ETV Bharat / business

ಹಾರ್ಮುಜ್​​ ಜಲಸಂಧಿ ಬಂದ್​: ಭಾರತದ ಬಳಿ 40 - 45 ದಿನಗಳವರೆಗೆ ಆಗುವಷ್ಟು ಮಾತ್ರವೇ ಕಚ್ಚಾ ತೈಲ ದಾಸ್ತಾನು!

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತವು ತನ್ನ ಕಚ್ಚಾ ತೈಲ ಅಗತ್ಯಗಳಲ್ಲಿ ಸರಿಸುಮಾರು ಅರ್ಧದಷ್ಟನ್ನು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಆಮದು ಮಾಡಿಕೊಳ್ಳುತ್ತಿದೆ.

India's Crude Oil Stocks Could Last 40-45 Days If Supply Through Strait Of Hormuz Remains Disrupted
ಭಾರತದ ಬಳಿ 40 - 45 ದಿನಗಳವರೆಗೆ ಆಗುವಷ್ಟು ಮಾತ್ರವೇ ಕಚ್ಚಾ ತೈಲ ದಾಸ್ತಾನು! (ANI)
author img

By ETV Bharat Karnataka Team

Published : March 3, 2026 at 7:05 PM IST

3 Min Read
Choose ETV Bharat

ನವದೆಹಲಿ: ಭಾರತವು ಸುಮಾರು 100 ಮಿಲಿಯನ್ ಬ್ಯಾರೆಲ್ ವಾಣಿಜ್ಯ ಕಚ್ಚಾ ತೈಲ ದಾಸ್ತಾನುಗಳನ್ನು ಹೊಂದಿದೆ ಎಂದು ಕೆಪ್ಲರ್ ವರದಿ ಹೇಳುತ್ತಿದೆ. ಇರಾನ್​ ಮೇಲೆ ಅಮೆರಿಕ- ಇಸ್ರೇಲ್​ ದಾಳಿಯಿಂದಾಗಿ ಹಾರ್ಮುಜ್ ಜಲಸಂಧಿ ಈಗಾಗಲೇ ಬಂದ್​ ಆಗಿದೆ. ಹೀಗಾಗಿ ಭಾರತವು 40-45 ದಿನಗಳವರೆಗೆ ಮಾತ್ರವೇ ತನ್ನ ಅಗತ್ಯ ಪೂರೈಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತವು ತನಗೆ ಅಗತ್ಯ ಇರುವ ಕಚ್ಚಾ ತೈಲದ ಸುಮಾರು 88 ಪ್ರತಿಶತದಷ್ಟು, ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಿಗೆ ಕಚ್ಚಾ ವಸ್ತುವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳಿಂದಲೇ ಭಾರತಕ್ಕೆ ಆಮದಾಗುತ್ತದೆ. ಇದು ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ಬರುತ್ತದೆ. ಇರಾನ್ ಮೇಲಿನ ಇಸ್ರೇಲ್​ - ಅಮೆರಿಕ ಯುದ್ಧದ ಬಿಕ್ಕಟ್ಟಿನಿಂದಾಗಿ ಬಹುತೇಕ ಹಾರ್ಮುಜ್ ಜಲಸಂಧಿ ಬಂದ್​ ಆಗಿದೆ. ಕತಾರ್‌ನಲ್ಲಿರುವ ದೇಶದ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ LNG ಕೂಡ ಭಾರತಕ್ಕೆ ಇದೇ ಜಲಸಂಧಿಯ ಮೂಲಕವೇ ಭಾರತಕ್ಕೆ ಬರುತ್ತದೆ.

ಮಧ್ಯಪ್ರಾಚ್ಯ ಕಚ್ಚಾ ತೈಲ ಪೂರೈಕೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ವರದಿ ಮಾಡಿವೆ. ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ಬಂದ್​ ಮಾಡಿದರೆ, ದೇಶದಲ್ಲಿ ಪೆಟ್ರೋಲ್​, ಡಿಸೇಲ್​​ ಸೇರಿ ನೈಸರ್ಗಿಕ ಅನಿಲ ಪೂರೈಕೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ ಎಂದು ಕೆಪ್ಲರ್‌ನ ಸಂಸ್ಕರಣಾ ಮತ್ತು ಮಾಡೆಲಿಂಗ್‌ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಪಿಟಿಐಗೆ ತಿಳಿಸಿದ್ದಾರೆ.

ಕಚ್ಚಾ ತೈಲ ಸಂಸ್ಕರಣಾಗಾರರು ಸಾಮಾನ್ಯವಾಗಿ ವಾಣಿಜ್ಯ ದಾಸ್ತಾನುಗಳನ್ನು ನಿರ್ವಹಿಸುತ್ತಾರೆ. ಈಗಾಗಲೇ ನೀರಿನಲ್ಲಿರುವ ಸರಕುಗಳು ಬರುತ್ತಲೇ ಇರುತ್ತವೆ. ಆದರೆ, ದೀರ್ಘಕಾಲದ ಅಡಚಣೆಯ ಸಂದರ್ಭದಲ್ಲಿ ಹೆಚ್ಚಿನ ಆಮದು ವೆಚ್ಚಗಳು, ಸರಕು ಸಾಗಣೆಗೆ ಪರ್ಯಾಯ ಮಾರ್ಗ ಮತ್ತು ದೀರ್ಘಾವಧಿಯವರೆಗೆ ಸರಬರಾಜುಗಳನ್ನು ಮರುಮಾರ್ಗಕ್ಕೆ ತರುವ ಅಗತ್ಯತೆಗಳ ಅನಿರ್ವಾರ್ಯತೆ ಉಂಟಾಗಲಿದ್ದು, ಒತ್ತಡಗಳು ಹೆಚ್ಚಾಗುವ ಸಾದ್ಯತೆಗಳಿವೆ ಎಂದು ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಹೇಳಿದ್ದಾರೆ.

ಮಂಗಳೂರು ಸೇರಿ ಈ ಎಲ್ಲ ಕಡೆ ದಾಸ್ತಾನು: ಕೆಪ್ಲರ್ ದಾಸ್ತಾನು ದತ್ತಾಂಶಗಳ ಆಧಾರದ ಮೇಲೆ, ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂನಲ್ಲಿರುವ ಪೆಟ್ರೋಲಿಯಂ ಮೀಸಲು (SPR) ಸೌಲಭ್ಯಗಳಲ್ಲಿನ ಪರಿಮಾಣಗಳನ್ನು ಒಳಗೊಂಡಂತೆ ವಾಣಿಜ್ಯ ಕಚ್ಚಾ ತೈಲದ ದಾಸ್ತಾನು ಸುಮಾರು 100 ಮಿಲಿಯನ್ ಬ್ಯಾರೆಲ್‌ಗಳಷ್ಟಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ದಿನಕ್ಕೆ ಸರಿಸುಮಾರು 2.5 ಮಿಲಿಯನ್ ಬ್ಯಾರೆಲ್‌ಗಳು (bpd) ಆಮದಾಗುತ್ತವೆ. ಭಾರತದ ಒಟ್ಟು 5 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಸ್ವಲ್ಪ ಹೆಚ್ಚು ಕಚ್ಚಾ ತೈಲ ಆಮದುಗಳಲ್ಲಿ ಅರ್ಧದಷ್ಟು ಇಲ್ಲಿಂದಲೇ ಬರುತ್ತದೆ. ಈ ನಡುವೆ ಜಾಗತಿಕ ಮಾನದಂಡವಾದ ಬ್ರೆಂಟ್ ಪ್ರಕಾರ, ಇಂದು ಪ್ರತಿ ಬ್ಯಾರೆಲ್‌ಗೆ 80 ಡಾಲರ್​ ಅನ್ನು ದಾಟಿದೆ. ಯುದ್ಧ ಆರಂಭಕ್ಕೂ ಮುನ್ನ ಇದ್ದ ಬೆಲೆಗಿಂತ ಇದು ಶೇ 10ರಷ್ಟು ಏರಿಕೆ ಆಗಿದೆ. ಇದು ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಮಾರ್ಚ್ 31, 2025ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತವು ಕಚ್ಚಾ ತೈಲ ಆಮದುಗಾಗಿ 137 ಬಿಲಿಯನ್ ಯುಎಸ್​ ಡಾಲರ್​ ಖರ್ಚು ಮಾಡಿದೆ. ಏಪ್ರಿಲ್ 2025 ರಿಂದ ಜನವರಿ 2026 ರವರೆಗೆ - ಪ್ರಸಕ್ತ ಹಣಕಾಸು ವರ್ಷದ ಮೊದಲ ಹತ್ತು ತಿಂಗಳುಗಳು 206.3 ಮಿಲಿಯನ್ ಟನ್ ಕಚ್ಚಾ ತೈಲ ಆಮದಿಗಾಗಿ 100.4 ಬಿಲಿಯನ್ ಯುಎಸ್​ ಡಾಲರ್​ ಹಣ ಖರ್ಚು ಮಾಡಿದೆ. ಭಾರತವು 2024-25 ರಲ್ಲಿ 23.7 ಮಿಲಿಯನ್ ಟನ್ (474,000 bpd) ಪೆಟ್ರೋಲಿಯಂ ಉತ್ಪನ್ನಗಳನ್ನು ಅಥವಾ ದೇಶದ ಇಂಧನ ಬಳಕೆಯ ಶೇಕಡಾ 10 ರಷ್ಟು ರಫ್ತು ಮಾಡಿದೆ. ಏಪ್ರಿಲ್ - ಜನವರಿ ಅವಧಿಯಲ್ಲಿ ರಫ್ತು 53.3 ಮಿಲಿಯನ್ ಟನ್‌ಗಳಷ್ಟಿತ್ತು.

