ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರಿ ಇಳಿಕೆ: ಹೋಟೆಲ್, ರೆಸ್ಟೋರೆಂಟ್ಗಳಿಗೆ ಬಿಗ್ ರಿಲೀಫ್
ವಾಣಿಜ್ಯ ಅನಿಲ ದರ ಇಳಿಸಿದ ತೈಲ ಕಂಪನಿಗಳು. ಸತತ ಏರಿಕೆ ಬಳಿಕ ಈ ವರ್ಷದಲ್ಲಿ ಇದೇ ಮೊದಲ ಇಳಿಕೆ.

Published : July 1, 2026 at 1:29 PM IST
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಭಾರಿ ಏರಿಕೆ ಕಂಡು ಜನರ ಜೇಬು ಸುಟ್ಟಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಬಳಸಲಾಗುವ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ದರ 183.50 ರೂಪಾಯಿ ಕಡಿತಗೊಳಿಸಲಾಗಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದ್ದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಣಿ ಬೆಲೆ ಏರಿಕೆ ಕಂಡಿದ್ದ ವಾಣಿಜ್ಯ ಅಡುಗೆ ಅನಿಲದ ದರ ಇದೇ ಮೊದಲ ಬಾರಿಗೆ ಇಳಿದಿದೆ. ಈ ಕಡಿತದ ಬಳಿಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,113 ರೂಪಾಯಿಯಿಂದ 2,930 ರೂಪಾಯಿಗೆ ತಲುಪಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
STORY | Commercial LPG price cut by Rs 183.50
— Press Trust of India (@PTI_News) July 1, 2026
Prices of commercial LPG, the one used in hotels and restaurants, were cut by Rs 183.50 per 19-kg cylinder on Wednesday -- the first reduction in rates this year.
READ | https://t.co/JwZIGnjbou pic.twitter.com/U3C7yEx6ON
5 ಕೆಜಿ ಸಿಲಿಂಡರ್ ದರವೂ ಇಳಿಕೆ: ವಾಣಿಜ್ಯ ಸಿಲಿಂಡರ್ ಮಾತ್ರವಲ್ಲದೆ, ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿಯ ಮುಕ್ತ ಮಾರುಕಟ್ಟೆ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್ ಬೆಲೆಯನ್ನೂ 13 ರೂಪಾಯಿ ಕಡಿತಗೊಳಿಸಿವೆ. ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ನ ಚಿಲ್ಲರೆ ಬೆಲೆ 808.50 ರೂಪಾಯಿ ಆಗಿದೆ.
ಗೃಹಬಳಕೆ ಅನಿಲ ದರ ಬದಲಿಲ್ಲ: ವಾಣಿಜ್ಯ ಅನಿಲ ದರ ದೊಡ್ಡ ಮಟ್ಟದಲ್ಲಿ ಇಳಿಕೆಯಾದರೂ ಜನಸಾಮಾನ್ಯರು ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದು ಈಗಿರುವ 942 ರೂಪಾಯಿ ದರದಲ್ಲೇ ಮುಂದುವರಿದಿದೆ. ಜೂನ್ 7 ರಂದು 14.2 ಕೆಜಿಯ ಗೃಹಬಳಕೆ ಅನಿಲ ದರವನ್ನು 29 ರೂ. ಏರಿಸಲಾಗಿತ್ತು.
ಸಾರ್ವಕಾಲಿಕ ದಾಖಲೆ ಬರೆದಿದ್ದ ಗ್ಯಾಸ್ ದರ: ಇರಾನ್-ಅಮೆರಿಕ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಹೆಚ್ಚಿದ್ದರಿಂದ ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,113 ರೂಪಾಯಿ ಆಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಪ್ರತಿ ತಿಂಗಳ 1ನೇ ತಾರೀಖಿನಂದು ಹಿಂದಿನ ತಿಂಗಳ ಸರಾಸರಿ ಬೆಲೆಯನ್ನು ಆಧರಿಸಿ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ.
ಯಾವಾಗ- ಎಷ್ಟು ದರ ಹೆಚ್ಚಳ? ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 111 ರೂಪಾಯಿ ಹೆಚ್ಚಿಸಲಾಗಿತ್ತು. ಅದೇ ರೀತಿ, 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆಯನ್ನು 27 ರೂಪಾಯಿ ಏರಿಸಲಾಗಿತ್ತು.
ಪಶ್ಚಿಮ ಏಷ್ಯಾ ಸಂಘರ್ಷದ ಕಾರಣ ಮಾರ್ಚ್ 7 ರಂದು ಮತ್ತೆ 60 ರೂಪಾಯಿ ಹೆಚ್ಚಿಸಲಾಗಿತ್ತು. ಬಳಿಕ ಎಪ್ರಿಲ್ನಲ್ಲಿ ಮೆಟ್ರೋ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 195.50 ರೂಪಾಯಿ ಹೆಚ್ಚಿಸಲಾಗಿತ್ತು. ಜೂನ್ನಲ್ಲಿ ಗೃಹಬಳಕೆಯ ಅನಿಲ ದರವನ್ನು 29 ರೂಪಾಯಿ ಏರಿಸಲಾಗಿತ್ತು.
ಇವುಗಳನ್ನೂ ಓದಿ:

