ETV Bharat / business

ಯುದ್ಧದ ಕಾರ್ಮೋಡದ ನಡುವೆ ರಕ್ಷಣಾ ಷೇರುಗಳಲ್ಲಿ ಏರಿಕೆ: ಐಡಿಯಾಫೋರ್ಜ್ ಟೆಕ್ ಶೇ15 ಕ್ಕಿಂತ ಹೆಚ್ಚು ಏರಿಕೆ

ಐಡಿಯಾಫೋರ್ಜ್ ಟೆಕ್ನಾಲಜಿಯ ಷೇರುಗಳು ಶೇ. 15.11 ರಷ್ಟು ಏರಿಕೆ ಕಂಡರೆ, ಪ್ಯಾರಾಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಶೇ. 13.14 ರಷ್ಟು ಪ್ರಮಾಣದಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಳ ಮಾಡಿಕೊಂಡಿವೆ.

Defence stocks rally; Ideaforge Tech zooms over 15 pc
ಯುದ್ಧದ ಕಾರ್ಮೋಡದ ನಡುವೆ ರಕ್ಷಣಾ ಷೇರುಗಳಲ್ಲಿ ಏರಿಕೆ (IANS)
author img

By PTI

Published : March 2, 2026 at 1:44 PM IST

2 Min Read
Choose ETV Bharat

ನವದೆಹಲಿ: ಅಮೆರಿಕ, ಇಸ್ರೇಲ್​ ಹಾಗೂ ಇರಾನ್​ ನಡುವೆ ನಡೆಯುತ್ತಿರುವ ಕದನದ ನಡುವೆ ಷೇರುಪೇಟೆಯಲ್ಲಿ ಸೋಮವಾರ ರಕ್ಷಣಾ ಷೇರುಗಳಲ್ಲಿ ಕೆಲವು ಭಾರಿ ಏರಿಕೆ ಕಂಡವು. ಐಡಿಯಾಫೋರ್ಜ್ ಟೆಕ್ನಾಲಜಿ ಶೇ. 15 ಕ್ಕಿಂತ ಹೆಚ್ಚು ಏರಿಕೆ ಕಂಡು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿಸಿತು. ಈ ನಡುವೆ ಇಸ್ರೇಲ್ - ಅಮೆರಿಕಕ್ಕೆ ತಿರುಗೇಟು ನೀಡುತ್ತಿರುವ ಟೆಹ್ರಾನ್​, ಪ್ರತೀಕಾರದ ದಾಳಿಗೆ ಮುಂದಾಗಿದೆ.

ಐಡಿಯಾಫೋರ್ಜ್ ಟೆಕ್ನಾಲಜಿಯ ಷೇರುಗಳು ಶೇ. 15.11 ರಷ್ಟು ಏರಿಕೆ ಕಂಡರೆ, ಪ್ಯಾರಾಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಶೇ. 13.14 ರಷ್ಟು ಪ್ರಮಾಣದಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಳ ಮಾಡಿಕೊಂಡವು. ಇನ್ನು ಸಿಕಾ ಇಂಟರ್‌ಪ್ಲಾಂಟ್ ಸಿಸ್ಟಮ್ಸ್ ಶೇ. 4.25 ರಷ್ಟು ಏರಿಕೆ ಕಂಡರೆ, ಭಾರತ್ ಡೈನಾಮಿಕ್ಸ್ ಶೇ. 4 ರಷ್ಟು ಏರಿಕೆ ಕಂಡವು. ಭಾರತ್ ಎಲೆಕ್ಟ್ರಾನಿಕ್ಸ್ ಶೇ. 2.77 ರಷ್ಟು ಏರಿಕೆ ಕಂಡಿತು ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಬಿಎಸ್‌ಇಯಲ್ಲಿ ಶೇ. 1.75 ರಷ್ಟು ಏರಿಕೆ ಕಂಡು ಹೂಡಿಕೆದಾರರ ಮೊಗದಲ್ಲಿ ಉದ್ವಿಗ್ನತೆ ನಡುವೆ ಮಂದಹಾಸ ಮೂಡಿಸಿದವು.

