ETV Bharat / entertainment

ಬಾಲ ಕಲಾವಿದೆ, ನಟಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ To ಟಾಕ್ಸಿಕ್​​​: ಗೀತು ಮೋಹನ್​​ದಾಸ್ ಸಿನಿ ಪ್ರಯಾಣ

ಗೀತು ಮೋಹನ್‍ದಾಸ್ ಅವರು ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್' ಮೂಲಕ ಮೈನ್​ಸ್ಟ್ರೀಮ್​ ಡೈರೆಕ್ಟರ್ ಆಗಿ ಪರಿವರ್ತನೆಗೊಂಡಿದ್ದಾರೆ. ಮೆಚ್ಚುಗೆ ಗಳಿಸಿದ ಚಿತ್ರಗಳಾದ ಲೈಯರ್ಸ್ ಡೈಸ್ ಮತ್ತು ಮೂಥಾನ್ ನಂತರ ಇದು ನಿರ್ದೇಶಕಿಯ ಅತಿದೊಡ್ಡ ಪ್ರಾಜೆಕ್ಟ್​.

Geetu Mohandas Journey To Yash's Toxic
ಗೀತು ಮೋಹನ್​​ದಾಸ್, ಯಶ್ (Photo: Getty/ Film Poster)
author img

By ETV Bharat Entertainment Team

Published : April 22, 2026 at 4:41 PM IST

3 Min Read
Choose ETV Bharat

ಕೆಜಿಎಫ್​​ ಸ್ಟಾರ್ ಯಶ್​ ಮುಖ್ಯಭೂಮಿಕೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಇದೇ ಸಾಲಿನ ಜೂನ್​​​ 4ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಸುತ್ತಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಈ ಚಿತ್ರಕ್ಕೆ ಲೇಡಿ ಡೈರೆಕ್ಟರ್ ಗೀತು ಮೋಹನ್​​ದಾಸ್ ಆ್ಯಕ್ಷನ್​ ಕಟ್ ಹೇಳಿರುವುದು ವಿಶೇಷ.

ಬಾಲನಟಿಯಾಗಿ ಚಿತ್ರರಂಗದಲ್ಲಿ ಪಯಣ ಪ್ರಾರಂಭಿಸಿ, ಪ್ರಶಸ್ತಿ ವಿಜೇತ ಸಿನಿಮಾಗೆ ಕಾಲಿಟ್ಟು, ಈಗ ಭಾರತದ ಅತ್ಯಂತ ದುಬಾರಿ ಪ್ರಾಜೆಕ್ಟ್​​ಗಳಲ್ಲಿ ಒಂದಾಗಿರುವ ಯಶ್​ ಮುಖ್ಯಭೂಮಿಕೆಯ ಟಾಕ್ಸಿಕ್ ನಿರ್ದೇಶಿಸುತ್ತಿರುವ ಇವರ ಪ್ರಯಾಣವು ಪ್ರಯೋಗಾತ್ಮಕ ಮತ್ತು ಕಲಾತ್ಮಕ ದೃಢವಿಶ್ವಾಸದ ಮೇಲೆ ನಿರ್ಮಾಣಗೊಂಡಿರುವಂತೆ ತೋರುತ್ತಿದೆ. ಕೆಜಿಎಫ್​ನಲ್ಲಿ ಅಮೋಘ ಅಭಿನಯದಿಂದ ವಿಶ್ವಾದ್ಯಂತ ಜನಪ್ರಿಯರಾಗಿರುವ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಮೂಲಕ, ಅವರು ತಮ್ಮ ಹಿಂದಿನ ಕೆಲಸಗಳ ಅನುಭವಗಳೊಂದಿಗೆ ಮುಖ್ಯವಾಹಿನಿಯ ಸಿನಿಮಾಗೆ ದೃಢವಾಗಿ ಹೆಜ್ಜೆ ಹಾಕುತ್ತಿದ್ದಾರೆ.

