ETV Bharat / education-and-career

JEE MAIN 2026: ಶೇ100ರಷ್ಟು ಅಂಕ ಗಳಿಸುವಲ್ಲಿ ಸಫಲರಾದ 26 ಅಭ್ಯರ್ಥಿಗಳು

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶದ ವರ್ಷದಿಂದ ವರ್ಷಕ್ಕೆ ಅಭ್ಯರ್ಥಿಗಳು ಸಾಧನೆ ಹೆಚ್ಚುತ್ತಿದೆ. 2025ರಲ್ಲಿ 24 ಅಭ್ಯರ್ಥಿಗಳು 100ರಷ್ಟು ಪ್ರತಿಶತ ಸಾಧನೆ ತೋರಿದ್ದು, ಈ ಸಂಖ್ಯೆ ಈ ಬಾರಿ ಹೆಚ್ಚಿದೆ.

File Photo
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 21, 2026 at 12:07 PM IST

2 Min Read
Choose ETV Bharat

ನವದೆಹಲಿ: ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ​ ಪ್ರವೇಶ ಪಡೆಯುವ ದೇಶದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಈ ಬಾರಿ 26 ಅಭ್ಯರ್ಥಿಗಳು ಶೇ. 100ರಷ್ಟು ಫಲಿತಾಂಶ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ತಿಳಿಸಿದೆ.

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ಅಭ್ಯರ್ಥಿಗಳ ಸಾಧನೆ ಹೆಚ್ಚುತ್ತಿದೆ. 2025ರಲ್ಲಿ 24 ಅಭ್ಯರ್ಥಿಗಳು 100ರಷ್ಟು ಪ್ರತಿಶತ ಸಾಧನೆ ತೋರಿದ್ದು, ಈ ಸಂಖ್ಯೆ ಈ ಬಾರಿ ಮತ್ತಷ್ಟು ಹೆಚ್ಚಾಗಿದೆ.

ಜನವರಿಯಲ್ಲಿ ನಡೆದಿದ್ದ ನಿರ್ಣಾಯಕ ಪರೀಕ್ಷೆಯ ಮೊದಲ ಆವೃತ್ತಿಯಲ್ಲಿ 13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರೆ, ಎಪ್ರಿಲ್‌ನಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಎರಡೂ ಪರೀಕ್ಷೆಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ತಲಾ ಐವರು, ರಾಜಸ್ಥಾನದಿಂದ ನಾಲ್ವರು, ದೆಹಲಿಯಿಂದ ಮೂವರು ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದಿಂದ ತಲಾ ಇಬ್ಬರು ಅಭ್ಯರ್ಥಿಗಳು, ಚಂಡೀಗಢ, ಬಿಹಾರ, ತಮಿಳುನಾಡು, ಒಡಿಶಾ ಮತ್ತು ಗುಜರಾತ್‌ನಿಂದ ತಲಾ ಒಬ್ಬ ಅಭ್ಯರ್ಥಿ ಈ ಸಾಧನೆ ಮಾಡಿದ್ದಾರೆ. ಸಾಧನೆ ಮಾಡಿದ ಎಲ್ಲಾ ಅಭ್ಯರ್ಥಿಗಳು ಹುಡುಗರಾಗಿರುವುದು ವಿಶೇಷ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ಎನ್​ಟಿಎ ಅಂಕಗಳು ಸಾಮಾನ್ಯ ಅಂಕಗಳ ಶೇಕಡಾವಾರು ಪ್ರಮಾಣಕ್ಕೆ ಸಮನಾಗಿರುವುದಿಲ್ಲ, ಬದಲಿಗೆ ಸಾಮಾನ್ಯೀಕರಿಸಿದ ಅಂಕಗಳನ್ನು ಹೊಂದಿರುತ್ತವೆ. ಎನ್​ಟಿಎ ಅಂಕಗಳು ಬಹು ಅವಧಿಯ ಪತ್ರಿಕೆಗಳಲ್ಲಿ ಸಾಮಾನ್ಯೀಕರಿಸಿದ ಅಂಕಗಳಾಗಿವೆ ಒಂದು ಅವಧಿಯ ಪರೀಕ್ಷೆಗೆ ಹಾಜರಾದ ಎಲ್ಲರ ಸಾಪೇಕ್ಷ ಕಾರ್ಯಕ್ಷಮತೆಯನ್ನು ಆಧರಿಸಿವೆ. ಪಡೆದ ಅಂಕಗಳನ್ನು ಪರೀಕ್ಷಾರ್ಥಿಗಳ ಪ್ರತಿ ಶಿಫ್ಟ್‌ಗೆ 100 ರಿಂದ 0 ರವರೆಗಿನ ಮಾಪಕವಾಗಿ ಪರಿವರ್ತಿಸಲಾಗುತ್ತದೆ ಎಂದು ವಿವರಣೆ ನೀಡಿದರು.

100 ಪ್ರತಿಶತ ಅಂಕ ಗಳಿಸಿದವರಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗಗಳ ಯಾವುದೇ ಅಭ್ಯರ್ಥಿಗಳು ಇಲ್ಲ ಎಂದು ತಿಳಿಸಿದರು.

ಈ ವರ್ಷ, ಸಾಮಾನ್ಯ ವರ್ಗದ 96,873 ಅಭ್ಯರ್ಥಿಗಳು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಗೆ ಅರ್ಹತೆ ಪಡೆದಿದ್ದು, ನಂತರ 67,597 ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳು, 37,522 ಪರಿಶಿಷ್ಟ ಜಾತಿ, 25,009 ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಮತ್ತು 18,790 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜೆಇಇ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆಯು ಭಾರತದ ಅತಿದೊಡ್ಡ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾಗಿದ್ದು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿಗಳು), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (ಐಐಐಟಿಗಳು) ಮತ್ತು ಇತರ ಕೇಂದ್ರೀಕೃತ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶಕ್ಕೆ ನಡೆಸುವ ಪರೀಕ್ಷೆಯಾಗಿದೆ.

ಇದನ್ನೂ ಓದಿ:

JEE ಮೇನ್ಸ್‌ನಲ್ಲಿ ಅವಳಿ ಸಹೋದರರಿಗೆ ಸಮಾನ ಫಲಿತಾಂಶ; ಮಕ್ಕಳ ಭವಿಷ್ಯಕ್ಕಾಗಿ ಲಕ್ಷಗಟ್ಟಲೆ ಸಂಬಳದ ಕೆಲಸ ತೊರೆದ ತಾಯಿ