ETV Bharat / education-and-career

ಯುಜಿಸಿ ನೆಟ್​ ಫಲಿತಾಂಶ ಪ್ರಕಟ; ಇಂಗ್ಲಿಷ್, ವಾಣಿಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಕ್ಕೆ ಸೆಪ್ಟಂಬರ್​ನಲ್ಲಿ ಮರು ಪರೀಕ್ಷೆ

87ರಲ್ಲಿ 84 ವಿಷಯಗಳ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದ ಇಂಗ್ಲಿಷ್, ವಾಣಿಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಸೇರಿದಂತೆ ಮೂರು ವಿಷಯಗಳಿಗೆ ಸೆಪ್ಟಂಬರ್ 9-10 ರಂದು ಮರುಪರೀಕ್ಷೆ ನಡೆಸಲಿದೆ.

UGC-NET Results Announced For 84 Subjects; NTA To Re-Conduct Exam For English, Commerce, Sociology On Sept 9-10
ಯುಜಿಸಿ ನೆಟ್​ ಫಲಿತಾಂಶ ಪ್ರಕಟ (ETV BHARAT)
author img

By ETV Bharat Karnataka Team

Published : August 29, 2026 at 11:18 AM IST

1 Min Read
Choose ETV Bharat

ನವದೆಹಲಿ: ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) 2026ರ ಫಲಿತಾಂಶಗಳನ್ನು ಪ್ರಕಟಿಸಿದೆ. ಶುಕ್ರವಾರ ತಡರಾತ್ರಿ 84 ವಿಷಯಗಳಿಗೆ ಸಂಬಂಧಿಸಿದ ಫಲಿತಾಂಶ ಹೊರಬಿದ್ದಿದ್ದು, 4,000ಕ್ಕೂ ಹೆಚ್ಚು ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್​ಗೆ ಅರ್ಹತೆ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, 87ರಲ್ಲಿ 84 ವಿಷಯಗಳ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದಂತೆ ಇಂಗ್ಲಿಷ್, ವಾಣಿಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಸೇರಿದಂತೆ ಮೂರು ವಿಷಯಗಳಿಗೆ ಸೆಪ್ಟಂಬರ್ 9-10 ರಂದು ಮರುಪರೀಕ್ಷೆಯನ್ನು ನಡೆಸಲಿದೆ. ಪ್ರಶ್ನೆ ಪತ್ರಿಕೆಗಳಲ್ಲಿ ವಾಸ್ತವಿಕ, ಮುದ್ರಣ, ಅನುವಾದ ಮತ್ತು ಭಾಷೆಗೆ ಸಂಬಂಧಿಸಿದ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ವಿಷಯಗಳಿಗೆ ಮರುಪರೀಕ್ಷೆ ನಡೆಸಲು ಆದೇಶಿಸಲಾಗಿದೆ.

ಈ ಅಭ್ಯರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆಯ ಕುರಿತು ಸ್ಪಷ್ಟನೆ ನೀಡಿರುವ ಎನ್‌ಟಿಎ, ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಹಂತದಲ್ಲಿ ಸ್ಕೋರ್‌ಕಾರ್ಡ್ ವೀಕ್ಷಿಸಲು ಪ್ರಯತ್ನಿಸಿದರೆ ಅಮಾನ್ಯವಾದ ಅರ್ಜಿ ಸಂಖ್ಯೆ/ಪಾಸ್‌ವರ್ಡ್ ಎಂಬ ಸಂದೇಶವನ್ನು ಎದುರಿಸಬಹುದು ಎಂದು ಸೂಚನೆಯೊಂದನ್ನು ಹೊರಡಿಸಿದೆ.

ಈ ಮೂರು ವಿಷಯಗಳ ಫಲಿತಾಂಶಗಳು ಮತ್ತು ಅಂಕಪಟ್ಟಿಗಳನ್ನು ಮರು ಪರೀಕ್ಷೆಯ ನಂತರವಷ್ಟೇ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ಖಚಿತಪಡಿಸಿದೆ.

ಇದೀಗ ಹೊರ ಬಿದ್ದಿರುವ ಫಲಿತಾಂಶದಲ್ಲಿ 84 ವಿಷಯಗಳಲ್ಲಿ ಪರೀಕ್ಷೆ ಬರೆದ 6.07 ಲಕ್ಷ ಅಭ್ಯರ್ಥಿಗಳ ಪೈಕಿ, 97,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪಿಹೆಚ್‌ಡಿ ಪ್ರವೇಶಕ್ಕೆ ಮತ್ತು 4,000ಕ್ಕೂ ಹೆಚ್ಚು ಅಭ್ಯರ್ಥಿಗಳು ಜೆಆರ್‌ಎಫ್ ಗೆ ಅರ್ಹತೆ ಪಡೆದಿದ್ದಾರೆ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 22 ರಿಂದ 30 ರವರೆಗೆ ದೇಶಾದ್ಯಂತ ಯುಜಿಸಿ -ನೆಟ್ ಪರೀಕ್ಷೆ ನಡೆದಿತ್ತು. ಸುಮಾರು 87 ವಿಷಯಗಳಿಗೆ ನಡೆದ ಪರೀಕ್ಷೆಗಳ ತಾತ್ಕಾಲಿಕ ಉತ್ತರ ಕೀಲಿ ಉತ್ತರ ಆಗಸ್ಟ್​ 16ರಂದು ಬಿಡುಗಡೆ ಮಾಡಿತ್ತು. ಇದೆ ವೇಳೆ ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಶೇಷ ಸೂಚನೆಯನ್ನು ಹೊರಡಿಸಿತ್ತು. ನಂತರ ಅದೇ ದಿನ, ದೋಷಗಳನ್ನು ಕಾರಣವಾಗಿ ನೀಡಿ, ಆ ಮೂರೂ ಪರೀಕ್ಷೆಗಳನ್ನು ಸೆಪ್ಟಂಬರ್‌ನಲ್ಲಿ ಮರು ನಡೆಸಲಾಗುವುದೆಂದು ಘೋಷಿಸಿತು.

ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ಎನ್‌ಟಿಎ ವತಿಯಿಂದ 'ನೆಟ್ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ನೀಟ್​ ಯುಜಿ ಕೌನ್ಸೆಲಿಂಗ್​ ಸರ್ಕಾರಿ ಎಂಬಿಬಿಎಸ್​ ಸೀಟಿನ ಕಟ್​ ಆಫ್​ ರ‍್ಯಾಂಕ್: ಹೀಗಿದೆ ಲೆಕ್ಕಾಚಾರ