ETV Bharat / bharat

ಮದುವೆಗೆ ನಿರಾಕರಿಸಿದ ಎಂದು ಪ್ರಿಯಕರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆ

ಸಂತ್ರಸ್ತ ವ್ಯಕ್ತಿಯ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಎಸಿಪಿ ಲೋಹಮಂಡಿ ಗೌರವ್ ಸಿಂಗ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : February 28, 2026 at 12:08 PM IST

2 Min Read
Choose ETV Bharat

ಆಗ್ರಾ (ಉತ್ತರ ಪ್ರದೇಶ): ಮಹಿಳೆಯೊಬ್ಬರು ತನ್ನ ಪ್ರಿಯಕರ ವಿವಾಹಿತ ವ್ಯಕ್ತಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಆಟೋ ಚಾಲಕನಾಗಿರುವ ವ್ಯಕ್ತಿಗೆ ಶೇ. 80 ರಷ್ಟು ಸುಟ್ಟ ಗಾಯಗಳಾಗಿವೆ. ಮಹಿಳೆಯ ಪತಿ ಮೃತಪಟ್ಟಿದ್ದು, ಸುಟ್ಟ ಗಾಯಗಳಾಗಿರುವ ವ್ಯಕ್ತಿಯ ಪತ್ನಿ ಜೀವಂತವಾಗಿದ್ದಾರೆ. ಅವರಿಬ್ಬರೂ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಮದುವೆ ಒತ್ತಡದಿಂದ ಇಬ್ಬರ ಪ್ರೇಮಕಥೆ ದ್ವೇಷದ ಕಥೆಯಾಗಿ ಪರಿವರ್ತನೆಯಾಗಿದೆ.

ಮದುವೆಯಾಗಿ ಗಂಡನನ್ನು ಕಳೆದುಕೊಂಡಿರುವ ಮಹಿಳೆ ಮತ್ತು ಆಕೆಯ ಕುಟುಂಬದವರು ತನ್ನ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆಟೋ ಚಾಲಕನ ಕುಟುಂಬ ಆರೋಪಿಸಿದೆ. ಶಹಗಂಜ್ ಪೊಲೀಸ್ ಠಾಣೆ ಪ್ರದೇಶದ ಸ್ವರೂಪ್ ನಗರದಲ್ಲಿ ಈ ಘಟನೆ ನಡೆದಿದೆ. ಶಹಗಂಜ್ ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಆರಂಭಿಸಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಮಹಿಳೆ ತನ್ನನ್ನು ಮದುವೆಯಾಗುವಂತೆ ಪುರುಷನ ಮೇಲೆ ಒತ್ತಡ ಹೇರುತ್ತಿದ್ದಳು ಎಂದು ಕುಟುಂಬ ಹೇಳಿಕೊಂಡಿದೆ. ಅವನು ನಿರಾಕರಿಸಿದಾಗ, ಅವಳು ಅವನನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದ್ದಾಳೆ ಎಂದು ಎಸಿಪಿ ಲೋಹಮಂಡಿ ಗೌರವ್ ಸಿಂಗ್ ತಿಳಿಸಿದ್ದಾರೆ.

ಏನಿದು ಪ್ರಕರಣ?: ಪೊಲೀಸರ ಪ್ರಕಾರ, ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಹಗಂಜ್ ಪೊಲೀಸ್ ಠಾಣೆಯ ಸ್ವರೂಪ್ ನಗರದ ನಿವಾಸಿ ಚಂದ್ (25) ಆಟೋ ರಿಕ್ಷಾ ಚಲಾಯಿಸುವ ಮೂಲಕ ತನ್ನ ಕುಟುಂಬವನ್ನು ಪೋಷಿಸುತ್ತಿದ್ದ. ಚಂದ್ ಸುಮಾರು ಎರಡು ವರ್ಷಗಳ ಹಿಂದೆ ಅಜಂಪದ ರಸ್ತೆಯಲ್ಲಿ ಶಬ್ನಮ್ ಎನ್ನುವ ಮಹಿಳೆಯನ್ನು ಭೇಟಿಯಾದ್ದಾರೆ. ಶಬ್ನಮ್ ವಿವಾಹಿತರಾಗಿದ್ದರು. ಆದರೆ ಅವರ ಪತಿ ನಿಧನರಾಗಿದ್ದರು.

ಗುರುವಾರ ರಾತ್ರಿ, ಚಂದ್ ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕನನ್ನು ಇಳಿಸಿ ಮನೆಗೆ ಹಿಂತಿರುಗುತ್ತಿದ್ದರು. ದಾರಿಯಲ್ಲಿ, ಅವರ ಗೆಳತಿ ಶಬ್ನಮ್, ಆಕೆಯ ತಾಯಿ, ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ಅವರನ್ನು ತಡೆದಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ಚಂದ್ ಮತ್ತು ಶಬ್ನಮ್ ನಡುವೆ ವಾಗ್ವಾದ ನಡೆದಿದೆ. ನಂತರ, ಚಂದ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಚಂದ್ ಕಿರುಚುತ್ತಾ ಓಡಿದ್ದಾರೆ.

ಕಿರುಚಾಟ ಮತ್ತು ಬೆಂಕಿ ಹೊತ್ತಿಕೊಂಡಿರುವ ವ್ಯಕ್ತಿಯನ್ನು ನೋಡಿ, ಜನ ಸ್ಥಳದಲ್ಲಿ ಜಮಾಯಿಸಿದರು. ತಕ್ಷಣ ಚಂದ್ ಅವರನ್ನು ಕಂಬಳಿಯಿಂದ ಮುಚ್ಚಿ ಬೆಂಕಿ ನಂದಿಸಿದರು. ಪೊಲೀಸರಿಗೆ ಮಾಹಿತಿ ನೀಡಲಾಯಿತು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಚಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂದ್ ಅವರಿಗೆ ಸುಮಾರು ಶೇ 80ರಷ್ಟು ಸುಟ್ಟಗಾಯಗಳಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ. ಶುಕ್ರವಾರ ಸಂಜೆ ತಡರಾತ್ರಿ ಪೊಲೀಸರು ಆಸ್ಪತ್ರೆಯಲ್ಲಿ ಚಂದ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅದರಲ್ಲಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸಂಪೂರ್ಣ ಘಟನೆಯನ್ನು ಅವರು ವಿವರಿಸಿದ್ದಾರೆ.

2 ವರ್ಷಗಳ ಸಂಬಂಧ: ಚಂದ್ ಅವರ ಸಹೋದರ ಶಬೀರ್​, ತಮ್ಮ ಸಹೋದರ 2 ವರ್ಷಗಳಿಂದ ಶಬ್ನಮ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಶಬ್ನಮ್ ಅವರು ನನ್ನ ಸಹೋದರನನ್ನು ಮದುವೆಯಾಗಲು ಬಯಸಿದ್ದರು. ಆದರೆ ಚಂದ್​ಗೆ ಇಷ್ಟವಿರಲಿಲ್ಲ. ಇದು ಶಬ್ನಮ್ ಮತ್ತು ಅವರ ಕುಟುಂಬ ಕೋಪ ತರಿಸಿದ್ದು, ಶಬ್ನಮ್ ಮತ್ತು ಅವರ ಕುಟುಂಬ ಚಂದ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಚಂದ್ ಕೂಡ ವಿವಾಹಿತ: ಆರೋಪಿಗಳಲ್ಲಿ ಶಬ್ನಮ್, ಆಕೆಯ ಸೋದರ ಮಾವ ಅಲಿ, ಆಕೆಯ ತಾಯಿ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದ್ದಾರೆ. ತನ್ನ ಸಹೋದರ ಚಂದ್ ಕೂಡ ವಿವಾಹಿತ. ಆರೋಪಿ ಶಬ್ನಮ್ ಮಥುರಾ ನಿವಾಸಿ ಎಂದು ಸಹೋದರ ಶಬೀರ್ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗಂಗಾವತಿ ಕೋರ್ಟ್ ತೀರ್ಪು