ETV Bharat / business

ಪಾತಾಳಕ್ಕೆ ಕುಸಿದ ಇಂಧನ ಪೂರೈಕೆದಾರ ಕ್ಲೀನ್ ಮ್ಯಾಕ್ಸ್ ಷೇರುಗಳು: ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ಇಂಧನ ಪೂರೈಕೆದಾರ ಕಂಪನಿಯಾದ ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿಯ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.

CLEAN MAX SHARES DECLINE
ಸಾಂದರ್ಭಿಕ ಚಿತ್ರ (IANS)
author img

By PTI

Published : March 2, 2026 at 4:36 PM IST

2 Min Read
Choose ETV Bharat

ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ನವೀಕರಿಸಬಹುದಾದ ಇಂಧನ ಪೂರೈಕೆದಾರ ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಷೇರುಗಳು ಇಂದಿನ ವಹಿವಾಟಿನಲ್ಲಿ ಪಾತಾಳಕ್ಕೆ ಕುಸಿದಿವೆ.

ಸೋಮವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಗಳು ಶೇ. 1 ಕ್ಕೂ ಹೆಚ್ಚು ಕುಸಿತದೊಂದಿಗೆ ವಹಿವಾಟು ಮುಗಿಸಿವೆ. ಬಿಎಸ್‌ಇಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 2,743.46 ಪಾಯಿಂಟ್‌ಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಈಡಾಗಿತ್ತು. ಅಂದರೆ ಸುಮಾರು ಶೇ. 3.37 ರಷ್ಟು ಕುಸಿದು 78,543.73 ಕ್ಕೆ ತಲುಪಿತ್ತು. ನಂತರ ಅದು 1,048.34 ಪಾಯಿಂಟ್‌ಗಳು ಅಥವಾ ಶೇ. 1.29 ರಷ್ಟು ಕುಸಿದು 80,238.85 ಕ್ಕೆ ತನ್ನ ದಿನದ ವಹಿವಾಟನ್ನು ಮುಗಿಸಿತು.

ಇನ್ನು ನಿಫ್ಟಿ ದಿನದ ವಹಿವಾಟಿನ ಒಂದು ಹಂತದಲ್ಲಿ 575.15 ಪಾಯಿಂಟ್‌ಗಳು ಅಂದರೆ ಶೇ. 2.28 ರಷ್ಟು ಕುಸಿದು 24,603.50 ಕ್ಕೆ ತಲುಪಿತ್ತು. ಆದರೆ ದಿನದ ಅಂತ್ಯಕ್ಕೆ ಚೇತರಿಕೆ ಕಾಣುವ ಮೂಲಕ 312.95 ಪಾಯಿಂಟ್‌ಗಳು ಕುಸಿತ ಕಾಣುವ ಮೂಲಕ 24,865.70 ಕ್ಕೆ ದಿನದ ವ್ಯವಹಾರವನ್ನು ಮುಗಿಸಿತು.

ಈ ಷೇರುಗಳಲ್ಲಿ ಭಾರಿ ನಷ್ಟ: ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಟರ್ ಗ್ಲೋಬ್ ಏವಿಯೇಷನ್, ಲಾರ್ಸೆನ್ & ಟೂಬ್ರೊ, ಅದಾನಿ ಪೋರ್ಟ್ಸ್, ಮಾರುತಿ, ಏಷ್ಯನ್ ಪೇಂಟ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಪ್ರಮುಖವಾಗಿ ಹಿನ್ನಡೆ ಅನುಭವಿಸಿದವು.

ಇಂದು ಲಾಭಗಳಿಸಿದ ಷೇರುಗಳಿವು: ಈ ಹಿನ್ನಡೆಯ ನಡುವೆ, ಭಾರತ್ ಎಲೆಕ್ಟ್ರಾನಿಕ್ಸ್, ಸನ್ ಫಾರ್ಮಾ ಮತ್ತು ಐಟಿಸಿ ಷೇರುಗಳು ಮಾತ್ರ ಇಂದು ಲಾಭ ಗಳಿಸಿದವು

ಪಾತಾಳಕ್ಕೆ ಕುಸಿದ ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್‌: ಕ್ಲೀನ್ ಮ್ಯಾಕ್ಸ್ ಎನ್ವಿರೋ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್‌ ಇತ್ತೀಚೆಗೆ ಭರ್ಜರಿ ಏರಿಕೆ ದಾಖಲಿಸಿತ್ತು. ಬುಧವಾರ (ಫೆಬ್ರವರಿ 25ರಂದು) ಷೇರು ಮಾರಾಟದ ಕೊನೆಯಲ್ಲಿ ಶೇ. 94 ರಷ್ಟು ಚಂದಾದಾರಿಕೆಯನ್ನು ಪಡೆಯಿತು. 3,100 ಕೋಟಿ ರೂಪಾಯಿ ಮೌಲ್ಯ ಹೊಂದಿರುವ ಈ ಐಪಿಒದ ಪ್ರತಿ ಷೇರು 1,000-1,053 ರೂಪಾಯಿ ಬೆಲೆಯ ಬ್ಯಾಂಡ್ ಹೊಂದಿತ್ತು.

2010 ರಲ್ಲಿ ಸ್ಥಾಪನೆಯಾದ ಕ್ಲೀನ್‌ಮ್ಯಾಕ್ಸ್ ಕಂಪನಿಯು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಮತ್ತು ಡಿಕಾರ್ಬೊನೈಸೇಶನ್ ಪರಿಹಾರಗಳಲ್ಲಿ ಪರಿಣತಿ ಹೊಂದಿದೆ. ಜೊತೆಗೆ, ನವೀಕರಿಸಬಹುದಾದ ವಿದ್ಯುತ್ ಸರಬರಾಜು, ಪವನ, ಸೌರ, ಹೈಬ್ರಿಡ್ ಇಂಧನ ಸೇವೆಗಳು ಮತ್ತು ಕಾರ್ಬನ್ ಕ್ರೆಡಿಟ್ ಸೇವೆಗಳನ್ನು ಇದು ನೀಡುತ್ತದೆ.

ಇವುಗಳನ್ನೂ ಓದಿ: