ರೂಪಾಯಿ ಮೂಲಕವೇ ಭಾರತ- ಇಸ್ರೇಲ್ ನಡುವಿನ ವ್ಯಾಪಾರಕ್ಕೆ ಎಸ್ಬಿಐ ಉತ್ತೇಜನ
ಭಾರತ - ಇಸ್ರೇಲ್ ವ್ಯವಹಾರ ಸಂಬಂಧಗಳನ್ನು ಗಟ್ಟಿಗೊಳಿಸಲು ಎಸ್ಬಿಐ ಮುಂದಾಗಿದ್ದು, ಇದು ಇಸ್ರೇಲ್‌ನಲ್ಲಿರುವ ಭಾರತೀಯ ಕಾರ್ಮಿಕರಿಗೆ ರೂಪಾಯಿಗಳಲ್ಲಿ ವ್ಯಾಪಾರ ನಡೆಸಲು ಹಾಗೂ ಸುಗಮವಾಗಿ ಹಣ ರವಾನಿಸಲು ಸಹಾಯಕವಾಗಲಿದೆ.


By PTI
Published : January 5, 2026 at 3:21 PM IST
ಜೆರುಸಲೇಂ(ಇಸ್ರೇಲ್): ಇಸ್ರೇಲ್ ಮತ್ತು ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ಮತ್ತು ಕಾರ್ಯತಂತ್ರಗಳು ಸಾಗುತ್ತಿರುವ ಹೊತ್ತಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಇಸ್ರೇಲ್ ಜೊತೆಗೆ ದ್ವಿಪಕ್ಷೀಯ ಸಂಬಂಧವನ್ನು ಭಾರತೀಯ ರೂಪಾಯಿಗಳೊಂದಿಗೆ ನಡೆಸಲು ಚಿಂತನೆ ನಡೆಸುತ್ತಿದೆ. ಇಸ್ರೇಲ್ನಲ್ಲಿ ಇರುವ ಏಕೈಕ ಭಾರತೀಯ ಬ್ಯಾಂಕ್ ಕೂಡ ಎಸ್ಬಿಐ ಆಗಿದೆ.
ಈ ಕುರಿತು ಮಾತನಾಡಿರುವ ಇಸ್ರೇಲ್‌ನ ಎಸ್ಬಿಐ ಸಿಇಒ ವಿ ಮಣಿವಣ್ಣನ್, ಭಾರತವು ತನ್ನ ಪಾಲುದಾರ ರಾಷ್ಟ್ರಗಳಿಂದ ಗಮನಾರ್ಹ ವ್ಯಾಪಾರ ಹರಿವನ್ನು ಹೊಂದಿರುವ ಹಿನ್ನೆಲೆ, ಜಾಗತಿಕ ವ್ಯಾಪಾರ ಸಮುದಾಯವು ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಮಾಡಲು ಆಸಕ್ತಿ ಹೆಚ್ಚಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಬ್ಯಾಂಕುಗಳು ತಮ್ಮ ಕಾರ್ಪೊರೇಟ್ ಗ್ರಾಹಕರ ರಫ್ತು ಮತ್ತು ಆಮದುಗಳನ್ನು ಭಾರತೀಯ ರೂಪಾಯಿಯಲ್ಲಿ ನಡೆಸುವ ಕುರಿತು ಅವಕಾಶ ನೀಡಲು ಯೋಜಿಸಿದೆ. ಈ ಕಾರ್ಯವಿಧಾನದ ಅಡಿ ಇಸ್ರೇಲ್ ಅನ್ನು ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಲಾಗಿದೆ ಎಂದಿದ್ದಾರೆ.