1981ರ ಜೂನ್ 8ರಂದು ಗಾಯತ್ರಿ ದಾಸ್ ಆಗಿ ಜನಿಸಿದ ಗೀತು ಮೋಹನ್​​ದಾಸ್, ಮೋಹನ್ ಲಾಲ್ ನಟಿಸಿದ ಮಲಯಾಳಂ ಚಿತ್ರ 'ಒನ್ನು ಮುತಲ್ ಪೂಜ್ಯಂ ವಾರೆ' (1986)ನಲ್ಲಿ ಬಾಲ ಕಲಾವಿದೆಯಾಗಿ ನಟನೆ ಪ್ರಾರಂಭಿಸಿದರು. ಇವರ ಅಭಿನಯ ವ್ಯಾಪಕ ಪ್ರಶಂಸೆ ಗಳಿಸಿತ್ತು. ಅಲ್ಲದೇ ಅತ್ಯುತ್ತಮ ಬಾಲ ಕಲಾವಿದೆ ವಿಭಾಗದಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. 1980ರ ದಶಕದ ಅಂತ್ಯದವರೆಗೂ ಅವರು ನಟನೆಯನ್ನು ಮುಂದುವರೆಸಿದರು. ನಂತರ ಲೈಫ್ ಈಸ್ ಬ್ಯೂಟಿಫುಲ್ (2000), ತೆಂಕಸಿ ಪಟ್ಟಣಂ (2002) ಮತ್ತು ನಮ್ಮಲ್ ತಮ್ಮಿಲ್ (2004)ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು.

ನಟಿಯಾಗಿ 'ಅಕಾಲೆ' (2004) ಚಿತ್ರದೊಂದಿಗೆ ಪ್ರಗತಿ ಕಂಡರು. ಇದು ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತ್ತು. ಯಶಸ್ವಿ ನಟನಾ ವೃತ್ತಿಜೀವನದ ಹೊರತಾಗಿಯೂ ಗೀತು ಮೋಹನ್​​ದಾಸ್ ಕಥೆ ಹೇಳುವತ್ತ ಗಮನ ಹರಿಸಿದರು. ಕ್ಯಾಮರಾ ಹಿಂದಿನ ಕೆಲಸಗಳತ್ತ ಒಲವು ತೋರಿದರು.

ಟಾಕ್ಸಿಕ್​​ ಡೈರೆಕ್ಟರ್​​ನ ನಿರ್ದೇಶನಾ ಪ್ರಯಾಣವು 2009ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ "ಕೇಲ್ಕುನ್ನುಂಡೋ" ಎಂಬ ಕಿರುಚಿತ್ರದೊಂದಿಗೆ ಶುರುವಾಯಿತು. ಅವರ ಅನ್‌ಪ್ಲಗ್ಡ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಶಾರ್ಟ್ ಫಿಲ್ಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರೋಟರ್‌ಡಮ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.ಭಾರತದ ಅತ್ಯುತ್ತಮ ಕಿರುಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಬಹು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಗೆದ್ದುಕೊಂಡಿತು. ಈ ಯೋಜನೆಯು ಅವರ ಸ್ವತಂತ್ರ್ಯ ಸಿನಿಮಾ ಪ್ರವೇಶವಾಗಿತ್ತು. ನಂತರ ಆತ್ಮೀಯ, ಪಾತ್ರ-ಚಾಲಿತ ಕಥೆಗಳಲ್ಲಿ ಆಸಕ್ತಿ ಹೊಂದಿರುವ ಫಿಲ್ಮ್​​ಮೇಕರ್ ಆಗಿ ಗುರುತಿಸಿಕೊಂಡರು.

ಬಳಿಕ ಅವರು ತಮ್ಮ ಮೊದಲ ನಿರ್ದೇಶನದ 'ಲೈಯರ್ಸ್ ಡೈಸ್' (2013, ಹಿಂದಿ) ಚಿತ್ರದೊಂದಿಗೆ (ಹಿರಿತೆರೆ) ಪ್ರಯಾಣ ಮುಂದುವರಿಸಿದರು. ಈ ಸೋಷಿಯಲ್ ಪೊಲಿಟಿಕಲ್ ಡ್ರಾಮಾ 2014ರಲ್ಲಿ ಸನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅಲ್ಲದೇ ಇದು ಪ್ರತಿಷ್ಠಿತ 87ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿತ್ತು. ಈ ಚಿತ್ರದ ವಿಮರ್ಶಾತ್ಮಕ ಮೆಚ್ಚುಗೆಯು ಮೋಹನ್ ದಾಸ್ ಅವರನ್ನು ಜಾಗತಿಕ ಮನ್ನಣೆಯೊಂದಿಗೆ ಭರವಸೆಯ ಸ್ವತಂತ್ರ ನಿರ್ದೇಶಕಿಯಾಗಿ ಗುರುತಿಸಿತು.

2019ರಲ್ಲಿ ಬಿಡುಗಡೆಯಾದ ಅವರ 2ನೇ ಸಿನಿಮಾ ಮೂಥಾನ್ (ಮಲಯಾಳಂ/ಹಿಂದಿ) ಅವರ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿತು. ಈ ಯೋಜನೆಗಾಗಿ ಸನ್‌ಡಾನ್ಸ್‌ನಲ್ಲಿ ಜಾಗತಿಕ ಫಿಲ್ಮ್​​ಮೇಕರ್ ಪ್ರಶಸ್ತಿಯನ್ನು ಪಡೆದರು. 2019ರಲ್ಲಿ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅದೇ ವರ್ಷ ಮುಂಬೈ ಚಲನಚಿತ್ರೋತ್ಸವ ಈ ಸಿನಿಮಾದೊಂದಿಗೆ ಉದ್ಘಾಟನೆಗೊಂಡಿತ್ತು.

ಇದನ್ನೂ ಓದಿ: 'ದರ್ಶನ್ ಮತ್ತು ನನ್ನ ಹೆಸರಿನ ದುರ್ಬಳಕೆ': ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್​ ತೂಗುದೀಪ ಆಕ್ರೋಶ

ಇದೀಗ, ಗೀತು ಮೋಹನ್​​ದಾಸ್ 'ಟಾಕ್ಸಿಕ್' ಚಿತ್ರದ ಮೂಲಕ ಮುಖ್ಯವಾಹಿನಿಗೆ ಕಾಲಿಡುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು ರಾಯ ಮತ್ತು ಟಿಕೆಟ್ ಪಾತ್ರಗಳಲ್ಲಿ ಯಶ್ ಅವರನ್ನು ದ್ವಿಪಾತ್ರದಲ್ಲಿ ತೋರಿಸಲಿದ್ದು, ಒಂದು ಅವಧಿಯ ದರೋಡೆಕೋರ ಸಿನಿಮಾವಾಗಿದೆ. ಈ ಸಿನಿಮಾ ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗಿದ್ದು, 700–800 ಕೋಟಿ ರೂ.ಗಳ ಬಜೆಟ್ ಹೊಂದಿದೆ ಎಂದು ವರದಿಯಾಗಿದೆ. ಹಾಗಾಗಿ ಇದು ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ಇದು ಆರಂಭವಷ್ಟೇ': ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಗಣೇಶ್ ಅಭಿಮಾನಿಗಳಿಗೆ ಕೊಟ್ಟ ಭರವಸೆಯೇನು?

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್', ಜೂನ್ 4, 2026ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದು ಯಶ್​ ಮತ್ತು ಗೀತು ಮೋಹನ್​​ದಾಸ್ ಇಬ್ಬರಿಗೂ ಪ್ರತಿಷ್ಠೆಯ ಸಿನಿಮಾ ಆಗಿದೆ.