ETV Bharat / business

ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ; ಪ್ರತಿ ಡಾಲರ್​ ಮೌಲ್ಯ ಈಗ 91 ರೂಪಾಯಿ!

ವಿದೇಶಿ ಹೂಡಿಕೆ ಹೊರ ಹರಿವು ಹೆಚ್ಚಳ ಮತ್ತು ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಸ್ಪಷ್ಟತೆಯ ಕೊರತೆಯೇ ಡಾಲರ್​ ದರ ಏರಿಕೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

rupee-vs-dollar-exchange-rate-december-16
ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ (IANS)
author img

By ETV Bharat Karnataka Team

Published : December 16, 2025 at 1:58 PM IST

2 Min Read
Choose ETV Bharat

ಮುಂಬೈ: ಅಮೆರಿಕ ಡಾಲರ್​ ವಿರುದ್ಧ ಭಾರತದ ರೂಪಾಯಿ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಮಂಗಳವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 36 ಪೈಸೆ ಕುಸಿತ ಕಂಡು ಡಾಲರ್ ಎದುರು 91ರೂಪಾಯಿಗಳನ್ನು ದಾಟಿದೆ.

ವಿದೇಶಿ ಹೂಡಿಕೆ (ಎಫ್‌ಐಐ) ಹೊರಹರಿವು ಹೆಚ್ಚಳ ಮತ್ತು ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಸ್ಪಷ್ಟತೆಯ ಕೊರತೆ ಡಾಲರ್​ ದರ ಏರಿಕೆಗೆ ಕಾರಣವಾಗಿದೆ. ಕಳೆದ 10 ವ್ಯಾಪಾರ ವಹಿವಾಟಿನಲ್ಲಿ ರೂಪಾಯಿ 90 ರಿಂದ 91ಕ್ಕೆ ಕುಸಿತ ಕಂಡಿದೆ. ಕಳೆದ ಐದು ಅವಧಿಯಲ್ಲಿ ಗ್ರೀನ್​ ಬ್ಯಾಕ್​ ವಿರುದ್ಧ ಸ್ಥಳೀಯ ಘಟಕಗಳು ಶೇ 1ರಷ್ಟು ಕುಸಿತ ಕಂಡಿವೆ. ಇಂದು 11.45ರ ಸುಮಾರಿಗೆ ಸ್ಥಳೀಯ ಘಟಕ ವಹಿವಾಟಿನ ಸಮಯದಲ್ಲಿ ಡಾಲರ್ ವಿರುದ್ಧ​ 91.14 ಅಂಶಗಳಿಗೆ ಕುಸಿತ ಕಾಣುವ ಮೂಲಕ ಈ ಹಿಂದಿನ ಮುಕ್ತಾಯಕ್ಕಿಂತ 36ಪೈಸೆ ಇಳಿಕೆ ಕಂಡಿದೆ.

ಇಂಟರ್​ಬ್ಯಾಂಕ್​ ಫಾರಿನ್​ ಎಕ್ಸ್​ಚೆಂಚ್​ನಲ್ಲಿ ರೂಪಾಯಿ ಗ್ರೀನ್​ಬ್ಯಾಕ್​ ವಿರುದ್ದ 90.87ರಷ್ಟಿದ್ದು, ಅವಧಿಗಳು ಮುಂದುವರೆದಂತೆ ಕುಸಿತ ಕಾಣಲಾರಂಭಿಸಿತು. ಸೋಮವಾರ ರೂಪಾಯಿ ಸಾರ್ವಕಾಲಿಕ ಕುಸಿತದೊಂದಿಗೆ ಡಾಲರ್​ ವಿರುದ್ಧ 90.78 ದಾಖಲಾಗಿದ್ದು, ಹಿಂದಿನ ಮುಕ್ತಾಯದಲ್ಲಿ 29 ಪೈಸೆ ಕುಸಿತ ದಾಖಲಿಸಿತ್ತು.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಇನ್ನು ಅನಿಶ್ಚಿತವಾಗಿದೆ. ವಾಣಿಜ್ಯ ಕಾರ್ಯದರ್ಶಿ, ಮೊದಲ ಹಂತದ ಒಪ್ಪಂದಕ್ಕೆ ಈ ವರ್ಷಾಂತದಲ್ಲಿ ಸಹಿ ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು. ಈ ಅನಿಶ್ಚಿತತೆಯು ಡಾಲರ್​ ಚೇತರಿಕೆ ಕಾಣುವ ಮೂಲಕ ನಿತ್ಯ ಅದರ ಕೊಳ್ಳುವಿಕೆಗೆ ಮುಂದಾಗಲಾಗಿದೆ ಎಂದು ಎಲ್​ಎಲ್​ಪಿಯ ಕಾರ್ಯಕಾರಿ ನಿರ್ದೇಶಕ ಅನಿಲ್​ ಕುಮಾರ್​ ಬನ್ಸಾಲಿ ತಿಳಿಸಿದ್ದಾರೆ.

ಸೋಮವಾರ ವ್ಯಾಪಾರ ಕೊರತೆ ಕಡಿಮೆಯಾದರೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಹೊರ ಹರಿವು ಮುಂದುವರೆದಿರುವುದರಿಂದ ರೂಪಾಯಿ ಚೇತರಿಕೆಗೆ ಕಾರಣವಾಗಲಿಲ್ಲ. ವಿನಿಮಯ ದತ್ತಾಂಶದ ಪ್ರಕಾರ, ಸೋಮವಾರ ಎಫ್‌ಐಐಗಳು 1,468.32 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಆರು ಕರೆನ್ಸಿಗಳ ವಿರುದ್ಧ ಡಾಲರ್‌ ಸೂಚ್ಯಂಕವು ಶೇ0.03ರಷ್ಟು ಕುಸಿದು 98.27 ಕ್ಕೆ ವಹಿವಾಟು ನಡೆಸುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಭವಿಷ್ಯದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್‌ಗೆ ಶೇ 0.61ರಷ್ಟು ಕುಸಿದು 60.19 ಡಾಲರ್‌ಗಳಿಗೆ ವಹಿವಾಟು ನಡೆಸುತ್ತಿದೆ. ದೇಶೀಯ ಷೇರು ಮಾರುಕಟ್ಟೆಯ ಮುಂಭಾಗದಲ್ಲಿ, 30 ಷೇರುಗಳ ಮಾನದಂಡ ಸೂಚ್ಯಂಕವಾದ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 363.92 ಪಾಯಿಂಟ್‌ಗಳ ಕುಸಿತ ಕಂಡು 84,849.44 ಕ್ಕೆ ತಲುಪಿದ್ದರೆ, ನಿಫ್ಟಿ 106.65 ಪಾಯಿಂಟ್‌ಗಳ ಕುಸಿತದೊಂದಿಗೆ 25,920.65 ಕ್ಕೆ ತಲುಪಿದೆ.

ಇವುಗಳನ್ನೂ ಓದಿ:

ಮತ್ತಷ್ಟು ಕುಸಿದ ₹: ಒಂದು ಅಮೆರಿಕನ್ ಡಾಲರ್‌ ಮೌಲ್ಯ 90.56 ರೂಪಾಯಿ!

ಡಾಲರ್​ ಎದುರು ರೂಪಾಯಿ ಮತ್ತೆ ಕುಸಿತ: ಆರಂಭಿಕ ವಹಿವಾಟಿನಲ್ಲಿ 17 ಪೈಸೆ ಇಳಿಕೆ ; ಡಾಲರ್​ಗೆ 90ರೂ.11 ಪೈಸೆ