ETV Bharat / bharat

'ನನ್ನನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ': ಗಂಡನ ವಿರುದ್ಧ ಎಸ್​​ಪಿಗೆ ದೂರು ನೀಡಿದ ಮಹಿಳೆ

ನನ್ನನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಗಂಡನ ವಿರುದ್ಧವೇ ಮಹಿಳೆಯೊಬ್ಬರು ಕಾಕಿನಾಡ ಎಸ್​​ಪಿಗೆ ದೂರು ನೀಡಿದ್ದಾರೆ.

RELIGION CONVERTED ALLEGATION
ಪ್ರಾತಿನಿಧಿಕ ಚಿತ್ರ (IANS)
author img

By ETV Bharat Karnataka Team

Published : September 1, 2026 at 3:40 PM IST

2 Min Read
Choose ETV Bharat

ಕಾಕಿನಾಡ (ಆಂಧ್ರಪ್ರದೇಶ): ತನ್ನನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಪತಿ ತನಗೆ ಕಿರುಕುಳ ನೀಡುತ್ತಿದ್ದಾನೆ. ತನ್ನೊಂದಿಗೆ ಇನ್ನೂ ಆರು ಮಹಿಳೆಯರ ಜೊತೆ ಆತ ಸಖ್ಯ ಬೆಳೆಸಿದ್ದಾನೆ. ನಾನು ಮತ್ತೆ ಹಿಂದು ಧರ್ಮಕ್ಕೆ ಸೇರ ಬಯಸುತ್ತೇನೆ ಎಂದು ಮಹಿಳೆಯೊಬ್ಬರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಆರೋಪಿತ ವ್ಯಕ್ತಿಯು ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಮಹಿಳೆ ನೀಡಿದ ದೂರಿನ ಪ್ರಕಾರ, ಕಾಕಿನಾಡ ಜಿಲ್ಲೆಯ ಜಗನ್ನಾಥಪುರಂ ನಿವಾಸಿಯಾಗಿರುವ ಮಹಿಳೆ ಮೊದಲು ಹಿಂದು ಧರ್ಮೀಯಳಾಗಿದ್ದಳು. ಅಲ್ಪಸಂಖ್ಯಾತ ಸಮುದಾಯದ ಗೌಸ್​ ಮೊಹಿದ್ದೀನ್​ ಎಂಬಾತನನ್ನು ಕಾಲೇಜು ಹಂತದಲ್ಲಿ ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ವಿವಾಹವಾಗಿದ್ದಳು.

ಕೆಲ ದಿನಗಳ ನಂತರ ಆರೋಪಿಯು ಮಹಿಳೆಯ ಧರ್ಮಾಂತರಗೊಳ್ಳಲು ಕಿರುಕುಳ ನೀಡಲಾರಂಭಿಸಿದ. ಬಳಿಕ ನನ್ನನ್ನು ಬಲವಂತವಾಗಿ ಇನ್ನೊಂದು ಧರ್ಮಕ್ಕೆ ಮತಾಂತರಿಸಿ 'ಶೇಕ್ ಉಮ್ಮುಲ್ ಖೈರ್' ಎಂದು ಹೊಸ ಹೆಸರು ನೀಡಿದ್ದಾನೆ. ಪುತ್ರಿ ಜನಿಸಿದ ಬಳಿಕ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಈ ಬಗ್ಗೆ ಕುಟುಂಬಸ್ಥರು ಮತ್ತು ಸಾರ್ವಜನಿಕರಿಗೆ ತಿಳಿಸಿದೆ. ಆದರೂ ಆತನ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಬಳಿಕ 6 ಬೇರೆ ಮಹಿಳೆಯರೊಂದಿಗೆ ಸಖ್ಯ ಬೆಳೆಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆ ಮಹಿಳೆಯರನ್ನೂ ಆತ ಮತಾಂತರಗೊಳ್ಳಲು ಒತ್ತಾಯಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಬಗ್ಗೆ ಎಲ್ಲಿ ಬೇಕಾದರೂ ದೂರು ನೀಡು ಎಂದು ಧಮ್ಕಿ ಹಾಕಿದ್ದ. ಒಮ್ಮೆ ಆತನಿಂದ ತಪ್ಪಿಸಿಕೊಂಡು ಬೇರೆಡೆ ಹೋಗಿದ್ದೆ. ಆದರೆ, ಆತ ನನ್ನನ್ನು ಪತ್ತೆ ಮಾಡಿ ಚಾಕು ತೋರಿಸಿ ಹೆದರಿಸಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಪ್ರಕರಣವೊಂದರಲ್ಲಿ ಆತನನ್ನು 20 ದಿನ ಜೈಲಿನಲ್ಲಿ ಇಡಲಾಗಿತ್ತು. ಆತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ. ಯುವತಿಯೊಬ್ಬಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಆತ ಸದ್ಯ ಜೈಲಿನಲ್ಲಿದ್ದಾನೆ. ಆತ ಹೊರಗಡೆ ಇಲ್ಲದ ಕಾರಣ ಧೈರ್ಯ ಮಾಡಿ ದೂರು ದಾಖಲಿಸುತ್ತಿದ್ದೇನೆ ಎಂದು ಆಕೆ ಉಲ್ಲೇಖಿಸಿದ್ದಾಳೆ.

ಎಸ್​ಪಿ ಕಚೇರಿ ಮುಂದೆಯೇ ಹಣೆಗೆ ತಿಲಕ ಇಟ್ಟುಕೊಂಡ ಮಹಿಳೆ: ಎಸ್​​ಪಿಗೆ ದೂರು ನೀಡಿದ ಬಳಿಕ ಅವರ ಕಚೇರಿ ಮುಂಭಾಗವೇ ತಾನು ತನ್ನ ಹಿಂದಿನ ಧರ್ಮಕ್ಕೆ ಮರಳುವುದಾಗಿ ಘೋಷಿಸಿ, ಹಣೆಗೆ ತಿಲಕ ಇಟ್ಟುಕೊಂಡಿದ್ದಾಳೆ.

ಮಹಿಳೆಯ ದೂರಿನ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ರಾಮ್​ ಕುಮಾರ್​ ಅವರು ಇದನ್ನು ಲವ್​ ಜಿಹಾದ್​ ಎಂದು ಆರೋಪಿಸಿದ್ದಾರೆ. ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಿದ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇವುಗಳನ್ನೂ ಓದಿ: