ETV Bharat / bharat

ಕೊಚ್ಚಿಯ ಟ್ರಾವೆಲ್​ ಮಾರ್ಟ್​ನಲ್ಲಿ ರಾಮೋಜಿ ಫಿಲ್ಮ್​ ಸಿಟಿ: ಚಿತ್ರನಗರಿ ಬಗ್ಗೆ ಜನರಲ್ಲಿ ಆಸಕ್ತಿ

ಇದೇ ಮೊದಲ ಬಾರಿಗೆ ರಾಮೋಜಿ ಫಿಲ್ಮ್ ಸಿಟಿಯು ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್‌ನಲ್ಲಿ ಭಾಗವಹಿಸಿದೆ.

Travel Mart Kicks Off in Kochi; Ramoji Film City Emerges as Star Attraction
ಕೊಚ್ಚಿಯ ಟ್ರಾವೆಲ್​ ಮಾರ್ಟ್​ನಲ್ಲಿ ರಾಮೋಜಿ ಫಿಲ್ಮ್​ ಸಿಟಿ ಮಳಿಗೆ (ETV Bharat)
author img

By ETV Bharat Karnataka Team

Published : January 9, 2026 at 11:09 AM IST

2 Min Read
Choose ETV Bharat

ಎರ್ನಾಕುಲಂ (ಕೇರಳ): ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯಾಗಿರಿಸಿ ಕೊಚ್ಚಿಯಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್ (ಐಐಟಿಎಂ) ಪ್ರಾರಂಭವಾಗಿದೆ. ಇಲ್ಲಿ ರಾಮೋಜಿ ಫಿಲ್ಮ್ ಸಿಟಿ ಪೆವಿಲಿಯನ್ ಟ್ರಾವೆಲ್ ಮಾರ್ಟ್‌ ಪ್ರಮುಖವಾಗಿ ಗಮನ ಸೆಳೆಯುತ್ತಿದೆ.

ಕೊಚ್ಚಿಯ ಕಡವಂತ್ರದಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಈ ಮಾರ್ಟ್​ ಉದ್ದೇಶ ಪ್ರವಾಸೋದ್ಯಮ ಮತ್ತು ಪ್ರಯಾಣದ ಪ್ರವೃತ್ತಿ ಹಾಗೂ ಸುಸ್ಥಿರ ಪ್ರವಾಸೋದ್ಯಮ ಉತ್ತೇಜನೆಯಾಗಿದೆ. ಈ ಕಾರ್ಯಕ್ರಮದಲ್ಲಿ 15 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ತಾಣಗಳನ್ನು ಪ್ರತಿನಿಧಿಸುವ 100 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ. ಇದರಲ್ಲಿ ರಾಮೋಜಿ ಫಿಲ್ಮ್​ ಸಿಟಿ (ಆರ್​ಎಫ್​ಸಿ) ಪ್ರಮುಖ ಆಕರ್ಷಣೆಯಾಗಿದೆ.

ಇದೇ ಮೊದಲ ಬಾರಿಗೆ ರಾಮೋಜಿ ಫಿಲ್ಮ್ ಸಿಟಿ ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್‌ನಲ್ಲಿ ಭಾಗವಹಿಸುತ್ತಿದೆ. ಟೂರ್ ಆಪರೇಟರ್‌ಗಳು ಮುಖ್ಯವಾಗಿ ಫಿಲ್ಮ್ ಸಿಟಿಯ ಡೇ ಟೂರ್ ಕಾರ್ಯಕ್ರಮದ ಬಗ್ಗೆ ವಿಚಾರಿಸಲು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಟ್ರಾವೆಲ್ ಮಾರ್ಟ್ ಸಾಮಾನ್ಯ ದಿನದ ಪ್ರವಾಸಗಳು, ಎಸಿ ಐಷಾರಾಮಿ ದಿನದ ಪ್ರವಾಸಗಳು, ಫಿಲ್ಮ್ ಸಿಟಿಯಲ್ಲಿ ಡಾರ್ಮಿಟರಿಗಳಿಂದ ಹಿಡಿದು ಐಷಾರಾಮಿ ಹೋಟೆಲ್‌ಗಳವರೆಗೆ ವಸತಿ ಸೌಕರ್ಯ, ವಿದ್ಯಾರ್ಥಿಗಳಿಗೆ ವಿಶೇಷ ಪ್ರವಾಸ ಪ್ಯಾಕೇಜ್‌ಗಳು ಮತ್ತು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿ ಸೇರಿದಂತೆ ಪ್ಯಾಕೇಜ್‌ಗಳು ಜನಾಕರ್ಷಣೆಯಾಗಿದೆ.

ಈ ವರ್ಷದ ಆರ್​ಎಫ್​​ಸಿಯ ಪ್ರಮುಖ ಗಮನಾರ್ಹ ಮುಖ್ಯಾಂಶವೆಂದರೆ ಮಾಯಾಲೋಕ, ಇದು ಪ್ರಸಿದ್ಧ ಚಲನಚಿತ್ರ ಸೆಟ್‌ಗಳ ಸಂಕೀರ್ಣ ಮತ್ತು ಹೊಸದಾಗಿ ಪ್ರಾರಂಭಿಸಲಾದ ಪರಿಸರ ಸ್ನೇಹಿ ಗ್ಲಾಂಪಿಂಗ್ ಟೆಂಟ್‌ಗಳನ್ನು ಒಳಗೊಂಡಿರುವುದು ವಿಶೇಷ. ಬಾಹುಬಲಿ, ಪುಷ್ಪಾ ಮತ್ತು ಸಲಾರ್‌ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಐಕಾನಿಕ್ ಸೆಟ್‌ಗಳನ್ನು ಹಾಗೂ ಏಷ್ಯಾದ ಅತಿದೊಡ್ಡ ಸಾಹಸ ಉದ್ಯಾನವನವಾದ ಸಾಹಸ, ಬಟರ್‌ಫ್ಲೈ ಪಾರ್ಕ್ ಮತ್ತು ಪಕ್ಷಿ ಉದ್ಯಾನವನ ಸೇರಿದಂತೆ ಇತರ ಪ್ರಮುಖ ಆಕರ್ಷಣ ಸ್ಥಳಗಳನ್ನು ಅನ್ವೇಷಿಸಲು ತೀವ್ರ ಆಸಕ್ತಿ ತೋರಿಸಿದ್ದಾರೆ.

ಕೇರಳ ಮಾರುಕಟ್ಟೆಯ ಮಹತ್ವವನ್ನು ಮತ್ತುಷ್ಟು ಒತ್ತಿ ಹೇಳಿದ ಹುಸೇನ್, ರಾಜ್ಯದಿಂದ ವಾರ್ಷಿಕವಾಗಿ 35,000 ಕ್ಕೂ ಹೆಚ್ಚು ಸಂದರ್ಶಕರು ಆರ್​ಎಫ್​ಸಿಗೆ ಪ್ರಯಾಣಿಸುತ್ತಿದ್ದಾರೆ. ಪ್ರಾದೇಶಿಕ ಪ್ರವಾಸೋದ್ಯಮದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಚಲನಚಿತ್ರ ನಗರವು ವಿಶೇಷ ಕೊಡುಗೆಗಳೊಂದಿಗೆ ಬುಕಿಂಗ್ ಮತ್ತು ಏಜೆನ್ಸಿಗಳಿಗಾಗಿ ಮೀಸಲಾದ ಪ್ರಯಾಣ ಪೋರ್ಟಲ್ ಅನ್ನು ಪರಿಚಯಿಸಿದೆ ಎಂದು ಟೂರ್ ಆಪರೇಟರ್ ತಿಳಿಸಿದ್ದಾರೆ.

ಸದ್ಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಫೆಬ್ರವರಿ 1ರವರೆಗೆ ಚಳಿಗಾಲದ ಉತ್ಸವ ನಡೆಯುತ್ತಿದ್ದು, ಪ್ರವಾಸಿಗರು ರಾತ್ರಿ 9ರವರೆಗೆ ಈ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ. ಆರ್‌ಎಫ್‌ಸಿಯ ಸಿನಿಮೀಯ ವೈಭವದ ಹೊರತಾಗಿ, ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್ ಒಡಿಶಾ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ರಾಜಸ್ಥಾನ, ಪಂಜಾಬ್, ದೆಹಲಿ ಮತ್ತು ಮೇಘಾಲಯದಂತಹ ರಾಜ್ಯಗಳ ಪ್ರಮುಖ ಮಳಿಗೆಗಳನ್ನು ಸಹ ಒಳಗೊಂಡಿದೆ. ಮೂರು ದಿನಗಳ ಈ ಕಾರ್ಯಕ್ರಮವು ಜನವರಿ 10 ರಂದು ಮುಕ್ತಾಯಗೊಳ್ಳಲಿದೆ.

ಇವುಗಳನ್ನೂ ಓದಿ: ತೆಲಂಗಾಣ ರೈಸಿಂಗ್​ ಗ್ಲೋಬಲ್​ ಸಮ್ಮಿಟ್​​ನಲ್ಲಿ ಗಮನ ಸೆಳೆದ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್​

ರಾಮೋಜಿ ಫಿಲ್ಮ್​ಸಿಟಿಯಲ್ಲಿ ಚಳಿಗಾಲದ ಉತ್ಸವ; ಹೊಸ ವರ್ಷಾಚರಣೆಯ ಸಂಭ್ರಮ ಮತ್ತಷ್ಟು ಇಮ್ಮಡಿ