ಬಿಎಸ್‌ಇ ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ 1,131.02 ಪಾಯಿಂಟ್‌ಗಳ ಕುಸಿತದೊಂದಿಗೆ 80,123.09 ಕ್ಕೆ ತಲುಪಿತು. 50 ಷೇರುಗಳ NSE ನಿಫ್ಟಿ 341.95 ಪಾಯಿಂಟ್‌ಗಳ ಕುಸಿತದೊಂದಿಗೆ 24,836.70ಕ್ಕೆ ಕುಸಿತ ಕಂಡಿದೆ. ಇಂತಹ ಬೆಳವಣಿಗೆಯ ನಡುವೆ ರಕ್ಷಣಾ ವಲಯದ ಷೇರುಗಳು ಧಮಾಕಾ ಸೃಷ್ಟಿಸುತ್ತಿವೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶನಿವಾರ ಮುಂಜಾನೆ ಟೆಹ್ರಾನ್‌ನಲ್ಲಿ ನಡೆದ ಅಮೆರಿಕ - ಇಸ್ರೇಲಿ ಸಂಘಟಿತ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ಸರ್ಕಾರಿ ಮಾಧ್ಯಮ ಭಾನುವಾರ ಈ ಸಾವನ್ನು ದೃಢಪಡಿಸಿದೆ. ಇರಾನ್ ತನ್ನ ಸರ್ವೋಚ್ಚ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮತ್ತು ಈ ಪ್ರದೇಶದ ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಲು ಪ್ರಾರಂಭಿಸಿದೆ.

ತೈಲ ಬೆಳೆಗಳಲ್ಲಿ ಏರಿಕೆ: ಯುದ್ಧದ ಹಿನ್ನೆಲೆಯಲ್ಲಿ ಸಂಭಾವ್ಯ ತೈಲ ಬೆಲೆ ಸನ್ನಿವೇಶಗಳನ್ನು ವಿವರಿಸಿದ ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ, ಸೀಮಿತ ಏರಿಕೆಯ ಸಂದರ್ಭದಲ್ಲಿ ಬ್ರೆಂಟ್ ತೈಲ ಪ್ರತಿ ಬ್ಯಾರೆಲ್‌ಗೆ 100ರಿಂದ 115 ಡಾಲರ್‌ಗೆ ಏರಬಹುದು. ಕಡಲ ಅಡಚಣೆಯ ಸಂದರ್ಭಗಳಲ್ಲಿ ಈ ಬೆಲೆಗಳು 120ರಿಂದ 140 ಡಾಲರ್‌ಗೆ ಹೆಚ್ಚಾಗಬಹುದು. ಆದರೆ, ಹಾರ್ಮುಜ್ ಜಲಸಂಧಿಯನ್ನು ನಿರಂತರವಾಗಿ ಬಂದ್ ಮಾಡಿದ್ದೇ ಆದಲ್ಲಿ ತೈಲ ಬೆಲೆ 150 ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

OPEC ಪಾತ್ರದ ಕುರಿತು ಮಾತನಾಡಿ, ಸೌದಿ ಅರೇಬಿಯಾ ಮತ್ತು UAE ದಿನಕ್ಕೆ ಸುಮಾರು 4ರಿಂದ 5 ಮಿಲಿಯನ್ ಬ್ಯಾರೆಲ್‌ಗಳ ಬಿಡಿ ಸಾಮರ್ಥ್ಯ ಹೊಂದಿವೆ. ಆದರೆ, ಆ ಪೂರೈಕೆಯ ಬಹುಪಾಲು ಹಾರ್ಮುಜ್ ಸಾಗಣೆಯನ್ನೇ ಅವಲಂಬಿಸಿದೆ ಎಂದರು.

ಇವುಗಳನ್ನು ಓದಿ:

ಮಧ್ಯ ಪ್ರಾಚ್ಯ ಉದ್ವಿಗ್ನತೆಯ ಎಫೆಕ್ಟ್; ಕಚ್ಚಾ ತೈಲ ಬೆಲೆ ಶೇ 10ರಷ್ಟು ಏರಿಕೆ

ಇರಾನ್ ಬಿಕ್ಕಟ್ಟು: ಭಾರತದಲ್ಲಿ ತೈಲ, ನೈಸರ್ಗಿಕ ಅನಿಲ ಬೆಲೆ ಏರುವುದೇ? ಎಷ್ಟು ದಿನಕ್ಕಿದೆ ದಾಸ್ತಾನು?