ETV Bharat / education-and-career

ರೈಲ್ವೆ ನೇಮಕಾತಿ: 3548 ಸ್ಟೇಷನ್​ ಮಾಸ್ಟರ್​​, ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗೂಡ್ಸ್​ ಟ್ರೈನ್​ ಮ್ಯಾನೇಜರ್​, ಸೀನಿಯರ್​ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

RRB Recruitment for 3548 Goods Train Manager Senior Clerk
ಉದ್ಯೋಗ ಮಾಹಿತಿ (ETV BHARAT)
author img

By ETV Bharat Karnataka Team

Published : October 9, 2026 at 3:11 PM IST

1 Min Read
Choose ETV Bharat

ಬೆಂಗಳೂರು: ರೈಲ್ವೆಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಗುಡ್ ನ್ಯೂಸ್. 3548 ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಗೂಡ್ಸ್​ ಟ್ರೈನ್​ ಮ್ಯಾನೇಜರ್​, ಸೀನಿಯರ್​ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ: ಒಟ್ಟು ಹುದ್ದೆ 3548

ಚೀಫ್​ ಕಮರ್ಷಿಯಲ್​ ಕಮ್​ ಟಿಕೆಟ್​​​​ ಸೂಪರ್ವೈಸರ್​​ - 127

ಗೂಡ್ಸ್​ ಟ್ರೈನ್​ ಮ್ಯಾನೇಜರ್​ - 2,750

ಜೂನಿಯರ್​ ಅಕೌಂಟ್​ ಅಸಿಸ್ಟಂಟ್​ ಕಮ್​ ಟೈಪಿಸ್ಟ್​ - 300

ಸೀನಿಯರ್​ ಕ್ಲರ್ಕ್​ ಕಮ್​ ಟೈಪಿಸ್ಟ್​ - 371

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರೈಸಿರಬೇಕು.

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18ರಿಂದ ಗರಿಷ್ಠ 30 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮಹಿಳೆಯರು, ಎಸ್‌ಸಿ, ಎಸ್‌ಟಿ, ತೃತೀಯ ಲಿಂಗಿ, ಇಬಿಸಿಗೆ 250 ರೂ. ಮತ್ತು ಸಾಮಾನ್ಯ, ಒಬಿಸಿ ಸೇರಿದಂತೆ ಇತರ ವರ್ಗಗಳಿಗೆ 500 ರೂ. ಶುಲ್ಕ ವಿಧಿಸಲಾಗಿದೆ.

RRB Recruitment for 3548 Goods Train Manager Senior Clerk
ಅಧಿಸೂಚನೆ (RRB)

ಆಯ್ಕೆ ಹೇಗೆ?: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ. ಟೈಪಿಸ್ಟ್ (ಅಕೌಂಟ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್) ಹುದ್ದೆಗಳಿಗೆ ಟೈಪಿಂಗ್ ಸ್ಕಿಲ್ ಟೆಸ್ಟ್ (ಟಿಎಸ್‌ಟಿ). ನಂತರ, ಪ್ರಮಾಣಪತ್ರಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಕ್ಟೋಬರ್​ 8ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್​ 6 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು rrbapply.gov.inಗೆ ಭೇಟಿ ನೀಡಬಹುದು.

ಇದನ್ನೂ ಓದಿ: 860 ಜೈಲರ್​, ವಾರ್ಡರ್​​ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅಂತಿಮ ದಿನಾಂಕಕ್ಕೆ ಇನ್ನೊಂದೇ ವಾರ ಬಾಕಿ