ಮತ್ತೆ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಾ ಭಾರತ: ಜಾಗತಿಕ ಇಂಧನಗಳನ್ನು ಪೂರೈಸುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್​ - ಇಸ್ರೇಲ್​, ಅಮೆರಿಕ ಯುದ್ಧಗಳಿಂದಾಗಿ ಮುಚ್ಚಲ್ಪಟ್ಟಿದೆ ಎಂದು ಮಾಧ್ಯಮ ವರದಿಗಳು ದೃಢಪಡಿಸುತ್ತಿವೆ. ಒಂದು ವೇಳೆ ಭಾರತವು ಮಧ್ಯಪ್ರಾಚ್ಯದಿಂದ ಬರುವ ಕೊರತೆಯನ್ನು ಸರಿದೂಗಿಸಲು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕವನ್ನು ಸಂಪರ್ಕಿಸಬಹುದು. ಕೊರತೆ ಸರಿದೂಗಿಸಲು ಭಾರತವು ರಷ್ಯಾದ ತೈಲವನ್ನು ಸಹ ಬಳಸಬಹುದಾಗಿದೆ.

ಅಗತ್ಯ ಬಿದ್ದರೆ ಅರೇಬಿಯನ್ ಸಮುದ್ರ ಮತ್ತು ವಿಶಾಲವಾದ ಏಷ್ಯಾದ ಪ್ರದೇಶದಲ್ಲಿ ದೃಢವಾದ ಖರೀದಿದಾರರಿಲ್ಲದೇ ಹಿನ್ನಡೆ ಅನುಭವಿಸುತ್ತಿರುವ ರಷ್ಯಾದ ಸರಕುಗಳನ್ನು ತುಲನಾತ್ಮಕವಾಗಿ ತ್ವರಿತವಾಗಿ ಆಮದು ಮಾಡಿಕೊಳ್ಳಬಹುದು ಎಂದು ರಿಟೋಲಿಯಾ ಹೇಳಿದ್ದಾರೆ.

ಇದನ್ನು ಓದಿ:

ಎಲ್​ಎನ್​ಜಿ ಉತ್ಪಾದನೆ ಸ್ಥಗಿತಗೊಳಿಸಿದ ಕತಾರ್​ಎನರ್ಜಿ; ಟ್ಯಾಂಕರ್​ ಸಂಚಾರದಲ್ಲಿನ ಅಡಚಣೆಯಿಂದ ಏರಿಕೆ ಕಂಡ ಇಂಧನ ಬೆಲೆ

ತೈಲ ಸಾಗಿಸುವ ಪ್ರಮುಖ ಮಾರ್ಗವಾದ ಹಾರ್ಮುಜ್​ ಜಲಸಂಧಿ ಮುಚ್ಚಿ ವಿಶ್ವಕ್ಕೇ ಸವಾಲೆಸೆದ ಇರಾನ್​

ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ದಾಸ್ತಾನಿದೆ, ಶಾಶ್ವತವಾಗಿ ಯುದ್ಧ ಮುಂದುವರೆಸಬಹುದು: ಟ್ರಂಪ್ ಎಚ್ಚರಿಕೆ