ETV Bharat / business

Good News.. ಈ ವರ್ಷವೂ 8.25ರಷ್ಟು ಪಿಎಫ್ ಬಡ್ಡಿದರ ಕಾಯ್ದುಕೊಂಡ EPFO

ಕಳೆದ 2024-25ರ ಆರ್ಥಿಕ ವರ್ಷದ ಫೆಬ್ರವರಿಯಲ್ಲಿ ಇಪಿಎಫ್​ಒ ಶೇ 8.25ರಷ್ಟೇ ಬಡ್ಡಿದರವನ್ನು ಉಳಿಸಿಕೊಂಡಿತ್ತು. ಈ ವರ್ಷವೂ ಇದೇ ಬಡ್ಡಿದರ ಮುಂದುವರೆಯುವ ಸಾಧ್ಯತೆ ಇದೆ.

epfo-retains-8-dot-25-pc-interest-rate-on-employees-provident-fund-deposits-for-2025-26
ಇಪಿಎಫ್​ಒ (IANS)
author img

By PTI

Published : March 2, 2026 at 4:44 PM IST

2 Min Read
Choose ETV Bharat

ನವದೆಹಲಿ: ಭಾರತದ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್​ಒ 2025- 26ರ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 8.25 ಕ್ಕೆ ನಿಗದಿಪಡಿಸಿದ್ದು, ಸತತ ಎರಡನೇ ವರ್ಷವೂ ದರವನ್ನು ಉಳಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2024-25ರ ಆರ್ಥಿಕ ವರ್ಷದ ಫೆಬ್ರವರಿಯಲ್ಲಿ ಇಪಿಎಫ್​ಒ ಶೇ 8.25ರಷ್ಟೇ ಬಡ್ಡಿದರವನ್ನು ಉಳಿಸಿಕೊಂಡಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ, 2022-23ರಲ್ಲಿ ಬಡ್ಡಿದವರನ್ನು ಶೇ. 8.15 ರಿಂದ 2023-24 ಕ್ಕೆ ಶೇ. 8.25 ಕ್ಕೆ ಬಡ್ಡಿದರವನ್ನು ಸ್ವಲ್ಪ ಹೆಚ್ಚಿಸಿತ್ತು.

ಈ ವರ್ಷ ಯಾವುದೇ ಬದಲಾವಣೆ ಇಲ್ಲ- ಯಥಾ ಸ್ಥಿತಿ ಮುಂದುವರಿಕೆ: 2022ರ ಮಾರ್ಚ್​ನಲ್ಲಿ ಇಪಿಎಫ್​ಒ 2021-22ರ ನಿವೃತ್ತಿ ನಂತರದ ಠೇವಣಿಗಳ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳಲ್ಲಿಯೇ ಕನಿಷ್ಠ ಮಟ್ಟವಾದ ಶೇ.8.10 ಕ್ಕೆ ಇಳಿಸಿತ್ತು. ಇದು 2020-21 ರಲ್ಲಿ ಶೇ. 8.5ರಷ್ಟಿತು. 2020-21ರಲ್ಲಿ ಬಡ್ಡಿದರ 8.10ಇದ್ದು, 1977-78ರ ನಂತರದ ಅತ್ಯಂತ ಕಡಿಮೆ ದರವಾಗಿದ್ದು, ಆಗ ದರವು ಶೇ. 8 ರಷ್ಟಿತ್ತು.

ಇಪಿಎಫ್‌ಒದ ಪ್ರಮುಖ ನಿರ್ಧಾರ ನಡೆಸುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) ಸೋಮವಾರ ನಡೆದ ಸಭೆಯಲ್ಲಿ 2025 - 26ನೇ ಸಾಲಿಗೆ ಇಪಿಎಫ್ ಮೇಲೆ ಶೇ 8.25 ರಷ್ಟು ಬಡ್ಡಿದರವನ್ನು ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಟಿ ನಿರ್ಧಾರದ ಬಳಿಕ 2025-26 ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ಸರ್ಕಾರ ಅನುಮೋದನೆ ನೀಡಿದ ನಂತರ, 2025 - 26ರ ಬಡ್ಡಿದರವನ್ನು ಏಳು ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ವಿತ್ತ ಸಚಿವಾಲಯದ ಮೂಲಕ ಸರ್ಕಾರ ಅನುಮೋದನೆ ನೀಡಿದ ನಂತರ ಇಪಿಎಫ್‌ಒ ಬಡ್ಡಿದರ ನೀಡುತ್ತದೆ.

2020ರಲ್ಲಿ ಶೇ 8.65ರಿಂದ 8.5ಕ್ಕೆ ಇಳಿದಿದ್ದ ಬಡ್ಡಿ ದರ: 2020ರ ಮಾರ್ಚ್​ನಲ್ಲಿ 2018-19ನೇ ಸಾಲಿಗೆ ನೀಡಲಾಗಿದ್ದ ಶೇ. 8.65 ರಿಂದ ಶೇ. 8.5 ಕ್ಕೆ ಇಪಿಎಫ್‌ಒ ಬಡ್ಡಿದರವನ್ನು ಇಳಿಸಿತು. ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ. 8.65 ಮತ್ತು 2017-18ರಲ್ಲಿ ಶೇ. 8.55 ಬಡ್ಡಿದರವನ್ನು ನೀಡಿತು. 2015-16ರಲ್ಲಿ ಬಡ್ಡಿದರವು ಶೇ. 8.8 ರಷ್ಟು ಹೆಚ್ಚಾಗಿದೆ. 2011-12ರಲ್ಲಿ ಬಡ್ಡಿದರ ಶೇ. 8.25 ರಷ್ಟಿತ್ತು.

ಇವುಗಳನ್ನೂ ಓದಿ:

ದಿನಕ್ಕೆ ಕೇವಲ 417ರೂ ಉಳಿತಾಯ ಮಾಡಿ: ದೀರ್ಘಾವಧಿ ಹೂಡಿಕೆ ಬಳಿಕ ನಿಮ್ಮ ಕೈಗೆ ಸಿಗಲಿದೆ 1 ಕೋಟಿ ರೂಪಾಯಿ

ಯುದ್ಧದ ಕಾರ್ಮೋಡದ ನಡುವೆ ರಕ್ಷಣಾ ಷೇರುಗಳಲ್ಲಿ ಏರಿಕೆ: ಐಡಿಯಾಫೋರ್ಜ್ ಟೆಕ್ ಶೇ15 ಕ್ಕಿಂತ ಹೆಚ್ಚು ಏರಿಕೆ