ETV Bharat / entertainment

ಇದು ವಿಧಿ ಬರೆದ ಕಥೆ ಅಲ್ಲ, ನನಗೆ ನಾನೇ ಬರೆದುಕೊಂಡ ಸಾಧಾರಣ ಕಥೆ: ನಟ‌ ನೀನಾಸಂ ಸತೀಶ್

ನಟ ನೀನಾಸಂ ಸತೀಶ್​​ ಅವರ ರೈಸ್​​​​​ ಆಫ್​​​​​ ಅಶೋಕ ಚಿತ್ರ ಶುಕ್ರವಾರ ತೆರೆ ಮೇಲೆ ಬಿಡುಗಡೆಗೊಂಡಿದೆ. ಈ ಬೆನ್ನಲ್ಲೇ ನಟ ತಮ್ಮ ಸಿನಿಮಾ ಜರ್ನಿ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

NINASAM SATHISH CINEMATIC JOURNEY  ನಟ‌ ನೀನಾಸಂ ಸತೀಶ್  ರೈಸ್​​ ಆಫ್​​ ಅಶೋಕ  THE RISE OF ASHOKA
ನಟ ನೀನಾಸಂ ಸತೀಶ್ ಸಿನಿಮಾ ಜರ್ನಿ ವಿಡಿಯೋ ಬಿಡುಗಡೆ (ACTOR NINASAM SATHISH)
author img

By ETV Bharat Karnataka Team

Published : February 28, 2026 at 1:51 PM IST

2 Min Read
Choose ETV Bharat

ಬೆಂಗಳೂರು: ಲೂಸಿಯಾ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ನೀನಾಸಂ ಸತೀಶ್​​ ಸದ್ಯ ರೈಸ್​​ ಆಫ್​​ ಅಶೋಕ ಚಿತ್ರವನ್ನು ಗೆಲ್ಲಿಸಬೇಕು ಅಂತಾ ರಾತ್ರಿ ಹಗಲು ಅಂತಾ ಪ್ರಮೋಷನ್​ ಮಾಡುತ್ತಾ ಇದ್ದಾರೆ. ನಿನ್ನೆಯಷ್ಟೇ ಕರ್ನಾಟಕದಾದ್ಯಂತ ತೆರೆ ಕಂಡು ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗರೋ ಹೊತ್ತಲ್ಲಿ ನೀನಾಸಂ ಸತೀಶ್ ಈ ಸಿನಿಮಾ, ತಮ್ಮ ಸಿನಿಮಾ ಜರ್ನಿ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ನೀನಾಸಂ ಸತೀಶ್ ಬದುಕಿನ ಯಶೋಗಾಥೆ ನಿಜಕ್ಕೂ ಸ್ಪೂರ್ತಿದಾಯಕ. ಮದ್ದೂರಿನ ಸಣ್ಣ ರೈತ ಕುಟುಂಬದಿಂದ ಬಂದ ಶಿವಕುಮಾರ್, ಗೋಪಾಲ್ ಥಿಯೇಟರ್‌ನಲ್ಲಿ ಕಸ ಗುಡಿಸಿ, ಟೀ ಮಾರಿ, ಟಾರ್ಚ್ ಬಿಟ್ಟು, ಬಳಿಕ ನೀನಾಸಂ ಸೇರಿ ಇಂದು ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದಾರೆ.

ನಟ ನೀನಾಸಂ ಸತೀಶ್ ಸಿನಿಮಾ ಜರ್ನಿ ವಿಡಿಯೋ ಬಿಡುಗಡೆ (ACTOR NINASAM SATHISH)

ಶಿವಕುಮಾರ್, ನೀನಾಸಂ ಸತೀಶ್ ಆದ ಕಥೆ ಎಂದು ಮಾತು ಆರಂಭಿಸಿದ್ದಾರೆ ಸತೀಶ್. ಇದು ವಿಧಿ ಬರೆದ ಕಥೆಯಲ್ಲ, ನಾನೇ ಬರೆದುಕೊಂಡ ಸಾಧಾರಣ ಕಥೆ. ನಮ್ಮೂರು ಮದ್ದೂರು ಬಳಿ ಇದೆ. ನಮಗೆ ಇರೋದು 30 ಗುಂಟೆ ಜಾಗ. ನಮ್ಮದು ಸಣ್ಣ ರೈತರ ಕುಟುಂಬ. ಛಲ ಎಲ್ಲಿಂದ ಬಂತು ಎಂದಾಗ ನಮ್ಮಮ್ಮ ನೆನಪಾಗುತ್ತಾಳೆ ಎಂದು ಹಳೆಯ ಕಥೆ ನೆನಪಿಸಿಕೊಂಡಿದ್ದಾರೆ ಸತೀಶ್.

ಬಳಿಕ ಅವರು ನೀನಾಸಂ ಸೇರಿಕೊಂಡರು. ಇದಾದ ಬಳಿಕ ಅವರು ಮತ್ತೆ ಬೆಂಗಳೂರಿಗೆ ಬಂದರು. ಹೀಗೆ ಶುರುವಾದ ಜರ್ನಿ ಇಲ್ಲಿವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ. ಗೆಲುವು, ಸೋಲಿಗಿಂತ ಪ್ರಯತ್ನವನ್ನೇ ನಂಬಿದ್ದೇನೆ. ನಾನು ಪ್ರೀತಿಸಿ ಮಾಡಿರೋ ದಿ ರೈಸ್ ಆಫ್ ಅಶೋಕ ಚಿತ್ರ ಗೆಲ್ಲಿಸಿ ಅಂತಾ ನೀನಾಸಂ ಸತೀಶ್ ಈ ವಿಡಿಯೋ ಮೂಲಕ ಕನ್ನಡಿಗರನ್ನು ಕೇಳಿ ಕೊಂಡಿದ್ದಾರೆ.

60 ದಶಕಗಳಿಂದಲೂ ವರ್ಷಗಳಿಂದ ಮೇಲು ಜಾತಿಯವರಿಂದ ಕೆಳ ಜಾತಿಯವರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಬರುತ್ತಿವೆ. ಇದರ ವಿರುದ್ಧ ಧ್ವನಿ ಎತ್ತುವ ಕಥೆಯೇ ದಿ ರೈಸ್ ಆಫ್ ಅಶೋಕ ಸಿನಿಮಾ. ರೈಸ್ ಆಫ್ ಅಶೋಕದಲ್ಲಿ ಸತೀಶ್​ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ.

ಈ ಚಿತ್ರ ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ನಡಿ ಮೂಡಿ‌ಬರ್ತಿದೆ. ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾಗೆ ಹಣ ಹಾಕಿದ್ದಾರೆ. ಹೀಗಾಗಿ ಶಿವಕುಮಾರ್ ಹೇಗೆ ನೀನಾಸಂ ಸತೀಶ್ ಆದ ಈ‌ ಸಿನಿಮಾದ ವ್ಯಾಮೋಹ ಏನಾಲ್ಲ ಮಾಡಿಸಿತ್ತು ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಅಂತಾ ನೀನಾಸಂ ಸತೀಶ್ ತಮ್ಮ ಎದೆಯಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಬ್ಜ ಬಳಿಕ ಕನ್ನಡಕ್ಕೆ ಮರಳಿದ ಪುನೀತ್ ರಾಜ್‍ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಸಿನಿಮಾ ನಿರ್ದೇಶಕ