ಇಸ್ರೇಲ್ ಘಟಕಗಳ ಆಮದು ಮತ್ತು ರಫ್ತುಗಳನ್ನು ಭಾರತೀಯ ರೂಪಾಯಿಗಳ ಪಾವತಿ ಮೂಲಕ ನಡೆಸಲಾಗುವುದು. ಇಸ್ರೇಲ್ ಮಾರಾಟಗಾರರು ಅಥವಾ ಕೊಳ್ಳುಗರಿಂದ ಸೇವೆ ಅಥವಾ ಸರಕುಗಳ ಪೂರೈಕೆ ಅಥವಾ ಖರೀದಿಯನ್ನು ಇನ್ವಾಯ್ಸ್ ಬದಲಾಗಿ ವಿಶೇಷ ರೂಪಾಯಿ ವಸ್ಟ್ರೊ ಅಕೌಂಟ್ (ಎಸ್ಆರ್ವಿಎ)ಗೆ ಜಮೆಯಾಗುತ್ತದೆ. ಎಸ್ಬಿಐ ಟೆಲ್ ಅವಿವಾ ಈ ವರ್ಗಾವಣೆಯ ಸೌಲಭ್ಯಗಳ ಎಲ್ಲಾ ಮನವಿಗಳನ್ನು ಅನುಮತಿಸುತ್ತದೆ ಎಂದು ಎಸ್ಬಿಐ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ರೂಪಾಯಿಯ ವಹಿವಾಟಿಗೆ ಪ್ರೋತ್ಸಾಹಿಸಲು ಬಳಿಕ ಎಸ್ಬಿಐ ಬ್ರಾಂಚ್ ಇಸ್ರೇಲ್ ಮತ್ತು ಭಾರತದ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಹಲವು ಸಭೆಗಳನ್ನು ನಡೆಸಿದೆ. ವೆಬಿನಾರ್‌ಗಳನ್ನು ಆಯೋಜಿಸಿದೆ. ಈ ಚರ್ಚೆಗಳಲ್ಲಿ ಇಸ್ರೇಲ್‌ನ ಹೆಚ್ಚಿನ ಪ್ರಮುಖ ರಕ್ಷಣಾ ಸಂಸ್ಥೆಗಳನ್ನು ಸಹ ಇದು ಒಳಗೊಂಡಿತ್ತು.
ಇತ್ತೀಚಿಗೆ ಇಸ್ರೇಲ್ನಲ್ಲಿ ಭಾರತದ 40,000 ಭಾರತೀಯ ಕಾರ್ಮಿಕರು ಉದ್ಯೋಗಕ್ಕೆ ಸೇರಿದ್ದು, ಎಸ್ಬಿಐ ಟೆಲ್ ಅವಿವಾ ಬ್ರಾಂಚ್ನಲ್ಲಿ ಭಾರತದ ಎನ್ಆರ್ಐ ಖಾತೆಯನ್ನು ತೆರೆಯುವ ಸೌಲಭ್ಯ ನೀಡುವ ಮೂಲಕ ಭಾರತೀಯರಿಗೆ ರೂಪಾಯಿಗಳಲ್ಲಿ ಸುಗಮವಾಗಿ ವ್ಯಾಪಾರ ನಡೆಸಲು ಎಸ್ಬಿಐ ಚಿಂತಿಸುತ್ತಿದೆ.
ಇಸ್ರೇಲ್ ಕಾರ್ಮಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾರ್ಮಿಕ ಬಲವಿದೆ. ವಿಶೇಷವಾಗಿ ಕೃಷಿ ಮತ್ತು ಕಟ್ಟಡ ನಿರ್ಮಾಣದಲ್ಲಿ. ಎಸ್ಬಿಐ ಟೆಲ್ಅವಿವಾ ಇದೀಗ ಭಾರತೀಯ ಅನಿವಾಸಿಗಳಿಗೆ ಎನ್ಆರ್ಐ ಖಾತೆ ಸೌಲಭ್ಯದ ಸೇವೆ ನೀಡಲು ಮುಂದಾಗಿದೆ. ಫಿನ್ಟೆಕ್ ಮತ್ತು ಸ್ಥಳೀಯ ಬ್ಯಾಂಕ್ ಗಳ ಸಹಯೋಗದೊಂದಿಗೆ ರೂಪಾಯಿ ರವಾನೆ ಉತ್ತೇಜಿಸುತ್ತದೆ.
2007ರಲ್ಲಿ ಎಸ್ಬಿಐ ಇಸ್ರೇಲ್ನಲ್ಲಿ ಬ್ರಾಂಚ್ ತೆರೆದಿದ್ದು, ಅಂದಿನಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸುತ್ತಿದ್ದು, ಸಾಂಕ್ರಾಮಿಕದ ಸಮಯದಲ್ಲೂ ಹಾಗೇ ಆ ಪ್ರದೇಶದಲ್ಲಿ ನಡೆಯುತ್ತಿದ್ದ ಯುದ್ಧ ಸಂದರ್ಭ ಸೇರಿದಂತೆ ಹಲವು ಸನ್ನಿವೇಶದಲ್ಲಿ ಕೂಡ ತನ್ನ ಸ್ಥಿತಿಸ್ಥಾಪಕತ್ವ ಬಿಂಬಿಸಿತ್ತು.
ಇವುಗಳನ್ನೂ ಓದಿ:
25 ಪೈಸೆಯಿಂದ ಶುರುವಾದ ಸಹಕಾರ ಬ್ಯಾಂಕ್ನಲ್ಲಿ ಇಂದು ಕೋಟ್ಯಂತರ ರೂಪಾಯಿ ವಹಿವಾಟು
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ; ಪ್ರತಿ ಡಾಲರ್ ಮೌಲ್ಯ ಈಗ 91 ರೂಪಾಯಿ!

