಗ್ ಇದೆ.‌ ಅದನ್ನು ಮೇಲುಕೋಟೆಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಅದರಂತೆ ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಾನಿ ಮಾಸ್ಟರ್ ಮೇಲುಕೋಟೆಯಲ್ಲಿ ಮೊದಲ ಬಾರಿಗೆ ಭಾಗಿಯಾಗಿ ಕೊರಿಯೋಗ್ರಾಫಿ ಮಾಡಿದ್ದಾರೆ. ನನಗೆ ಜಾನಿ ಮಾಸ್ಟರ್ ಅಂದ್ರೆ ಬಹಳ ಇಷ್ಟ. ಈ ಚಿತ್ರದಲ್ಲಿ ಹುಕ್ ಸ್ಟೆಪ್ಸ್ ನಿರೀಕ್ಷೆ ಮಾಡಬಹುದು. ಜಾನಿ ಮಾಸ್ಟರ್ ಸುಲಭವಾದ ಸ್ಟೆಪ್ಸ್ ಹೇಳಿಕೊಡುವುದಿಲ್ಲ. ಇನ್ನೂ ಹೀರೋಯಿನ್ ಹೊಗಳುವ ಹಾಡು ಇದಾಗಿದೆ ಎಂದು ಹೇಳಿದರು.

ನಟಿ ಪ್ರಿಯಾಂಕಾ ಆಚಾರ್ ಮಾತನಾಡಿ, ಇದೊಂದು ಒಳ್ಳೆ ತಂಡ. ಈ ಟೀಂ ಜೊತೆ ಹಾಗೂ ಪ್ರೊಡಕ್ಷನ್ ಹೌಸ್ ಜೊತೆ ಕೆಲಸ ಮಾಡುವ ಅದೃಷ್ಟ ನನ್ನದಾಗಿದೆ. ಇನ್ನೂ ಹತ್ತು ದಿನ ಮಾತ್ರ ನನ್ನ ಭಾಗದ ಚಿತ್ರೀಕರಣ ಇದೆ. ಶೂಟಿಂಗ್​​ಗೂ ಮೊದಲು ವರ್ಕ್ ಶಾಪ್ ಮಾಡುತ್ತೇವೆ. ಅಶ್ವಿನ್ ಸರ್ ತುಂಬಾ ಹಾರ್ಡ್ ವರ್ಕರ್. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ‌ಸಿರಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಯೂಟ್ಯೂಬರ್ ಆಗಿ ಕಾಣಿ ಕಾಣಿಸಿಕೊಳ್ಳುತ್ತಿದ್ದೇನೆ. ನಮ್ಮ ನಿರ್ಮಾಪಕಿ ಸುಷ್ಮಾ ಮೇಡಂ ತುಂಬಾ ಸ್ವೀಟ್. ತುಂಬಾ ಕೂಲ್. ಇವತ್ತು ನನ್ನ ಹೊಗಳುವ ಹಾಡನ್ನು ಚಿತ್ರೀಕರಣ ಮಾಡಿದ್ದೇವೆ. ಜಾನಿ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಹೆಜ್ಜೆ ಹಾಕಿರುವುದು ತುಂಬಾನೆ ಖುಷಿ ಇದೆ ಎಂದರು.

ಇದನ್ನೂ ಓದಿ: ವಿಚ್ಛೇದನ ಪಡೆಯುತ್ತಿರುವುದಾಗಿ ಬಹಿರಂಗಪಡಿಸಿದ ಬಳಿಕ ಪತ್ನಿ ಭೇಟಿಗಾಗಿ ಲಾಕ್ ಅಪ್‌ಗೆ ಬಂದ ಬಿಗ್​​​ಬಾಸ್​​ ವಿಜೇತ ಗೌರವ್​ ಖನ್ನಾ

ಕಿರಣ್ ವಿಶ್ವನಾಥ್ ಸೆಲೆಬ್ರಿಟಿ‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಾರೇ ನೀನು ಚೆಲುವೆ ಸಿನಿಮಾ ಖ್ಯಾತಿಯ ಸಂಗೀತಾ ಅವರು ಹಲವು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಆಗುತ್ತಿದ್ದಾರೆ. ಸುರೇಶ್ ಬಾಬು ಸಿಬಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯವಿದೆ. ಇದೇ ವರ್ಷ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: 'ಬೆಸ್ಟ್​​ ಗಿಫ್ಟ್': ತಮ್ಮದೇ ಬಯೋಪಿಕ್​​ನ ಪೋಸ್ಟರ್​ಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು ಹೀಗೆ