ETV Bharat / education-and-career

ವಿಕಾಸ್​ ಸೌಹರ್ದ ಕೋ ಆಪರೇಟಿವ್​ ಬ್ಯಾಂಕ್​ನಲ್ಲಿ ನೇಮಕಾತಿ: 46 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

Vikas Souharda Co-operative Bank Ltd Recruitment
ಉದ್ಯೋಗ ಮಾಹಿತಿ (ETV Bharat)
author img

By ETV Bharat Karnataka Team

Published : April 14, 2026 at 3:12 PM IST

1 Min Read
Choose ETV Bharat

ಬೆಂಗಳೂರು: ಹೊಸಪೇಟೆಯ ವಿಕಾಸ್​ ಸೌಹರ್ದ ಕೋ ಆಪರೇಟಿವ್​ ಬ್ಯಾಂಕ್​ ನಿಯಮಿತದಲ್ಲಿ ಪ್ರೊಬೇಷನರಿ ಆಫೀಸರ್​, ಜೂನಿಯರ್​ ಅಸಿಸ್ಟೆಂಟ್​ ಸೇರಿದಂತೆ 46 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆಗಳ ವಿವರ: ಒಟ್ಟು ಹುದ್ದೆ 46

Vikas Souharda Co-operative Bank Ltd Recruitment
ಅಧಿಸೂಚನೆ (Vikas Souharda Co-operative Bank)

ಮ್ಯಾನೇಜರ್​/ ಸಿನಿಯರ್​ ಆಫೀಸರ್​ 10

ಆಡಿಟರ್​ - 4

ಕಾನೂನು ಅಧಿಕಾರಿ - 2

ಪ್ರೊಬೇಷನರಿ ಆಫೀಸರ್​ - 20

ರಿಕವರಿ ಅಸಿಸ್ಟೆಂಟ್​/ ಜೂನಿಯರ್​ ಅಸಿಸ್ಟೆಂಟ್​ 10

ಅರ್ಜಿ ಸಲ್ಲಿಕೆಗೆ ಇರುವ ವಯೋಮಿತಿ ಎಷ್ಟು?: ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಗರಿಷ್ಠ ವಯೋಮಿತಿ 35 ವರ್ಷ

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ 500 ರೂ ಅರ್ಜಿ ಶುಲ್ಕವನ್ನು ನಿಗದಿಸಲಾಗಿದೆ.

ಈ ಹುದ್ದೆಗೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರೊಬೇಷನರಿ ಹುದ್ದೆಗೆ ಏಪ್ರಿಲ್​ 26ರಂದು ಲಿಖಿತ ಪರೀಕ್ಷೆ ನಡೆದು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಏಪ್ರಿಲ್​ 27ರಂದು ಸಂದರ್ಶನ ನಡೆಯಲಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಏಪ್ರಿಲ್​ 24 ಕೊನೆಯ ದಿನವಾಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ vikas.bank.in ಭೇಟಿ ನೀಡಿ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಬಳ್ಳಾರಿ ಡಿಸಿಸಿ ಬ್ಯಾಂಕ್​ನಲ್ಲಿ ಹುದ್ದೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ನಿಯಮಿತ ಹೊಸಪೇಟೆಯಲ್ಲಿ ಖಾಲಿ ಇರುವ ಕ್ಲರಿಕಲ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 82 ಹುದ್ದೆಗಳ ಭರ್ತಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು, ಕಿರಿಯ ಸೇವಕರ ಹುದ್ದೆಗೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಲಾಗುವುದು. ಪದವಿ ಮತ್ತು ದ್ವಿತೀಯ ಪಿಯುಸಿ, ಎಸ್​ಎಸ್​ಎಲ್​ಸಿ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 35 ವರ್ಷ.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 6 ಆಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗೆ bellarydcc.bank.in ಭೇಟಿ ನೀಡಿ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: ಟಿಸಿಎಸ್​ನಿಂದ 25 ಸಾವಿರ ಹೊಸಬರ ನೇಮಕಾತಿ