ಮಕ್ಕಳಿಗಾಗಿ ಇದೆ ಅಂಚೆ ಕಚೇರಿಯ ಸೂಪರ್ ಯೋಜನೆ: ದಿನಕ್ಕೆ ಕೇವಲ 18 ರೂ. ಹೂಡಿಕೆ ಮಾಡಿ.. ಬರೋಬ್ಬರಿ 3 ಲಕ್ಷ ರೂ. ಲಾಭ ಪಡೆಯಿರಿ!
ಮಕ್ಕಳ ಭವಿಷ್ಯಕ್ಕಾಗಿ ಇಲ್ಲಿದೆ ಅತ್ಯುತ್ತಮ ಯೋಜನೆ: ಕಡಿಮೆ ಉಳಿತಾಯದೊಂದಿಗೆ ಹೆಚ್ಚಿನ ಲಾಭ


Published : February 23, 2026 at 10:08 AM IST
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದು ಮುಖ್ಯವಲ್ಲ, ಆದರೆ ಭವಿಷ್ಯಕ್ಕಾಗಿ ಎಷ್ಟು ಎತ್ತಿಡುತ್ತೇವೆ ಅಥವಾ ಉಳಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ನಮಗೆ ಯಾವಾಗ ಹಣ ಬೇಕಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ವಿವಾಹಿತರು ಮತ್ತು ಮಕ್ಕಳನ್ನು ಹೊಂದಿರುವವರು ಪ್ರತಿ ತಿಂಗಳು ಇಂತಿಷ್ಟು ಅಂತಾ ಉಳಿಸುವುದು ಬಹಳ ಮುಖ್ಯ ಎನ್ನುವುದು ಆರ್ಥಿಕ ತಜ್ಞರ ಸಲಹೆಯಾಗಿದೆ.
ವಿಶೇಷವಾಗಿ ಮಕ್ಕಳ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅವರ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸಲು ಉಳಿತಾಯ ಅತ್ಯಂತ ಅಗತ್ಯ. ನೀವು ಸಂಪಾದನೆ ಮಾಡುತ್ತಿರುವ ಹಣವು ಕುಟುಂಬವನ್ನು ಪೋಷಿಸಲು ಸಾಕಾಗದೇ ಇರಬಹುದು ಮತ್ತು ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀವು ಸಾಲ ಮಾಡಬೇಕಾದ ಸಂದರ್ಭವೂ ಒದಗಿ ಬರಬಹುದು.
ಹೀಗಾಗಿ ಅನೇಕ ಜನರು ತಮ್ಮ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳಲ್ಲಿ ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ. ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು ಎಂದು ನೀವು ಸಹ ಯೋಚಿಸುತ್ತಿದ್ದೀರಾ. ಕಡಿಮೆ ಉಳಿತಾಯದೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಲು ಬಯಸುವಿರಾ?. ಅಂತಹ ಜನರಿಗಾಗಿಯೇ ಅಂಚೆ ಕಚೇರಿ ಒಂದು ಸೂಪರ್ ಯೋಜನೆಯನ್ನು ನೀಡುತ್ತಿದೆ. ಇದರಲ್ಲಿ ದಿನಕ್ಕೆ ಕೇವಲ 6 ರೂ. ಹೂಡಿಕೆ ಮಾಡುವ ಮೂಲಕ ಮುಕ್ತಾಯದ ಸಮಯದಲ್ಲಿ 1 ಲಕ್ಷ ರೂ.ಗಳವರೆಗೆ ಲಾಭ ಪಡೆಯಬಹುದು. ಹಾಗಾದರೆ, ಆ ಯೋಜನೆ ಯಾವುದು ? ಅರ್ಹತಾ ಮಾನದಂಡಗಳು ಯಾವುವು, ಹೇಗೆ ಸೇರಬೇಕು? ಎಂಬುದನ್ನು ಈಗ ಅರಿತುಕೊಳ್ಳುವ ಪ್ರಯತ್ನ ಮಾಡೋಣ.
ಮಕ್ಕಳ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಭಾರತೀಯ ಅಂಚೆ ಕಚೇರಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಅದು ಬಾಲ್ ಜೀವನ್ ಬಿಮಾ ಯೋಜನೆ. ಇದರಲ್ಲಿ ಉಳಿಸಲು ಬಯಸುವವರು ದಿನಕ್ಕೆ ಕನಿಷ್ಠ 6 ರೂ. ಮತ್ತು ಗರಿಷ್ಠ 18 ರೂ. ಹೂಡಿಕೆ ಮಾಡಬಹುದು. ಈ ಉಳಿತಾಯವನ್ನು ಮಗುವಿನ ಹೆಸರಿನಲ್ಲಿ ಪ್ರಾರಂಭಿಸಬೇಕು. ಈ ವಿಮಾ ಯೋಜನೆಯಲ್ಲಿ ಪೋಷಕರು 5 ರಿಂದ 20 ವರ್ಷ ವಯಸ್ಸಿನ ತಮ್ಮ ಮಕ್ಕಳ ಹೆಸರಿನಲ್ಲಿ ಹಣವನ್ನು ತೊಡಗಿಸಬಹುದು. ಇದರಲ್ಲಿ ಹೂಡಿಕೆ ಮಾಡುವ ಪೋಷಕರ ವಯಸ್ಸು 45 ವರ್ಷವನ್ನು ಮೀರಬಾರದು ಎಂಬುದನ್ನು ನೆನಪಿನಲ್ಲಿಡಬೇಕು.
ಆರು ರೂಪಾಯಿಗಳೊಂದಿಗೆ ಒಂದು ಲಕ್ಷ ಪ್ರಯೋಜನ!
- ಬಾಲ್ ಜೀವನ್ ಬಿಮಾ ಯೋಜನೆಯ ಅಡಿ ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಮಕ್ಕಳು ಮಾತ್ರ ಪ್ರಯೋಜನ ಪಡೆಯಬಹುದು.
- ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಉಳಿಸಲು ಬಯಸುವವರು ದಿನಕ್ಕೆ ಕೇವಲ 6 ರೂ. ಹೂಡಿಕೆ ಮಾಡಬಹುದು. ಕನಿಷ್ಠ ಗ್ಯಾರಂಟಿ ಅಡಿಯಲ್ಲಿ ಅವರು ಒಟ್ಟು 1 ಲಕ್ಷ ರೂ.ಗಳವರೆಗೆ ಲಾಭ ಪಡೆಯಬಹುದು.
- ಅದೇ ಸಮಯದಲ್ಲಿ ನೀವು ದಿನಕ್ಕೆ ಗರಿಷ್ಠ 18 ರೂ.ಗಳನ್ನು ಹೂಡಿಕೆ ಮಾಡಿದರೆ ಯೋಜನೆ ಮುಕ್ತಾಯದ ಸಮಯದಲ್ಲಿ 3 ಲಕ್ಷ ರೂ.ಗಳವರೆಗೆ ಆದಾಯವನ್ನು ಪಡೆಯಬಹುದು.
- ನಿಮಗೆ ಇಬ್ಬರು ಮಕ್ಕಳಿದ್ದರೆ ನೀವು ಅವರ ಹೆಸರಿನಲ್ಲಿ ದಿನಕ್ಕೆ 36 ರೂ.ಗಳನ್ನು (ತಲಾ 18 ರೂ.ಗಳು) ಉಳಿಸಿದರೆ ಈ ಪಾಲಿಸಿ ಮುಕ್ತಾಯದ ಸಮಯದಲ್ಲಿ 6 ಲಕ್ಷ ರೂ.ಗಳವರೆಗೆ ಒಟ್ಟು ಲಾಭವನ್ನು ಗಳಿಸಬಹುದು.
ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿ:
- ಪಾಲಿಸಿದಾರನು ಪಾಲಿಸಿ ಅವಧಿ ಮುಗಿಯುವ ಮೊದಲು ಮರಣಹೊಂದಿದರೆ ಆ ಸಮಯದಲ್ಲಿ ಪಾಲಿಸಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ.
- ಪಾಲಿಸಿ ಅವಧಿ ಮುಗಿದ ನಂತರ ಪೂರ್ಣ ಮುಕ್ತಾಯ ಮೊತ್ತವನ್ನು ಮಕ್ಕಳಿಗೆ ನೀಡಲಾಗುತ್ತದೆ.
- ಪೋಷಕರು ಪಾಲಿಸಿ ಪ್ರೀಮಿಯಂ ಪಾವತಿಸಬೇಕು. ಅಲ್ಲದೇ ಈ ಪಾಲಿಸಿಯಲ್ಲಿ ಯಾವುದೇ ಸಾಲದ ಪ್ರಯೋಜನ ಪಡೆಯಲು ಆಗುವುದಿಲ್ಲ
- ನೀವು ಈ ಯೋಜನೆಯಿಂದ ಮಧ್ಯದಲ್ಲಿ ನಿಮ್ಮ ಹಣವನ್ನು ಹಿಂಪಡೆಯಲು ಬಯಸಿದರೆ, 5 ವರ್ಷಗಳ ನಂತರವೇ ನಿಮ್ಮ ಪಾಲಿಸಿಯನ್ನು ಸರಂಡರ್ ಮಾಡಬೇಕಾಗುತ್ತದೆ. ಐದು ವರ್ಷದ ಒಳಗೆ ನಿಮ್ಮ ಹಣ ವಾಪಸ್ ಪಡೆಯಲು ಬರುವುದಿಲ್ಲ
- 1000 ರೂ.ಗಳ ವಿಮಾ ಮೊತ್ತದ ಮೇಲೆ ಪ್ರತಿ ವರ್ಷ 48 ರೂ. ಬೋನಸ್ ನೀಡಲಾಗುತ್ತದೆ.
ಈ ಯೋಜನೆಗೆ ಸೇರುವುದು ಹೇಗೆ?
- ನಿಮ್ಮ ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಒಮ್ಮೆ ಭೇಟಿ ನೀಡಿ.
- ಬಾಲ್ ಜೀವನ್ ಬಿಮಾ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಅಲ್ಲಿನ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ
- ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ಮಗುವಿನ ಬಗ್ಗೆ ಸಂಪೂರ್ಣ ವಿವರಗಳನ್ನು ನಮೂದಿಸಿ. ಅಷ್ಟೇ ಅಲ್ಲ ಪಾಲಿಸಿದಾರರ (ಪ್ರೀಮಿಯಂ ಪಾವತಿಸುವವರ) ವಿವರಗಳನ್ನು ಒದಗಿಸಬೇಕಾಗುತ್ತದೆ.
- ನಂತರ ಅರ್ಜಿದಾರರು ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಿ ಖಾತೆಯನ್ನು ತೆರೆಯಬಹುದು.
ಇವುಗಳನ್ನು ಓದಿ:
ಮನೆ ಖರೀದಿಸುವ ಪ್ಲ್ಯಾನ್ ಇದೆಯೇ? ವಿವಿಧ ಬ್ಯಾಂಕ್‌ಗಳ ಗೃಹ ಸಾಲ ಬಡ್ಡಿದರಗಳು ಹೀಗಿವೆ
ಈಟಿವಿ ಭಾರತ್ ಸಹಯೋಗದಲ್ಲಿ ಫೆ.26, 27 ರಂದು ಹೈದರಾಬಾದ್ನಲ್ಲಿ ರಾಷ್ಟ್ರೀಯ ಮಟ್ಟದ ಐಪಿಇ ಸ್ಟಾರ್ಟಪೀಡಿಯಾ

