ಮನೆ ಖರೀದಿಸುವ ಪ್ಲ್ಯಾನ್ ಇದೆಯೇ? ವಿವಿಧ ಬ್ಯಾಂಕ್‌ಗಳ ಗೃಹ ಸಾಲ ಬಡ್ಡಿದರಗಳು ಹೀಗಿವೆ
ಹೊಸ ಮನೆ ನಿರ್ಮಿಸುವ ಅಥವಾ ಖರೀದಿಸುವ ಯೋಜನೆ ನಿಮಗಿದ್ದಲ್ಲಿ ದೇಶದ ವಿವಿಧ ಬ್ಯಾಂಕ್‌ಗಳು ಗೃಹ ಸಾಲದ ಮೇಲೆ ವಿಧಿಸುವ ಲೇಟೆಸ್ಟ್ ಬಡ್ಡಿದರಗಳ ವಿವರ ಇಂತಿದೆ.

Published : February 22, 2026 at 4:13 PM IST
ಬ್ಯಾಂಕ್‌ಗಳು ನಿಮಗೆ ನೀಡುವ ಅತಿ ಕಡಿಮೆ ಬಡ್ಡಿ ದರದ ಸಾಲಗಳಲ್ಲಿ ಮನೆ ಸಾಲವೂ ಒಂದು. ಅರ್ಹ ವ್ಯಕ್ತಿಗಳು ಬ್ಯಾಂಕಿನಿಂದ ಸಾಲ ಪಡೆಯುವ ಮೂಲಕ ತಮ್ಮ ತಲೆಯ ಮೇಲೊಂದು ಸ್ವಂತದ ಸೂರು ಹೊಂದುವ ಬಹುಕಾಲದ ಕನಸನ್ನು ನನಸಾಗಿಸಬಹುದು.
ಇಂಥ ಸಾಲವನ್ನು ಪಡೆಯಲು ಕ್ರೆಡಿಟ್ ಸ್ಕೋರ್, ಆದಾಯ ಮುಂತಾದ ವಿವಿಧ ಅಂಶಗಳು ಮುಖ್ಯವಾಗುತ್ತವೆ. ಇದರ ದಾಖಲಾತಿಗಳನ್ನು ಪರಿಶೀಲಿಸಿಯೇ ಸಂಬಂಧಪಟ್ಟ ಬ್ಯಾಂಕ್‌ಗಳು ನಿಮಗೆ ಲೋನ್ ಮಂಜೂರು ಮಾಡುತ್ತವೆ.
ಈ ಸಾಲಗಳು ಹೆಚ್ಚಿನ ಮೊತ್ತ, ದೀರ್ಘಾವಧಿ (ಇಎಂಐ) ಹೊಂದಿರುವುದರಿಂದ ಬಡ್ಡಿದರದಲ್ಲಿನ ಸಣ್ಣ ವ್ಯತ್ಯಾಸವೂ ಕೂಡಾ ನಿಮ್ಮ ಹಣಕಾಸಿನ ಲೆಕ್ಕಾಚಾರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಗೃಹ ಸಾಲ ಪಡೆಯ ಬಯಸುವವರು ಅರ್ಜಿ ಸಲ್ಲಿಸುವ ಮುನ್ನ ಸಾಧ್ಯವಾದಷ್ಟು ಸಾಲ ನೀಡುವ ಸಂಸ್ಥೆಗಳ ಬಡ್ಡಿದರಗಳನ್ನು ಗಮನಿಸಬೇಕು ಮತ್ತು ಅವುಗಳನ್ನು ಪರಸ್ಪರ ಹೋಲಿಸಿಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ದೇಶದ ವಿವಿಧ ಬ್ಯಾಂಕ್‌ಗಳು ಗೃಹ ಸಾಲದ ಮೇಲೆ ವಿಧಿಸುವ ಸದ್ಯದ ಬಡ್ಡಿ ದರಗಳು ಹೀಗಿವೆ.
| ಬ್ಯಾಂಕ್ | ಬಡ್ಡಿ ದರ |
| ಕೆನರಾ ಬ್ಯಾಂಕ್ | 7.15 % |
| ಸ್ಟೇಟ್ ಬ್ಯಾಂಕ್ ಇಂಡಿಯಾ | 7.25% |
| ಯೂನಿಯನ್ ಬ್ಯಾಂಕ್ | 7.15 % |
| ಎಲ್ಐಸಿ ಹೌಸಿಂಗ್ ಫೈನಾನ್ಸ್ | 7.15 % |
| ಬ್ಯಾಂಕ್ ಆಫ್ ಬರೋಡಾ | 7.20% |
| ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ | 7.30% |
| ಕರ್ನಾಟಕ ಬ್ಯಾಂಕ್ | 7.30% |
| ಐಡಿಬಿಐ ಬ್ಯಾಂಕ್ | 7.35% |
| ಫೆಡರಲ್ ಬ್ಯಾಂಕ್ | 7.50 % |
| ಟಾಟಾ ಕ್ಯಾಪಿಟಲ್ | 7.50 % |
| ಬಂಧನ್ ಬ್ಯಾಂಕ್ | 7.60 - 7.50 % |
| ಕೋಟಕ್ ಮಹೀಂದ್ರ ಬ್ಯಾಂಕ್ | 7.70% |
| ಪಂಜಾಬ್ ನ್ಯಾಶನಲ್ ಬ್ಯಾಂಕ್ | 7.75 % |
| ಸೌತ್ ಇಂಡಿಯನ್ ಬ್ಯಾಂಕ್ | 7.80 % |
| ಜಮ್ಮು ಕಾಶ್ಮೀರ ಬ್ಯಾಂಕ್ | 7.85 % |
| ಧನಲಕ್ಷ್ಮಿ ಬ್ಯಾಂಕ್ | 7.90 % |
| ಆ್ಯಕ್ಸಿಸ್ ಬ್ಯಾಂಕ್ | 8.00 % |
| ಕರೂರ್ ವೈಶ್ಯಾ ಬ್ಯಾಂಕ್ | 8.50 % |
| ಯಸ್ ಬ್ಯಾಂಕ್ | 9.00- 11.50 % |
| ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | 7.10 % |
| ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 7.10 % |
| ಬ್ಯಾಂಕ್ ಆಫ್ ಇಂಡಿಯಾ | 7.10 % |
| ಬ್ಯಾಂಕ್ ಆಫ್ ಮಹಾರಾಷ್ಟ್ರ | 7.15 % |
| ಮೂಲ- ಬ್ಯಾಂಕ್‌ಬಜಾರ್ | |
ಓದುಗರು ಗಮನಿಸಿ: ಕ್ರೆಡಿಟ್ ಸ್ಕೋರ್, ಉದ್ಯೋಗ, ವಯಸ್ಸು, ಸಾಲದ ಮೊತ್ತವನ್ನು ಅವಲಂಬಿಸಿ ಬಡ್ಡಿದರಗಳು ಬದಲಾಗುತ್ತವೆ. ಬ್ಯಾಂಕುಗಳು ಸಾಲದ ಮೇಲೆ ಸಂಸ್ಕರಣ ಶುಲ್ಕ ಮತ್ತು ಇತರ ಹಲವು ಶುಲ್ಕಗಳನ್ನು ವಿಧಿಸುತ್ತವೆ ಎಂಬುದು ನಿಮ್ಮ ಗಮನದಲ್ಲಿರಲಿ.
ಇದನ್ನೂ ಓದಿ: ರಿಸ್ಕ್ ಇಲ್ಲದೇ ಹೆಚ್ಚು ಆದಾಯ ಬರುವ ಉಳಿತಾಯ ಯೋಜನೆ ಬೇಕಾ?;ನಿಮಗಾಗಿ ಇಲ್ಲಿದೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್

