ETV Bharat / business

6 ತಿಂಗಳಲ್ಲಿ 1 ಲಕ್ಷ ಶಾಲೆಗಳ ವಿದ್ಯಾರ್ಥಿಗಳ ಆಧಾರ್​​ ಬಯೋಮೆಟ್ರಿಕ್ ಅಪ್​ಡೇಟ್​ ಪೂರ್ಣ

ಶಾಲಾ ವಿದ್ಯಾರ್ಥಿಗಳ ಆಧಾರ್​ಗೆ ಬಯೋಮೆಟ್ರಿಕ್​ ಅಪ್​ಡೇಟ್​ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 1.2 ಕೋಟಿಗೂ ಅಧಿಕ ಶಾಲೆಗಳಲ್ಲಿ ಮಕ್ಕಳ ಬೆರಳಚ್ಚು ನವೀಕರಿಸಲಾಗಿದೆ.

AADHAAR BIOMETRIC UPDATE
ಸಾಂದರ್ಭಿಕ ಚಿತ್ರ (IANS)
author img

By PTI

Published : March 3, 2026 at 6:57 PM IST

2 Min Read
Choose ETV Bharat

ನವದೆಹಲಿ: 7 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳ ಆಧಾರ್​ ನಂಬರ್​ಗೆ ಕಡ್ಡಾಯವಾಗಿ ಬಯೋಮೆಟ್ರಿಕ್​ (ಬೆರಳು ಗುರುತು) ಅಪ್​ಡೇಟ್​ ಮಾಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈವರೆಗೆ ದೇಶದ 1.2 ಕೋಟಿ ಶಾಲೆಗಳ ವಿದ್ಯಾರ್ಥಿಗಳ ನವೀಕರಣ ಮುಗಿಸಲಾಗಿದೆ ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಮಿಷನ್ ಮೋಡ್ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (ಎಂಬಿಯು) ಅಭಿಯಾನವು ಆರು ತಿಂಗಳಿಂದ ನಡೆಯುತ್ತಿದೆ. 2025ರ ಅಕ್ಟೋಬರ್ 1ರಿಂದ ಒಂದು ವರ್ಷದ ಅವಧಿಗೆ ಶಾಲಾ ಮಕ್ಕಳಿಗೆ ಆಧಾರ್‌ನಲ್ಲಿ ಎಂಬಿಯು ಮಾಡಿಸಲು ಯುಐಡಿಎಐ ಅವಕಾಶ ನೀಡಲಾಗಿದೆ.

ಶಾಲೆಗಳಲ್ಲಿ ನಡೆಯುವ ಶಿಬಿರಗಳ ಜೊತೆಗೆ, ಮಕ್ಕಳು ದೇಶದ ಯಾವುದೇ ಆಧಾರ್ ದಾಖಲಾತಿ ಕೇಂದ್ರಗಳು ಮತ್ತು ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಎಂಬಿಯು ಅನ್ನು ಪೂರ್ಣಗೊಳಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಮಹತ್ವದ ಸಾಧನೆಯಲ್ಲಿ ಯುಐಡಿಎಐ ದೇಶದ 1.2 ಕೋಟಿಗೂ ಹೆಚ್ಚು ಶಾಲೆಗಳಲ್ಲಿ ಮಕ್ಕಳ ಬಯೋಮೆಟ್ರಿಕ್​ ಅಪ್​ಡೇಟ್​ ಮಾಡಿಸಲಾಗಿದೆ. ಲಕ್ಷಾಂತರ ಶಾಲಾ ವಿದ್ಯಾರ್ಥಿಗಳು ಆಧಾರ್‌ನಲ್ಲಿ ಕಡ್ಡಾಯ ಬೆರಳು ಗುರುತನ್ನು ನವೀಕರಿಸಿದ್ದಾರೆ. ಈ ನವೀಕರಣ ಕಾರ್ಯವು ತಮ್ಮ ಶಾಲಾ ಕ್ಯಾಂಪಸ್‌ಗಳಲ್ಲಿ ಮುಗಿಸಿದ್ದಾರೆ" ಎಂದು ತಿಳಿಸಿದೆ.

ಮಕ್ಕಳ ಆಧಾರ್‌ನಲ್ಲಿ ಬಯೋಮೆಟ್ರಿಕ್ ಅಪ್​ಡೇಟ್​ ಮಾಡಿಸುವುದರಿಂದ ಅವರಿಗೆ ಸರ್ಕಾರದ ವಿವಿಧ ಯೋಜನೆಗಳು, ವಿದ್ಯಾರ್ಥಿವೇತನಗಳು, ಇತರ ಪ್ರಯೋಜನಗಳು ಸಿಗಲಿವೆ. ನೀಟ್, ಜೆಇಇ, ಸಿಯುಇಟಿ, ಇತ್ಯಾದಿ ಸ್ಪರ್ಧಾತ್ಮಕ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ನೋಂದಾಯಿಸಲು ಸಲೀಸಲಾಗಲಿದೆ.

ಕೇಂದ್ರೀಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಯುಡಿಐಎಸ್ಇ+ ಜೊತೆಗಿನ ಸಂಯೋಜನೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಎಂಬಿಯು ಮಾಡಿಸುವ ಪ್ರಕ್ರಿಯೆ ಸರಳವಾಯಿತು. ಎಂಬಿಯು ಮಾಡಿಸಬೇಕಾದ ಮಕ್ಕಳನ್ನು ಗುರುತಿಸಲು ಮತ್ತು ಎಂಬಿಯು ಪೂರ್ಣಗೊಳಿಸಲು ಶಾಲೆಗಳಲ್ಲಿ ಶಿಬಿರಗಳನ್ನು ನಡೆಸಲು ಸಹಾಯ ಮಾಡಿದೆ.

ಈ ಕಾರ್ಯವನ್ನು ನಿರ್ವಹಿಸಲು ಕನಿಷ್ಠ 4 ಸಾವಿರ ಯಂತ್ರಗಳು ಬಳಕೆಯಲ್ಲಿವೆ. ಈ ವೇಗವನ್ನು ಹೆಚ್ಚಿಸಲು ಯುಐಡಿಎಐ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಕ್ರಿಯೆಯಲ್ಲಿದೆ.

ಐದು ವರ್ಷದೊಳಗಿನ ಮಗುವು ಫೋಟೋ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣಪತ್ರವನ್ನು ಒದಗಿಸುವ ಮೂಲಕ ಆಧಾರ್‌ಗೆ ನೋಂದಾಯಿಸಿಕೊಳ್ಳಬಹುದು. ಆದರೆ, ಐದು ವರ್ಷದೊಳಗಿನ ಮಗುವಿನ ಬೆರಳಚ್ಚುಗಳು ಮತ್ತು ಐರಿಸ್ ಬಯೋಮೆಟ್ರಿಕ್‌ಗಳನ್ನು ಆಧಾರ್ ದಾಖಲಾತಿಗೆ ತೆಗೆದುಕೊಳ್ಳುವುದಿಲ್ಲ. ಕಾರಣ, ಮಕ್ಕಳ ಬೆರಳು ಗುರುತುಗಳು ಆ ಹೊತ್ತಿಗೆ ಪ್ರಬುದ್ಧವಾಗಿ ಮೂಡಿರುವುದಿಲ್ಲ. ಆದ್ದರಿಂದ, 5 ರಿಂದ 15 ವರ್ಷ ದಾಟಿದ ಮಕ್ಕಳ ಬಯೋಮೆಟ್ರಿಕ್​ ಅನ್ನು ಆಧಾರ್‌ನಲ್ಲಿ ಅಪ್​ಡೇಟ್​ ಮಾಡಲಾಗುತ್ತಿದೆ.

ಇವುಗಳನ್ನೂ ಓದಿ: