ETV Bharat / bharat

ಜಮ್ಮು ಮತ್ತು ಕಾಶ್ಮೀರ: ಹೊಸ ರಾಜಕೀಯ ವ್ಯಕ್ತಿಗಳ ಉದಯ; ಸಾಂಪ್ರದಾಯಿಕ ಪಕ್ಷಗಳಿಗೆ ಸವಾಲು

2025ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳ ಉದಯದೊಂದಿಗೆ, ಶಕ್ತಿಯ ಚಲನಶೀಲತೆ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಇದು ಸಾಂಪ್ರದಾಯಿಕ ಪಕ್ಷಗಳಿಗೆ ಸವಾಲು ಕೂಡಾ ಹಾಕಿದೆ ಮತ್ತು ಹೊಸ ಭರವಸೆಯೊಂದನ್ನು ಹುಟ್ಟುಹಾಕಿದೆ.

Aga Ruhullah supporters celebrate after PDP's victory in Budgam
ಬುಡ್ಗಾಮ್‌ನಲ್ಲಿ ಪಿಡಿಪಿ ಗೆಲುವಿನ ನಂತರ ಅಗಾ ರುಹುಲ್ಲಾ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿರುವುದು (ETV Bharat)
author img

By ETV Bharat Karnataka Team

Published : December 20, 2025 at 8:08 PM IST

2 Min Read
Choose ETV Bharat

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶ್ರೀನಗರದ ಸಂಸತ್ ಸದಸ್ಯ ಅಗಾ ರುಹುಲ್ಲಾ ಮೆಹದಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವಲಯದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಪ್ರದೇಶದ ವಿಶೇಷ ಸ್ಥಾನಮಾನದ ಬಗ್ಗೆ ಸೌಮ್ಯೋಕ್ತಿ, ಕಾನೂನುಗಳ ದುರುಪಯೋಗ ಮತ್ತು ನವದೆಹಲಿಯ ಹಿತಾಸಕ್ತಿಯ ಬಗ್ಗೆ ಆಸಕ್ತಿ ಇಲ್ಲದಿರುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರ ಸ್ವಂತ ಪಕ್ಷದ ವಿರುದ್ಧದ ತೀವ್ರ ಟೀಕೆಗಳು ಸಂಸದರಿಗೆ ವಿಶಿಷ್ಟ ಖ್ಯಾತಿ ಮತ್ತು ಜನಸಾಮಾನ್ಯರಲ್ಲಿ ಭಾರಿ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ.

Srinagar Lok Sabha MP Aga Syed Ruhullah Mehdi
ಅಗಾ ಸೈಯದ್ ರುಹುಲ್ಲಾ ಮೆಹದಿ (ETV Bharat)

ಪ್ರತಿಕೂಲ ಸವಾಲುಗಳು ಮತ್ತು ನಿರ್ಬಂಧಗಳ ನಡುವೆಯೂ ನಿರ್ಭೀತವಾಗಿ, ಅಚಲವಾದ ಇಮೇಜ್ ಅನ್ನು ಹೊಂದಿರುವ ಏಕೈಕ ದೃಢ ರಾಜಕೀಯ ನಾಯಕನಾಗಿ ರುಹುಲ್ಲಾ ಈಗ ಹೊರಹೊಮ್ಮಿದ್ದಾರೆ. ಶಿಯಾ ಸಮುದಾಯದ ನಡುವೆ ಗಮನಾರ್ಹ ಧಾರ್ಮಿಕ ಪ್ರಭಾವದಿಂದ ಉತ್ತೇಜಿಸಲ್ಪಟ್ಟ ಅವರ ಬೆಳೆಯುತ್ತಿರುವ ಪ್ರಭಾವ ಹಾಗೂ ಪಿಡಿಪಿ ಪಕ್ಷದೊಂದಿಗಿನ ಸಂಸದರ ದ್ವೇಷದ ಲಾಭವನ್ನು ಪಡೆದುಕೊಂಡ ನಂತರ, ಆಡಳಿತಾರೂಢ ಎನ್‌ಸಿಯನ್ನು ಅದರ ಸಾಂಪ್ರದಾಯಿಕ ಭದ್ರಕೋಟೆಯಾದ ಬುಡ್ಗಾಮ್‌ನಲ್ಲಿ ಮಂಡಿಯೂರಿಸಿದೆ.

'ಬಲಹೀನತೆ' ಮತ್ತು ಸಾರ್ವಜನಿಕ ಒತ್ತಡದ ನಡುವೆ ಸಿಲುಕಿರುವ ಆಡಳಿತಾರೂಢ ಎನ್‌ಸಿಗೆ ಅವರು ಗಮನಾರ್ಹ ಸವಾಲನ್ನು ಒಡ್ಡುತ್ತಿದ್ದಾರೆ.

Aga Muntazir Mehdi
ಅಗಾ ಮುಂತಜಿರ್ ಮೆಹದಿ (ETV Bharat)

ಅಗಾ ಮುಂತಜಿರ್ ಮೆಹದಿ ಗೆಲುವು ಪಿಡಿಪಿಗೆ ಹೊಸ ಭರವಸೆ : ಅಕ್ಟೋಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಅಗಾ ಮುಂತಜಿರ್ ಮೆಹದಿ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಈ ಮೂಲಕ ಅವರು ಪಕ್ಷಕ್ಕೆ ಪುನರುಜ್ಜೀವನ ನೀಡಿದ್ದಾರೆ. ಎನ್‌ಸಿಯ ಭದ್ರಕೋಟೆಯಾಗಿದ್ದ ಸ್ಥಾನದಲ್ಲಿ ಮೆಹದಿ ಗೆಲುವು ಸಾಧಿಸಿದ್ದಾರೆ.

32 ವರ್ಷದ ಅಗಾ ಮುಂತಜಿರ್ ಮೆಹದಿ ಅವರು ಶಾಸಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 2019ರ ನಂತರ ನಾಯಕರ ನಿರ್ಗಮನದಿಂದ ಕುಸಿದಿದ್ದ ಪಕ್ಷಕ್ಕೆ ಇದು ಹೊಸ ಚೈತನ್ಯವನ್ನು ನೀಡಿದೆ.

ದೇವಯಾನಿ ಸಿಂಗ್ ರಾಣಾ : ದೇವಯಾನಿ ಸಿಂಗ್ ರಾಣಾ ಅವರನ್ನು ಚುನಾವಣಾ ರಾಜಕೀಯಕ್ಕೆ ತಳ್ಳಿದ್ದು, ಅವರ ಸ್ವಂತ ಇಚ್ಛೆಯಿಂದಲ್ಲ, ಬದಲಾಗಿ ಅವರ ತಂದೆಯ 'ಕೊನೆಯ ಆಸೆ'ಯನ್ನು ಈಡೇರಿಸುವ ಭರವಸೆಯಿಂದ. ಆದರೆ, ಆ ಯುವತಿ ನಗ್ರೋಟಾದಿಂದ 24,000ಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮ ಚೊಚ್ಚಲ ಚುನಾವಣಾ ಗುರುತನ್ನು ನೋಂದಾಯಿಸುವ ಮೂಲಕ ಒಂದು ರೀತಿಯ ದಾಖಲೆಯನ್ನು ನಿರ್ಮಿಸಿದ್ದಾರೆ.

BJP's Devyani Rana wins from Nagrota in Jammu and Kashmir
ಜಮ್ಮು ಕಾಶ್ಮೀರದ ನಗ್ರೋಟಾದಿಂದ ಬಿಜೆಪಿಯ ದೇವಯಾನಿ ರಾಣಾ ಗೆಲುವು ಸಾಧಿಸಿದ್ದಾರೆ (ETV Bharat)

ರಾಜಕೀಯಕ್ಕೆ ಧುಮುಕುವ ಮೊದಲು, ಬಿಜೆಪಿ ರಾಜಕಾರಣಿ ಲಾಸ್ ಏಂಜಲೀಸ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದರು ಮತ್ತು ತಮ್ಮ ಕುಟುಂಬದ ವ್ಯವಹಾರ ಸಾಮ್ರಾಜ್ಯಕ್ಕೆ ಅಂಬೆಗಾಲನ್ನು ಇಡುತ್ತಿದ್ದರು.

ನ್ಯಾಷನಲ್ ಕಾನ್ಫರೆನ್ಸ್ ದೇವಯಾನಿ ವಿರುದ್ಧ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೂ ಅವರು ತಮ್ಮ ತಂದೆಯನ್ನು ಅನುಸರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ : Yearender 2025: ಜಮ್ಮು - ಕಾಶ್ಮೀರ ಅಧಿಕಾರ ಸಂಘರ್ಷ: ಆಡಳಿತಕ್ಕೆ ಅಡ್ಡಗಾಲಾದ 'ಇಬ್ಬಿಬ್ಬರು' ನಾಯಕರು!